Don't Miss!
- News
ನಿರೂಪಕಿ ಅಮ್ರೀನ್ ಕೊಂದ ಭಯೋತ್ಪಾದಕರ ಹತ್ಯೆ
- Automobiles
ಓಲಾಗೆ ಹೊಸ ಸಮಸ್ಯೆ: ನಡು ರಸ್ತೆಯಲ್ಲಿ ಮುಂಭಾಗದ ಚಕ್ರ ಮುರಿದು ಕೆಟ್ಟುನಿಂತ ಸ್ಕೂಟರ್
- Finance
Opening Bell:ಜಾಗತಿಕ ಮಾರುಕಟ್ಟೆ ಲಾಭ: ನಿಫ್ಟಿ, ಸೆನ್ಸೆಕ್ಸ್ ಏರಿಕೆ
- Education
Tumkur District Court Recruitment 2022 : 51 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಜಿಯೋದ ಈ ಪ್ಲ್ಯಾನಿನಲ್ಲಿ ಸಿಗುತ್ತೆ ಜಬರ್ದಸ್ತ್ ಡೇಟಾ ಮತ್ತು ವ್ಯಾಲಿಡಿಟಿ!
- Sports
RCB vs RR: ಸಂಜು ಸ್ಯಾಮ್ಸನ್ ಆಟ ಆರ್ಸಿಬಿಯ ಈ ಬೌಲರ್ ಮುಂದೆ ನಡೆಯಲ್ಲ; 16 ರನ್ಗೆ 2 ಬಾರಿ ಔಟ್!
- Lifestyle
ಬ್ಯೂಟಿ ಟಿಪ್ಸ್: ತ್ವಚೆಗೆ ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಲೇಬೇಡಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Man Of The Match Review: ಹೇಗಿದೆ 'ಮ್ಯಾನ್ ಆಫ್ ದಿ ಮ್ಯಾಚ್' ಇಲ್ಲಿದೆ ವಿಮರ್ಶೆ!
ಚಿತ್ರದ ಟೈಟಲ್ ವಿಭಿನ್ನ ಎನಿಸುತ್ತದೆ. ಸಾಮಾನ್ಯವಾಗಿ ಇದನ್ನು ಕ್ರಿಕೆಟ್‌ನಲ್ಲಿ ಬಳಸುವುದನ್ನು ನಾವು ಕಂಡಿದ್ದೇವೆ. ಆದರೆ ಇದು ಸಿನಿಮಾದ ಟೈಟಲ್ ಆಗಿದೆ. ಹಾಗಂತ ಇದು ಒಂದು ಕ್ರೀಡಾ ಕಥೆಯಲ್ಲ. ಕ್ರಿಕೆಟ್ ಕಥೆ ಅಂತೂ ಮೊದಲೇ ಅಲ್ಲ. ಇಲ್ಲಿ ನಿಜ ಜೀವನದ ಆಟವನ್ನು ಹಾಗೆ ಕಟ್ಟಿಕೊಡಲಾಗಿದೆ. ಜೀವನದ ಆಟದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಯಾರು ಆಗ್ತಾರೆ ಎನ್ನುವುದು ಚಿತ್ರದ ಮುಖ್ಯ ತಿರುಳು.
ಒಂದು ಸಿನಿಮಾ, ಒಬ್ಬ ನಿರ್ಮಾಪಕ, ಒಬ್ಬ ನಿರ್ದೇಶಕ, ನೂರಾರು ಕಲಾವಿದರು. ಸಿನಿಮಾ ಮಾಡುವ ಸಲುವಾಗಿ ಆಡಿಷನ್ ನಡೆಸಲು ಚಿತ್ರತಂಡ ಯೋಜನೆ ರೂಪಿಸಿರುತ್ತದೆ. ಇದರೊಂದಿಗೆ ಚಿತ್ರ ಆರಂಭ ಆಗುತ್ತದೆ. ಶುರುವಿನಲ್ಲೇ ಕುತೂಹಲಗಳನ್ನು ಕೆರಳಿಸುವ ಅಂಶಗಳನ್ನು ಕಟ್ಟಿಕೊಡುತ್ತಾ ಸಾಗುತ್ತಾರೆ ನಿರ್ದೇಶಕ.
ಕಥೆಯಲ್ಲಿ ಒಮ್ಮೆ ಆಡಿಷನ್ ಶುರುವಾಗುತ್ತದೆ. ಚಿತ್ರದ ಕೊನೆ ತನಕ ಇದರ ಸುತ್ತವೇ ಸುತ್ತುತ್ತದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಚಿತ್ರಕ್ಕಾಗಿ ಆಡಿಷನ್ ಕರೆದ ನಿರ್ದೇಶಕ ಪಾತ್ರಗಳಿಗೆ ಕಲಾವಿದರನ್ನು ಆಯ್ಕೆನೇ ಮಾಡುವುದಿಲ್ಲ.
'ಆಚಾರ್ಯ' ಚಿತ್ರ ವಿಮರ್ಶೆ: ಹಳಿ ತಪ್ಪಿದ ಮೆಗಾ ಬೋರಿಂಗ್ ಮೂವಿ!

ಕಾಲ್ಪನಿಕ ಕಥೆಯಲ್ಲೊಂದು ನೈಜತೆ ಕಥೆ
ಸಿನಿಮಾ ತೆಗೆಯುವ ಬದಲಿಗೆ ಆಡಿಷನ್‌ಗೆ ಬಂದ ಕಲಾವಿದರ ನಡುವೆ ನಡೆಯುವ ನೈಜ ಘಟನೆಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಅದನ್ನೇ ಸಿನಿಮಾ ಮಾಡಿ ಬಿಡುತ್ತಾರೆ. ಇದು ವಿಭಿನ್ನ ಪ್ರಯೋಗಗಳ ಸಾಲಿಗೆ ಸೇರುತ್ತದೆ. ಅಂದರೆ ಈ ಹಿಂದೆ ಬಂದ ಕನ್ನಡದ 'ತಿಥಿ', 'ಸಿನಿಮಾ ಬಂಡಿ' ಚಿತ್ರಗಳನ್ನು ಇದು ನೆನಪಿಸುತ್ತದೆ. ಆದರೆ ಆ ಚಿತ್ರಗಳಷ್ಟು ನೈಜತೆ ಇಲ್ಲಿಲ್ಲ.
Jersey Movie Review: ರೀಮೇಕ್ ಸಿನಿಮಾದಲ್ಲಿ ಮಿಂಚಿದ ಶಾಹಿದ್ ಕಪೂರ್

ಸಿನಿಮಾದೊಳಗೊಂದು ಸಿನಿಮಾ
ಆಡಿಷನ್‌ಗಾಗಿ ಬರುವ ಕಲಾವಿದರು ಸಿನಿಮಾದಲ್ಲಿ ನಟಿಸುವ ಮಹತ್ತರವಾದ ಕನಸು ಹೊತ್ತು ಬರುತ್ತಾರೆ. ಅವರು ಅಂದುಕೊಳ್ಳುವುದೇ ಬೇರೆ, ಅಲ್ಲಿ ನಡೆಯುವುದೇ ಬೇರೆ. ಆಡಿಷನ್ ಸಮಯದಲ್ಲಿ ನಿಜವಾಗಿ ಅಲ್ಲಿ ನಡೆಯುವ ಘಟನೆಗಳು, ಕಲಾವಿದರ ನಡುವೆ ನಡೆಯುವ ಸನ್ನಿವೇಶಗಳನ್ನು ನಿರ್ದೇಶಕ ಸೆರೆಹಿಡಿಯುತ್ತಾನೆ.
ಆಡಿಷನ್‌ಗೆ ಬರುವ ಯುವಕರದ್ದು, ಒಬ್ಬೊಬ್ಬರದ್ದು ಒಂದೊಂದು ಕಥೆ. ಅವರ ಹಿಂದೆ ಏನೇ ಕಥೆ ಇದ್ದರೂ, ಮುಂದೆ ಇರುವ ಗುರಿ ಮಾತ್ರ ಸಿನಿಮಾದಲ್ಲಿ ಅಭಿನಯಿಸ ಬೇಕು ಎನ್ನುವುದು. ಹಾಗಾಗಿ ಅದನ್ನೇ ಅಸ್ತ್ರವಾಗಿ ಇಟ್ಟು ಕೊಂಡು ನಿರ್ದೇಶಕ ಒಂದು ಸಿನಿಮಾವನ್ನೇ ಮಾಡುತ್ತಾರೆ.

ಕನ್ನಡದ ಮತ್ತೊಂದು ಪ್ರಯೋಗಾತ್ಮಕ ಚಿತ್ರ!
ಇಲ್ಲಿ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ವಿಭಿನ್ನ ರೀತಿಯ ಅಪ್ರೋಚ್ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮಾಡಲು ದೊಡ್ಡ ಬಜೆಟ್, ನಾಯಕ, ನಾಯಕಿ, ಅದ್ಧೂರಿ ಮೇಕಿಂಗ್, ನಾನಾ ಲೊಕೇಷನ್‌ಗಳು ಬೇಕಾಗುತ್ತವೆ ಎನ್ನುವ ವಿಚಾರಗಳಿಗೆ ಬ್ರೇಕ್ ಹಾಕಿದ್ದಾರೆ. ಇದ್ದಿದ್ದನ್ನು ಇದ್ದಹಾಗೆ ತೋರಿಸಲು ಒಂದು ಸಿನಿಮಾ ಮಾಡಿದ್ದಾರೆ.
KGF Chapter 2 Review: 'ಕೆಜಿಎಫ್ 2' ಸಿನಿಮಾದಲ್ಲಿ ಏನಿದೆ? ಏನಿಲ್ಲ? ಇಲ್ಲಿದೆ ವಿಮರ್ಶೆ

ಧರ್ಮಣ್ಣ 'ಮ್ಯಾನ್ ಆರ್ಫ ದಿ ಮ್ಯಾಚ್'!
ಇನ್ನು ಚಿತ್ರದಲ್ಲಿನ ಪಾತ್ರಗಳ ವಿಚಾರಕ್ಕೆ ಬರುವುದಾದರೆ, ಇಡೀ ಸಿನಿಮಾದಲ್ಲಿ ಹಾಸ್ಯ ನಟ ಧರ್ಮಣ್ಣ ಕಡೂರ್ ಅಬ್ಬರಿಸಿದ್ದಾರೆ. ಧರ್ಮಣ್ಣನ ಕಾಮಿಡಿ ಮತ್ತು ಪಾತ್ರ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡ ನಟರಾಜ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಬ್ಬ ಸ್ವಾರ್ಥ ತುಂಬಿದ ನಿರ್ದೇಶಕನ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು ಈ ಚಿತ್ರದ ಮೂಲಕ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಲಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಇದೆ. ಒಂದೇ ಹಾಡಿಗೆ ನಟ ಪುನೀತ್ ರಾಜ್‍ಕುಮಾರ್ ಧ್ವನಿಯಾಗಿದ್ದಾರೆ. 'ಮ್ಯಾನ್ ಆಫ್ ದಿ ಮ್ಯಾಚ್' ಮೇ 5 ರಿಂದ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಅಮೆಜಾನ್ ಪ್ರೈಮ್‌ನಲ್ಲಿ ಈ ಚಿತ್ರ ಲಭ್ಯವಿದೆ.