twitter
    For Quick Alerts
    ALLOW NOTIFICATIONS  
    For Daily Alerts

    Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

    |

    ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'.

    Rating:
    4.0/5
    Star Cast: ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಅನುಪಮ ಪರಮೇಶ್ವರನ್
    Director: ಪವನ್ ಒಡೆಯರ್

    ರಾಕ್ ಲೈನ್ ಮಾಲ್ ನಲ್ಲಿ 'ನಟಸಾರ್ವಭೌಮ' ಎಷ್ಟು ಶೋ ಇದೆ.!ರಾಕ್ ಲೈನ್ ಮಾಲ್ ನಲ್ಲಿ 'ನಟಸಾರ್ವಭೌಮ' ಎಷ್ಟು ಶೋ ಇದೆ.!

    ಸಿನಿಮಾದ ಹೈಲೈಟ್.. ಪುನೀತ್ ಡ್ಯಾನ್ಸ್, ಫೈಟ್..

    ಸಿನಿಮಾದ ಹೈಲೈಟ್.. ಪುನೀತ್ ಡ್ಯಾನ್ಸ್, ಫೈಟ್..

    'ನಟ ಸಾರ್ವಭೌಮ' ಸಿನಿಮಾ ಹೇಗಿದೆ ಎನ್ನುವುದಕ್ಕಿಂತ ಮುಂಚೆ ಪುನೀತ್ ಡ್ಯಾನ್ಸ್ ಮತ್ತು ಫೈಟ್ಸ್ ಬಗ್ಗೆ ಹೇಳಲೇ ಬೇಕು. ಟೀಸರ್ ನಲ್ಲಿ ಹೇಳಿರುವ ಹಾಗೆಯೇ ಅಪ್ಪು ಡ್ಯಾನ್ಸ್, ಫೈಟ್ ಖಂಡಿತ 'ನೆಕ್ಟ್ ಲೆವೆಲ್' ನಲ್ಲಿದೆ. ಈ ಎರಡನ್ನ ನೋಡಿಯೇ ಸಿನಿಮಾ ನೋಡಲು ಬಂದ ಪ್ರೇಕ್ಷಕ ಅರ್ಧ ತೃಪ್ತಿಯಾಗುತ್ತಾನೆ. ನಿಜಕ್ಕೂ ಅಪ್ಪು ಡ್ಯಾನ್ಸ್, ಫೈಟ್ಸ್ ಗೆ ದೊಡ್ಡ ಚಪ್ಪಾಳೆ.

    ಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕುಪುನೀತ್ 'ನಟಸಾರ್ವಭೌಮ' ನೋಡಲು ಈ 7 ಕಾರಣಗಳು ಸಾಕು

    ಆತ್ಮದ ಕಥೆ

    ಆತ್ಮದ ಕಥೆ

    ಸಿನಿಮಾದ ಕಥೆ ಬಗ್ಗೆ ಹೆಚ್ಚು ಹೇಳಿದರೆ ಚಿತ್ರಮಂದಿರದಲ್ಲಿ ಅವರ ಮಜಾವೇ ಹೋಗಿ ಬಿಡುತ್ತದೆ. ಇದು ಒಂದು ಆತ್ಮದ ಕಥೆಯ ಸಿನಿಮಾ. ಪತ್ರಕರ್ತ ಗಗನ್ ದೀಕ್ಷಿತ್ (ಪುನೀತ್) ಕೊಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಾನೆ. ಇಲ್ಲಿಂದ ಸಿನಿಮಾ ಶುರು ಆಗುತ್ತದೆ. ಯಾರನ್ನೋ ಹುಡುಕಿ ಬೆಂಗಳೂರಿಗೆ ಬರುವ ಗಗನ್ ತನಗೆ ತಿಳಿಯದೆ ಆಗಾಗ ಕೆಲವರಿಗೆ ಹೊಡೆಯುತ್ತಾನೆ. ವಿಚಿತ್ರವಾಗಿ ಆಡುತ್ತಾನೆ. ಹೀಗೆ ಆಗುತ್ತಿರುವುದು ಯಾಕೆ? ಪುನೀತ್ ಮೈ ಮೇಲೆ ಆತ್ಮ ಬರುತ್ತದೆಯೇ? ಅದೇ ಕಥೆಯಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಕಾರಣನ? ಎನ್ನುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೈಮ್ಯಾಕ್ಸ್ ನಲ್ಲಿ.

    ಪುನೀತ್ ಸಿನಿಮಾದ ಆಸ್ತಿ

    ಪುನೀತ್ ಸಿನಿಮಾದ ಆಸ್ತಿ

    'ನಟ ಸಾರ್ವಭೌಮ' ಎಂಬ ಹೆಸರಿಗೆ ತಕ್ಕ ಹಾಗೆ ಪುನೀತ್ ತಮ್ಮ ನಟನ ಸಾಮರ್ಥ್ಯವನ್ನು ಪ್ರದರ್ಶನ ಮಾಡಿದ್ದಾರೆ. ಅವರ ಪಾತ್ರದಲ್ಲಿ ಏರಿಳಿತ ಇದೆ. ಈ ಹಿಂದೆ ನೋಡಿರದ ಪುನೀತ್ ರನ್ನು ಚಿತ್ರಮಂದಿರದಲ್ಲಿ ನೋಡಬಹುದು. ಅವರ ನಟನೆ, ನೃತ್ಯ, ಸಾಹಸ ಸಿನಿಮಾದ ದೊಡ್ಡ ಪ್ಲಾಸ್. 'ನಟ ಸಾರ್ವಭೌಮ' ಚಿತ್ರದ ಆಸ್ತಿ ಪುನೀತ್.

    ಫಸ್ಟ್ ಹಾಫ್ ರಚಿತಾ, ಸೆಕೆಂಡ್ ಹಾಫ್ ಅನುಪಮ

    ಫಸ್ಟ್ ಹಾಫ್ ರಚಿತಾ, ಸೆಕೆಂಡ್ ಹಾಫ್ ಅನುಪಮ

    ಸಿನಿಮಾದ ಮೊದಲ ಭಾಗದಲ್ಲಿ ರಚಿತಾ ರಾಮ್ (ಸಾಕ್ಷಿಯಾಗಿ) ಹಾಗೂ ಎರಡನೇ ಭಾಗದಲ್ಲಿ ಅನುಪಮ ಪರಮೇಶ್ವರನ್ (ಶ್ರುತಿಯಾಗಿ) ಬರುತ್ತಾರೆ. ರಚಿತಾ ನಟನೆ ಕೂಡ ಹೊಸ ರೀತಿಯಲ್ಲಿದೆ. ಅನುಪಮ ಪರಮೇಶ್ವರನ್ ಇರುವಷ್ಟು ಹೊತ್ತು ಪ್ರೇಕ್ಷಕರಿಗೆ ಆನಂದ ಸಿಗುತ್ತದೆ. ಅನುಪಮ ಮುಖದ ಅಂದ ಪರದೆಯ ಕಾಂತಿ ಹೆಚ್ಚು ಮಾಡಿದೆ. ಈ ಇಬ್ಬರು ನಟಿಯರ ಬಗ್ಗೆ ಕೊಂಕು ತೆಗೆಯುವ ಹಾಗೆ ಇಲ್ಲ.

    ಕೊನೆಯಲ್ಲಿ 'ಗೂಗ್ಲಿ' ಹಾಕುವ ಪವನ್

    ಕೊನೆಯಲ್ಲಿ 'ಗೂಗ್ಲಿ' ಹಾಕುವ ಪವನ್

    ಹಾರರ್ ಸಿನಿಮಾ ಎನ್ನುವುದಕ್ಕಿಂತ ಇದು ಥ್ರಿಲ್ ನೀಡು ಆತ್ಮದ ಕಥೆಯ ಸಿನಿಮಾ. ಸಿನಿಮಾದ ಕೊನೆಯಲ್ಲಿ ಪವನ್ ಒಡೆಯರ್ ಹಾಕುವ ಗೂಗ್ಲಿಗೆ ಪ್ರೇಕ್ಷಕ ಅಬ್ಬಾ.. ಅಂತ ಹೇಳಲೇಬೇಕು. ಯಾರೂ ಊಹೆ ಮಾಡದ ಟ್ವಿಸ್ಟ್ ನೀಡುವ ನಿರ್ದೇಶಕರು ಅಲ್ಲಿಯೇ ಗೆದ್ದಿದ್ದಾರೆ. ಪವನ್ ಇಡೀ ಸಿನಿಮಾವನ್ನು ತಮ್ಮ ಕೆಲಸದ ಮೂಲಕ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಅವರು ಕಥೆ ಹೇಳಿರುವ ಶೈಲಿ ಇಷ್ಟ ಆಗುತ್ತದೆ.

    ಕಿಕ್ ನೀಡುವ ಪಾತ್ರಗಳು

    ಕಿಕ್ ನೀಡುವ ಪಾತ್ರಗಳು

    ಹೀರೋ, ಹೀರೋಯಿನ್ ಗಳನ್ನು ಬಿಟ್ಟರೆ ಚಿಕ್ಕಣ್ಣ ಹಾಗೂ ರವಿಶಂಕರ್ ಚಿತ್ರದ ತುಂಬ ತುಂಬಿಕೊಂಡಿದ್ದಾರೆ. ರಾಜಕಾರಣಿ ರವಿಶಂಕರ್ ಹಾಗೂ ಗಗನ್ (ಪುನೀತ್) ಸ್ನೇಹಿತನಾಗಿ ಚಿಕ್ಕಣ್ಣ ನಟನೆ ಸೋಗಸಾಗಿದೆ. ಚಿಕ್ಕಣ್ಣ ಕಾಮಿಡಿಗೆ ಪ್ರೇಕ್ಷಕರು ನಾನ್ ಸ್ಟಾಪ್ ನಗುತ್ತಾರೆ.

    ಕೇಳಲು ಇಂಪು, ನೋಡಲು ತಂಪು

    ಕೇಳಲು ಇಂಪು, ನೋಡಲು ತಂಪು

    ಸಿನಿಮಾದಲ್ಲಿ ನಾಲ್ಕು ಹಾಡುಗಳಿವೆ. ನಾಲ್ಕೂ ಹಾಡುಗಳು ಕೂಡ ಕೇಳಲು ಇಂಪು, ನೋಡಲು ತಂಪು. 'ಓಪನ್ ದಿ ಬಾಟಲ್..' ಹಾಗೂ 'ಡ್ಯಾನ್ಸ್ ವಿತ್ ಅಪ್ಪು..' ಹಾಡಿಗಳ ಬೀಟ್ಸ್ ಗೆ ಪುನೀತ್ ಮಾಡುವ ಡ್ಯಾನ್ಸ್ ಅದ್ಬುತ. ಉಳಿದ ಎರಡೂ ಲವ್ ಸಾಂಗ್ ಗಳು ಒಳ್ಳೆಯ ಫೀಲ್ ನೀಡುತ್ತವೆ.

    ಇದು ಪವರ್ ಸ್ಟಾರ್ ಸಿನಿಮಾ

    ಇದು ಪವರ್ ಸ್ಟಾರ್ ಸಿನಿಮಾ

    ಮೊದಲೇ ಹೇಳಿದ ಹಾಗೆ ಇದು 'ಪಕ್ಕಾ ಪವರ್ ಸ್ಟಾರ್ ಸಿನಿಮಾ'. ಪುನೀತ್ ಅಭಿಮಾನಿಗಳು ಎರಡೂ, ಮೂರು ಬಾರಿ ನೋಡಿದರೂ ಬೋರ್ ಆಗದ ಸಿನಿಮಾ. ಪ್ರೇಮ, ಪ್ರೀತಿ, ನಗು, ಸಾಹಸ, ರೋಚಕತೆ, ಭಾವುಕತೆ ಹೀಗೆ ಎಲ್ಲ ಅಂಶಗಳ ಶುದ್ಧ ಮನರಂಜನೆ ಸಿನಿಮಾದ ಹೆಸರೇ 'ನಟ ಸಾರ್ವಭೌಮ.'

    English summary
    Actor Puneeth Rajkumar's 'Nata Sarvabhouma' kannada movie review.
    Friday, March 1, 2019, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X