For Quick Alerts
  ALLOW NOTIFICATIONS  
  For Daily Alerts

  ಕ್ಷಮಿ-ಸಿ. ಕನ್ನಡ ಸಿನಿಮಾಗಳನ್ನು ಯಾಕೆ ನೋಡಬೇಕು ?

  By Staff
  |

  *ಸತ್ಯ-ವ್ರ-ತ ಹೊಸ-ಬೆ-ಟ್ಟು

  ಕನ್ನಡ ಸಿನಿಮಾಗಳನ್ನು ಯಾಕೆ ನೋಡಬೇಕು ?

  ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಈ ವಾರ ಬಿಡುಗಡೆಯಾಗಿರುವ ಎರಡು ಚಿತ್ರಗಳನ್ನು ನೀವು ನೋಡಲೇ ಬೇಕು. ಒಂದು ಕನ್ನಡದ ಹ್ಯಾಟ್ರಿಕ್‌ ನಿರ್ದೇಶಕ ಎಸ್‌. ನಾರಾಯಣ್‌ ನಿರ್ದೇಶಿಸಿ, ನಿರ್ಮಿಸಿರುವ ‘ನನ್ನವಳು ನನ್ನವಳು’. ಇನ್ನೊಂದು ಕನ್ನಡಕ್ಕೆ ಕೆಲವು ಹೊಸ ಕಥಾ ವಸ್ತುಗಳನ್ನು ಪರಿಚಯಿಸಿದ ದಿನೇಶ್‌ ಬಾಬು ನಿರ್ದೇಶನದ ‘ನನ್ನ ಹೆಂಡ್ತಿ ಚೆನ್ನಾಗಿದ್ದಾಳೆ’.

  ಎರಡೂ ಹೆಂಡತಿಯ ಕುರಿತಾದ ಚಿತ್ರಗಳೇ. ಎರಡರ ನಾಯಕನೂ ಹೆಂಡತಿಯಿಂದ ಅವಮಾನಿತನಾಗುವವನೇ. ಅದಕ್ಕಿಂತ ಹೆಚ್ಚಾಗಿ ಎರಡೂ ಚಿತ್ರಗಳ ನಾಯಕರೂ ಜನ ಮೆಚ್ಚಿದ ಮುಖಗಳಲ್ಲ. ಹಾಸ್ಯ ಪಾತ್ರಗಳಿಂದ ನಾಯಕ ಪಟ್ಟಕ್ಕೆ ಏರಿದವರು. ಈ ನಿಟ್ಟಿನಲ್ಲಿ ಇನ್ನೊಂದು ಕುತೂಹಲಕಾರಿ ಸಾಮ್ಯ. ನನ್ನವಳು ಚೆನ್ನಾಗಿಲ್ಲ ಅನ್ನೋದು ನಾರಾಯಣ್‌ ಸಮಸ್ಯೆಯಾದರೆ, ಹೆಂಡ್ತಿ ಚೆನ್ನಾಗಿದ್ದಾಳೆ ಅನ್ನೋದೇ ಕಾಶಿ ಸಮಸ್ಯೆ. ಎರಡರಲ್ಲೂ ಹಾಸ್ಯದ್ದೇ ಮೇಲುಗೈ. ಆದರೆ ಎಸ್‌. ನಾರಾಯಣ್‌ ಈಗಾಗಲೇ ಬಂದು ಹೋಗಿರುವ ಅನೇಕ ಕನ್ನಡ ಚಿತ್ರಗಳ ತುಣುಕು ಸೇರಿಸಿ ಸಿನಿಮಾ ಮಾಡಿದ್ದರೆ, ದಿನೇಶ್‌ ಬಾಬೂ ಅನ್‌ಫೈತ್‌ಫುಲೀ ಯುವರ್ಸ್‌ ಇಂಗ್ಲಿಷ್‌ ಚಿತ್ರವನ್ನು ಭಟ್ಟಿ ಇಳಿಸಿದ್ದಾರೆ.

  ನನ್ನವಳು ನನ್ನವಳು ಚಿತ್ರದ ತುಂಬಾ ದ್ವಂದ್ವಾರ್ಥ ಬರುವ ಸಂಭಾಷಣೆಯಿದೆ. ಧೀರೇಂದ್ರಗೋಪಾಲ್‌, ಮಾತಿಗೊಮ್ಮೆ ಬಿಲೋ ದಿ ಬೆಲ್ಟ್‌ ಪದಗಳನ್ನು ಉಚ್ಚರಿಸುತ್ತಾರೆ. ಆದರೆ, ಅವರು ಕೌಪೀನಧಾರಿಯಾಗಿ ಪ್ರವೇಶ ಪಡೆಯುವುದರಿಂದ ಬಿಲೋದಿ ಬೆಲ್ಟ್‌ ಅನ್ನುವುದು ತಪ್ಪಾಗುತ್ತದೆ.

  ಬಾಲ್ಯದಲ್ಲಿ ತಾಯಿ ಆತ್ಮ ಹತ್ಯೆ ಮಾಡಿಕೊಂಡದ್ದನ್ನು ಕಣ್ಣಾರೆ ಕಂಡ ನಾಯಕಿಗೆ ಗಂಡಸರೆಂದರೆ ಅಲರ್ಜಿ. ಆದರೆ, ಆಕೆಯ ಅಪಾರ ಆಸ್ತಿ ವಳಿಗೆ ದಕ್ಕಬೇಕಾದರೆ ಆಕೆಗೆ ಮದುವೆಯಾಗಬೇಕು. ಹಾಗಂತ ಆಕೆಯ ಅಜ್ಜ ವಿಲ್ಲು ಬರೆದಿಟ್ಟು ಸತ್ತುಹೋಗಿದ್ದಾನೆ. ಇದು ಗೊತ್ತಾದ ತಕ್ಷಣ ಆಕೆ ಒಂದೇ ವಾರದಲ್ಲಿ ಸಾಯುವ ರೋಗಿಯನ್ನು ಮದುವೆಯಾಗುತ್ತಾಳೆ. ಆದರೆ ಆತ ಸಾಯುವುದೇ ಇಲ್ಲ. ಇದು ಕತೆ.

  ಮುಂದೆ ಆಕೆ, ಆತನ ಮೇಲೆ ಹಗೆ ಸಾಧಿಸುವುದು, ಇದಕ್ಕೆ ಉಳಿದವರೆಲ್ಲ ನೆರವಾಗುವುದು, ಅಂತ್ಯದಲ್ಲಿ ನಾಯಕಿ ಗಂಡನಿಗೆ ತಿನ್ನಿಸಲೆಂದು ವಿಷ ಬೆರೆಸಿಟ್ಟಿದ್ದ ಸಿಹಿ ಪೊಂಗಲ್‌ ತಾನೇ ತಿಂದು ಸಾವಿನ ಅಂಚಿಗೆ ಹೋಗುವುದು.... ಹೀಗೆ ಕತೆ ಏನಕೇನ ಸಾಗಿ ಕೊನೆಗೂ ಶುಭಂ ಎಂಬ ಎರಡು ಪದ ತೆರೆಯ ಮೇಲೆ ಮೂಡಿ ಬರುತ್ತದೆ. ನಿಮಗೆ ಸಂತೋಷವೂ ಆಗುತ್ತದೆ.

  ಆದರೆ ನನ್ನ ಹೆಂಡತಿ ಚೆನ್ನಾಗಿದ್ದಾಳೆ ಮಾತ್ರ ಇನ್ನಷ್ಟು ಅಚ್ಚುಕಟ್ಟಾದ ಚಿತ್ರ. ಸುಂದರಿಯನ್ನು ಮದುವೆಯಾದ ಗಂಡನಿಗೆ ತನ್ನ ಕುರೂಪದ ಬಗ್ಗೆ ಕೀಳರಿಮೆ. ಅದನ್ನು ಹೆಚ್ಚಿಸಲು ಆತನ ಬಾಸ್‌ (ಅನಂತನಾಗ್‌) ಕೂಡ ನೆರವಾಗುತ್ತಾನೆ. ಹೀಗೆ ಸುತ್ತ ಮುತ್ತಲಿನ ಮಂದಿಯೆಲ್ಲ ಗಂಡನ ಕುರೂಪವನ್ನು, ಹೆಂಡತಿಯ ಸೌಂದರ್ಯವನ್ನೂ ಆಡಿಕೊಳ್ಳುತ್ತಿದ್ದರೆ, ಗಂಡನಿಗೆ ಆಕೆಯ ಮೇಲೆ ಅನುಮಾನ ಶುರುವಾಗುತ್ತದೆ. ಇದು ತೆಗೆದುಕೊಳ್ಳುವ ಅನೇಕಾನೇಕ ತಿರುವುಗಳಲ್ಲಿ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ.

  ಮಧ್ಯಂತರದ ತನಕ ದಿನೇಶ್‌ ಬಾಬು ನಗೆಗಡಲಲ್ಲೇ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಒಂದೇ ದೃಶ್ಯದಲ್ಲಿ ಬಂದು ಹೋಗುವ ರಮೇಶ್‌, ಇಡೀ ಚಿತ್ರವನ್ನೇ ಬೆಳಗುವ ಅಭಿನಯ ನೀಡಿದ್ದಾರೆ. ಹಾಗೇ, ಪ್ರತಿ ದೃಶ್ಯವೂ ನಿಮ್ಮನ್ನು ಹಸನ್ಮುಖಿಯಾಗಿಸುತ್ತಲೇ ಮಜಾ ಕೊಡುತ್ತದೆ. ಆದರೆ ಮಧ್ಯತರದ ನಂತರ ಚಿತ್ರವನ್ನು ಕೊಲೆ ರಹಸ್ಯ ಬೇಧಿಸುವ ಪತ್ತೇದಾರಿ ಚಿತ್ರವನ್ನಾಗಿ ಮಾಡಿ ಕುಲಗೆಡಿಸಿದ್ದಾರೆ ಅನ್ನುವುದೂ ನಿಜವೇ.

  ಅನಂತ್‌ನಾಗ್‌ ಅತ್ಯದ್ಭುತವಾಗಿ ನಟಿಸಿದ್ದಾರೆ ಅನ್ನುವುದು ಸರಿ. ಆದರೆ ಅವರ ಮುಂದೆ ಕಾಶಿ, ಅವರನ್ನು ಮೀರಿಸುವಷ್ಟು ಮಿಂಚಿದ್ದಾರೆ. ನಾಯಕಿ ಅಂಜನಾ ಅಭಿನಯಕ್ಕೆ ಅಂಥ ಅವಕಾಶವೇನೂ ಇಲ್ಲ ಅನ್ನುವಂತಿಲ್ಲವಾದರೂ ಆಕೆ ಅದನ್ನು ಬಳಸಿಕೊಂಡದ್ದಕ್ಕೆ ಪುರಾವೆಗಳಿಲ್ಲ.

  ನನ್ನವಳನ್ನು ಬಿಟ್ಟುಬಿಡಿ, ಚೆನ್ನಾಗಿರುವ ಹೆಂಡ್ತಿ, ಯಾರ ಹೆಂಡ್ತಿಯಾದರೇನು, ನೋಡಿ !

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X