'MMCH' ವಿಮರ್ಶೆ : ಮೋಸದ ಪ್ರೀತಿ, ಮಮತೆಯ ಸ್ನೇಹ

By Naveen

'ಎಂ ಎಂ ಸಿ ಹೆಚ್' ಆಪ್ತ ಸ್ನೇಹಿತೆಯರಾದ ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಎಂಬ ನಾಲ್ಕು ಹುಡುಗಿಯರ ಕಥೆ. ಇಡೀ ಸಿನಿಮಾದ ಕೇಂದ್ರ ಬಿಂದು ಈ ನಾಲ್ಕು ಹುಡುಗಿಯರು. ಈ ನಾಲ್ಕು ಹುಡುಗಿಯರು ಸೇರಿ ಒಂದು ಕೋಲೆ ಮಾಡುತ್ತಾರೆ. ಆ ಕೊಲೆಯ ತನಿಖೆಯೇ ಇಡೀ ಚಿತ್ರದ ನಿರೂಪಣೆಯಾಗಿದೆ.

Rating:
3.5/5

ಚಿತ್ರ: ಎಂ ಎಂ ಸಿ ಹೆಚ್

ನಿರ್ದೇಶನ: ಮುಸ್ಸಂಜೆ ಮಹೇಶ್

ನಿರ್ಮಾಪಕ: ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ಸ್

ನಟನೆ: ರಾಗಿಣಿ ದ್ವಿವೇದಿ ಮೇಘನಾರಾಜ್, ಪ್ರಥಮಾ ಪ್ರಸಾದ್, ಸಂಯುಕ್ತಾ ಹೊರನಾಡು, ನಕ್ಷತ್ರ ಮತ್ತು ಇತರರು

ಸಂಗೀತ: ಕಾರ್ತಿಕ್ : ಶ್ರೀಧರ್ ಸಂಭ್ರಮ್

ಬಿಡುಗಡೆಯ ದಿನಾಂಕ : ಜುಲೈ 13

ನಾಲ್ಕು ಗೆಳತಿಯರ ಕಥೆ

ನಾಲ್ಕು ಗೆಳತಿಯರ ಕಥೆ

ಮೇಘಾ (M), ಮಾಲಾ(M), ಛಾಯಾ(C), ಹರ್ಷಿತಾ (H) ಈ ನಾಲ್ಕು ಗೆಳತಿಯರು ಚಿತ್ರದ ನಾಯಕಿಯರು. ಅದೇ ರೀತಿ ಇವರ ಹೆಸರೇ 'MMCH' ಎಂದು ಸಿನಿಮಾದ ಟೈಟಲ್ ಆಗಿದೆ. ಸಿನಿಮಾ ಶುರು ಆಗುವುದೇ ಒಂದು ಕೊಲೆಯಿಂದ. ಆ ಕೊಲೆ ಯಾರು ಮಾಡಿದರು?, ಯಾಕೆ ಮಾಡಿದರು? ಎಂಬ ತನಿಖೆ ಮೂಲಕ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಒಂದು ಕಡೆ ಕೊಲೆಯ ತನಿಖೆ, ಇನ್ನೊಂದು ಕಡೆ ನಾಲ್ಕು ಹುಡುಗಿಯರ ಕಥೆ ನಡೆಯುತ್ತಿರುತ್ತದೆ. ಆದರೆ, ಚಿತ್ರದ ಮಧ್ಯಂತರದ ಹೊತ್ತಿಗೆ ಈ ಎರಡು ಕಥೆಗಳು ಒಂದೇ ದಾರಿಗೆ ಬರುತ್ತದೆ. ಅಲ್ಲದೆ ಅದು ಒಂದು ದೊಡ್ಡ ತಿರುವನ್ನು ನೀಡುತ್ತದೆ.

ಒಂದು ಕೊಲೆ ಸುತ್ತ ನಾಲ್ಕು ಹುಡುಗಿಯರು

ಒಂದು ಕೊಲೆ ಸುತ್ತ ನಾಲ್ಕು ಹುಡುಗಿಯರು

ಈ ನಾಲ್ಕು ಹುಡುಗಿಯರು ಯಾಕೆ ಕೊಲೆ ಮಾಡಿದರು ಎಂಬ ಪ್ರಶ್ನೆ ಹೊತ್ತು ಮಧ್ಯಂತರದಿಂದ ಮುಂದೆ ಹೋಗುತ್ತಿದ್ದ ಹಾಗೆ ಅನೇಕ ರೋಚಕ ವಿಷಯಗಳು ಸಿಗುತ್ತದೆ. ಕೊಲೆಯ ತನಿಖೆಯಲ್ಲಿ ಅನೇಕ ಟ್ವಿಸ್ಟ್ ಟರ್ನ್ ಗಳು ಇವೆ. ನಿಜವಾಗಿಯೂ ಈ ಹುಡುಗಿಯರು ಆ ಕೊಲೆ ಮಾಡಿದ್ರು?, ಕೊಲೆ ಮಾಡಿದ್ರೆ ಅದು ಯಾಕೆ?, ಕೊಲೆ ಮಾಡಿದ ಹುಡುಗಿಯರ ಕಥೆ ಏನಾಯ್ತೂ? ಇದೆಲ್ಲವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

ಮತ್ತೆ ಪೊಲೀಸ್ ಆದ ರಾಗಿಣಿ

ಮತ್ತೆ ಪೊಲೀಸ್ ಆದ ರಾಗಿಣಿ

ಈಗಾಗಲೇ ತಮ್ಮ ಹಳೆಯ ಸಿನಿಮಾಗಳಲ್ಲಿ ಖಾಕಿ ತೊಟ್ಟು ಖದರ್ ತೋರಿಸಿದ್ದ ರಾಗಿಣಿ ದ್ವಿವೇದಿ ಈಗ ಮತ್ತೆ ಪೊಲೀಸ್ ಆಗಿದ್ದಾರೆ. ಉತ್ತರ ಕರ್ನಾಟಕದ ಪೊಲೀಸ್ ಆಗಿ ಕಾಣಿಸಿಕೊಂಡಿದ್ದಾರೆ. ರೌಡಿಗಳ ಜೊತೆಗೆ ಸಖತ್ ಆಗಿ ಫೈಟ್ ಮಾಡಿದ್ದಾರೆ. ಸಿಗರೇಟ್ ಸೇದುತ್ತ ಬೋಲ್ಡ್ ಆಗಿ ನಟಿಸಿದ್ದಾರೆ.

ಗಮನ ಸೆಳೆದ ಗೆಳತಿಯರು

ಗಮನ ಸೆಳೆದ ಗೆಳತಿಯರು

ಮೇಘಾ, ಮಾಲಾ, ಛಾಯಾ, ಹರ್ಷಿತಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘನಾರಾಜ್, ಪ್ರಥಮಾ ಪ್ರಸಾದ್, ಸಂಯುಕ್ತಾ ಹೊರನಾಡು ಹಾಗೂ ನಕ್ಷತ್ರ ಇಷ್ಟ ಆಗುತ್ತಾರೆ. ಅದರಲ್ಲಿಯೂ ಮೇಘನಾ ರಾಜ್ ತಮ್ಮ ನಟನೆಯ ಮೂಲಕ ಉಳಿದ ನಾಯಕಿಯರಿಗಿಂತ ಒಂದು ಹಂತ ಮೇಲೆ ಹೋಗಿದ್ದಾರೆ. ಕಾಲೇಜ್ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು ನಾಲ್ಕು ನಟಿಯರ ಪಾತ್ರ ಚಿತ್ರದ ಹೈಲೆಟ್ ಆಗಿದೆ.

ಹುಡುಗಿಯರಿದ್ದಾರೆ ಎಚ್ಚರಿಕೆ

ಹುಡುಗಿಯರಿದ್ದಾರೆ ಎಚ್ಚರಿಕೆ

ಇಡೀ ಸಿನಿಮಾದಲ್ಲಿ ಒಂದು ಸಂದೇಶ ಹೇಳಲಾಗಿದೆ. ಇಂದಿನ ಯುವ ಜನತೆ ಹೇಗೆ ಪ್ರೀತಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ. 'ಹುಡುಗಿಯರಿದ್ದಾರೆ ಎಚ್ಚರಿಕೆ' ಎಂದು ಸಿನಿಮಾವನ್ನು ಮುಗಿಸಿವ ನಿರ್ದೇಶಕರು ಕಾಲೇಜು ಯುವತಿಯರಿಗೆ ಮೆಸೇಜ್ ಕೊಟ್ಟಿದ್ದಾರೆ.

ಇನ್ನೂ ಚೆನ್ನಾಗಿ ಕಥೆ ಹೇಳಬೇಕಿತ್ತು

ಇನ್ನೂ ಚೆನ್ನಾಗಿ ಕಥೆ ಹೇಳಬೇಕಿತ್ತು

ಚಿತ್ರವನ್ನು ನಿರ್ದೇಶನ ಮಾಡಿರುವ ಮುಸ್ಸಂಜೆ ಮಹೇಶ್ ಸಿಂಪಲ್ ಆದ ಸಿನಿಮಾ ಮಾಡಿದ್ದಾರೆ. ಆದರೂ ಹೀರೋಯಿನ್ ಬೆಸ್ಡ್ ಸಿನಿಮಾ ಮಾಡಿರುವ ಅವರ ಧೈರ್ಯವನ್ನು ಮೆಚ್ಚಬೇಕು. ಸಿನಿಮಾದಲ್ಲಿ ಹೆಚ್ಚು ಬೇಡದ ವಿಷಯ ಇಡದೆ ನೀಟಾಗಿ ಮಾಡಿದ್ದಾರೆ. ಆದರೆ, ನೋಡುಗರಿಗೆ ಇನ್ನೂ ಇಷ್ಟ ಆಗುವಂತೆ ತಮ್ಮ ಕಥೆಯನ್ನು ಹೇಳಬೇಕಾಗಿತ್ತು.

ಡೈಲಾಗ್ ಗಳಲ್ಲಿ ಪಂಚ್ ಇದೆ

ಡೈಲಾಗ್ ಗಳಲ್ಲಿ ಪಂಚ್ ಇದೆ

'ಎಂ ಎಂ ಸಿ ಹೆಚ್' ಚಿತ್ರದಲ್ಲಿ ಗಮನ ಸೆಳೆಯುವ ಅಂಶಗಳಲ್ಲಿ ಡೈಲಾಗ್ ಕೂಡ ಒಂದು. ಚಿತ್ರದ ಕಲಾವಿದರ ಬಾಯಲ್ಲಿ ಬರುವ ಡೈಲಾಗ್ ಕೇಳುಗರಿಗೆ ಮಜಾ ನೀಡುತ್ತದೆ. ಡಬ್ಬಲ್ ಮೀನಿಂಗ್ ಇಲ್ಲದ ಸುಂದರ ಸಂಭಾಷಣೆ ಚಿತ್ರದಲ್ಲಿದೆ. ಆದರೆ, ಚಿತ್ರದ ಕ್ಲೈಮ್ಯಾಕ್ಸ್ ನ ಕೆಲವು ಸಂಭಾಷಣೆ ವಿವಾದ ಹುಟ್ಟಿಸುವಂತಿವೆ.

ಸಂಗೀತ, ಕ್ಯಾಮರಾ

ಸಂಗೀತ, ಕ್ಯಾಮರಾ

'ಮುಸ್ಸಂಜೆ ಮಾತು' ಜೋಡಿ ಮತ್ತೆ ಈ ಸಿನಿಮಾದಲ್ಲಿ ಒಂದಾಗಿದೆ. ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಂಭ್ರಮ್ ಹೊಸ ರೀತಿಯ ಹಾಡಗಳನ್ನು ಪ್ರಯತ್ನ ಮಾಡಿದ್ದಾರೆ. ಕ್ಯಾಮರಾ ಕೆಲಸ ಕೂಡ ಚಿತ್ರದ ಅಂದವನ್ನು ಹೆಚ್ಚು ಮಾಡಿದೆ.

ಒಮ್ಮೆ ನೋಡಬಹುದು

ಒಮ್ಮೆ ನೋಡಬಹುದು

ಮೋಸದ ಪ್ರೀತಿ, ಮಮತೆಯ ಸ್ನೇಹ ಎಂಬ ಕಥೆ ಹೊಂದಿರುವ 'ಎಂ ಎಂ ಸಿ ಹೆಚ್' ಚಿತ್ರವನ್ನು ಒಮ್ಮೆ ನೋಡಬಹುದು.

More from Filmibeat

English summary
Kannada actress Ragini Dwivedi and Meghana Raj's 'MMCH' kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X