O Romeo X Review ; ಹೇಗಿದೆ ಶಾಹಿದ್ ಕಪೂರ್-ವಿಶಾಲ್ ಭಾರದ್ವಾಜ್ ಓ ರೋಮಿಯೋ ? ಹಿಟ್ಟಾ-ಫ್ಲಾಪಾ ? ಇಲ್ಲಿದೆ ಪಬ್ಲಿಕ್ ರೆಸ್ಪಾನ್ಸ್
ಕೇವಲ ನಾಯಕ ಮತ್ತು ನಾಯಕಿಯ ಜೋಡಿ ಮಾತ್ರವಲ್ಲ. ಬೆಳ್ಳಿಪರದೆಯ ಮೂಲಕ ಕೆಲ ನಿರ್ದೇಶಕ ಮತ್ತು ನಾಯಕರ ಜೋಡಿ ಕೂಡ ಮೋಡಿ ಮಾಡುವಲ್ಲಿ ಯಶಸ್ವಿಯಾಗುತ್ತವೆ. ಉದಾಹರಣೆಗೆ ಡಾ ರಾಜ್ ಕುಮಾರ್ ಮತ್ತು ದೊರೈ ಭಗವಾನ್. ಅಮಿತಾಬ್ ಬಚ್ಚನ್ ಮತ್ತು ಪ್ರಕಾಶ್ ಮೆಹ್ರಾ. ಗೋವಿಂದ ಮತ್ತು ಡೆವಿಡ್ ಧವನ್. ರಾಜೇಶ್ ಖನ್ನಾ ಮತ್ತು ಹೃಷಿಕೇಶ್ ಮುಖರ್ಜಿ. ಶಾರುಖ್ ಖಾನ್ ಮತ್ತು ಕರಣ್ ಜೋಹರ್.
ಇಂತಹದ್ದೇ ಜೋಡಿಗಳಲ್ಲಿ ಶಾಹಿದ್ ಕಪೂರ್ ಮತ್ತು ವಿಶಾಲ್ ಭಾರದ್ವಾಜ್ ಅವರ ಜೋಡಿ ಕೂಡ ಒಂದು. ಎರಡು ದೇಹ ಒಂದೇ ಜೀವದಂತೆ ಇರುವ ಈ ಇಬ್ಬರು ಈ ಹಿಂದೆ ''ಕಮೀನೆ''.. ''ಹೈದರ್'' ಮತ್ತು ''ರಂಗೂನ್'' ಅಂತಹ ವಿಶೇಷ ಮತ್ತು ವಿಶಿಷ್ಟವಾದ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ. ಸೋಲು ಗೆಲುವಿನಾಚೆ ತಮ್ಮ ಚಾಪು ಮೂಡಿಸಿದ್ದಾರೆ.

ಇಂತಹ ಜೋಡಿ ಇದೀಗ ಮತ್ತೆ ಒಂದಾಗಿದೆ. ''ಓ ರೋಮಿಯೋ'' ಮೂಲಕ ನಾಲ್ಕನೇ ಬಾರಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸುವ ಪ್ರಯತ್ನ ಮಾಡಿದೆ. ಹಾಗಿದ್ದರೆ ಹೇಗಿದೆ ''ಓ ರೋಮಿಯೋ''..? ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಹೇಳಿದ್ದೇನು..? ಚಿತ್ರ ಗೆಲ್ಲುತ್ತಾ..? ಸೋಲುತ್ತಾ..? ಎಂದು ತಿಳಿಯಲು ಮುಂದೆ ಓದಿ.
ಅದ್ಭುತವಾದ ಚಿತ್ರ
ಜೈಪುರದಲ್ಲಿ ಈಗಷ್ಟೇ ಮೊದಲ ಪ್ರದರ್ಶನ ನೋಡಿ ಬಂದೆ. ಚಿತ್ರ ಅದ್ಭುತವಾಗಿದೆ. ಶಾಹಿದ್ ಕಪೂರ್ ಅವರ ಅಭಿನಯ, ಚಿತ್ರದ ಆಕ್ಷನ್ ದೃಶ್ಯಗಳು, ತೃಪ್ತಿ ದಿಮ್ರಿಯ ಆಕ್ಟಿಂಗ್, ಎಷ್ಟು ಹೊಗಳಿದರೂ ಕೂಡ ಸಾಲದು. ಈ ಚಿತ್ರ ಹೊಸ ದಾಖಲೆ ನಿರ್ಮಿಸುತ್ತೆ. ಬ್ಲಾಕ್ ಬಸ್ಟರ್ ಆಗುತ್ತೆ ಎನ್ನುವುದರಲ್ಲಿ ಅನುಮಾನ ಇಲ್ಲ. ನೋಡಲೇಬಾಕದ ಚಿತ್ರ. ಬೇರೆಯವರು ನೋಡಿ ಎಂದು ನಾನು ಶಿಫಾರಸು ಮಾಡುತ್ತೇನೆ ಎಂದು ಒಬ್ಬರು ಚಿತ್ರಕ್ಕೆ ಐದಕ್ಕೆ ಐದು ಅಂಕಗಳನ್ನು ನೀಡಿದ್ಧಾರೆ.
ಮಿಸ್ ಮಾಡಬೇಡಿ
''ಓ ರೋಮಿಯೋ'' ಹೊಗಳಲು ಪದಗಳಿಲ್ಲ. ಶಾಹಿದ್ ಕಪೂರ್ ಅವರ ಅಭಿನಯದ ಅದ್ಭುತವಾಗಿದೆ. ಪ್ರೇಕ್ಷಕರನ್ನು ಇಲ್ಲಿ ಅವರು ಬೆರಗುಗೊಳಿಸಿದ್ದಾರೆ. ಉಳಿದವರು ಕೂಡ ಅಷ್ಟೇ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರಮಂದಿರಗಳಲ್ಲಿ ''ಓ ರೋಮಿಯೋ''ವನ್ನು ಮಿಸ್ ಮಾಡಬೇಡಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನೋಡಲೇಬೇಕಾದ ಚಿತ್ರ
ಒಂದು ಅದ್ಭುತವಾದ ಚಿತ್ರ ''ಓ ರೋಮಿಯೋ''. ಶಾಹಿದ್ ಕಪೂರ್ ತುಂಬಾ ಚೆನ್ನಾಗಿ ಅಭಿಯಿಸಿದ್ದಾರೆ. ಅರುಣಾ ಇರಾನಿ ಮತ್ತು ಫರೀಲಾ ಜಲಾಲ್ ಅವರ ಅಭಿನಯದ ವ್ಹಾವ್. ತ್ರಿಪ್ತಿ ದಿಮ್ರಿ ಎಲ್ಲರ ಗಮನ ಸೆಳೆಯುತ್ತಾರೆ. ನೋಡಲೇಬೇಕಾದ ಸಿನಿಮಾ ಎಂದು ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.
ಬಾಕ್ಸಾಫೀಸ್‌ನ ದುರಂತ
2026ರಲ್ಲಿ ನಾನು ನೋಡಿದ ಅತ್ಯಂತ ಕಳಪೆ ಚಿತ್ರಗಳಲ್ಲಿ ಇದು ಒಂದು. ಕಳಪೆ ಕಥೆ ಮತ್ತು ಅಭಿನಯ. ಶಾಹಿದ್ ಕಪೂರ್ ಯಾವಾಗಲೂ ನಿರಾಸೆ ಮಾಡುತ್ತಾರೆ. ಹಾಡುಗಳು ಒಂದು ಇಂಪಾಗಿಲ್ಲ. ತ್ರಿಪ್ತಿ ದಿಮ್ರಿ ಅಭಿನಯ ಚೆನ್ನಾಗಿದೆ. ಉಳಿದ ಪಾತ್ರವರ್ಗಗಳು ಓಕೆ. ವಿಶ್ವಾಲ್ ಭಾರದ್ವಾಜ್ ಮತ್ತೊಮ್ಮೆ ಕಳಪೆ ಕತೆ ಆಯ್ಕೆ ಮಾಡಿಕೊಂಡಿದ್ಧಾರೆ ಎಂದು ವ್ಯಕ್ತಿಯೊಬ್ಬರು 1.5 ಸ್ಟಾರ್ ನೀಡಿದ್ದಾರೆ.
ನೋಡಬಹುದಾದ ಸಿನಿಮಾ
ಈಗಷ್ಟೇ ಚಿತ್ರಮಂದಿರದಿಂದ ಹೊರ ಬಂದೆ. ನಿಜಾ ಹೇಳಬೇಕಂದರೆ ಕೆಲ ಉತ್ತಮ ಮನರಂಜನೆಯ ಕ್ಷಣಗಳನ್ನು ಹೊಂದಿರುವ ಚಿತ್ರ. ಒಮ್ಮೆ ನೋಡಬಹುದಾದ ಸಿನಿಮಾ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಕೊನೆಯ 20 ನಿಮಿಷ ಬೆಂಕಿ
ಕೊನೆಯ 20 ನಿಮಿಷ ಮಾತ್ರ ಬೆಂಕಿ. ಶಾಹಿದ್ ಕಪೂರ್ ಮತ್ತು ನಾನಾ ಪಾಟೇಕರ್ ಅಭಿನಯದ ನೆಕ್ಸ್ಟ್ ಲೆವಲ್‌ನಲ್ಲಿದೆ ಎಂದು ಮತ್ತೊಬ್ಬ ಸಿನಿಮಾ ಪ್ರೇಮಿ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ಧಾರೆ.
ಹೀಗೆ ಹಲವರು " ಓ ರೋಮಿಯೋ'' ಚಿತ್ರವನ್ನು ಇಂದು (ಫೆಬ್ರವರಿ 13 ) ಮೊದಲ ದಿನದ ಮೊದಲ ಶೋನಲ್ಲಿ ನೋಡಿ ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರಿಗೆ ಚಿತ್ರ ಅದ್ಭುತವೆನಿಸಿದರೆ, ಇನ್ನೂ ಕೆಲವರಿಗೆ ಓಕೆ ಓಕೆ ಎಂದು ಅನಿಸಿದೆ. ಇನ್ನೂ ಕೆಲವರಿಗೆ ಚಿತ್ರ ಇಷ್ಟವಾಗಿಲ್ಲ. ಈ ಮಿಶ್ರ ಪ್ರತಿಕ್ರಿಯೆ ನಡುವೆ ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











