twitter
    For Quick Alerts
    ALLOW NOTIFICATIONS  
    For Daily Alerts

    ಮನಿ ಹೈಸ್ಟ್ 5: ಉಳಿವಿಗಾಗಿ ಹೋರಾಟ, ಭಾವನಾತ್ಮಕ ಅಂತ್ಯಕ್ಕೆ ಮುನ್ನುಡಿ

    |

    ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ 'ಮನಿಹೈಸ್ಟ್' ವಿಶ್ವವಿಖ್ಯಾತ ವೆಬ್ ಸರಣಿ. ಮುಖವಾಡದ ದರೋಡೆಕೋರರು ಮತ್ತು ಪೊಲೀಸರ ನಡುವೆ ನಡೆವ ಶಕ್ತಿಯ-ಯುಕ್ತಿಯ ಆಟವೇ 'ಮನಿಹೈಸ್ಟ್'ನ ಕಥಾ ಹಂದರ. ಎಲ್ಲಿಯೋ ಕೂತು ದರೋಡೆಕೋರರ ಗುಂಪನ್ನು ತನ್ನ ಯುಕ್ತಿಯಿಂದ ಮುನ್ನಡೆಸುವ ಪ್ರೊಫೆಸರ್ ಸರಣಿಯ ನಾಯಕ. ಜೀವ ಪಣಕ್ಕಿಟ್ಟು ದರೋಡೆಗೆ ಇಳಿದಿರುವ ದರೋಡೆಕೋರರು ಸಹ ನಾಯಕರೇ.

    ವೆಬ್ ಸರಣಿಯ ಐದನೇ ಸೀಸನ್ ಇದೀಗ ಬಿಡುಗಡೆ ಆಗಿದೆ. 'ಮನಿ ಹೈಸ್ಟ್' ವೆಬ್ ಸರಣಿಯಲ್ಲಿ ದರೋಡೆಕೋರರು ಕೇವಲ ದರೋಡೆಕೋರರಾಗಿ ಉಳಿದಿದಲ್ಲ. ಅವರು ಪ್ರತಿರೋಧದ ಸಂಕೇತವಾಗಿದ್ದಾರೆ. ಹೋರಾಟದ ಸಂಕೇತವಾಗಿದ್ದಾರೆ ಇದನ್ನು ಸ್ವತಃ 'ಮನಿಹೈಸ್ಟ್' ಸರಣಿಯ ನಾಯಕ ಪ್ರೊಫೆಸರ್ ಹೇಳುತ್ತಾನೆ.

    'ಮನಿಹೈಸ್ಟ್ 3'ನಲ್ಲಿ ಹೊಸ ದರೋಡೆಗೆ ತೆರಳುವ ವೇಳೆಗೆ ದರೋಡೆಕೋರರು ರಾಷ್ಟ್ರಮಟ್ಟದಲ್ಲಿ ಹೀರೋಗಳಾಗಿರುತ್ತಾರೆ. ಮನಿಹೈಸ್ಟ್ 3 ಮತ್ತು 4 ಗಳಲ್ಲಿ ಪೊಲೀಸರಿಂದ ಭಾರಿ ಪ್ರತಿರೋಧ ಎದುರಿಸಿಯೂ ಅಂತಿಮವಾಗಿ ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವಲ್ಲಿ ದರೋಡೆಕೋರರು ಮತ್ತ ಪ್ರೊಫೆಸರ್ ಯಶಸ್ವಿಯಾಗಿರುತ್ತಾರೆ ಅನ್ನುವಲ್ಲಿಗೆ ಸೀಸನ್ 4 ಮುಗಿದಿತ್ತು. ಇದೀಗ 'ಮನಿ ಹೈಸ್ಟ್ 5'ನ ಮೊದಲ ಭಾಗ ಬಿಡುಗಡೆ ಆಗಿದ್ದು, ಇದರಲ್ಲಿ ದರೋಡೆಕೋರದ್ದು ಕೇವಲ ಉಳಿವಿಗಾಗಿ ಹೋರಾಟವಾಗಿದೆ.

    Money Heist Season 5 Part One Review In Kannada

    ಪೊಲೀಸರಿಂಗಲೂ ಒಂದು ಹೆಜ್ಜೆ ಮುಂದೆ ಇದ್ದು ಅವರನ್ನು ಚಕಿತಗೊಳಿಸಿ ಗೆಲ್ಲುವುದು 'ಮನಿ ಹೈಸ್ಟ್'ನ ದರೋಡೆಕೋರರ ಸ್ಟೈಲ್ ಆದರೆ 'ಮನಿ ಹೈಸ್ಟ್ ಸೀಸನ್ 5' ನಲ್ಲಿ ದರೋಡೆಕೋರರು ಜೀವ ಉಳಿಸಿಕೊಳ್ಳಲು ಹೋರಾಡುವ ಸ್ಥಿತಿ ತಲುಪುತ್ತಾರೆ. ಸೀಸನ್‌ ಕೊನೆಯ ಎಪಿಸೋಡ್‌ನಲ್ಲಿ ವೀಕ್ಷಕರ ಅತಿ ಮೆಚ್ಚಿನ ಪಾತ್ರವೊಂದು ಸಾಯುತ್ತದೆ ಸಹ!

    ಮುಖವಾಡದ ದರೋಡೆಕೋರರ ಈ ಉಳಿವಿನ ಹೋರಾಟ ಬಹಳ ಇಂಟೆನ್ಸ್ ಆಗಿದ್ದು ಸೀಸನ್ 4 ಗಿಂತಲೂ ಅದ್ಭುತವಾಗಿ, ವೀಕ್ಷಕರಲ್ಲಿ ಕುತೂಹಲ ಕೆರಳಿಸುವಂತಿದೆ. ಸೀಸನ್ ನಾಲ್ಕರ ಕೊನೆಯಲ್ಲಿ ಮಾಜಿ ಪೊಲೀಸ್ ಅಧಿಕಾರಿ ಅಲಿಸಿಯಾ ಸಿಯೇರಾ ಕೈಗೆ ಸಿಕ್ಕಿಹಾಕಿಕೊಳ್ಳುವ ಪ್ರೊಫೆಸರ್ ಹೇಗೆ ತಪ್ಪಿಸಿಕೊಳ್ಳುತ್ತಾನೆ. ದರೋಡೆಗೆ ಒಳಗಾಗಿರುವ ರಾಯಲ್ ಮಿಂಟ್ ಆಫ್ ಸ್ಪೇನ್‌ ಒಳಗೆ ನುಗ್ಗಲು ತಯಾರಾಗಿರುವ ಮಿಲಿಟರಿ ಫೋರ್ಸ್ ಅನ್ನು ಪ್ರೊಫೆಸರ್ ಅನುಪಸ್ಥಿತಿಯಲ್ಲಿ ದರೋಡೆಕೋರರು ಹೇಗೆ ಎದುರಿಸುತ್ತಾರೆ ರಾಯಲ್ ಮಿಂಟ್‌ನಲ್ಲಿ ನಡೆವ ಯುದ್ಧ ಎಷ್ಟು ಭೀಕರಾಗಿರುತ್ತದೆ ಎಂಬುದನ್ನು ತಿಳಿಯಲು ವೆಬ್ ಸರಣಿ ನೋಡಲೇಬೇಕು.

    ಸೀಸನ್ 5 ನಲ್ಲಿ ಅಲಿಸಿಯಾ ಸಿಯೆರಾ ಹಾಗೂ ಪ್ರೊಫೆಸರ್ ನಡುವಿನ ಸಂಘರ್ಷ, ದರೋಡೆಕೋರರ ಗುಂಪಿನ ಪ್ರಮುಖ ಪಾತ್ರ ಟೊಕಿಯೊಳ ಭೂತಕಾಲದ ಕತೆ ಜೊತೆಗೆ ಸೈನ್ಯದ ವಿರುದ್ಧ ದರೋಡೆಕೋರರ ಸಶಸ್ತ್ರ ಸಂಘರ್ಷದ ಸನ್ನಿವೇಶಗಳಿಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ಜೊತೆಗೆ ಬರ್ಲಿನ್‌ ಹಾಗೂ ಅವನ ಮಗನ ಹಳೆಯ ಕತೆಯು ಸಹ ದರೋಡೆಯ ಕತೆಯ ಜೊತೆಗೆ ಸಾಗುತ್ತದೆ. ಆದರೆ ಬರ್ಲಿನ್‌ನ ಕತೆಗೂ ದರೋಡೆಯ ಕತೆಗೂ ಸಂಬಂಧವೇ ಇಲ್ಲ. ಬಹುಷಃ ಬರ್ಲಿನ್‌ ಹಾಗೂ ಮಗನ ಕತೆಯ ಪ್ರಾಮುಖ್ಯತೆ ಸೀಸನ್ 5ನ ಎರಡನೇ ಭಾಗದಲ್ಲಿ ರಿವೀಲ್ ಆಗುವ ಸಾಧ್ಯತೆ ಇದೆ.

    ಮನಿಹೈಸ್ಟ್ ಈ ವರೆಗಿನ ಸರಣಿಗಳು ಪ್ರೀತಿ, ಸ್ನೇಹ, ಆದರ್ಶ, ತ್ಯಾಗ, ಹೋರಾಟ, ಮೈನವಿರೇಳಿಸುವ ಆಕ್ಷನ್, ಕಳ್ಳ-ಪೊಲೀಸ್ ನಡುವೆ ಆಟ ಇವುಗಳನ್ನೇ ಒಳಗೊಂಡ ಕತೆಯಾಗಿತ್ತು. 'ಮನಿಹೈಸ್ಟ್ 5'ನಲ್ಲೂ ಅದು ಮುಂದುವರೆದಿದೆ. ಆದರೆ 'ಮನಿಹೈಸ್ಟ್ 5'ನಲ್ಲಿ ದರೋಡೆಕೋರರಿಗಿಂತಲೂ ಪೊಲೀಸರೇ ಮೇಲುಗೈ ಸಾಧಿಸುತ್ತಾರೆ. ದರೋಡೆಯ ಮಧ್ಯದಲ್ಲಿರುವ ದರೋಡೆಕೋರರಿಗೆ ಹೊರ ಹೋಗಲು ದಾರಿಯೇ ಇಲ್ಲದಂತಾಗಿ ಅದು ಅವರ ಉಳಿವಿನ ಹೋರಾಟವಾಗಿ ರೂಪುಗೊಳ್ಳುತ್ತದೆ. ಕೊನೆಯಲ್ಲಿ ಪ್ರೇಕ್ಷಕರ ಮೆಚ್ಚಿನ ಪಾತ್ರವೊಂದು ಸಾಯುತ್ತದೆ. ಆ ಮೂಲಕ 'ಮನಿಹೈಸ್ಟ್ 5'ನ ಮೊದಲ ಭಾಗಕ್ಕೆ ವಿಷಾದದ ಅಂತ್ಯ ನೀಡಿದ್ದಾರೆ ನಿರ್ದೇಶಕ ಅಲೆಕ್ಸ್ ಪಿನ್ಯಾ.

    'ಮನಿಹೈಸ್ಟ್ 5' ಈ ಸರಣಿಯ ಕೊನೆಯ ಸೀಸನ್ ಆಗಿದ್ದು, ಸೀಸನ್‌ನ ಮೊದಲ ಭಾಗವಷ್ಟೆ ಈಗ ಬಿಡುಗಡೆ, ಎರಡನೇ ಭಾಗವು ಡಿಸೆಂಬರ್ 3 ರಂದು ಬಿಡುಗಡೆ ಆಗಲಿದೆ. ಇದೀಗ ಬಿಡುಗಡೆ ಆಗಿರುವ ಮೊದಲ ಭಾಗವನ್ನು ಗಮನಿಸಿದರೆ ಎರಡನೇ ಭಾಗವು ಇನ್ನಷ್ಟು ಭಾವನಾತ್ಮಕವಾಗಿರುತ್ತದೆ ಎನ್ನಬಹುದಾಗಿದೆ. ಎರಡನೇ ಭಾಗದಲ್ಲಿ ವೆಬ್ ಸರಣಿಯ ಇನ್ನಷ್ಟು ಪಾತ್ರಗಳು ಸಾಯಬಹುದು ಎಂದು ಊಹಿಸಬಹುದು.

    English summary
    Money Heist season 5 part one review in Kannada without giving spoiler alerts. Money Heist Season 05 is better than season 4.
    Monday, September 6, 2021, 10:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X