twitter
    For Quick Alerts
    ALLOW NOTIFICATIONS  
    For Daily Alerts

    Missing Boy Review : ಸಿನಿಮಾ ಶುದ್ಧ.. ತಾಯಿ ಪ್ರೀತಿ ಪರಿಶುದ್ಧ..

    |

    ''ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಯುಗ ಉರುಳಿ ಕಳೆದೋದರು.. ಹಣೆ ಬರಹ ಬದಲಾದರು..'' ಎನ್ನುವ 'ಜೋಗಿ' ಸಿನಿಮಾದ ಹಾಡನ್ನು 'ಮಿಸ್ಸಿಂಗ್ ಬಾಯ್'ನಲ್ಲಿ ಬಳಸಲಾಗಿದೆ. ಈ ಹಾಡಿನ ರೀತಿಯೇ ಸಿನಿಮಾದಲ್ಲಿ ತಾಯಿ ಮಗನ ನಡುವಿನ ಬಾಂದವ್ಯವನ್ನು ಸುಂದರವಾಗಿ ತೋರಿಸಿದ್ದಾರೆ. ಈ ಹಿಂದೆ ತೆರೆ ಮೇಲೆ ಎಷ್ಟೋ ಬಾರಿ ತಾಯಿ ಪ್ರೀತಿಯನ್ನು ನೋಡಿದ್ದರು ಮತ್ತೆ ನೋಡಬೇಕು ಅನಿಸುತ್ತದೆ. ಅಂತಹ ಭಾವನಾತ್ಮಕ ಸಿನಿಮಾ 'ಮಿಸ್ಸಿಂಗ್ ಬಾಯ್'.

    Rating:
    3.5/5
    Star Cast: ಗುರುನಂದನ್, ಅರ್ಚನಾ ಜಯಕೃಷ್ಣನ್, ಭಾಗೀರಥಿ ಬಾಯಿ
    Director: ರಘುರಾಮ್

    ಮಿಸ್ ಆಗುವ 5 ವರ್ಷದ ಬಾಯ್

    ಮಿಸ್ ಆಗುವ 5 ವರ್ಷದ ಬಾಯ್

    5 ವರ್ಷದ ಒಬ್ಬ ಹುಡುಗ ರೈಲ್ವೆ ನಿಲ್ದಾಣದಿಂದ ಕಾಣೆಯಾಗುತ್ತಾನೆ. ಬೆಂಗಳೂರಿನ ಆಶ್ರಮ ಸೇರುವ ಅವನನ್ನು ಒಬ್ಬ ದಂಪತಿ ದತ್ತು ಪಡೆಯುತ್ತಾರೆ. ಮುಂದೆ ವಿದೇಶದಲ್ಲಿ ತನ್ನ ಸಾಕು ತಂದೆ ತಾಯಿಯ ಜೊತೆಗೆ ಬೆಳೆಯುವ ಹುಡುಗನಿಗೆ ತನ್ನ ನಿಜವಾದ ತಂದೆ ತಾಯಿ ಯಾರೆಂದು ತಿಳಿದುಕೊಳ್ಳುವ ಆಸೆ ಮತ್ತು ಅನಿವಾರ್ಯತೆ ಬರುತ್ತದೆ. ಇಲ್ಲಿಂದ ಸಿನಿಮಾ ತನ್ನ ಪಯಣವನ್ನು ಶುರು ಮಾಡುತ್ತದೆ.

    ಅವ್ವನ ಹುಡುಕುವ ಮಗ

    ಅವ್ವನ ಹುಡುಕುವ ಮಗ

    ವಿದೇಶದಲ್ಲಿ ದೊಡ್ಡ ಬಿಜಿನೆಸ್ ಮ್ಯಾನ್ ಆಗಿರುವ ಹುಡುಗ ಭಾರತಕ್ಕೆ ಬಂದು ಬೀದಿ ಬೀದಿಗಳಲ್ಲಿ ತನ್ನ ತಾಯಿಯನ್ನು ಹುಡುಕುತ್ತಾನೆ. ಹಸುವಿನಿಂದ ದೂರವಾದ ಕರುವಿನಂತೆ ಆಗಿರುತ್ತದೆ ಆತನ ಪರಿಸ್ಥಿತಿ. ಕೊನೆಗೆ ಆ ಹುಡುಗ ತನ್ನ ತಾಯಿಯ ಮಡಿಲು ಸೇರುತ್ತಾನಾ..? ಇಲ್ವಾ..? ಎನ್ನುವುದು ಈ ಸಿನಿಮಾದ ಕಥೆ.

    'ಮಿಸ್ಸಿಂಗ್ ಬಾಯ್' : ಇದು ಕರ್ನಾಟಕದಲ್ಲಿ ನಡೆದ ಅಪರೂಪದ ನೈಜ ಕತೆ'ಮಿಸ್ಸಿಂಗ್ ಬಾಯ್' : ಇದು ಕರ್ನಾಟಕದಲ್ಲಿ ನಡೆದ ಅಪರೂಪದ ನೈಜ ಕತೆ

    ಗೋಲ್ ಹೊಡೆದ ರಘುರಾಮ್

    ಗೋಲ್ ಹೊಡೆದ ರಘುರಾಮ್

    ಸಿನಿಮಾದ ಮೊದಲ ದೃಶ್ಯದಲ್ಲಿ ನಾಯಕ ನಟ ಪುಟ್ ಬಾಲ್ ಆಟ ಆಡುತ್ತಾ ಗೋಲ್ ಹೊಡೆಯುತ್ತಾನೆ. ಅದೇ ರೀತಿ ಸಿನಿಮಾದ ನಿರ್ದೇಶಕ ರಘುರಾಮ್ ಗೋಲ್ ಹೊಡೆದಿದ್ದಾರೆ. ತನ್ನ ಕನಸಿನ ಸಿನಿಮಾವನ್ನು ತುಂಬ ಚೆನ್ನಾಗಿ ಸೆರೆ ಹಿಡಿದು ಚಿತ್ರಮಂದಿರದವರೆಗೆ ತಲುಪಿಸಿದ್ದಾರೆ. ಸಣ್ಣ ಪುಟ್ಟ 'ಮಿಸ್'ಟೆಕ್ ಗಳ ನಡುವೆ ರಘು ಒಂದೊಳ್ಳೆ ಸಿನಿಮಾ ಮಾಡಿದ್ದಾರೆ.

    ನಾಯಕ - ನಾಯಕಿಯ ನಟನೆ

    ನಾಯಕ - ನಾಯಕಿಯ ನಟನೆ

    ತಮ್ಮ ಹಿಂದಿನ ಸಿನಿಮಾಗಳ ನಟನೆಗಿಂತ ಗುರುನಂದನ್ ನಟನೆ ಕೊಂಚ ಬದಲಾಗಿದೆ. ಆದರೂ ಭಾವನಾತ್ಮಕ ದೃಶ್ಯಗಳಲ್ಲಿ ಅವರು ಇನ್ನಷ್ಟು ಚೆನ್ನಾಗಿ ನಟಿಸಬಹುದಿತ್ತು. ನಾಯಕಿಯ ಪಾತ್ರದಲ್ಲಿ ಯಾವುದೇ ತೊಂದರೆ ಇಲ್ಲ. ಉಳಿದಂತೆ, ರಂಗಾಯಣ ರಘು ಹಾಗೂ ರವಿಶಂಕರ್ ಅವರ ಅನುಭವದ ನಟನೆ ಚಿತ್ರಕ್ಕೆ ಪ್ಲಾಸ್ ಆಗಿದೆ.

    'ಒಂದ್ ಕಥೆ ಹೇಳ್ಲಾ' ಚಿತ್ರ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.? 'ಒಂದ್ ಕಥೆ ಹೇಳ್ಲಾ' ಚಿತ್ರ ನೋಡಿ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು.?

    ತಾಯಿ ಪಾತ್ರಕ್ಕಿದೆ ಶಕ್ತಿ

    ತಾಯಿ ಪಾತ್ರಕ್ಕಿದೆ ಶಕ್ತಿ

    ಸಿನಿಮಾದ ನಾಯಕ ತನ್ನ ತಾಯಿಯನ್ನು ಹುಡುಕುವ ಹಾಗೆಯೇ, ಸಿನಿಮಾ ನೋಡುವ ಪ್ರೇಕ್ಷಕನೂ ತಾಯಿ ಪಾತ್ರವನ್ನು ನೋಡುವ ತವಕದಲ್ಲಿ ಇರುತ್ತಾನೆ. ಕೊನೆಯಲ್ಲಿ ಬರುವ ತಾಯಿ ಪಾತ್ರ ಸಿನಿಮಾಗೆ ದೊಡ್ಡ ಶಕ್ತಿ ತುಂಬಿದೆ. ಭಾಗೀರಥಿ ಬಾಯಿ ನಟನೆ ನೋಡುವುದೆ ಚೆಂದ. ಮಗನನ್ನು ಕಂಡ ಖುಷಿಯನ್ನು ಅವರು ವ್ಯಕ್ತ ಪಡಿಸುವ ರೀತಿ ಅದ್ಭುತ. ಉಳಿದಂತೆ, ಶೋಭರಾಜ್ ಹಾಗೂ ಬಾಲ ನಟನ ಅಭಿನಯ ಸಹಜ ಸುಂದರವಾಗಿದೆ.

    ಕಥೆ ಬಿಟ್ಟು ಹೋಗಿಲ್ಲ

    ಕಥೆ ಬಿಟ್ಟು ಹೋಗಿಲ್ಲ

    ಸಿನಿಮಾ ಇಷ್ಟ ಆಗುವುದಕ್ಕೆ ಇರುವ ಕಾರಣಗಳಲ್ಲಿ ಕಥೆಯ ನಿರೂಪಣೆ ಕೂಡ ಒಂದು. ಒಂದು ರಿಯಲ್ ಸ್ಟೋರಿಯನ್ನು ಅಷ್ಟೇ ನೈಜವಾಗಿ ಹೇಳಿದ್ದಾರೆ. ನಾಯಕಿ ಇದ್ದಾಳೆ ಅಂತ ಲವ್, ಹಾಡು, ಹೀರೋಗಾಗಿ ಸಾಹಸ ಯಾವುದೂ ಇಲ್ಲದೆ ಕಥೆಗೆ ಬೇಕಾದ ರೂಪ ನೀಡಿದ್ದಾರೆ ರಘುರಾಮ್.

    ಇದು ಓದುಗರ ವಿಮರ್ಶೆ : 'ನಾ ನೋಡಿದ ಯಜಮಾನ' ಇದು ಓದುಗರ ವಿಮರ್ಶೆ : 'ನಾ ನೋಡಿದ ಯಜಮಾನ'

    ಮಿಸ್ಸಿಂಗ್ ಬಾಯ್ ನಲ್ಲಿ ಇವು 'ಮಿಸ್'

    ಮಿಸ್ಸಿಂಗ್ ಬಾಯ್ ನಲ್ಲಿ ಇವು 'ಮಿಸ್'

    ನೈಜ ಘಟನೆ ಆಗಿದ್ದರೂ, ಸಿಕ್ಕ ಜಾಗಗಳಲ್ಲಿ ಒಂದಷ್ಟು ಹಾಸ್ಯವನ್ನು ಬೆರೆಸಿದ್ದರೆ ಸಿನಿಮಾ ಜನರಿಗೆ ಇನ್ನಷ್ಟು ಆಪ್ತ ಆಗುತ್ತಿತ್ತು. ಕ್ಯಾಮರಾ ಹಾಗೂ ಎಡಿಟಿಂಗ್ ಕೆಲಸಗಳು ಇನ್ನೊಂದಷ್ಟು ಚೆನ್ನಾಗಿ ಮಾಡಬಹುದಿತ್ತು. ಸಿನಿಮಾದಲ್ಲಿ ಹೆಚ್ಚು ಹಾಡು ಇಲ್ಲ. ಅದ್ದರಿಂದ ಮೊದಲ ಹಾಡು ಇನ್ನಷ್ಟು ಚೆನ್ನಾಗಿ ಇರಬೇಕಿತ್ತು.

    ಒಂದು ಶುದ್ಧ ಸಿನಿಮಾ

    ಒಂದು ಶುದ್ಧ ಸಿನಿಮಾ

    ತಾಯಿ ಸೆಂಟಿಮೆಂಟ್ ಸಿನಿಮಾಗಳನ್ನು ಇಷ್ಟ ಪಡುವವರು ಮಿಸ್ ಮಾಡದೆ 'ಮಿಸ್ಸಿಂಗ್ ಬಾಯ್' ನೋಡಿ. ಇಡೀ ಕುಟುಂಬ ಕುಳಿತು ಯಾವುದೇ ಕಿರಿಕಿರಿ ಇಲ್ಲದೆ, ಕಿಲ ಕಿಲ ಅಂತ ನೋಡಬಹುದಾದ ಚಿತ್ರವಿದು. ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ತಾಯಿ ಮಗನ ಬಾಂಧವ್ಯದ ಶುದ್ಧ ಸಿನಿಮಾವೇ 'ಮಿಸ್ಸಿಂಗ್ ಬಾಯ್'.

    English summary
    Actor Gurunandan's Missing Boy kannada movie review. The movie has a real story of a 5 years old boy. It have emotional content.
    Friday, March 22, 2019, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X