Hit-3 Review: ಸಖತ್ ವೈಲೆಂಟ್ 'ಹಿಟ್- 3' ಕಥೆಯೇನು? ಇಲ್ಲಿದೆ ರಿವ್ಯೂ ರಿಪೋರ್ಟ್

ಸೀಕ್ವೆಲ್ ಸಿನಿಮಾಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕೆಲವೊಮ್ಮೆ ಸುಖಾಸುಮ್ಮನೆ ಕಥೆಯನ್ನು ಎಳೆದಾಡುವ ಕೆಲಸ ನಡೆಯುತ್ತದೆ. ಆದರೆ ಸರಣಿ ಸಿನಿಮಾಗಳಲ್ಲಿ ಬೇರೆ ಬೇರೆ ಕಥೆಗಳನ್ನು ಹೇಳುವ ಸಾಧ್ಯತೆ ಕೂಡ ಇದೆ. ಈಗಾಗಲೇ ಅಂತಹ ಪ್ರಯತ್ನ ಶುರುವಾಗಿದೆ. ಅದೇ ಸಾಲಿಗೆ ಸೇರುವ ಸರಣಿ 'ಹಿಟ್'.

Rating:
2.5/5
Star Cast: ನಾನಿ, ಶ್ರೀನಿಧಿ ಶೆಟ್ಟಿ ಮುಂತಾದವರು.
Director: ಶೈಲೇಶ್ ಕೋಲನು

ಶೈಲೇಶ್ ಕೋಲನು ನಿರ್ದೇಶನದ 'ಹಿಟ್' ಸರಣಿಯ ಎರಡೂ ಸಿನಿಮಾಗಳು ಗೆದ್ದಿತ್ತು. ತೆಲುಗು ನಟ ನಾನಿ ಚಿತ್ರಗಳನ್ನು ನಿರ್ಮಿಸಿದ್ದರು. ಇದೀಗ ಸರಣಿಯ 3ನೇ ಚಿತ್ರಕ್ಕೆ ಸ್ವತಃ ನಾನಿ ಹೀರೊ ಆಗಿದ್ದಾರೆ. ವಿಕ್ರಮ್ ರುದ್ರರಾಜು (ವಿಶ್ವಕ್ ಸೇನ್) ಮೊದಲ ಕೇಸ್ ಕೈಗೆತ್ತಿಕೊಂಡು ಪ್ರಕರಣವನ್ನು ಭೇದಿಸಿದ್ದರು. ಬಳಿಕ ಕೃಷ್ಣದೇವ್ ಐಪಿಎಸ್‌ (ಅಡವಿ ಶೇಷ್) 2ನೇ ಕೇಸ್ ತನಿಖೆ ನಡೆಸಿದ್ದರು. ಈಗ ಅರ್ಜುನ್ ಸರ್ಕಾರ್ ಐಪಿಎಸ್ ಅವತಾರದಲ್ಲಿ ನಾನಿ 3ನೇ ಕೇಸ್ ಕೈಗೆತ್ತಿಕೊಂಡು ಅಬ್ಬರಿಸಿದ್ದಾರೆ.

Nani and Srinidhi Shetty Starrer Hit-3 Review and rating in kannada

ಚಿತ್ರದಲ್ಲಿ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಮಿಂಚಿದ್ದಾರೆ. ಹೀರೊ ಆಗಿ ನಟಿಸುವುದರ ಜೊತೆಗೆ ನಾನಿ ಚಿತ್ರಕ್ಕೆ ಬಂಡವಾಳವನ್ನು ಹೂಡಿದ್ದಾರೆ. ಸ್ಯಾಂಪಲ್‌ಗಳನ್ನು ನೋಡಿದಾಗಲೇ ಚಿತ್ರದಲ್ಲಿ ಸಿಕ್ಕಾಪಟ್ಟೆ ವೈಲೆನ್ಸ್ ಇರುವುದು ಗೊತ್ತಾಗಿತ್ತು. ಇದೀಗ ಸಿನಿಮಾ ತೆರೆಗೆ ಬಂದಿದೆ. ಅಷ್ಟಕ್ಕೂ 'ಹಿಟ್‌- 3' ಕಥೆಯೇನು? ಸಿನಿಮಾ ಹೇಗಿದೆ? ಇಲ್ಲಿದೆ ರಿವ್ಯೂ ರಿಪೋರ್ಟ್.

ಹಿಟ್‌-3 ಕಥೆ

ದಯೆ ದಾಕ್ಷಿಣ್ಯ ಇಲ್ಲದೇ ದುಷ್ಟರನ್ನು ಹೆಡೆಮುರಿ ಕಟ್ಟುವ ಖಡಕ್ ಅಧಿಕಾರಿ ಅರ್ಜುನ್ ಸರ್ಕಾರ್ ಐಪಿಎಸ್‌(ನಾನಿ). ನೋಡೋಕೆ ಉಡಾಫೆ ಆಸಾಮಿ ಎನಿಸಿದರೂ ಕರ್ತವ್ಯದ ವಿಚಾರದಲ್ಲಿ ಬಹಳ ಕಟ್ಟುನಿಟ್ಟು. ಜಮ್ಮು ಕಾಶ್ಮೀರದಲ್ಲಿ (HIT) ಹೋಮಿಸೈಡ್ ಇಂಟರ್‌ವೆನ್ಷನ್ ಟೀಂನಲ್ಲಿರುತ್ತಾನೆ. ಅಲ್ಲಿ ತನ್ನ ತಂಡದೊಂದಿಗೆ ಭೀಕರ ಕೊಲೆ ಪ್ರಕರಣವನ್ನು ತನಿಖೆ ಮಾಡಲು ಪ್ರಾರಂಭಿಸುತ್ತಾನೆ. ಇದೇ ಸಮಯದಲ್ಲಿ ದೇಶಾದ್ಯಂತ ಆ ರೀತಿ 13 ಕೊಲೆಗಳು ನಡೆದಿರುವುದು ಗೊತ್ತಾಗುತ್ತದೆ. ಹಾಗಾಗಿ ತನಿಖೆ ಚುರುಕುಗೊಳ್ಳುತ್ತದೆ. ಈ ಹಾದಿಯಲ್ಲಿ ಅರ್ಜುನ್ ಸರ್ಕಾರ್ ವಿಶಾಖಪಟ್ಟಣಕ್ಕೆ ವರ್ಗಾವಣೆ ಆಗುತ್ತಾನೆ. ಅಷ್ಟಕ್ಕೂ ಈ ಕೊಲೆಗಳ ಹಿಂದೆ ಯಾರಿದ್ದಾರೆ? ದೇಶಾದ್ಯಂತ ಅಮಾಯಕ ಜನರನ್ನು ಕೊಲ್ಲುತ್ತಿರುವ ದುಷ್ಟರ ಉದ್ದೇಶವೇನು? ಅರ್ಜುನ್ ಸರ್ಕಾರ್ ಅಂಡ್ ಟೀಂ ಹೇಗೆ ತನಿಖೆ ಮಾಡಿ ಪ್ರಕರಣವನ್ನು ಭೇದಿಸಿದರು ಎನ್ನುವುದು ಇನ್ನುಳಿದ ಕಥೆ.

Nani and Srinidhi Shetty Starrer Hit-3 Review and rating in kannada

ಸಿನಿಮಾ ಹೇಗಿದೆ?

ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಕಥೆ ಸಿಂಪಲ್. ಒಂದು ಕ್ರೈಂ ನಡೆಯುವುದು ಪೊಲೀಸ್ ಅಧಿಕಾರಿ ಅದನ್ನು ಭೇದಿಸುವುದು. ಆದರೆ ಯಾವ ರೀತಿ, ಎಷ್ಟು ರೋಚಕವಾಗಿ ಮಾಡ್ತಾನೆ ಎನ್ನುವುದು ಪ್ರೇಕ್ಷಕರನ್ನು ಸಿನಿಮಾ ನೋಡುವಂತೆ ಮಾಡುತ್ತದೆ. ಕಥೆ ಸಿಂಪಲ್ ಆಗಿದ್ದು ಟ್ರೀಟ್‌ಮೆಂಟ್ ಚೆನ್ನಾಗಿರಬೇಕು. 'ಹಿಟ್-3' ಚಿತ್ರದ ಕಥೆ ಕೂಡ CTK(ಕ್ಯಾಪ್ಚರ್ ಟಾರ್ಚರ್ ಕಿಲ್) ಎಂಬ ಸೈಕೋ ಕಿಲ್ಲರ್ಸ್‌ ಗ್ಯಾಂಗ್ ಸುತ್ತಾ ಕಥೆ ಬೆಳೆಯುತ್ತದೆ. ಅಷ್ಟಕ್ಕೂ CTK ಉದ್ದೇಶ ಏನು? ಅದರ ಸೂತ್ರಧಾರಿ ಯಾರು? ಅದನ್ನು ಅರ್ಜುನ್ ಸರ್ಕಾರ್ ಹೇಗೆ ಕಂಡು ಹಿಡಿಯುತ್ತಾನೆ ಎನ್ನುವುದು ಪ್ರೇಕ್ಷಕರಿಗೆ ಮಜಾ ಕೊಡುತ್ತದೆ.

ಅನ್ಯಾಯದ ವಿರುದ್ಧ ನಾಯಕ ಹೋರಾಡುವುದು. ಸಮಾಜದ ಕೆಟ್ಟ ಹುಳುಗಳನ್ನು ಅವರದ್ದೇ ಹಾದಿಯಲ್ಲಿ ಹೋಗಿ ಹೊಸಕಿ ಹಾಕುವುದು ಎಲ್ಲವೂ ಈ ಹಿಂದೆ ಕೆಲ ಸಿನಿಮಾಗಳಲ್ಲಿ ನೋಡಿದ್ದೇವೆ. ಈ ಚಿತ್ರದಲ್ಲೂ ಅದನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಆ ಸೈಕೋ ಕಿಲ್ಲರ್ ಗ್ಯಾಂಗ್‌ ಆರ್ಭಟ ಅಂತೂ ನೋಡುವುದಕ್ಕೆ ಭೀಕರವಾಗಿರುತ್ತದೆ. ಆದರೆ ಸೈಕೋ ಗ್ಯಾಂಗ್‌ ನಾಶ ಮಾಡಲು ಅದಕ್ಕಿಂತ ಕ್ರೂರವಾದ ಸೈಕೊ ರೀತಿ ನಾಯಕ ಬದಲಾಗುವುದು ಕಸಿವಿಸಿ ಎನಿಸದೇ ಇರುವುದಿಲ್ಲ.

ಸೆಕೆಂಡ್ ಹಾಫ್‌ನಲ್ಲಿ ರಕ್ತದ ಕೋಡಿ ಹರಿಯುತ್ತದೆ. ಪ್ರೇಕ್ಷಕರನ್ನು ರಂಜಿಸಲು ಇಷ್ಟು ವೈಲೆನ್ಸ್ ಅವಶ್ಯಕತೆ ಇತ್ತಾ? ಎಂದು ಅನಿಸಿದರೂ ಅಚ್ಚರಿ ಪಡಬೇಕಿಲ್ಲ. 'KGF' ಸರಣಿ ಬಳಿಕ ಆಕ್ಷನ್ ಸಿನಿಮಾಗಳಲ್ಲಿ ಈ ಬಹಳ ವೈಲೆನ್ಸ್ ಇರುವುದನ್ನು ನೋಡುತ್ತಿದ್ದೇವೆ. ಈ ಹಿಂದೆ ಮಲಯಾಳಂನಲ್ಲಿ ಬಂದಿದ್ದ 'ಮಾರ್ಕೊ' ಚಿತ್ರ ಕೂಡ ಇದೇ ಕಾರಣಕ್ಕೆ ಸದ್ದು ಮಾಡಿತ್ತು. ಮಕ್ಕಳನ್ನು ಈ ಚಿತ್ರದಿಂದ ದೂರ ಇಡುವುದೇ ಉತ್ತಮ. ಆಕ್ಷನ್ ಪ್ರಿಯರಿಗೂ ಸಾಮಾನ್ಯ ಪ್ರೇಕ್ಷಕರಿಗೂ ಭಯ ಹುಟ್ಟಿಸುವಂತಹ ಭೀಕರ ಸನ್ನಿವೇಶಗಳಿವೆ.

ಒಂದು ಕ್ರೈಂ ಸೀನ್‌ ಮೂಲಕ ಸಿನಿಮಾ ಪ್ರಾರಂಭವಾಗುತ್ತದೆ. ಬಳಿಕ ನಾಯಕ-ನಾಯಕಿಯ ಲವ್ ಟ್ರ್ಯಾಕ್ ಶುರುವಾಗುತ್ತದೆ. "ಅಮ್ಮನ ಜೊತೆ ಬೆಳೆದಿಲ್ಲ ಅಲ್ವಾ ನೀನು. ನಿನಗೆ ಅಮ್ಮನ ಪ್ರೀತಿ ಅಂದ್ರೆ ಏನು ಅಂತ ಕಲಿಸ್ತೀನಿ" ಎಂದು ನಾಯಕಿ ಶ್ರೀನಿಧಿ ಶೆಟ್ಟಿ ಹೇಳುವ ಡೈಲಾಗ್ ಚೆನ್ನಾಗಿದೆ. ಇಬ್ಬರ ನಡುವೆ ಲಿಪ್‌ಲಾಕ್ ಸೀನ್ ಕೂಡ ಇದೆ. ಫಸ್ಟ್‌ ಹಾಫ್‌ನಲ್ಲಿ ಸೈಕೋ ಗ್ಯಾಂಗ್ ಆರ್ಭಟ ಜೋರಾಗಿ ಇರುತ್ತದೆ. ಇಂಟರ್‌ವರ್ ಟ್ವಿಸ್ಟ್ ಸೆಕೆಂಡ್ ಹಾಫ್ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡುತ್ತದೆ.

ಫಸ್ಟ್‌ ಹಾಫ್ ಕೊಂಚ ಸ್ಲೋ ಎನಿಸಿದರೂ ನಾನಿ ತಮ್ಮ ನಟನೆ ಮೂಲಕ ಎಲ್ಲವನ್ನು ಮರೆಸಿಬಿಡುತ್ತಾರೆ. ಆಡು ಆಟ ಆಡು ಎನ್ನುವಂತೆ ನಾಯಕನ ಆರ್ಭಟ ಜೋರಾಗಿದೆ. ಆದರೆ ಎಮೋಷನ್ ಅಷ್ಟಾಗಿ ಕನೆಕ್ಟ್ ಆಗುವುದಿಲ್ಲ. ಎಮೋಷನ್ ಇಲ್ಲದೇ ಎಂತಹ ಅದ್ಭುತ ಕಥೆ ಹೇಳಿದರೂ ಪ್ರಯೋಜವಿಲ್ಲ. 'ಹಿಟ್- 3' ವಿಚಾರದಲ್ಲಿ ಅದೇ ರೀತಿ ಭಾಸವಾಗುತ್ತದೆ.

ಕಲಾವಿದರ ಅಭಿನಯ

ನಟನೆ ವಿಚಾರಕ್ಕೆ ಬಂದರೆ ನಾನಿ ಒನ್‌ಮ್ಯಾನ್ಸ್ ಶೋ ಎನ್ನುವಂತಿದೆ. ಇಡೀ ಸಿನಿಮಾ ನಾನಿ ಆವರಿಸಿಕೊಂಡಿದ್ದಾರೆ. ಇಷ್ಟು ದಿನ ರೊಮ್ಯಾಂಟಿಕ್ ಕ್ಲಾಸ್ ಸಿನಿಮಾಗಳಲ್ಲೇ ಅವರು ಹೆಚ್ಚು ನಟಿಸುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಕೊಂಚ ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿದ್ದು ಇದೆ. ಆದರೆ 'ದಸರಾ' ಸಿನಿಮಾ ಬಳಿಕ ಬದಲಾಗಿದ್ದರು. ಸದ್ಯ 'ಹಿಟ್- 3' ಚಿತ್ರದಲ್ಲಿ ತಮ್ಮ ಮಾಸ್ ಅವತಾರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಕೊನೆ ಕೊನೆಗೆ ಸೈಕೋ ರೀತಿ ಸೈಕೊ ಗ್ಯಾಂಗ್ ವಿರುದ್ಧ ನಾನಿ ಹೋರಾಡುವ ದೃಶ್ಯಗಳು ಹುಬ್ಬೇರಿಸುವಂತಿದೆ. ಆಕ್ಷನ್ ಸನ್ನಿವೇಶಗಳಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇನ್ನುಳಿದಂತೆ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಇಷ್ಟವಾಗುತ್ತಾರೆ. ಕಥೆಗೆ ತಿರುವುದು ಕೊಡುವಂತಹ ಪಾತ್ರ ಅದು. ಇನ್ನು ವಿಲನ್ ಆಗಿ ಪ್ರತೀಕ್ ಬಬ್ಬರ್ ಆರ್ಭಟ ಪ್ರದರ್ಶಿಸಿದ್ದಾರೆ. ಇನ್ನುಳಿದಂತೆ ಸಮುದ್ರ ಖನಿ, ಸೂರ್ಯ ಶ್ರೀನಿವಾಸ್, ರಾವು ರಮೇಶ್ ತಮ್ಮ ತಮ್ಮ ಪಾತ್ರಗಳಲ್ಲಿ ಮಿಂಚಿದ್ದಾರೆ.

'ಹಿಟ್-2' ಚಿತ್ರದ ASP ಕೃಷ್ಣದೇವ್ IPS(ಅಡವಿ ಶೇಷ್) ಅತಿಥಿ ಪಾತ್ರದಲ್ಲಿ ಬಂದು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸುತ್ತಾರೆ. 'ಹಿಟ್' ಸರಣಿ ಹೀಗೆ ಮುಂದುವರೆಯಲಿದೆ. 4ನೇ ಭಾಗದಲ್ಲಿ ತಮಿಳು ನಟ ಕಾರ್ತಿ ಹೀರೊ ಆಗಿ ನಟಿಸಲಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ACP ವೀರಪ್ಪನ್ ಆಗಿ ಕಾರ್ತಿ ಸಣ್ಣ ಝಲಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನವೇ ಕಾರ್ತಿ ನಟಿಸುವ ಬಗ್ಗೆ ಸೀಕ್ರೆಟ್ ರಿವೀಲ್ ಆಗಿಬಿಟ್ಟಿತ್ತು. ಹಾಗಾಗಿ ಕೊನೆಯಲ್ಲಿ ಆ ಮಜಾ ಸಿಗುವುದಿಲ್ಲ. ಇನ್ನು ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಮತ್ತೊಂದು ಹೈಲೆಟ್. ಮಿಕ್ಕಿ ಜೆ. ಮೇಯರ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.

ಕೊನೆ ಮಾತು

ವೈಲೆಂಟ್ ಆಕ್ಷನ್ ಸಿನಿಮಾಗಳನ್ನು ಬಯಸುವವರು 'ಹಿಟ್- 3' ಸಿನಿಮಾ ನೋಡಲು ಅಡ್ಡಿಯಿಲ್ಲ. ಹಿಂದಿನ ಎರಡೂ ಸಿನಿಮಾಗಳಿಗೆ ಹೋಲಿಸಿದರೆ ಇದು ಕೊಂಚ ನಿರಾಸೆ ಮೂಡಿಸುತ್ತದೆ. ಆದರೆ ನಾನಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

More from Filmibeat

English summary
Sailesh Kolanu and Nani's action thriller Hit-3 movie Review;
Read more about: nani srinidhi shetty review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X