Mother Promise Twitter Review: ಅತಿಯಾದ ನಿರೀಕ್ಷೆ ಬೇಡ, 'ಮದರ್ ಪ್ರಾಮಿಸ್' ಪಕ್ಕಾ ಪೈಸಾ ವಸೂಲ್
ಡಾಲಿ ಧನಂಜಯ್ ನಿರ್ಮಿಸಿ ನಟಿಸಿರುವ 'ಮದರ್ ಪ್ರಾಮಿಸ್' ಸಿನಿಮಾ ತೆರೆಗೆ ಬಂದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಾನಾ ಕಡೆಗಳಲ್ಲಿ ಸಿನಿಮಾ ಪ್ರೀಮಿಯರ್ ಶೋಗಳನ್ನು ಆಯೋಜಿಸಿತ್ತು. ಎಲ್ಲಾ ಕಡೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಅಂತಿಮವಾಗಿ ಸಿನಿಮಾ ತೆರೆಗೆ ಬಂದಿದೆ. ಪ್ರೇಕ್ಷಕರನ್ನು ನಗಿಸುವುದರಲ್ಲಿ ಧನು ಅಂಡ್ ಟೀಂ ಸಕ್ಸಸ್ ಕಂಡಿದೆ.
ಧನಂಜಯ್ ಆಪ್ತ ಸ್ನೇಹಿತ ಪೂರ್ಣಚಂದ್ರ ಈ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕಟ್ಟಿಕಟ್ಟಿದ್ದಾರೆ. ಸಾಕಷ್ಟು ಜನ ಹೊಸ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಲಾಜಿಕ್ ಎಲ್ಲಾ ಪಕ್ಕಕ್ಕಿಟ್ಟು ನಗಿಸೋದೇ ನಮ್ಮ ಧರ್ಮ ಎನ್ನುವಂತೆ ಮಾಡಿರುವ ಸಿನಿಮಾ ಇದು. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ವಿಮರ್ಶಕರು ಕೂಡ ತಂಡದ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಿದೆ. ಹೊರರಾಜ್ಯದ ಕೆಲವು ಕಡೆ ಸಿನಿಮಾ ಬಿಡುಗಡೆಯಾಗಿದೆ.

ಈಗಾಗಲೇ 'ಮದರ್ ಪ್ರಾಮಿಸ್' ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ನೋಡುವ ಮುನ್ನ ಈ ಟ್ವೀಟ್‌ಗಳನ್ನು ಒಮ್ಮೆ ಓದಿ.
ಪೈಸಾ ವಸೂಲ್ ಸಿನಿಮಾ
ಸಖತ್ ಮಜವಾಗಿ ಚೆನ್ನಾಗಿದೆ. ಫಸ್ಟ್ ಹಾಫ್ ಓಕೆ.. ಸೆಕೆಂಡ್ ಹಾಫ್ ಸೂಪರ್.. ಫಸ್ಟ್ ಹಾಫ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಸನ್ನಿವೇಶಕ್ಕೆ ತಕ್ಕಂತೆ ಕಾಮಿಡಿ ಸಕ್ಕತ್ತಾಗಿ ವರ್ಕ್ ಆಗಿದೆ. ಕೊನೆಯ 20-25 ನಿಮಿಷಗಳು ನಕ್ಕು ನಕ್ಕು ಸುಸ್ತಾಗ್ತೀರಾ. ಕೊನೆ ಕೊನೆಗೆ ಅದ್ಭುತವಾಗಿದೆ, ಪೈಸಾ ವಸೂಲ್ ಆಗುತ್ತೆ.
ಫ್ರೆಂಡ್ಸ್ ಜೊತೆ ನೋಡಿ
ಡೀಸೆಂಟ್ ಕಾಮಿಡಿ ಸಿನಿಮಾ.. ಚೆನ್ನಾಗಿದೆ. ನನಗೆ ಇಷ್ಟವಾಯ್ತು. ಫ್ರೆಂಡ್ಸ್ ಜೊತೆ ನೋಡಿದ್ರೆ ಕಾಮಿಡಿ ಸಖತ್ ಮಜಾ ಕೊಡುತ್ತೆ.
ಹೆಚ್ಚು ನಿರೀಕ್ಷೆ ಬೇಡ
ಸಿನಿಮಾ ತುಂಬಾ ಮನರಂಜನೆ ತುಂಬಿದೆ. ಕೆಲವು ಸನ್ನಿವೇಶಗಳು ಮತ್ತು ಪಾತ್ರಗಳು ಚೆನ್ನಾಗಿದ್ದವು... ಒಟ್ಟಾರೆಯಾಗಿ, ಇದು ಒಳ್ಳೆಯ ಸಿನಿಮಾ. ಹೆಚ್ಚು ನಿರೀಕ್ಷೆ ಇಟ್ಟುಕೊಂಡು ಹೋಗಬೇಡಿ, ಎಂಜಾಯ್ ಮಾಡಿ..
ಚಿತ್ರಮಂದಿರದಲ್ಲೇ ನೋಡಿ
'ಮದರ್ ಪ್ರಾಮಿಸ್' ಮಜವಾಗಿದೆ.. ಮೊದಲಾರ್ಧ ಸ್ವಲ್ಪ ನಿಧಾನವಾದರೂ, ದ್ವಿತೀಯಾರ್ಧ ಸಂಪೂರ್ಣವಾಗಿ ಮನರಂಜನೆ ನೀಡುತ್ತದೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಚಿತ್ರಮಂದಿರಗಳಲ್ಲಿ ನೋಡಲು ಮರೆಯಬೇಡಿ.
ಸೂಪರ್ ಸಿನಿಮಾ
ಪೂರ್ಣಚಂದ್ರ ಬ್ರದರ್, 'ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಬಳಿಕ ನಿಮ್ಮನ್ನು ನಾನು ತುಂಬಾ ಇಷ್ಟಪಡುತ್ತೇನೆ. ಒಬ್ಬ ಚೇತರಿಸಿಕೊಳ್ಳುತ್ತಿರುವ ಹೃದ್ರೋಗಿ(ನಾನೇ)ಯನ್ನು ನಗ್ಸಿದ್ದಕ್ಕೆ ಧನ್ಯವಾದಗಳು... ನಾನು 2 ಗಂಟೆ 46 ನಿಮಿಷಗಳ ಕಾಲ ಇಡೀ ಜಗತ್ತನ್ನೇ ಮರೆತಿದ್ದೆ. ಡಾಲಿ ಧನಂಜಯ್ ಲವ್ ಯು, ನಾನು ನಿಮ್ಮನ್ನು ಗಟ್ಟಿಯಾಗಿ ಅಪ್ಪಿಕೊಳ್ಳಬೇಕೆಂದು ಬಯಸುತ್ತೇನೆ.
ಪಾಸಿಟಿವ್, ನೆಗೆಟಿವ್
ಫನ್ ಫ್ಯಾಮಿಲಿ ಎಂಟರ್‌ಟೈನರ್.. ಸಿನಿಮಾ ಸಾಕಷ್ಟು ನಗಿಸುತ್ತದೆ.. ಪಾಸಿಟಿವ್ ಅಂಶಗಳು ಹೇಳುವುದಾದರೆ ನಿರ್ದೇಶನ, ಸಂಕಲನ ಮತ್ತು ಛಾಯಾಗ್ರಹಣ ಪರ್ಫೆಕ್ಟ್ ಆಗಿದೆ. ಒನ್‌ಲೈನರ್‌ಗಳು ನಗಿಸುತ್ತದೆ. ಪೂರ್ಣಚಂದ್ರ, ಮಹಾದೇವ್ ಪ್ರಸಾದ್ ನಟನೆ ಗಮನ ಸೆಳೆಯುತ್ತದೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಧನಂಜಯ್ ಸೀಮಿತ ದೃಶ್ಯಗಳಲ್ಲಿ ಕಾಣಿಸಿಕೊಂಡ್ರು ನೆನಪಿನಲ್ಲಿ ಉಳಿಯುತ್ತಾರೆ. ಕೊನೆಯ 30 ನಿಮಿಷಗಳು ಮತ್ತು ಕ್ಲೈಮ್ಯಾಕ್ಸ್ ಆಕರ್ಷಕ ಚಿತ್ರಕಥೆಯೊಂದಿಗೆ ಚಿತ್ರವನ್ನು ಮೇಲಕ್ಕೆತ್ತುತ್ತದೆ.. ನೆಗೆಟಿವ್ ವಿಚಾರಕ್ಕೆ ಬಂದರೆ ಊಹಿಸಬಹುದಾದ ಕಥೆ. ಕೆಲ ಹಾಸ್ಯ ದೃಶ್ಯಗಳು ಬಲವಂತವಾಗಿ ತುರುಕಿದಂತಿದೆ. ಸುಮಾರು 25-30 ನಿಮಿಷಗಳ ಕಾಲ ಸ್ಲೋ ಅನ್ನಿಸುತ್ತೆ. ಒಟ್ಟಾರೆ ಫ್ಯಾಮಿಲಿ ಜೊತೆ ನೋಡಿ ಎಂಜಾಯ್ ಮಾಡಿ.


Click it and Unblock the Notifications