twitter
    For Quick Alerts
    ALLOW NOTIFICATIONS  
    For Daily Alerts

    Ombatthane Dikku Movie Review: 'ಒಂಬತ್ತನೇ ದಿಕ್ಕು', ಒಂದು ಬ್ಯಾಗಿನ ಕತೆ!

    |

    ಕೊರೊನಾ ಪರಿಸ್ಥಿತಿ ಕಾರಣದಿಂದ ಸಿನಿಮಾಗಳೆಲ್ಲವೂ ಬಿಡುಗಡೆ ದಿನಾಂಕ ಮುಂದೂಡಿಕೊಂಡಿರುವ ಸಮಯದಲ್ಲಿ ಕನ್ನಡದ 'ಒಂಬತ್ತನೇ ದಿಕ್ಕು' ಸಿನಿಮಾ ಚಿತ್ರಮಂದಿರಗಳಲ್ಲಿ ಇಂದು ಬಿಡುಗಡೆ ಕಂಡಿದೆ. ಚಿತ್ರತಂಡ ತೋರಿರುವ ಈ ಧೈರ್ಯ ಅವರಿಗೆ ಮುಳುವಾಗಲಿದೆಯೇ ಅಥವಾ ವರವಾಗಲಿದೆಯೇ ಕಾದು ನೋಡಬೇಕು.

    ಲೂಸ್ ಮಾದಾ ಯೋಗಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಒಂಬತ್ತನೇ ದಿಕ್ಕು' ಸಿನಿಮಾವನ್ನು ನಿರ್ದೇಶಿಸಿರುವುದು ದಯಾಳ್ ಪದ್ಮನಾಭನ್. 2017 ರಲ್ಲಿ ಬಿಡುಗಡೆ ಆಗಿದ್ದ ತಮಿಳಿನ 'ಕುರಂಗು ಬೊಮೈ' ಸಿನಿಮಾದ ರೀಮೇಕ್ 'ಒಂಬತ್ತನೇ ದಿಕ್ಕು'.

    ಈ ಹಿಂದೆ 'ಆ ಕರಾಳ ರಾತ್ರಿ', 'ಸರ್ಕಸ್', 'ಹಗ್ಗದ ಕೊನೆ'ಯಂಥಹಾ ಥ್ರಿಲ್ಲಿಂಗ್ ಸಿನಿಮಾಗಳನ್ನು ನಿರ್ದೇಶಿಸಿರುವ ದಯಾಳ್ ಪದ್ಮನಾಭ್ 'ಒಂಬತ್ತನೇ ದಿಕ್ಕು' ಸಿನಿಮಾ ಮೂಲಕ ಮತ್ತೆ ಥ್ರಿಲ್ಲಿಂಗ್ ಕತೆಗಳತ್ತ ಹೊರಳಿದ್ದಾರೆ. ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸಿ ಕತೆಯೊಂದಿಗೆ ಎಂಗೇಜ್ ಮಾಡಿಕೊಳ್ಳುವ ಥ್ರಿಲ್ಲಿಂಗ್ ಜಾನರ್ ಸಿನಿಮಾಗಳು ಪ್ರೇಕ್ಷಕರಿಂದ ತಿರಸ್ಕಾರಕ್ಕೊಳಪಟ್ಟಿರುವುದು ಕಡಿಮೆ ಹಾಗಾಗಿ ದಯಾಳ್ ಥ್ರಿಲ್ಲರ್ ಜಾನರ್‌ ಅನ್ನೇ ಆರಿಸಿಕೊಂಡಿದ್ದಾರೆ.

    Rating:
    3.0/5

    ಸಿನಿಮಾದ ಆರಂಭ

    ಸಿನಿಮಾದ ಆರಂಭ

    ಸಿನಿಮಾದ ನಾಯಕ ಚೆನ್ನ (ಯೋಗಿ) ಸರಳ ಆದರೆ ಜವಾಬ್ದಾರಿಯುಳ್ಳ ಯುವಕ. ಕ್ಯಾಬ್ ಬ್ಯುಸಿನೆಸ್ ಮಾಡುತ್ತಿದ್ದಾನೆ. ಆದರೆ ಆತನಿಗೆ ತಂದೆಯೊಂದಿಗೆ ಸಣ್ಣ ತಿಕ್ಕಾಟವೂ ಇದೆ. ಚೆನ್ನನ ತಂದೆ ಸ್ಮಗ್ಲರ್ ಒಬ್ಬನ ಬಳಿ ಕೆಲಸ ಮಾಡುವುದು ಚೆನ್ನನಿಗೆ ಇಷ್ಟವಿಲ್ಲ. ಚೆನ್ನನ ತಂದೆ ಸ್ಮಗ್ಲರ್ ಬಳಿ ಕೆಲಸ ಮಾಡುತ್ತಿರುವ ಕಾರಣಕ್ಕೆ ಚೆನ್ನನ ಪ್ರೇಯಸಿಯ ತಂದೆ ಚೆನ್ನನಿಗೆ ಮಗಳನ್ನು ಕೊಡಲು ನಿರಾಕರಿಸುತ್ತಾನೆ. ಹಾಗೆಂದು ಚೆನ್ನನಿಗೆ ಅಪ್ಪನ ಮೇಲೆ ದ್ವೇಷವೇನೂ ಇಲ್ಲ. ಚೆನ್ನನ ತಂದೆಯೂ ಬಹಳ ಸಂಭಾವಿತ ವ್ಯಕ್ತಿ ಆದರೆ ಆ ಸ್ಮಗ್ಲರ್‌ ಬಗ್ಗೆ ತುಸು ಹೆಚ್ಚು ಪ್ರೀತಿ, ಅದಕ್ಕೆ ಕಾರಣವೂ ಇದೆ. ಸ್ಮಗ್ಲರ್‌ಗೂ ಚೆನ್ನನ ತಂದೆಯೆಂದರೆ ಬಹಳ ಪ್ರೀತಿ.

    ಕತೆ ಏನು?

    ಕತೆ ಏನು?

    ಹೀಗಿದ್ದಾಗ ಚೆನ್ನನಿಗೆ ಕಪ್ಪು ಬಣ್ಣದ ಬ್ಯಾಗ್ ಒಂದು ಅಚಾನಕ್ಕಾಗಿ ಸಿಕ್ಕುತ್ತದೆ. ಆ ಬ್ಯಾಗ್‌ ಅನ್ನು ಕಳೆದುಕೊಂಡವರಿಗೆ ತಲುಪಿಸಲು ಚೆನ್ನ ಯತ್ನಿಸುತ್ತಿರುತ್ತಾನೆ. ಅದೇ ವೇಳೆಗೆ, ಸ್ಮಗ್ಲರ್ ಬಳಿ ಕೆಲಸ ಮಾಡುತ್ತಿರುವ ಅವರ ತಂದೆ ಕಾಣೆಯಾಗುತ್ತಾರೆ. ಚೆನ್ನಿಗೆ ಸಿಕ್ಕ ಬ್ಯಾಗ್‌ಗೂ ತಂದೆ ಕಾಣೆಯಾಗಿರುವುದಕ್ಕೂ ಸಂಬಂಧವಿದೆ ಎಂಬುದು ಚೆನ್ನಿಗೆ ಗೊತ್ತಾಗುತ್ತದೆ. ಆ ಬ್ಯಾಗಿನಲ್ಲಿ ಏನಿದೆ? ಚೆನ್ನಿಯ ತಂದೆ ಕಾಣೆಯಾಗಲು ಕಾರಣ ಏನು? ಬ್ಯಾಗಿನ ಹಿಂದೆ ಬಿದ್ದವರ ಕತೆ ಏನಾಯಿತು? ಇತರೆ ವಿಷಯಗಳು ತಿಳಿಯಲು ಸಿನಿಮಾ ನೋಡಬೇಕು.

    ಬಿಗಿಯಾದ ಚಿತ್ರಕತೆ

    ಬಿಗಿಯಾದ ಚಿತ್ರಕತೆ

    ಸಿನಿಮಾದ ಕತೆ ನಡೆಯುವುದು ಬಹಳ ಸೀಮಿತ ಅವಧಿಯಲ್ಲಿ. ಅಸಲಿಗೆ ಮುಖ್ಯ ಕತೆ ನಡೆಯುವುದು ಒಂದು ದಿನದ ಕೆಲವು ಘಂಟೆಗಳಲ್ಲಿ ಅಷ್ಟೆ. ಫ್ಲಾಷ್‌ಬ್ಯಾಕ್‌ನಲ್ಲಿಯೂ ಸಹ ಒಂದೆರಡು ದಿನದ ಹಿಂದಿನ ಘಟನೆಗಳನ್ನೇ ತೋರಿಸಲಾಗುತ್ತದೆ. ಸಿನಿಮಾದ ಆರಂಭದಲ್ಲಿ ಪಾತ್ರ ಪರಿಚಯಗಳನ್ನು ಬೇಗನೆ ಮುಗಿಸುವ ನಿರ್ದೇಶಕರು, ಬೇಗನೆ ಮುಖ್ಯ ಕತೆಗೆ ಬರುತ್ತಾರೆ. ಮುಂದೇನಾಗುತ್ತದೆ ಎಂದು ನಿರೀಕ್ಷಿಸುತ್ತಾ ಪ್ರೇಕ್ಷಕರು ಪರದೆಯನ್ನು ದಿಟ್ಟಿಸುವಷ್ಟರ ಮಟ್ಟಿಗೆ ಚಿತ್ರಕತೆ ಬಿಗಿಯಾಗಿದೆ. ಇದರ ಶ್ರೇಯ ಮೂಲ ಸಿನಿಮಾದ ಕತೆಗಾರರಿಗೆ ಸಲ್ಲಬೇಕು.

    ಯೋಗಿಯ ಮಾಸ್ ಇಮೇಜಿಗೆ ಇಲ್ಲ ಮೋಸ

    ಯೋಗಿಯ ಮಾಸ್ ಇಮೇಜಿಗೆ ಇಲ್ಲ ಮೋಸ

    ಯೋಗಿಯ ಮಾಸ್ ಇಮೇಜು ಹಾಗೂ ಅವರ ಅಭಿಮಾನಿಗಳನ್ನು ತೃಪ್ತಿಪಡಿಸಲೆಂದು ಕತೆಯಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಲಾಗಿದೆ. ಎರಡು ಫೈಟ್ ದೃಶ್ಯಗಳನ್ನು ಯೋಗಿ ಅಭಿಮಾನಿಗಳಿಗೆಂದೇ ಇಡಲಾಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಈ ಹಿಂದೆ ಯಾವುದೋ ಸಿನಿಮಾದಲ್ಲಿ ಕೇಳಿದ ಭಾಸವಾಗುತ್ತದೆ. ವಿಶೇಷವಾಗಿ ಸಿನಿಮಾದ ಥೀಮ್ ಮ್ಯೂಸಿಕ್‌. ಕೆಲವೇ ದಿನಗಳಲ್ಲಿ ನಡೆವ ಕತೆಯಾಗಿರುವ ಕಾರಣ ಹಾಡುಗಳಿಗೆ ಹೆಚ್ಚಿನ ಸ್ಪೇಸ್‌ ಕತೆಯಲ್ಲಿಲ್ಲ. ಆದರೂ ಹಿನ್ನೆಲೆಯಲ್ಲಿ ಕೆಲವು ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಅವು ನೆನಪಿರುವುದು ಕಷ್ಟ.

    ಯಾರ ನಟನೆ ಹೇಗಿದೆ?

    ಯಾರ ನಟನೆ ಹೇಗಿದೆ?

    ಸಿನಿಮಾದಲ್ಲಿ ಕೆಲವೇ ಮುಖ್ಯ ಪಾತ್ರಗಳಿವೆ. ಎಲ್ಲರ ಪಾತ್ರಗಳಿಗೂ ಸಾಕಷ್ಟು ಅವಕಾಶವನ್ನು ಚಿತ್ರಕತೆ ಕಲ್ಪಿಸಿಕೊಟ್ಟಿದೆ. ಯೋಗಿ ಚೆನ್ನಾಗಿ ನಟಿಸಿದ್ದಾರೆ. ವಿಲನ್‌ ಕೆಜಿಎಫ್ ಸಂಪತ್ ನಟನೆ ಸಹ ಚೆನ್ನಾಗಿದೆ. ಚೆನ್ನನ ಅಪ್ಪನ ಪಾತ್ರದಲ್ಲಿ ಅಶೋಕ್ ಅವರದ್ದು ಮಾಗಿದ ನಟನೆ. ಸಾಯಿ ಕುಮಾರ್‌ಗೆ ಹೆಚ್ಚು ದೃಶ್ಯಗಳಿಲ್ಲ ಆದರೂ ಸಿಕ್ಕ ಅವಕಾಶದಲ್ಲಿ ಚೆನ್ನಾಗಿ ನಟಿಸಿದ್ದಾರೆ. ಕಳ್ಳನ ಪಾತ್ರದಲ್ಲಿ ಪ್ರಶಾಂತ್ ಸಿದ್ಧಿ ಲವಲವಿಕೆಯಿಂದ ನಟಿಸಿದ್ದಾರೆ. ಕೆಲವು ದೃಶ್ಯಗಳಲ್ಲಿ ಅತಿಯಾದ ನಟನೆ ಎನಿಸಿದರೂ ಆಶ್ಚರ್ಯವಿಲ್ಲ. ನಾಯಕಿ ಅದಿತಿ ಪ್ರಭುದೇವ್ ಸುಂದರವಾಗಿ ಕಾಣುವ ಜೊತೆಗೆ ಹದವಾಗಿ ನಟಿಸಿದ್ದಾರೆ. ನಾಯಕ-ನಾಯಕಿಯ ಪ್ರೇಮಕತೆ ಸರಳವಾಗಿಯೂ ಆಪ್ತವಾಗಿಯೂ ಇದೆ.

    ಒಟ್ಟಾರೆ ಸಿನಿಮಾ ಹೇಗಿದೆ?

    ಒಟ್ಟಾರೆ ಸಿನಿಮಾ ಹೇಗಿದೆ?

    ಮೂಲ ತಮಿಳು ಸಿನಿಮಾ 'ಕುರಂಗು ಬೊಮೈ' ಅನ್ನು ಪರಭಾಷೆಯ ಸಿನಿಮಾ ಪ್ರೇಮಿಗಳು ನೋಡಿರುವುದು ಕಡಿಮೆ. ಅಂಡರ್‌ರೇಟೆಡ್ ಕಲಾವಿದರು, ತಂತ್ರಜ್ಞರು ಸೇರಿ ಮಾಡಿದ್ದ ಸಿನಿಮಾ ಅದಾಗಿತ್ತು. ಒಂದೊಮ್ಮೆ ಮೂಲ ಸಿನಿಮಾ ನೋಡದವರಿಗೆ 'ಒಂಬತ್ತನೇ ದಿಕ್ಕು' ಸಿನಿಮಾ ಖಂಡಿತ ಥ್ರಿಲ್ಲಿಂಗ್ ಎನಿಸುತ್ತದೆ, ಹೊಸದೆನಿಸುತ್ತದೆ. ಒಂದೊಳ್ಳೆ ಥ್ರಿಲ್ಲಿಂಗ್ ಅನುಭವಕ್ಕಾಗಿ 'ಒಂಬತ್ತನೇ ದಿಕ್ಕು' ಸಿನಿಮಾ ನೋಡಲು ಅಡ್ಡಿಯಿಲ್ಲ.

    English summary
    Ombatthane Dikku Kannada movie review in Kannada. Yogesh acted in lead character. Aditi Prabhudeva is heroine. Movie directed by Dayal Padmanabhan.
    Friday, January 28, 2022, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X