twitter
    For Quick Alerts
    ALLOW NOTIFICATIONS  
    For Daily Alerts

    'ನಂಜುಂಡಿ ಕಲ್ಯಾಣ'ಕ್ಕೆ ಹೋಗಿದ್ದ ವಿಮರ್ಶಕರು ಏನ್ ಹೇಳ್ತಾರೆ?

    By Naveen
    |

    'ನಂಜುಂಡಿ ಕಲ್ಯಾಣ' ಸಿನಿಮಾ ನಿನ್ನೆ ರಾಜ್ಯಾದಂತ್ಯ ಬಿಡುಗಡೆಯಾಗಿದೆ. ಈ ಸಿನಿಮಾ ಈ ಸಿನಿಮಾದ ಹೆಸರು 'ನಂಜುಂಡಿ ಕಲ್ಯಾಣ'ವಾದರು ಇದು ನಂಜುಂಡಿ 'ಗೆ' ಕಲ್ಯಾಣ. ವಿದೇಶದಲ್ಲಿ ಇರುವ ಮಗನೊಬ್ಬ ತನ್ನ ತಾಯಿಯ ಗರ್ವಭಂಗ ಮಾಡಿ ತಾನು ಪ್ರೀತಿಸಿದ ಹುಡುಗಿಯನ್ನು ಕೈ ಹಿಡಿಯುವ ಕಥೆಯೇ ನಂಜುಂಡಿ ಕಲ್ಯಾಣ'. ಅಮ್ಮನ ಸೊಕ್ಕು ಮುರಿಯಲು ಮಗ 'ಗೆ' ಅವತಾರ ತಾಳುತ್ತಾನೆ. ಈ ರೀತಿಯ ಅಮ್ಮ ಮಗನ ನಡುವಿನ ಕಥೆಯನ್ನು ಇಡೀ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲಾಗಿತ್ತು.

    ಚಿತ್ರ ವಿಮರ್ಶೆ : ಕಲ್ಯಾಣ ನಂಜುಂಡಿ 'ಗೆ', ಕಿರಿಕಿರಿ ಪ್ರೇಕ್ಷಕರಿ 'ಗೆ' ಚಿತ್ರ ವಿಮರ್ಶೆ : ಕಲ್ಯಾಣ ನಂಜುಂಡಿ 'ಗೆ', ಕಿರಿಕಿರಿ ಪ್ರೇಕ್ಷಕರಿ 'ಗೆ'

    'ನಂಜುಂಡಿ ಕಲ್ಯಾಣ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರಲ್ಲಿ ಕೆಲವರು ಸಿನಿಮಾದ ಕಾಮಿಡಿ ಚೆನ್ನಾಗಿದೆ ಅಂದರೆ ಇನ್ನೂ ಕೆಲವರು ಚಿತ್ರದಲ್ಲಿ ಡಬಲ್ ಮಿನಿಂಗ್ ಡೈಲಾಗ್ ಗಳು ಕಿರಿಕಿರಿ ಅನಿಸುತ್ತದೆ ಎಂದಿದ್ದಾರೆ. ಆದರೆ ಸಿನಿಮಾ ನೋಡಿ ವಿಮರ್ಶಕರು ಏನು ಹೇಳಿದ್ದಾರೆ ಎಂಬುದು ಮುಂದಿದೆ ಓದಿ..

    ಕಲ್ಯಾಣದಲ್ಲಿ ಸಿಗಲಿದ್ದಾನೆ ನಗುವಿನ ನಂಜುಂಡಿ - ವಿಜಯ ಕರ್ನಾಟಕ (ರೇಟಿಂಗ್ 2.5)

    ಕಲ್ಯಾಣದಲ್ಲಿ ಸಿಗಲಿದ್ದಾನೆ ನಗುವಿನ ನಂಜುಂಡಿ - ವಿಜಯ ಕರ್ನಾಟಕ (ರೇಟಿಂಗ್ 2.5)

    ನಗುವುದಕ್ಕೇ ಯಾವುದೇ ಲಾಜಿಕ್‌ ಬೇಕಿಲ್ಲ. ನಿರುಮ್ಮಳ ಮನಸು ಸಾಕು ಎಂಬ ಮಾತಿದೆ. ಇದೇ ಫಾರ್ಮುಲಾ ಬಳಸಿಕೊಂಡು 'ನಂಜುಂಡಿ ಕಲ್ಯಾಣ' ಚಿತ್ರ ಮಾಡಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್‌. ಈ ಸಿನಿಮಾದ ಕಥೆಯಲ್ಲಿ ಯಾವುದೇ ಲಾಜಿಕ್‌ ಹುಡುಕದೇ ಪಾತ್ರಗಳು ಆಡುವ ಆಟಕ್ಕೆ ಕಣ್ಣೊಡಿದರೆ ಒಂದಷ್ಟು ನಗು ಸಿಗುತ್ತದೆ. ಸಿನಿಮಾದ ಕಥೆ ಸಿಂಪಲ್‌. ವಿದೇಶದಲ್ಲಿರುವ ಕಥಾ ನಾಯಕ ನಂಜುಂಡಿ (ತನುಷ್), ಅಮ್ಮನ ಗರ್ವಭಂಗ ಮಾಡಲು ಒಂದು ನಾಟಕವಾಡುತ್ತಾನೆ. ತನ್ನಿಷ್ಟದ ಹುಡುಗಿಯನ್ನು ಮದುವೆಯಾಗಲು ಮತ್ತು ತಾಯಿಯ ದುಡ್ಡಿನ ಮದ ಅಡಗಿಸಲು ಸ್ನೇಹಿತ ಮಾಲು (ಕುರಿ ಪ್ರತಾಪ್‌)ನನ್ನು ಮದುವೆಯಾಗಿ ಭಾರತಕ್ಕೆ ಬರುತ್ತಾನೆ. ತನ್ನ ಮಗನ ಸಲಿಂಗ ಮದುವೆಗೆ ಒಪ್ಪದ ತಾಯಿ, ಮಾಲುನಿಂದ ಮಗನನ್ನು ದೂರ ಮಾಡಲು ಹಲವು ತಂತ್ರಗಳನ್ನು ಹೆಣೆಯುತ್ತಾಳೆ. ತನ್ನ ಅಮ್ಮನ ತಂತ್ರವನ್ನು ಗೆದ್ದು ತಾನಿಷ್ಟಪಟ್ಟ ಹುಡುಗಿ ವಿಂದ್ಯಾ(ಶ್ರವ್ಯ)ಳನ್ನು ನಂಜುಂಡಿ ಮದುವೆ ಆಗುತ್ತಾನಾ ಅಥವಾ ಇಲ್ಲವಾ ಎನ್ನುವುದೇ ಸಿನಿಮಾ. ಇನ್ನು ಸಿನಿಮಾದಲ್ಲಿ ಹಾಸ್ಯ ನಟ ಕುರಿ ಪ್ರತಾಪ್‌ ಡಬಲ್ ಮೀನಿಂಗ್ ಹೊಡೆಯುತ್ತಲೇ ಪ್ರೇಕ್ಷಕರನ್ನು ನಗಿಸುತ್ತಾರೆ. ನಾಯಕಿಗಿಂತಲೂ ಹೆಚ್ಚು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ನಾಯಕ ತನುಷ್, ಆಕ್ಷನ್ ದೃಶ್ಯಗಳಲ್ಲಿ ಖುಷಿಕೊಟ್ಟಷ್ಟು ಭಾವನಾತ್ಮಕ ಸನ್ನಿವೇಶಗಳಲ್ಲಿ ಕೊಡಲ್ಲ. ಲಾಜಿಕ್‌ ಹುಡುಕದೇ ನಗಬೇಕು ಎನ್ನುವವರು 'ನಂಜುಂಡಿ ಕಲ್ಯಾಣ'ಕ್ಕೆ ಸಾಕ್ಷಿಯಾಗಬಹುದು. - ಶರಣು ಹುಲ್ಲೂರು

    ನಂಜುಂಡಿಯ ಕಾಮಿಡಿ ದರ್ಬಾರ್‌ - ಉದಯವಾಣಿ

    ನಂಜುಂಡಿಯ ಕಾಮಿಡಿ ದರ್ಬಾರ್‌ - ಉದಯವಾಣಿ

    ನಿರ್ದೇಶಕ ರಾಜೇಂದ್ರ ಕಾರಂತ್‌ ಒಂದು ಸಿಂಪಲ್‌ ಕಥೆಯನ್ನಿಟ್ಟುಕೊಂಡು ಇಡೀ ಸಿನಿಮಾವನ್ನು ಕಾಮಿಡಿಯಾಗಿ ಕಟ್ಟಿಕೊಡಲು ಪ್ರಯತ್ನ ಪಟ್ಟಿದ್ದಾರೆ. ಪ್ರತಿಯೊಂದು ಸನ್ನಿವೇಶದಲ್ಲೂ ಕಾಮಿಡಿ ತುಂಬಿ ತುಳುಕುತ್ತಿರಬೇಕು ಎಂಬುದು ಅವರ ಸ್ಪಷ್ಟ ಉದ್ದೇಶ. ಆ ಉದ್ದೇಶದ ಈಡೇರಿಕೆಗೆ ಅವರು ಸಾಕಷ್ಟು ಶ್ರಮ ಪಟ್ಟಿರೋದು ಸಿನಿಮಾದುದ್ದಕ್ಕೂ ಕಾಣಸಿಗುತ್ತದೆ. ಅವರ ಶ್ರಮ ಸಾರ್ಥಕವಾಗಿದೆಯಾ ಎಂದರೆ ಒಂದೇ ಮಾತಲ್ಲಿ ಉತ್ತರಿಸೋದು ಕಷ್ಟ. ಹಾಗಂತ ನಗುಬರುವುದಿಲ್ಲವೇ ಎಂದರೆ ಖಂಡಿತಾ ಬರುತ್ತದೆ. ಇಡೀ ಸಿನಿಮಾವನ್ನು ಕಾಮಿಡಿಗೆ ಮೀಸಲಿಟ್ಟಿರೋದರಿಂದ ಇಲ್ಲಿ ಸೆಂಟಿಮೆಂಟ್, ಆಕ್ಷನ್ಗೆ ಹೆಚ್ಚು ಜಾಗವಿಲ್ಲ. ಹೊಸ ಹೊಸ ಸನ್ನಿವೇಶಗಳ ಮೂಲಕ ಕಚಗುಳಿ ಇಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಚಿತ್ರದಲ್ಲಿ ಹಣ, ಆಸ್ತಿಗಿಂತ ಮನುಷ್ಯತ್ವ ಹಾಗೂ ಪ್ರೀತಿ ಮುಖ್ಯ ಎಂಬ ಒಂದು ಸಂದೇಶವಿದೆ. ಆ ಸಂದೇಶವನ್ನು ಕಾಮಿಡಿ ಸನ್ನಿವೇಶಗಳ ಮೂಲಕ ಹೇಳಲಾಗಿದೆ. ಚಿತ್ರದಲ್ಲೊಂದು ಲವ್‌ಸ್ಟೋರಿ ಇದ್ದರೂ ಅದು ಕಾಮಿಡಿಯ ಅಬ್ಬರದಲ್ಲಿ ಕಳೆದುಹೋಗಿದೆ. ಮೊದಲೇ ಹೇಳಿದಂತೆ ಒಂದೇ ವಿಷಯವನ್ನು ಬೇರೆ ಬೇರೆ ಸನ್ನಿವೇಶಗಳ ಮೂಲಕ ಹೇಳಲಾಗಿರುವುದರಿಂದ ಚಿತ್ರದಲ್ಲಿ ಏಕತಾನತೆ ಕಾಡುತ್ತದೆ. ಚಿತ್ರದಲ್ಲಿ ಇನ್ನೂ ಏನೋ ಬೇಕಿತ್ತು ಎಂಬ ಭಾವನೆ ಕೂಡಾ ಮೂಡದೇ ಇರದು. ಇನ್ನು, ಪಡ್ಡೆಗಳನ್ನು ಸೆಳೆಯುವ ಸಲುವಾಗಿ ಸಾಕಷ್ಟು ಡಬಲ್ ಮೀನಿಂಗ್ ಸಂಭಾಷಣೆಗಳನ್ನು ಕೂಡಾ ಚಿತ್ರದಲ್ಲಿ ಬಳಸಲಾಗಿದೆ. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ ಟ್ರಿಮ್ ಮಾಡುವ ಅವಕಾಶ ನಿರ್ದೇಶಕರಿಗಿತ್ತು. ಅದು ಬಿಟ್ಟರೆ ನಿಮಗೆ ಈ ಚಿತ್ರದಲ್ಲಿ ನಗುವುದಕ್ಕೆ ಸಾಕಷ್ಟು ಸನ್ನಿವೇಶಗಳು ಸಿಗುತ್ತವೆ. - ರವಿಪ್ರಕಾಶ್ ರೈ

    ನಿನ ಗೇ ನಾನು, ನನ ಗೇ ನೀನು, ಹಳೇ ಸೀನು! - ಕನ್ನಡ ಪ್ರಭ

    ನಿನ ಗೇ ನಾನು, ನನ ಗೇ ನೀನು, ಹಳೇ ಸೀನು! - ಕನ್ನಡ ಪ್ರಭ

    ಹಳೆಯ ಸೂಪರ್ ಹಿಟ್ ಚಿತ್ರದ ಹೆಸರಿನ ಆಧಾರದಲ್ಲಿ ನಿರ್ದೇಶಕರು ಕತೆ ಹೆಣೆದಿದ್ದಾರೆ. ಕತೆಯನ್ನು ಆಧರಿಸಿಲ್ಲ ಎನ್ನುವುದು ಇಲ್ಲಿ ಗಮನಾರ್ಹ. ತಮ್ಮ ಉದ್ದೇಶವೇ ತಮಾಷೆ ಮಾಡುವುದು ಮತ್ತು ಪ್ರೇಕ್ಷಕನನ್ನು ನಗಿಸುವುದು ಎಂದು ನಿರ್ದೇಶಕರು ಮೊದಲೇ ನಿರ್ಧರಿಸಿರುವುದರಿಂದ ಅದರಿಂದಾಚೆಗೆ ಹೋಗುವ ಪ್ರಯತ್ನವನ್ನು ಅವರು ಮಾಡಿಲ್ಲ. ಹಾಗಾಗಿ ಬಾಳೆ ಹಣ್ಣಿನಿಂದ ಹಿಡಿದು ಗಂಡಸ್ತನವನ್ನು ಬಡಿದೆಬ್ಬಿಸುವ ತಂತ್ರದವರೆಗೆ ನಾನಾ ರೀತಿಯಲ್ಲಿ ನಗಿಸುವ ಯತ್ನವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಕತೆ ನಗಣ್ಯ, ನಗುವೊಂದೇ ಶಾಶ್ವತ ಅನ್ನುವ ಅವರ ಮಹತ್ತರ ಉದ್ದೇಶವನ್ನು ನೀವು ಹೇಗೆ ಗ್ರಹಿಸುತ್ತೀರೋ ನಿಮಗೆ ಬಿಟ್ಟಿದ್ದು. ಚಿತ್ರದ ಬಗ್ಗೆ ಹೇಳುವುದಾದರೆ ತುಂಬಾ ಸಲ ನಗಿಸುತ್ತೇವೆ ಅಂತ ಹೊರಟಾಗ ನಗು ಬರುವುದಿಲ್ಲ. ನಗು ಬರದಿದ್ದರೂ ನಗಬೇಕಾದ ಕಷ್ಟ ಅನುಭವಿಸುವುದು ಸುಲಭ ಸಾಧ್ಯವಿಲ್ಲ. - ರಾಜೇಶ್ ಶೆಟ್ಟಿ

    Nanjundi Kalyana movie review - Times Of India (Rating- 2)

    Nanjundi Kalyana movie review - Times Of India (Rating- 2)

    Nanjundi is in love with Vindhya, a relative of his who lives in his house. But his status-conscious mother wants him to marry someone richer and dislikes Vindhya, who comes from a poor household. Nanjundi hatches a plan to pretend to be married to his best male buddy, to give his mother a shock and get approval to marry Vindhya. This film reminds one of Dostana, when one looks at the basic premise. The film tries to make no bones about being a light-hearted entertainer. It is also replete with innuendo, which at times reminds one of Neer Dose. The film does evoke laughs, but one is left wondering whether it is too many, as it does seem so by the end of the screen time. The film begins on a funny note and the first half seems quite eventful and theatrical. There are ample places that get the audience cracking. The film seems tedious after the interval. The jokes seem repetitive and the gags too many. In fact, the film does feel a bit crass in its depiction of homosexuality towards the end. The film has a good comic ensemble that ensure some of the gags seem funny even when they aren't. This could appeal to you if you like your doses of Masti, Housefull, Dhamaal and Golmaal. The film offers humor with no strings attached, a better climax could have been a clincher for it.

    English summary
    Kannada actress Shravya Rao and Actor Tharun Shivappa's Nanjundi Kalyana Kannada movie critic review. 'Nanjundi Kalyana' is a completed comedy entertainer movie.
    Saturday, April 7, 2018, 10:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X