L2: Empuraan Review: ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಕಂಪ್ಲೀಟ್ ರಿವ್ಯೂ

ಸೀಕ್ವೆಲ್ ಸಿನಿಮಾ ಮಾಡಿ ಗೆಲ್ಲೋದು ಬಹಳ ಕಷ್ಟವಿದೆ. ಯಾವುದೇ ನಿರೀಕ್ಷೆ ಇಲ್ಲದೇ ಬರುವ ಮೊದಲ ಭಾಗ ಸೂಪರ್ ಹಿಟ್ ಆಗಿಬಿಡುತ್ತದೆ. ಆದರೆ ಅದಾಗಲೇ ಬೆಂಚ್‌ಮಾರ್ಕ್ ಕ್ರಿಯೇಟ್ ಆದ ಬಳಿಕ ಅದನ್ನು ಮೀರಿಸುವಂತೆ ಸೀಕ್ವೆಲ್ ಮಾಡಿ ಗೆಲ್ಲೋದು ಅಷ್ಟು ಸುಲಭವಲ್ಲ.

Rating:
2.5/5
Star Cast: ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರನ್, ಕಿಶೋರ್, ಮಂಜು ವಾರಿಯರ್, ಟೊವಿನೋ ಥಾಮಸ್ ಮುಂತಾದವರು.
Director: ಪೃಥ್ವಿರಾಜ್ ಸುಕುಮಾರನ್

ಕಲೆಕ್ಷನ್ ವಿಚಾರದಲ್ಲಿ ಮೊದಲ ಭಾಗಕ್ಕಿಂತ ಎರಡನೇ ಭಾಗ ದೊಡ್ಡದಾಗಿ ಸದ್ದು ಮಾಡಬಹುದು. ಆದರೆ ಸಿನಿಮಾ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವುದಿಲ್ಲ. 'ಬಾಹುಬಲಿ- 2', 'KGF- 2' ಹಾಗೂ 'ಪುಷ್ಪ'- 2 ಸಿನಿಮಾಗಳ ವಿಚಾರದಲ್ಲೇ ಇದೇ ನಡೆದಿತ್ತು. ಸದ್ಯ ಮೋಹನ್ ಲಾಲ್ ನಟನೆಯ 'ಲೂಸಿಫರ್' ಸೀಕ್ವೆಲ್ 'L2: ಎಂಪುರಾನ್' ತೆರೆಗಪ್ಪಳಿಸಿದೆ. ವಿಶ್ವದಾದ್ಯಂತ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಕರ್ನಾಟಕದಲ್ಲೂ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದೆ.

Mohanlal and Prithviraj Sukumaran s L2  Empuraan film review in Kannada

ಕೇರಳ ಮುಖ್ಯಮಂತ್ರಿ ಪಿ. ಕೆ ರಾಮದಾಸ್ (ಸಚಿನ್ ಖೇಡೇಕರ್) ಮರಣದ ನಂತರ ಅವರ ಉತ್ತರಾಧಿಕಾರಿ ಯಾರು? ಮುಖ್ಯಮಂತ್ರಿ ಪಟ್ಟಕ್ಕಾಗಿ ಯಾರೆಲ್ಲಾ ಹವಣಿಸುತ್ತಾರೆ. ಪಿಕೆಆರ್‌ ಅಳಿಯನನ್ನು ಕೂಡ ಮುಖ್ಯಮಂತ್ರಿ ಗಾದಿಯಿಂದ ದೂರ ಇಡಲು ಸ್ಟೀಫನ್ ನೆಡುಂಪಲ್ಲಿ (ಮೋಹನ್‌ಲಾಲ್) ನಡೆಸುವ ಚದುರಂಗದಾಟ 'ಲೂಸಿಫರ್' ಚಿತ್ರದಲ್ಲಿತ್ತು. ಅಲ್ಲಿಂದ ಮುಂದೆ 'L2: ಎಂಪುರಾನ್' ಕಥೆ ಆರಂಭವಾಗುತ್ತದೆ.

'L2: ಎಂಪುರಾನ್' ಕಥೆ

'ಲೂಸಿಫರ್‌' ಚಿತ್ರದ ಅಂತ್ಯದಲ್ಲಿ ಜತಿನ್ ರಾಮದಾಸ್ (ಟೋವಿನೋ ಥಾಮಸ್) ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾನೆ. ಸ್ಟೀಫನ್(ಮೋಹನ್ ಲಾಲ್) ಮತ್ತೆ ಅಜ್ಞಾತಕ್ಕೆ ಹೊರಟು ಹೋಗ್ತಾನೆ. ಅಲ್ಲಿಂದ 'L2: ಎಂಪುರಾನ್' ಕಥೆ ಶುರುವಾಗುತ್ತದೆ. ಮಂಗನ ಕೈಗೆ ಮಾಣಿಕ್ಯ ಸಿಕ್ಕಂತೆ ಸಿಎಂ ಆಗಿ ಅಧಿಕಾರಕ್ಕೇ ಏರುತ್ತಿದ್ದಂತೆ ಜತಿನ್ ಮತ್ತಷ್ಟು ಭ್ರಷ್ಟನಾಗುತ್ತಾನೆ. ಪಕ್ಷದ ಸಿದ್ಧಾಂತ ಬಿಟ್ಟು ಅಧಿಕಾರ ಚಲಾಯಿಸಲು ಆರಂಭಿಸುತ್ತಾನೆ.

Mohanlal and Prithviraj Sukumaran s L2  Empuraan film review in Kannada

ಜತಿನ್ ರಾಮದಾಸ್ ದೊಡ್ಡ ಭ್ರಷ್ಟಚಾರದಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಆಡಳಿತ ಪಕ್ಷವನ್ನು ತೊರೆದು ತನ್ನದೇ ಆದ ಸ್ವಂತ ಪಕ್ಷ ಸ್ಥಾಪನೆಗೆ ಮುಂದಾಗುತ್ತಾನೆ. ಆತನ ಜೊತೆ ಬಾಬಾ ಬಜರಂಗ್ ಅಲಿಯಾಸ್ ಬಾಲ್‌ರಾಜ್ (ಅಭಿಮನ್ಯು ಸಿಂಗ್) ಕೈ ಜೋಡಿಸುತ್ತಾನೆ. ಆದರೆ ಸಹೋದರಿ ಪ್ರಿಯದರ್ಶಿನಿ ರಾಮದಾಸ್ (ಮಂಜು ವಾರಿಯರ್) ಇದಕ್ಕೆ ಒಪ್ಪುವುದಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮತ್ತೆ ಖುರೇಷಿ ಅಬ್ರಾಮ್ ಅಲಿಯಾಸ್ ಸ್ಟೀಫನ್ ನೆಡುಂಪಲ್ಲಿ (ಮೋಹನ್ ಲಾಲ್) ಅಖಾಡಕ್ಕೆ ಇಳಿಯುತ್ತಾನೆ.

ಸ್ಟೀಫನ್ ಪುನರಾಗಮನದಿಂದ ಕೇರಳ ರಾಜಕೀಯ ಚಿತ್ರಣ ಬದಲಾಗುತ್ತಾ? ಬಾಲ್‌ರಾಜ್ ಹಾಗೂ ಸ್ಟೀಫನ್ ನಡುವಿನ ದ್ವೇಷಕ್ಕೆ ಕಾರಣ ಏನು? ಬಾಲ್‌ರಾಜ್ ಮತ್ತು ಜಾಯೆದ್ ಮಸೂದ್ (ಪೃಥ್ವಿರಾಜ್ ಸುಕುಮಾರನ್) ಗೂ ಇರುವ ಲಿಂಕ್ ಏನು? ಸ್ಟೀಫನ್ ಯಾಕೆ ಡ್ರಗ್ಸ್ ದಂಧೆಯಲ್ಲಿ ಸಿಲುಕಿಕೊಂಡಿರುತ್ತಾನೆ? ಸ್ಟೀಫನ್ ಹಿನ್ನೆಲೆ ಏನು? ಖುರೇಷಿ ಅಬ್ರಹಾಂ ಎಂದು ಹೆಸರು ಬದಲಿಸಿಕೊಂಡು ವಿದೇಶದಲ್ಲಿ ಏನು ಮಾಡ್ತಿರ್ತಾನೆ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಬೇಕು ಅಂದ್ರೆ ನೀವು 'L2: ಎಂಪುರಾನ್' ಸಿನಿಮಾ ನೋಡಬೇಕು.

Take a Poll

'L2: ಎಂಪುರಾನ್' ಫಸ್ಟ್‌ ಹಾಫ್

'ಲೂಸಿಫರ್' ಸೀಕ್ವೆಲ್ ಕಥೆ ಚೆನ್ನಾಗಿದೆ. ಫಸ್ಟ್ ಹಾಫ್‌ ಕಥೆ ಬಹುತೇಕ ವಿದೇಶಗಳಲ್ಲಿ ನಡೆಯುವಂತೆ ಕಾಣುತ್ತದೆ. ಪೊಲಿಟಿಕಲ್ ಡ್ರಾಮಾ ಬಿಟ್ಟು ಡ್ರಗ್ಸ್ ಮಾಫಿಯಾ ಸುತ್ತಾ ಸುತ್ತುತ್ತಿದೆ ಅಲ್ವಾ? ಎಂದು ಪ್ರೇಕ್ಷಕರು ತಲೆ ಕರೆದುಕೊಳ್ಳುವಂತಾಗುತ್ತದೆ. ಹೆಚ್ಚು ಕಮ್ಮಿ ಮುಕ್ಕಾಲು ಗಂಟೆ ಬಳಿಕ ಮೋಹನ್ ಲಾಲ್ ತೆರೆಮೇಲೆ ಬರ್ತಾರೆ. ಅವರ ಎಂಟ್ರಿಗಾಗಿ ಪ್ರೇಕ್ಷಕರು ಕಾದು ಕಾದು ಸುಸ್ತಾಗುತ್ತಾರೆ. ಆದರೆ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಅವರನ್ನು ಪಾತ್ರವನ್ನು ಮತ್ತೆ ಡಿಸೈನ್ ಮಾಡಲಾಗಿದೆ. ಎಲಿವೇಷನ್ ಸೀನ್ಸ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತದೆ.

ಮುರಳಿ ಗೋಪಿ ಕಥೆ, ಚಿತ್ರಕಥೆ ಚೆನ್ನಾಗಿದೆ. ಪೃಥ್ವಿರಾಜ್ ಸುಕುಮಾರನ್ ಅದನ್ನು ಅಷ್ಟೇ ಸೊಗಸಾಗಿ ತೆರೆಮೇಲೆ ತಂದಿದ್ದಾರೆ. ಸಾಮಾನ್ಯವಾಗಿ ಸೀಕ್ವೆಲ್ ಮಾಡುವಾಗ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಕಥೆ ಹೇಳುವ ಪ್ರಯತ್ನ ಮಾಡಲಾಗುತ್ತದೆ. 'L2: ಎಂಪುರಾನ್' ವಿಚಾರದಲ್ಲೂ ಅದೇ ನಡೆದಿದೆ. ಇಂಗ್ಲೆಂಡ್, ಆಫ್ರಿಕಾ, ಚೈನಾ, ಯಮನ್ ದೇಶಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಖುರೇಷಿ ಎಷ್ಟು ಪವರ್‌ಫುಲ್ ಎಂದು ತೋರಿಸುವ ಪ್ರಯತ್ನವನ್ನು ಈ ಭಾಗದಲ್ಲಿ ಮಾಡಲಾಗಿದೆ.

ಕೇರಳದಲ್ಲಿ ರಾಜಕೀಯ ಅರಾಜಕತೆ ಸುಧಾರಿಸಿದ ಬಳಿಕ ಸ್ಟೀಫನ್ ಅಲ್ಲಿಂದ ಹೊರಟು ಹೋಗುತ್ತಾನೆ. ಆ ಬಳಿಕ ಮತ್ತೆ ರಾಜಕೀಯರಂಗದಲ್ಲಿ ನಡೆಯುವ ಕೋಲಾಹಲ, ಅದರಿಂದ ಎದುರಾಗುವ ಸಮಸ್ಯೆಗಳನ್ನು ಬಹಳ ಸೊಗಸಾಗಿ ಪೃಥ್ವಿರಾಜ್ ಕಟ್ಟಿಕೊಟ್ಟಿದ್ದಾರೆ. ಪ್ರತಿ ಪಾತ್ರದ ಹಿನ್ನೆಲೆಯನ್ನು ಅಲ್ಲಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಕೆಲವೊಮ್ಮೆ ಇದು ಬೇಕಿತ್ತಾ ಎನಿಸಿಬಿಡುತ್ತದೆ. 'ಲೂಸಿಫರ್' ರೀತಿಯಲ್ಲೇ ಇಲ್ಲೂ ಕೂಡ ಮೋಹನ್ ಲಾಲ್ ಪಾತ್ರವನ್ನು ಕಂಪ್ಲೀಟ್ ಹೀರೊ ರೀತಿ ಅಲ್ಲದೇ ಒಂದು ಕೀ ರೋಲ್ ರೀತಿ ಮಾತ್ರ ತೋರಿಸುತ್ತಾ ಹೋಗಿದ್ದಾರೆ.

ಸೆಕೆಂಡ್ ಹಾಫ್

ಮೋಹನ್ ಲಾಲ್ ಗ್ರ್ಯಾಂಡ್ ಎಂಟ್ರಿ, ಇಂಟರ್‌ವಲ್ ಬ್ಲಾಕ್ ಹಾಗೂ ಫಾರೆಸ್ಟ್ ಫೈಟ್ ಅಭಿಮಾನಿಗಳಿಗೆ ಹಬ್ಬವೇ ಸರಿ. ಆದರೆ ಕನ್ನಡ, ತೆಲುಗು ಪ್ಯಾನ್ ಇಂಡಿಯಾ ಸಿನಿಮಾಗಳ ಛಾಯೆ 'L2: ಎಂಪುರಾನ್' ಮೇಕಿಂಗ್‌ನಲ್ಲಿ ನೋಡಬಹುದು. ಎಲಿವೇಷನ್ ಸೀನ್ಸ್, ಅಬ್ಬರದ ಬಿಜಿಎಂ, ಕ್ರೌರ್ಯ ಕೊಂಚ ಅತಿ ಎನಿಸಿಬಿಡುತ್ತದೆ. ಇಂಟರ್‌ವಲ್‌ ಟ್ವಿಸ್ಟ್ ಸೆಕೆಂಡ್ ಹಾಫ್ ಮೇಲೆ ಕುತೂಹಲ ಮೂಡಿಸುತ್ತದೆ.

ಸೆಕೆಂಡ್ ಹಾಫ್ ಕಥೆ ಮತ್ತೆ ಕೇರಳಕ್ಕೆ ಶಿಫ್ಟ್ ಆಗುತ್ತದೆ. 'ಲೂಸಿಫರ್' ಚಿತ್ರದಲ್ಲಿ ಹೇಳದೇ ಬಿಟ್ಟಿದ್ದ ಸಾಕಷ್ಟು ಪ್ರಶ್ನೆಗಳಿಗೆ ಸೀಕ್ವೆಲ್‌ನಲ್ಲಿ ಉತ್ತರ ಸಿಗುತ್ತದೆ. ಅದೇ ರೀತಿ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿ ಸರಣಿಯ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಲಾಗಿದೆ. ಕೊನೆಗೆ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಜುಗಲ್‌ಬಂದಿ ಫೈಟ್ ಸಖತ್ ಕಿಕ್ ಕೊಡುತ್ತದೆ. ಇನ್ನು ಮಂಜು ವಾರಿಯರ್ ಬಂಧನದ ಸನ್ನಿವೇಶ ಸೆಕೆಂಡ್ ಹಾಫ್‌ನಲ್ಲಿ ಹೈಲೆಟ್ ಎನಿಸಿಕೊಳ್ಳುತ್ತದೆ. ಆ ಸನ್ನಿವೇಶದಲ್ಲಿ ಆಕೆಯ ಅಭಿನಯ ಮೋಡಿ ಮಾಡುವಂತಿದೆ.

ಸಿನಿಮಾ ಹೇಗಿದೆ?

'ಲೂಸಿಫರ್' ಸಿನಿಮಾ ಎಮೋಷನಲ್ ಆಗಿ ಪ್ರೇಕ್ಷಕರಿಗೆ ಕನೆಕ್ಟ್ ಆಗಿತ್ತು. ಆದರೆ 'L2: ಎಂಪುರಾನ್' ಅಷ್ಟರಮಟ್ಟಿಗೆ ಹತ್ತಿರವಾಗಲ್ಲ. ಆದರೆ ಅದನ್ನು ಮರೆಸುವಂತೆ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿದೆ. ಸೀಕ್ವೆಲ್‌ನಲ್ಲಿ ಕೂಡ ಎಲ್ಲಾ ಪಾತ್ರಗಳಿಗೆ ಮಹತ್ವ ಇದೆ. ಈ ಬಾರಿ ಪೃಥ್ವಿರಾಜ್ ಪಾತ್ರಕ್ಕೆ ಹೆಚ್ಚಿನ ಅವಕಾಶ ಸಿಕ್ಕಿದೆ. ನಿರ್ದೇಶಕರು ಮೊದಲ ಭಾಗದಲ್ಲಿ ಒಂದಷ್ಟು ಗೊಂದಲ ಸೃಷ್ಟಿಸಿ ಬಳಿಕ ಸಸ್ಪೆನ್ಸ್ ರಿವೀಲ್ ಮಾಡ್ತಾ ಮಾಡ್ತಾ ಅದಕ್ಕೆಲ್ಲಾ ಉತ್ತರ ಕೊಡುತ್ತಾ ಹೋಗುತ್ತಾರೆ.

ಟೋವಿನೋ ಥಾಮಸ್ ಪಾತ್ರವನ್ನು ದಿಢೀರನೆ ಖಳನಾಗಿ ತೋರಿಸಲಾಗುತ್ತದೆ. ಅದಕ್ಕೆ ಕಾರಣ ಏನು ಎನ್ನುವುದು ಸ್ಪಷ್ಟವಾಗುವುದಿಲ್ಲ. ಅಂದಹಾಗೆ 'L2: ಎಂಪುರಾನ್' ಕೂಡ ಸ್ಟೀಫನ್ ಹಿನ್ನೆಲೆ ಏನು? ಎನ್ನುವ ಪ್ರಶ್ನೆಗೆ ಉತ್ತರ ಸಿಗಲ್ಲ. ಅದನ್ನು ಪಾರ್ಟ್‌-3ನಲ್ಲಿ ನೋಡಬೇಕು.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ಮತ್ತೆ ಮೋಹನ್ ಲಾಲ್ ಒನ್‌ಮ್ಯಾನ್ ಶೋ ಎನ್ನಬಹುದು. ಸ್ಟೀಫನ್ ಪಾತ್ರಕ್ಕೆ ಕೊಟ್ಟಿರುವ ಎಲಿವೇಷನ್ಸ್, ಮೋಹನ್ ಲಾಲ್ ಸ್ಟೈಲ್ ಎಲ್ಲವೂ ಅಭಿಮಾನಿಗಳಿಗೆ ಮಜಾ ಕೊಡುತ್ತದೆ. ಅಷ್ಟೇ ಸೊಗಸಾಗಿ ಪಾತ್ರದಲ್ಲಿ ಅವರು ಪರಕಾಯ ಪ್ರವೇಶ ಮಾಡಿದ್ದಾರೆ. ಪೃಥ್ವಿರಾಜ್ ನಿರ್ದೇಶನದ ಜೊತೆಗೆ ತಮ್ಮ ಪಾತ್ರವನ್ನು ಸೊಗಸಾಗಿ ನಿಭಾಯಿಸಿದ್ದಾರೆ.

ಮಂಜು ವಾರಿಯರ್ ಮತ್ತೊಮ್ಮೆ ತಮ್ಮ ನಟನಾ ಪ್ರತಿಭೆ ಪ್ರದರ್ಶನ ಮಾಡಿದ್ದಾರೆ. ಟೋವಿನೋ ಥಾಮಸ್, ಅಭಿಮನ್ಯು ಸಿಂಗ್, ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.

ತಾಂತ್ರಿಕವಾಗಿ ಸಿನಿಮಾ

ಮಲಯಾಳಂ ಸಿನಿಮಾಗಳು ಕಮ್ಮಿ ಬಜೆಟ್‌ನಲ್ಲಿ ನಿರ್ಮಾಣವಾಗುವ ಕಾಲ ಇತ್ತು. ಆದರೆ ಈಗ ಅದು ಬದಲಾಗಿದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ನೂರಾರು ಕೋಟಿ ಬಜೆಟ್ ಸುರಿಯಲು ಆರಂಭಿಸಿದ್ದಾರೆ. 'L2: ಎಂಪುರಾನ್' ಚಿತ್ರದಲ್ಲಿ ಅದು ಗೊತ್ತಾಗುತ್ತದೆ. ದೇಶ ವಿದೇಶಗಳಲ್ಲಿ ಅದ್ಧೂರಿಯಾಗಿ ಸಿನಿಮಾ ಚಿತ್ರೀಕರಣವಾಗಿದೆ. ಸುಜಿತ್ ವಾಸುದೇವ್ ಛಾಯಾಗ್ರಹಣ, ದೀಪಕ್ ದೇವ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಕೊನೆ ಮಾತು

ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಈ ಚಿತ್ರದಲ್ಲಿ ಕಥೆ, ಡ್ರಾಮಾ, ಎಮೋಷನ್ಸ್ ಕಮ್ಮಿ ಎನಿಸುತ್ತದೆ. ಚಿತ್ರದ ಕಾಲಾವಧಿ ಹೆಚ್ಚಾಯಿತು. ಸೆಕೆಂಡ್ ಹಾಫ್ ಕೂಡ ನಿರಾಸೆ ಮೂಡಿಸುತ್ತದೆ. ಆದರೂ ಮೋಹನ್ ಲಾಲ್ ನಟನೆ, ಸ್ಟೈಲಿಶ್ ಆಕ್ಷನ್ ಸೀಕ್ವೆನ್ಸ್, ಪೃಥ್ವಿರಾಜ್ ಟೇಕಿಂಗ್ ಚೆನ್ನಾಗಿದೆ. 'ಲೂಸಿಫರ್' ಚಿತ್ರವನ್ನೇ ಮನಸ್ಸಿನಲ್ಲಿಟ್ಟುಕೊಂಡು 'ಎಂಪುರಾನ್' ನೋಡಲು ಹೋದರೆ ನಿರಾಸೆ ಮೂಡಿಸಬಹುದು. ಆದರೆ ಮಾಸ್ ಆಕ್ಷನ್ ಸಿನಿಮಾ ಪ್ರಿಯರಿಗೆ ಇಷ್ಟವಾಗುತ್ತದೆ.

More from Filmibeat

English summary
L2: Empuraan Malayalam Movie review and Rating; here is Mohanlal's film plus and minus;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X