Twitter Review: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು

Recommended Video

Nata Sarvabhouma Movie: ಸಿನಿಮಾ ಸೂಪರ್, ಧೂಳೆಬ್ಬಿಸ್ತಿದ್ದಾರೆ ಅಪ್ಪು ಹುಡುಗ್ರು | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾ ಥಿಯೇಟರ್ ಗೆ ಅಪ್ಪಳಿಸಿದೆ. ಅಭಿಮಾನದಿಂದ ಭರ್ಜರಿಯಾಗಿ ಸ್ವಾಗತಿಸಿರುವ ಪ್ರೇಕ್ಷಕರು ಅಪ್ಪು ಅಭಿನಯಕ್ಕೆ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಪುನೀತ್ ಅವರ ಈ ಹಿಂದಿನ ಚಿತ್ರಗಳಿಗಿಂತ ಇದು ವಿಭಿನ್ನ ಹಾಗೂ ವಿಶೇಷ ಎಂಬ ಮಾತುಗಳು ಸಿನಿಮಾ ನೋಡಿದ ಜನರಿಂದ ಬರ್ತಿದೆ. ರಿಲೀಸ್ ಗೂ ಮುಂಚೆ ಮೂಡಿಸಿದ್ದ ಕುತೂಹಲ, ನಿರೀಕ್ಷೆ ಎಲ್ಲವನ್ನ ನಟಸಾರ್ವಭೌಮ ಯಶಸ್ವಿಯಾಗಿ ಈಡೇರಿಸಿದ್ದಾನೆ ಎಂಬ ಅಭಿಪ್ರಾಯ ಹೊರಬಿದ್ದಿದೆ.

ಈಗಾಗಲೇ ಫಿಲ್ಮಿಬೀಟ್ ಕನ್ನಡದಲ್ಲಿ ಮೊದಲ ವಿಮರ್ಶೆ ಪ್ರಕಟವಾಗಿದೆ. ಅದರ ಜೊತೆಗೆ ಸಿನಿಮಾ ನೋಡಿದ ಜನರು ಟ್ವಿಟ್ಟರ್ ನಲ್ಲಿ ತಮ್ಮ ರಿವ್ಯೂ ಹಾಕ್ತಿದ್ದಾರೆ. ಅದರಲ್ಲಿ ಕೆಲವು ನಿಮ್ಮ ಮುಂದೆ ಇಡ್ತಿದ್ದೀವಿ. ಮುಂದೆ ಓದಿ......

ಪುನೀತ್ ಚಿಂದಿ ಪರ್ಫಾಮೆನ್ಸ್

ಪುನೀತ್ ಚಿಂದಿ ಪರ್ಫಾಮೆನ್ಸ್

ನಟಸಾರ್ವಭೌಮ ಸಿನಿಮಾ ಮಧ್ಯರಾತ್ರಿಯೇ ರಿಲೀಸ್ ಆಗಿದ್ದು, ಅಪಾರ ಅಭಿಮಾನಿಗಳು ಅಪ್ಪು ಅವರ ಪರ್ಫಾಮೆನ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿದ ಅಭಿಮಾನಿಯೊಬ್ಬ, ''ಬಾಕ್ಸ್ ಆಫೀಸ್ ವಿನ್ನರ್, ಅಪ್ಪು ಪರ್ಫಾಮೆನ್ಸ್ ಸೂಪರ್'' ಎಂದು ಟ್ವೀಟ್ ಮಾಡಿದ್ದಾರೆ.

ಒಂದು ಸಲ ನೋಡಿದೆ, ಈಗ ಇನ್ನೊಂದು ಸಲ....

ಒಂದು ಸಲ ನೋಡಿದೆ, ಈಗ ಇನ್ನೊಂದು ಸಲ....

ನಟಸಾರ್ವಭೌಮ ಸಿನಿಮಾ ಒಂದು ಸಲ ನೋಡಿ ಆಯ್ತು. ಇನ್ನು ಎಷ್ಟು ಸಲ ಹೋಗ್ತೀನೋ ಗೊತ್ತಿಲ್ಲ. ಪುನೀತ್ ಡ್ಯಾನ್ಸ್, ಡೈಲಾಗ್, ಎಂಟ್ರಿ ಎಲ್ಲ ದೃಶ್ಯಗಳಲ್ಲು ನನಗೆ ಥ್ರಿಲ್ ಆಗಿತ್ತು. ಪವರ್ ಸ್ಟಾರ್ ಐ ಲವ್ ಯೂ. ನಾನು ಐದು ಸ್ಟಾರ್ ಕೊಡ್ತೀನಿ'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಪುನೀತ್ ಅವರ ಬೆಸ್ಟ್ ಸಿನಿಮಾ

ಪುನೀತ್ ಅವರ ಬೆಸ್ಟ್ ಸಿನಿಮಾ

''ಪುನೀತ್ ರಾಜ್ ಕುಮಾರ್ ಜೀವನದಲ್ಲೇ ಇದು ಅತ್ಯುತ್ತಮ ಸಿನಿಮಾ. ಪುನೀತ್ ಅವರ ಆಕ್ಟಿಂಗ್ ಗೆ ಅದ್ಭುತ. ಚಿಕ್ಕಣ್ಣ ಕಾಮಿಡಿ ಮಿಂಚಿದ್ದಾರೆ. ಅಪ್ಪು ಅವರ ಡ್ಯಾನ್ಸ್ ಇನ್ನೊಂದು ಲವೆಲ್ ನಲ್ಲಿದೆ. ಅಪ್ಪು ಡ್ಯಾನ್ಸ್ ನಲ್ಲಿ ನಂ 1'' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಶಿವಮೊಗ್ಗ ಫ್ಯಾನ್ಸ್

ಶಿವಮೊಗ್ಗ ಫ್ಯಾನ್ಸ್

''ಸೂಪರ್ ಸಾಂಗ್, ಅಲ್ಟಿಮೇಟ್ ಡ್ಯಾನ್ಸ್, ನಾನ್ ಸ್ಟಾಪ್ ಕಾಮಿಡಿ, ಫುಲ್ ಎಂಟರ್ ಟೈನ್ಮೆಂಟ್, ಅನುಪಮಾ ಮತ್ತು ಪುನೀತ್ ಕ್ಯೂಟೆಸ್ಟ್ ಜೋಡಿ, ರಚಿತಾ ಮತ್ತು ಅಪ್ಪು ಸೂಪರ್, ಇಂಟರ್ ವಲ್ ಅವರೆಗೂ ಸಿನಿಮಾ ಬ್ಯಾಂಗ್'' ಎಂದು ಶಿವಮೊಗ್ಗ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಹೊಸ ಪುನೀತ್ ನೋಡಬಹುದು

ಹೊಸ ಪುನೀತ್ ನೋಡಬಹುದು

''ಪಕ್ಕಾ ಸೂಪರ್ ಹಿಟ್, ಇದು ಪುನೀತ್ ಅವರ ಜೀವನದಲ್ಲಿ ಇನ್ನೊಂದು ಬ್ಲಾಕ್ ಬಸ್ಟರ್ ಸಿನಿಮಾ. ಹೋಗಿ ಸಿನಿಮಾ ನೋಡಿ ಹೊಸ ಪುನೀತ್ ರಾಜ್ ಕುಮಾರ್ ಅವರನ್ನ ನೋಡಬಹುದು''

More from Filmibeat

English summary
Actor Puneeth Rajkumar's 'Nata Sarvabhouma' kannada movie review. here is the Nata sarbabvhouma twitter review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X