twitter
    For Quick Alerts
    ALLOW NOTIFICATIONS  
    For Daily Alerts

    ಟ್ವಿಟ್ಟರ್ ವಿಮರ್ಶೆ: 'ಎನ್.ಟಿ.ಆರ್ ಕಥಾನಾಯಕುಡು' ಅದ್ಭುತಂ, ಅಮೋಘಂ.!

    |

    ತೆಲುಗು ಸಿನಿ ಅಂಗಳದ ಬಹು ನಿರೀಕ್ಷಿತ ಚಲನಚಿತ್ರ 'ಎನ್.ಟಿ.ಆರ್ ಕಥಾನಾಯಕುಡು' ಇಂದು ತೆರೆಗೆ ಅಪ್ಪಳಿಸಿದೆ. ತೆಲುಗಿನ ಸೂಪರ್ ಸ್ಟಾರ್ ಎನ್.ಟಿ.ರಾಮರಾವ್ ಜೀವನಚರಿತ್ರೆ ಆಧಾರಿತ ಈ ಚಿತ್ರ ಇಂದು ದೇಶದಾದ್ಯಂತ ಬಿಡುಗಡೆ ಆಗಿದೆ.

    ತಂದೆ ಎನ್.ಟಿ.ರಾಮರಾವ್ ಪಾತ್ರದಲ್ಲಿ ಪುತ್ರ ನಂದಮೂರಿ ಬಾಲಕೃಷ್ಣ ಕಾಣಿಸಿಕೊಂಡಿದ್ದರೆ, ಬಸವತಾರಕಮ್ ಪಾತ್ರಕ್ಕೆ ಬಾಲಿವುಡ್ ಬ್ಯೂಟಿ ವಿದ್ಯಾ ಬಾಲನ್ ಬಣ್ಣ ಹಚ್ಚಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್, ರಾನಾ ದಗ್ಗುಬಾಟಿ, ಸುಮಂತ್, ಪ್ರಕಾಶ್ ರಾಜ್ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಈ ಚಿತ್ರವನ್ನ ಕ್ರಿಷ್ ನಿರ್ದೇಶಿಸಿದ್ದಾರೆ.

    ಎನ್.ಟಿ.ಆರ್ ಸಿನಿ ಜರ್ನಿ ಸುತ್ತ ಸುತ್ತುವ 'ಎನ್.ಟಿ.ಆರ್ ಕಥಾನಾಯಕುಡು' ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿ ಆಗಿದೆ. ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಎನ್.ಟಿ.ಆರ್ ಕಥಾನಾಯಕುಡು' ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ವೀಕ್ಷಿಸಿದವರು ಟ್ವಿಟ್ಟರ್ ನಲ್ಲಿ ನೀಡಿರುವ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

    ಬ್ಲಾಕ್ ಬಸ್ಟರ್ ಗ್ಯಾರೆಂಟಿ

    ''ಎನ್.ಟಿ.ಆರ್ ಕಥಾನಾಯಕುಡು' ಪುಟ್ಟ ವಿಮರ್ಶೆ -

    ಮೊದಲಾರ್ಧ ಡೀಸೆಂಟ್.

    ದ್ವಿತೀಯಾರ್ಧ ಸೂಪರ್ ಡೂಪರ್ ಬ್ಲಾಕ್ ಬಸ್ಟರ್.

    ಕ್ರಿಷ್ ಬರೆದಿರುವ ಕ್ಲೈಮ್ಯಾಕ್ಸ್ ಅದ್ಭುತ.

    ಎಲ್ಲರ ಅಭಿನಯ ಚೆನ್ನಾಗಿದೆ.

    ಬ್ಲಾಕ್ ಬಸ್ಟರ್ ಗ್ಯಾರೆಂಟಿ'' - ತೆಲುಗು ಮೂವಿ ರಿವ್ಯೂಸ್.

    ಪ್ರಾಮಾಣಿಕ ಪ್ರಯತ್ನ

    ''ಎನ್.ಟಿ.ಆರ್ ಜೀವನಚರಿತ್ರೆಯನ್ನು ಎರಡುವರೆ ಗಂಟೆಯಲ್ಲಿ ಹೇಳುವುದು ಕಷ್ಟ. ಆದ್ರೆ, ನಿರ್ದೇಶಕ ಕ್ರಿಷ್ ಮತ್ತು ತಂಡ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನರೇಶನ್ ಕೊಂಚ ಸ್ಲೋ ಇದೆ. ದ್ವಿತೀಯಾರ್ಧದಲ್ಲಿ ವೇಗ ಹೆಚ್ಚಾಗುತ್ತದೆ. ಒಟ್ಟಾರೆ ಚಿತ್ರ ಚೆನ್ನಾಗಿದೆ. ನೋಡಲು ಅಡ್ಡಿಯಿಲ್ಲ'' - ನಿಖಿಲ್

    ಪ್ರತಿ ಫ್ರೇಮ್ ಕೂಡ ಚೆನ್ನಾಗಿದೆ

    ''ಎನ್.ಟಿ.ಆರ್ ಕಥಾನಾಯಕುಡು' ಚಿತ್ರ ಸೂಪರ್ ಆಗಿದೆ. ಪ್ರತಿಯೊಂದು ಫ್ರೇಮ್ ಕೂಡ ಅದ್ಭುತವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ'' - ರಾಮ್

    ಉತ್ತಮ ಕ್ಲೈಮ್ಯಾಕ್ಸ್

    ''ಎನ್.ಟಿ.ಆರ್ ಕಥಾನಾಯಕುಡು' ಲೆಜೆಂಡ್ ಜೀವನದ ಪ್ರಾಮಾಣಿಕ ಚಿತ್ರಣ. ಮುಂದಿನ ಭಾಗಕ್ಕೆ ಮುನ್ನುಡಿ ಬರೆದಂತೆ ಕ್ಲೈಮ್ಯಾಕ್ಸ್ ಸೂಕ್ತವಾಗಿದೆ. 'ಎನ್.ಟಿ.ಆರ್ ಮಹಾನಾಯಕುಡು' ಚಿತ್ರಕ್ಕಾಗಿ ಕಾಯುತ್ತಿರುವೆ'' - ಮಹೇಶ್.ಎಸ್.ಕೊನೇರು.

    ಒಮ್ಮೆ ನೋಡಬಹುದು

    ''ಚಿತ್ರವನ್ನ ಒಮ್ಮೆ ನೋಡಬಹುದು. ಎನ್.ಟಿ.ಆರ್ ಚಿತ್ರಗಳನ್ನು ಅನೇಕ ಬಾರಿ ನೋಡಿರುವವರಿಗೆ ಈ ಸಿನಿಮಾ ಕೊಂಚ ಬೋರ್ ಆಗಬಹುದು'' - ಮೂವಿ ರೀಸನ್

    ದ್ವಿತೀಯಾರ್ಧ ಅಭಿಮಾನಿಗಳಿಗೆ ಸಮರ್ಪಣೆ

    ''ಭಾವನಾತ್ಮಕ ಕೌಟುಂಬಿಕ ಸನ್ನಿವೇಶಗಳನ್ನು ಹೊಂದಿರುವ ಎನ್.ಟಿ.ಆರ್ ಕಥಾನಾಯಕುಡು ಚಿತ್ರದ ಮೊದಲಾರ್ಧ ಗುಡ್. ದ್ವಿತೀಯಾರ್ಧ ಅಭಿಮಾನಿಗಳಿಗೆ ಸಮರ್ಪಣೆ. ಎನ್.ಟಿ.ಆರ್ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ನಟನೆ ಚೆನ್ನಾಗಿದೆ. ಈ ಚಿತ್ರವನ್ನ ಮಿಸ್ ಮಾಡಿಕೊಳ್ಳಬೇಡಿ'' - ಸಾಯಿ ಸೃಜನ್

    ಒಂದೇ ಮಾತಲ್ಲಿ ಹೇಳುವುದಾದರೆ...

    ''ಅದ್ಭುತಂ, ಅಮೋಘಂ... ಬಾಲಯ್ಯ ನಿಮ್ಮ ತಂದೆಯ ಪಾತ್ರದಲ್ಲಿ ನಿಮ್ಮ ನಟನೆ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ನಿಮಗೆ ಸರಿಸಾಟಿ ಯಾರೂ ಇಲ್ಲ'' - ಗುಂಟೂರು ಬಾಕ್ಸ್ ಆಫೀಸ್

    English summary
    Nandamuri Balakrishna starrer 'NTR Kathanayakudu' is getting good response in Twitter.
    Wednesday, January 9, 2019, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X