Just In
Don't Miss!
- Lifestyle
ಶನಿವಾರದ ದಿನ ಭವಿಷ್ಯ 14-12-2019
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Technology
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
Nanna Prakara Review: ಮೂರು ಥ್ರಿಲ್ಲಿಂಗ್ ಕಥೆಗಳ ಒಂದು ಸಿನಿಮಾ
ನನ್ನ ಪ್ರಕಾರ ಮೂರು ಕಥೆಗಳ ಒಂದು ಸಿನಿಮಾ. ಪೊಲೀಸರು ಒಂದು ಕೊಲೆಯನ್ನು ಭೇದಿಸುತ್ತ ಹೋದಾಗ, ಮತ್ತೆರಡು ಕ್ರೈಂ ಪ್ರಕರಣದ ಕಥೆ ತೆರೆದುಕೊಳ್ಳುತ್ತೆ. ಈ ಮೂರು ಕ್ರೈಂ ಪ್ರಕರಣ ಹೇಗೆ ಒಂದಕ್ಕೊಂದು ಹೆಣೆದುಕೊಂಡಿರುತ್ತೆ, ಈ ಮೂರು ಕಥೆ ಹೇಗೆ ಲಿಂಕ್ ಆಗಿರುತ್ತೆ ಎನ್ನುವುದೇ ಸಿನಿಮಾ. ಪೂರ್ತಿ ವಿಮರ್ಶೆ ಮುಂದೆ ಓದಿ....

ಮೂರು ಕಥೆ, ಒಂದಕ್ಕೊಂದು ಸಂಬಂಧ
ಸಮಾಜ ಸೇವೆ ಮಾಡುತ್ತಾ ಅನಾಥಾಶ್ರಮದಲ್ಲಿ ಕೆಲಸ ಮಾಡುವ ವಿಸ್ಮಯ ಅಪಾರ್ಟಮೆಂಟ್ ನಲ್ಲಿ ವಾಸವಾಗಿರುತ್ತಾರೆ. ತನಗೆ ಸಹಾಯ ಮಾಡಲು ಬಂದ ಹುಡುಗ ಸುಮಂತ್ ಜೊತೆ ಮದುವೆ ಆಗಲು ನಿರ್ಧರಿಸಿ ಮದುವೆ ಕನಸು ಕಾಣ್ತಾಳೆ. ಅದೆ ಅಪಾರ್ಟ್ ಮೆಂಟ್ ನಲ್ಲಿ ಇರುವ ಮೇರಿ ಮತ್ತು ಆಕೆಯ ಗ್ಯಾಂಗ್ ನವರದ್ದು ಇನ್ನೊಂದು ಕಥೆ. ಮತ್ತೊಂದೆಡೆ ಶ್ರೀಮಂತ ಮನೆಯ ಹುಡುಗ ನಿರಂಜನ್ ದೇಶಪಾಂಡೆ. ಪಾರ್ಟಿ, ಪಬ್, ಡ್ರಗ್ಸ್ ಜೊತೆಗೆ ಹುಡುಗಿಯರ ಚಟದೊಂದಿಗೆ ಜೀವಿಸುತ್ತಿರುವ ವ್ಯಕ್ತಿ. ಅವರ್ಯರಿಗೂ ಒಬ್ಬರಿಗೊಬ್ಬರು ಸಂಬಂಧವೇ ಇರಲ್ಲ. ಆದ್ರೂ ಇರುವ ಮಾಡುವ ಕ್ರೈಂ ಒಂದಕ್ಕೊಂದು ಸಂಬಂಧ ಹೊಂದಿರುತ್ತೆ. ಅದೇ ಟ್ವಿಸ್ಟ್.

ತನಿಖೆಯ ದಿಕ್ಕು ತಪ್ಪಿಸುವ ವಿಸ್ಮಯ
ಚಿತ್ರದಲ್ಲಿ ವಿಸ್ಮಯ ಪಾತ್ರ ನೋಡುಗರ ಕುತೂಹಲ ಕೆರಳಿಸುತ್ತೆ. ವಿಸ್ಮಯ ಪಾತ್ರ ಪೊಲೀಸ್ ತನಿಖೆಯ ದಿಕ್ಕನ್ನೆ ಬದಲಾಯಿಸುತ್ತೆ. ನಟಿ ಮಯೂರಿ ಇಲ್ಲಿ ವಿಸ್ಮಯ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇನ್ನೊಂದು ಟ್ವಿಸ್ಟ್ ಕೂಡ ಇರುತ್ತೆ. ಚಿತ್ರದ ಪ್ರಾರಂಭದಲ್ಲೆ ವಿಸ್ಮಯ ಸಾವನ್ನಪ್ಪುತ್ತಾರೆ. ವಿಸ್ಮಯ ಸಾವು ಆಕಸ್ಮಿಕವೋ ಅಥವಾ ಕೊಲೆಯೊ, ಆಕೆ ಯಾರು ಎನ್ನುವ ರಹಸ್ಯ ಭೇದಿಸಲು ಹೊರಟ ಪೊಲೀಸರಿಗೆ ಮತ್ತೆರಡು ಕ್ರೈಂ ಪ್ರಕರಣಗಳು ಬೆನ್ನಿಗೆ ಬೀಳುತ್ತೆ. ಅಶೋಕ್ ಪ್ರಕಾರ ಈ ಕೊಲೆ ಹೇಗೆ ನಡೆದಿರುತ್ತೆ ಎನ್ನುವುದೇ 'ನನ್ನ ಪ್ರಕಾರ'

ಕಿಶೋರ್-ಪ್ರಿಯಾಮಣಿ ಆಕರ್ಷಣೆ
ಚಿತ್ರದಲ್ಲಿ ಪ್ರಿಯಾಮಣಿ ಪಾತ್ರ ಹೆಚ್ಚೇನು ಇಲ್ಲ. ಪತಿಯ ತನಿಖೆಯ ಜೊತೆ ಒಂದೆರಡು ದೃಶ್ಯಗಳಲ್ಲಿ ಹಾಗೂ ಒಂದು ಹಾಡಿನಲ್ಲಿ ಬಂದು ಹೋಗುತ್ತಾರೆ. ಆದ್ರೆ ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪೊಲೀಸ್ ಆಫೀಸರ್ ಆಗಿ ಗಮನ ಸೆಳೆದಿರುವ ಕಿಶೋರ್ ನಟನೆ ಚಿತ್ರಕ್ಕೆ ಶಕ್ತಿ. ಕಿಶೋರ್ ತೆರೆಮೇಲೆ ಇದ್ದಷ್ಟು ಥ್ರಿಲ್ಲಿಂಗ್ ಹೆಚ್ಚಿಸುತ್ತಾ ಹೋಗ್ತಾರೆ.

ನಿರ್ದೇಶನಕನ ಪ್ರಯತ್ನಕ್ಕೆ ಮೆಚ್ಚುಗೆ
ನಿರ್ದೇಶಕ ವಿನಯ್ ಬಾಲಾಜಿ ಮೊದಲ ಪ್ರಯತ್ನದಲ್ಲೆ ಪ್ರೇಕ್ಷಕರ ಮನಗೆದ್ದಿದ್ದಾರೆ. ಸ್ಕ್ರೀನ್ ಪ್ಲೇ ಕೂಡ ಅದ್ಭುತವಾಗಿದೆ. ಸಾಕಷ್ಟು ಟ್ವಿಸ್ಟ್ ಮತ್ತು ಟರ್ನ್ ಗಳ ಮೂಲಕ ವೀಕ್ಷಕರನ್ನು ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡಿದ್ದಾರೆ. ನಿರೂಪಣಾ ಶೈಲಿ ಕೂಡ ಉತ್ತಮವಾಗಿದೆ. ಚಿಕ್ಕ ಪುಟ್ಟ ತಪ್ಪುಗಳು ಬಿಟ್ಟರೆ ಉಳಿದಂತೆ ಉತ್ತಮವಾದ ಥ್ರಿಲ್ಲಿಂಗ್ ಸಿನಿಮಾ. ಯಾವುದೆ ನಿರೀಕ್ಷೆ ಇಲ್ಲದೆ ನನ್ನ ಪ್ರಕಾರ ಒಮ್ಮೆ ಚಿತ್ರಮಂದಿರದಲ್ಲಿ ಕುಳಿತು ನೋಡುವಂತ ಸಿನಿಮಾ.