ಬನ್ನಿ, ಮತ್ತೆ ಮತ್ತೆ ನೋಡೋಣ 'ಮತ್ತೆ ಬನ್ನಿ ಪ್ರೀತ್ಸೋಣ'
ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಿರ್ದೇಶಕ ರವೀಂದ್ರ ಸಂಗಮದ ಚಿತ್ರ 'ಮತ್ತೆ ಬನ್ನಿ ಪ್ರೀತ್ಸೋಣ' ಕರ್ನಾಟಕದಾದ್ಯಂತ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕಳೆದ ಜೂನ್ ನಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ ಚಿತ್ರದ ಪ್ರದರ್ಶನವನ್ನು ವಾಪಸ್ ಪಡೆದಿದ್ದರು ನಿರ್ದೇಶಕ ರವೀಂದ್ರ. ಆದರೂ ಮೂರೇ ದಿನದಲ್ಲಿ ನೂರು ದಿನ ಓಡಿದಷ್ಟು ಪ್ರಸಿದ್ಧಿ ಪಡೆದಿತ್ತು ಆಗಿನ ಹೆಸರಿನ 'ಐ ಆಮ್ ಸಾರಿ, ಮತ್ತೆ ಬನ್ನಿ ಪ್ರೀತ್ಸೋಣ.
ಪ್ರೀತಿ, ಪ್ರೇಮ, ಪ್ರಣಯದ ನಡುವೆ ಹೆಂಡತಿಯೇ ನನ್ನ ಜೀವ, ಜಗತ್ತು ಎಂದು ಭಾವಿಸುವ ನಾಯಕನಿಗೆ ಅರ್ಧ ಕತೆಯಲ್ಲಿ ಕಲ್ಲು ಸಿಕ್ಕಿದಂತೆ ಹೆಂಡತಿ ವೇಶ್ಯೆ ಎಂಬ ಸಂಶಯ ಮೂಡುವಂತಾಗುತ್ತದೆ. ನಂತರವೂ ಸಾಂದರ್ಭಿಕ ಸಾಕ್ಷಗಳು ಸಿಗುತ್ತಾ ಹೋಗುತ್ತವೆ. ಆದರೆ ಸಂಶಯವನ್ನು ಕೇವಲ ಸಂಶಯವನ್ನಾಗಿ ಮಾತ್ರ ನೋಡುವ ನಾಯಕನ ಪಾಡು, ಪೇಚಾಟ ಪ್ರೇಕ್ಷಕರನ್ನು ಸೀಟಿನ ಅಂಚಿಗೆ ತಂದು ಕೂಡ್ರಿಸುತ್ತದೆ.
ಅತ್ತ ಗಂಡನೇ ಸರ್ವಸ್ವ ಎಂದು ಭಾವಿಸಿ ಪ್ರೀತಿಸುವ ಹೆಂಡತಿಗೆ ಗಂಡನ ತಲೆಯಲ್ಲಿರುವ ಅನುಮಾನ, ಹಾಗಿದ್ದೂ ಪ್ರೀತಿಸುವ ಪರಿ ಇವೆಲ್ಲಾ ಅರ್ಥವಾಗುತ್ತಾ? ನಾಯಕನ ಸಂಶಯ ನಿಜವಾಗುತ್ತಾ? ನಾಯಕಿಯ ಆಸೆ ನೆರವೇರುತ್ತಾ? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕೊನೆಯಲ್ಲಿ ಉತ್ತರ ಸಿಗುತ್ತೆ (?). ಅಲ್ಲಿಯವರೆಗೆ ನೋಡುವ ಪ್ರೇಕ್ಷಕರಲ್ಲಿ ಪರುಷರು ನಾಯಕರಾಗಿ, ಮಹಿಳೆಯರು ನಾಯಕಿಯಾಗಿ ನೋಡುವಂತೆ ಮಾಡುವ ಅತ್ಯದ್ಭುತ ಚಿತ್ರ 'ಬನ್ನಿ ಮತ್ತೆ ಪ್ರೀತ್ಸೋಣ'. ವಿಮರ್ಶೆ ಮುಂದಿನ ಪುಟದಲ್ಲಿ ಮುಂದುವರಿದಿದೆ, ನೋಡಿ...


Click it and Unblock the Notifications











