twitter
    For Quick Alerts
    ALLOW NOTIFICATIONS  
    For Daily Alerts

    ಕಿರುಚಿತ್ರ ವಿಮರ್ಶೆ: ಒಳಗೊಳಗೆ ತನ್ನನ್ನೇ ತಾನು Mr.X

    By ರವೀಂದ್ರ ಕೊಟಕಿ
    |

    ಅವತಾರ್ ಟಾಕೀಸ್ ಇದರ ಲಾಂಛನದಲ್ಲಿ ಮಂಜು ಕಾಸರಗೋಡ್ ನಟಿಸಿ- ನಿರ್ದೇಶಿಸಿರುವ ಕಿರುಚಿತ್ರ Mr.X.

    ಚಿತ್ರದ ಆರಂಭ...
    ಚಿತ್ರದ ಆರಂಭದಲ್ಲೇ ನಾಲ್ಕುಗೋಡೆಗಳ ಸಣ್ಣ ಕೋಣೆಯಲ್ಲಿ ಪ್ರಪಂಚದ ಡ್ರಗ್ಸ್ ಅನಾವರಣವಾಗುತ್ತದೆ. ಅಲ್ಲಿಗೆ ಚಿತ್ರದ ಏಕಪಾತ್ರಧಾರಿಯಾಗಿರುವ ನಟ ಭಯಂಕರ ಡ್ರಗ್ಸ್ ವ್ಯಸನಿ ಎಂಬುವುದು ಕ್ಷಣದಿಂದ ಕ್ಷಣಕ್ಕೆ ನೋಡುವ ಪ್ರೇಕ್ಷಕನಿಗೆ ಅರ್ಥವಾಗುತ್ತದೆ. ಮಾದಕ ವ್ಯಸನಿಗಳ ತಲ್ಲಣಗಳು ಇಲ್ಲಿ ಸರಿಯಾಗುತ್ತದೆ.

    Mr.X ಭಯಂಕರ ಡ್ರಗ್ಸ್ ವ್ಯಸನಿ ಎಂಬುವುದು ಮೊದಲ ಎರಡು ಮೂರು ನಿಮಿಷದ ದೃಶ್ಯಗಳು ಸಾಬೀತುಪಡಿಸುತ್ತದೆ. ಏತನ್ಮಧ್ಯೆ
    ಆತನೊಂದು ನಂಬರಿಗೆ ಮೊಬೈಲಿನಿಂದ ಕರೆ ಮಾಡುತ್ತಾನೆ. ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಹೋಗಲು ತನ್ನಲ್ಲಿ ತಾನೇ ಅಸಹಾಯಕತೆಯ ಜೊತೆಗೆ ವ್ಯಾಘ್ರ ಯನ್ನು ಪ್ರದರ್ಶಿಸಿ ನನ್ನಲ್ಲಿ ತಾನೇ ದುಃಖಿಸುತ್ತಾನೆ.

    MR X Kannada Short film review

    ಬಾಗಿಲು ಬಡಿದ ಸದ್ದು

    ಹೀಗೆ ತನ್ನಲ್ಲಿ ತಾನೇ ದುಃಖಿಸಿ, ಕೋಪಿಸಿಕೊಂಡು ಖಿನ್ನತೆಯಿಂದ ಬಳಲುತ್ತಿರುವಾಗಲೇ ಯಾರೋ ಜೋರಾಗಿ ಬಾಗಿಲು ಬಡಿದ ಸದ್ದು.
    ಆ ಸದ್ದಿಗೆ ಬೆಚ್ಚಿಬಿದ್ದ Mr.X ತನ್ನ ಹತ್ತಿರ ಬರದಂತೆ ಹೇಳುತ್ತಾ ಅವನು ಹಿಂದಕ್ಕೆ ಸರಿದು ಭಯ ಹಾಗೂ ಆತಂಕದೊಂದಿಗೆ 'ನಾನು ಅವನ ಕೊಂದಿಲ್ಲ...' ಅಂತ ಹೇಳುತ್ತಲೇ ಕೈಗೆ ಚಾಕು ತೆಗೆದುಕೊಂಡು 'ಕೊಂದು ಬಿಡ್ತೀನಿ...'ಆತಂಕಭರಿತ ಎಚ್ಚರಿಕೆಯನ್ನು ಕೊಡುತ್ತಲೇ....
    ಚಿತ್ರದ ಕೊನೆಗೆ ತೆಗೆದುಕೊಂಡು ಬರುತ್ತಾನೆ.

    ಕ್ಲೈಮ್ಯಾಕ್ಸ್ ಏನು?

    ಒಳಗಿನಿಂದ ಬೀಗ ಹಾಕಲ್ಪಟ್ಟ ಬಾಗಿಲನ್ನು ಬಡಿಯುತ್ತಿರುವ ಸದ್ದು. ರಕ್ತದ ಮಡುವಿನಲ್ಲಿ ಬಿದ್ದಿರುವ Mr.X

    It kill's you from inside Say no to drugs.

    ಎನ್ನುವ ಮೂಲಕ ಇಲ್ಲಿಗೆ ಚಿತ್ರ ಮುಕ್ತಾಯವಾಗುತ್ತದೆ.

    ಮುಕ್ತಾಯದ ನಂತರ ಉಳಿದುಹೋಗುವ ಪ್ರಶ್ನೆಗಳು?

    MR X Kannada Short film review

    ಈ ಕಿರುಚಿತ್ರದ ಆತ್ಮ ಮತ್ತು ಸ್ವರೂಪ ಎರಡು ಕೂಡ ಚಿತ್ರದ ಏಕ ಪಾತ್ರಧಾರಿ ಮತ್ತು ಸೂತ್ರಧಾರಿ ಯಾದ(ನಿರ್ದೇಶಕ) ಮಂಜು ಕಾಸರಗೋಡ್. ಡ್ರಗ್ಸ್ ವ್ಯಸನಿಯಾಗಿ ಅವರದು ನೈಜ ಅಭಿನಯ. ವಿನಯ್ ಕುಮಾರ್ ಕೂರ್ಗ್ ಅವರ ಸಂಕಲನ, ಭೂಪೇಶ್ ಬೆಳಗಲಿ ಛಾಯಾಗ್ರಹಣ ಗಮನಸೆಳೆಯುತ್ತದೆ.

    ಡ್ರಗ್ಸ್ ವ್ಯಸನಿಯಾದ ಕಾರಣಕ್ಕೆ ಸಹಜವಾಗಿಯೇ ತನ್ನನ್ನು ಯಾರೋ ಕೊಲ್ಲಲು ಬರುತ್ತಿದ್ದಾರೆ ಎಂಬ ಭ್ರಮೆಯಲ್ಲಿ, ಅವರನ್ನು ಕೊಲ್ಲುವ ಇಮ್ಯಾಜಿನೇಷನ್‌ನಲ್ಲಿ ತನಗೆ ತಾನೇ ಕೊಂದುಕೊಳ್ಳುವ ಹಿನ್ನಲೆ 'ನಿಮ್ಮನ್ನು ಯಾರು ಕೊಲ್ಲುವುದಿಲ್ಲ ಬದಲಾಗಿ ನಿಮ್ಮನ್ನು ನೀವೇ ಕೊಂದುಕೊಳ್ಳುತ್ತೀರಿ' ಅಂತ ಡ್ರಗ್ಸ್ ತೆಗೆದುಕೊಂಡರೆ ಅದರ ಪರ್ಯವಸಾನವನ್ನು ತಿಳಿಸುವ ಪ್ರಯತ್ನ ಕಿರುಚಿತ್ರ ಮಾಡಿದೆ. ಆದರೆ ಹೀಗೆ ಪ್ರಯತ್ನ ಮಾಡುವಾಗ Mr.X ಗೆ ಬಲವಾಗಿ ಕಾಡುವ ಮಾನಸಿಕ ಸಮಸ್ಯೆಯಾದರೂ ಏನು? ಅವನಿಗೆ ತನ್ನನ್ನು ಕೊಲ್ಲಲು ಒಬ್ಬರು ಬರುತ್ತಿದ್ದಾರೆ ಎಂಬ ಭಾವನೆ ಉಂಟಾಗುವುದರ ಹಿನ್ನೆಲೆಯೇನು? ಎರಡು ಪ್ರಶ್ನೆಗಳಿಗೆ ಅಲ್ಲಿ ಉತ್ತರ ಇಲ್ಲದಿರುವುದು, ಅವನು ಯಾರ ಮೊಬೈಲಿಗೆ ಕರೆ ಮಾಡಿದ ಹಿನ್ನೆಲೆಯನ್ನು ವಿವರಿಸದೆ ಹೋದದ್ದು ಚಿತ್ರವನ್ನು ಒಂದಷ್ಟು ಹಿನ್ನಡೆ ಮಾಡುವ ಅಂಶಗಳು. ಪ್ರಯತ್ನ ಅರ್ಥಪೂರ್ಣವಾಗಿದೆ ಆದರೆ ಅದನ್ನು ಸಾಮಾನ್ಯ ಪ್ರೇಕ್ಷಕನಿಗೆ ಅರ್ಥೈಸುವ ಕಸುಬುದಾರಿಕೆಯ ಕೊರತೆ ಮಾತ್ರ ಕೊನೆಗೆ ಉಳಿದುಹೋಗುತ್ತದೆ.

    English summary
    MR X Kannada Short film directed by Manju Kasargodu. This is message oriented Film on drugs consuming.
    Sunday, September 19, 2021, 9:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X