For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಪ್ರೀತಿ, ದ್ವೇಷ, ಕೌತುಕ ತುಂಬಿದ 'ಮಾಯಾ ಕನ್ನಡಿ'

  |

  'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ...

  ಹೊಸತನ ಬಿಂಬಿಸುವ ಮಾಯಾ ಕನ್ನಡಿ | Maya Kannadi | Prabhu Mundkur | K.S. Sridhar | Abhishek S N

  ಚಿತ್ರ: ಮಾಯಾ ಕನ್ನಡಿ

  ನಿರ್ದೇಶಕ: ವಿನೋದ್ ಪೂಜಾರಿ

  ನಿರ್ಮಾಣ: ಸಪ್ನ ಪಾಟೀಲ್

  ಕಲಾವಿದರು: ಪ್ರಭು ಮುಂಡ್ಕೂರ್, ಕಾಜಲ್ ಕುಂದರ್, ಅನ್ವಿತಾ ಸಾಗರ್, ಶ್ರೀಧರ್ ಮತ್ತು ಇತರರು

  ಬಿಡುಗಡೆ: ಫೆಬ್ರವರಿ 28, 2020

  Rating:
  3.5/5

  ಭರತ್, ವಿನಯ್, ಗುರು, ಮಧು, ಆರಾಧ್ಯ ಎಂಬ ವಿದ್ಯಾರ್ಥಿಗಳು ಬ್ಲೂವೇಲ್ ಆಟದಿಂದ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅದೇ ಕಾಲೇಜಿಗೆ ವಿದ್ಯಾರ್ಥಿಯಾಗಿ ನಾಯಕ ಸ್ಯಾಂಡಿ (ಪ್ರಭು) ಸೇರುತ್ತಾನೆ. ಬ್ಲೂವೇಲ್ ಆಟದಿಂದ ಸತ್ತವರ ಕುರಿತು ಗೌಪ್ಯವಾಗಿ ತನಿಖೆಗೆ ಮುಂದಾಗ್ತಾನೆ. ಈ ಥ್ರಿಲ್ಲಿಂಗ್ ಹುಡುಕಾಟದಲ್ಲಿ ಕೆಲವು ಸಸ್ಪೆನ್ಸ್ ಅಂಶಗಳು ಹೊರಬೀಳುತ್ತೆ.

  Maya Kannadi Movie Review In Kannada

  ಬ್ಲೂವೇಲ್ ಆಟ, ನಿಗೂಢ ಸಾವಿನ ಹಿಂದೆ ಏನಾದರೂ ಇದ್ಯಾ? ಇದು ನಿಜಕ್ಕೂ ಆತ್ಮಹತ್ಯೆನಾ ಅಥವಾ ಬೇರೆ ಏನಾದರೂ ನಡೆಯುತ್ತಿದ್ಯಾ ಎನ್ನುವುದನ್ನು ಭೇದಿಸುವುದೇ ಮಾಯಾ ಕನ್ನಡಿಯ ಕಥೆ. ಈ ಕಥೆಯಲ್ಲಿ ಎರಡು ಮುಗ್ದ ಮನಸ್ಸುಗಳ ಪ್ರೀತಿ ಇದೆ, ತಂದೆ-ಮಗಳ ಬಾಂಧವ್ಯದ ಕಥೆ ಇದೆ, ಪ್ರೀತಿಸಿದವರನ್ನು ಕಳೆದುಕೊಂಡ ದ್ವೇಷವಿದೆ, ತಂತ್ರಜ್ಞಾನ ದುರ್ಬಳಕೆಯ ಕಥೆ ಇದೆ, ಈ ಎಲ್ಲ ಕಥೆಗಳ ಮಿಶ್ರಣವೇ ಮಾಯಾಕನ್ನಡಿ.

  ಡೆಡ್ಲಿ ಆಟದ ಜೊತೆ ಥ್ರಿಲ್ಲಿಂಗ್ ಕಥೆ ಹೊಂದಿರುವ 'ಮಾಯಾ ಕನ್ನಡಿ'ಡೆಡ್ಲಿ ಆಟದ ಜೊತೆ ಥ್ರಿಲ್ಲಿಂಗ್ ಕಥೆ ಹೊಂದಿರುವ 'ಮಾಯಾ ಕನ್ನಡಿ'

  ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಆಡಿಯೆನ್ಸ್ ಗೆ ಸಿನಿಮಾ ವಿಶೇಷವಾಗಿ ಇಷ್ಟವಾಗುತ್ತೆ. ತಂತ್ರಜ್ಞಾನವನ್ನು ಒಳ್ಳೆಯದಕ್ಕೂ ಬಳಸಬಹುದು ಕೆಟ್ಟದಕ್ಕೂ ಬಳಸಬಹುದು. ಆದ್ದರಿಂದ ಎಚ್ಚರಿದಿಂದಿರಬೇಕು ಮತ್ತು ಮಾನಸಿಕವಾಗಿ ಹತೋಟಿಯಲ್ಲಿರಬೇಕು ಎನ್ನುವ ಸಂದೇಶವೂ ಚಿತ್ರದಲ್ಲಿದೆ.

  Maya Kannadi Movie Review In Kannada

  ಪ್ರಭು ಮುಂಡ್ಕೂರ್ ಎರಡು ವಿಭಿನ್ನ ಪಾತ್ರಗಳನ್ನು ನಿಭಾಯಿಸಿದ್ದಾರೆ. ಎರಡರಲ್ಲೂ ಉತ್ತಮ ನಟನೆ. ಪ್ರಮುಖ ಪಾತ್ರದಲ್ಲಿ ಕೆಎಸ್ ಶ್ರೀಧರ್ ಅಭಿನಯಿಸಿದ್ದು, ಕಥೆಗೆ ಉತ್ತಮ ಸಾಥ್ ನೀಡಿದ್ದಾರೆ. ಇನ್ನು ಕಾಜಲ್ ಕುಂದರ್ ಮತ್ತು ಅನ್ವಿತಾ ಸಾಗರ್ ಇಬ್ಬರು ಪ್ರಮುಖ ನಟಿಯರಿದ್ದು, ಇಬ್ಬರೂ ಕೂಡ ಬಹಳ ಮುದ್ದಾಗಿ ನಟಿಸಿದ್ದಾರೆ.

  'ಮಾಯಾ ಕನ್ನಡಿ'ಯಲ್ಲಿ ಕಂಡಿದೆ ಚೆಂದದ ಅನ್ವಿತಾ ಬಿಂಬ'ಮಾಯಾ ಕನ್ನಡಿ'ಯಲ್ಲಿ ಕಂಡಿದೆ ಚೆಂದದ ಅನ್ವಿತಾ ಬಿಂಬ

  ವಿನೋದ್ ಪೂಜಾರಿ ನಿರ್ದೇಶನವೂ ಅಚ್ಚುಕಟ್ಟಾಗಿದೆ. ಅಭಿಷೇಕ್ ಎನ್ ಸಂಗೀತ ಹಾಗೂ ಮಣಿ ಕೋಕಲ್ ನಾಯರ್ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ ತಾಂತ್ರಿಕವಾಗಿ ಸಿನಿಮಾ ಗುಣಮಟ್ಟ ಉತ್ತಮಗೊಳಿಸಿದೆ.

  Maya Kannadi Movie Review In Kannada

  ಮಾಯಾ ಕನ್ನಡಿ ಸಿನಿಮಾ ಅಚ್ಚುಕಟ್ಟಾದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಎರಡು ಗಂಟೆ ಆರಾಮಾಗಿ ಕೂತು ನೋಡಬಹುದಾದ ಚಿತ್ರ.

  English summary
  Kannada actor Prabhu Mundkur, KS Sridhar, Kaajal Kunder starrer Maya Kannadi review in kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X