Oppenheimer Review: ಭಗವದ್ಗೀತೆ, ವಿಷ್ಣು ಅಂಶಗಳ ಉಲ್ಲೇಖ; ಅತಿದೊಡ್ಡ ಭಾವನಾತ್ಮಕ ಅನುಭವ ಹೆಣೆದ ನೋಲನ್
ಇಂದು ( ಜುಲೈ 21 ) ಚಿತ್ರಮಂದಿರಗಳ ಅಂಗಳಕ್ಕೆ ವಿಶ್ವದ ಬಹು ನಿರೀಕ್ಷಿತ ಚಿತ್ರವಾದ ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ಆಪೆನ್‌ಹೈಮರ್' ಬಿಡುಗಡೆಗೊಂಡಿದೆ. ಸಿನಿ ರಸಿಕರ ತಲೆಗೆ ಹುಳಬಿಟ್ಟು ದಿನಗಳಗಟ್ಟಲೆ ತನ್ನ ಚಿತ್ರಗಳ ಬಗ್ಗೆ ಮಾತನಾಡುವ ಹಾಗೆ ಮಾಡುವಂತಹ ಕಲೆ ಬಲ್ಲ ಕ್ರಿಸ್ಟೊಫರ್ ನೋಲನ್ ಈ ಬಾರಿ ಆಟೋಮಿಕ್ ಬಾಂಬ್‌ನ ಜನಕ ಜೆ ರಾಬರ್ಟ್ ಆಪೆನ್‌ಹೈಮರ್‌ನ ಭಾವನಾತ್ಮಕ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ.
ಕ್ರಿಸ್ಟೋಫರ್ ನೋಲನ್‌ರ ಈ ಮಹಾ ಚಿತ್ರದಲ್ಲಿ ಸಿಲಿಯನ್ ಮರ್ಫಿ, ಎಮಿಲಿ ಬ್ಲಂಟ್, ರಾಬರ್ಟ್ ಡೌನಿ ಜೂನಿಯರ್, ಮ್ಯಾಟ್ ಡ್ಯಾಮನ್, ಫ್ಲಾರೆನ್ಸ್ ಪಗ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿಲಿಯನ್ ಮರ್ಫಿ ಜೆ ರಾಬರ್ಟ್ ಆಪೆನ್‌ಹೈಮರ್ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದಾರೆ. ಇನ್ನು ಕ್ರಿಸ್ಟೋಫರ್ ನೋಲನ್ ಈ ಸಿನಿಮಾ ಮೂಲಕ ಮತ್ತೊಂದು ದಂತಕಥೆಯನ್ನು ಸಿನಿ ರಸಿಕರಿಗೆ ನೀಡಿದ್ದಾರೆ.

ಚಿತ್ರದ ಕಥೆ ಏನು?
ಆಪೆನ್‌ಹೈಮರ್ ವಿಶ್ವವನ್ನೇ ನಡುಗಿಸಿದಂತಹ ವಿಜ್ಞಾನಿ ಜೂನಿಯರ್ ರಾಬರ್ಟ್ ಆಪೆನ್‌ಹೈಮರ್ ಕುರಿತ ಸಿನಿಮಾವಾಗಿದೆ. ನ್ಯೂಕ್ಲಿಯರ್ ಬಾಂಬ್ ಅನ್ನು ಡಿವೈಸ್ ಒಂದನ್ನು ಬಳಸಿ ಪರೀಕ್ಷೆ ನಡೆಸಿ ಯಶಸ್ವಿಯಾದ ಆಪೆನ್‌ಹೈಮರ್‌ನ ಗೆಲುವಿನ ಕಥೆಯೇ ಈ ಅಪೆನ್‌ಹೈಮರ್ ಚಿತ್ರ. ಚಿತ್ರ ಮೂರು ವಿಭಿನ್ನ ಟ್ರ್ಯಾಕ್‌ಗಳಲ್ಲಿ ನಡೆಯುವ ಕಥೆಯನ್ನು ಹೊಂದಿದ್ದು, ಈ ಮೂರೂ ಟ್ರ್ಯಾಕ್‌ಗಳನ್ನು ಅಚ್ಚುಕಟ್ಟಾಗಿ ಬೆರೆಯುವಂತೆ ಮಾಡಲಾಗಿದೆ. ಮೊದಲ ಟ್ರ್ಯಾಕ್‌ನಲ್ಲಿ ರಾಬರ್ಟ್ ಆಪೆನ್‌ಹೈಮರ್‌ನ ಶಾಲಾ ದಿನಗಳು, ಆತ ಹೇಗೆ ಅತ್ಯದ್ಭುತ ವಿಜ್ಞಾನಿಯಾದ ಹಾಗೂ ಮ್ಯಾನ್‌ಹಟನ್ ಪ್ರಾಜೆಕ್ಟ್‌ನ ನಿರ್ದೇಶಕ ಹೇಗಾದ ಎಂಬುದನ್ನು ತಿಳಿಸಿದೆ. ಎರಡನೇ ಟ್ರ್ಯಾಕ್‌ನಲ್ಲಿ ಆಪೆನ್‌ಹೈಮರ್ ಕಮ್ಯೂನಿಸ್ಟ್‌ಗಳ ಜತೆಗಿನ ತನ್ನ ಹಳೆಯ ಲಿಂಕ್ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಭಾಗವಿದೆ. ಮೂರನೇ ಟ್ರ್ಯಾಕ್‌ನಲ್ಲಿ ಯುಎಸ್ ವಾಣಿಜ್ಯ ಕಾರ್ಯದರ್ಶಿಯಾಗಲು ನಡೆಸಿದ ಚರ್ಚೆಯ ಕುರಿತು ಇದೆ.
ಗೆದ್ದ ನೋಲನ್
ಪರಮಾಣು ಪರೀಕ್ಷೆಗಳು ಮತ್ತು ಅದರ ಪರಿಣಾಮಗಳಿಗೆ ಕಾರಣವಾದ ಎಲ್ಲಾ ಪ್ರಮುಖ ಘಟನೆಗಳು ಮತ್ತು ರಷ್ಯಾದ ಗೂಢಚಾರಿಕೆ, ಸರ್ಕಾರದ ವಿಚಾರಣೆಗಳು ಮತ್ತು ಅವುಗಳಿಗೆ ಕಾರಣವಾದ ಎಲ್ಲಾ ಪ್ರಮುಖ ಘಟನೆಗಳನ್ನು ಸೆರೆಹಿಡಿಯುವ ಸೈಕೋಡ್ರಾಮಾದಲ್ಲಿ ಕ್ರಿಸ್ಟೋಫರ್ ನೋಲನ್ ಯಶಸ್ವಿಯಾಗಿದ್ದಾರೆ. ಭೂತ, ವರ್ತಮಾನ ಮತ್ತು ಭವಿಷ್ಯಗಳ ಟ್ರ್ಯಾಕ್‌ಗಳಲ್ಲಿ ಕಥೆಯನ್ನು ಹೆಣೆಯುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆಪೆನ್‌ಹೈಮರ್ ನೋಲನ್ ಮಾಡಿರುವ ಚಿತ್ರಗಳಲ್ಲಿ ಅಗ್ರಸ್ಥಾನಕ್ಕೇರಲಿದ್ದು, ನಿಮ್ಮನ್ನು ಸೀಟ್ ತುದಿಯಲ್ಲಿ ಕೂರಿಸುವಷ್ಟು ಎಂಗೇಜಿಂಗ್ ಆಗಿದೆ.
ಚಿತ್ರದಲ್ಲಿ ಅಣುಬಾಂಬ್ ಪರೀಕ್ಷೆಯ ವೇಳೆ ನಡೆಯುವ ಸ್ಪೋಟವನ್ನು ಕಂಡಾಗ ಆಪನ್‌ಹೈಮರ್ ಈ ಸ್ಪೋಟದಿಂದ ಉಂಟಾಗುವ ಬೆಳಕು ಸಾವಿರ ಸೂರ್ಯಗಳು ಒಟ್ಟಿಗೆ ಪ್ರಕಾಶಿಸಿದಂತಿದೆ ಎಂದು ಭಗವದ್ಗೀತೆಯ ಶ್ಲೋಕವೊಂದನ್ನು ಹೇಳಿದ್ದು, ಮತ್ತೊಮ್ಮೆ ವಿಷ್ಣುವಿನ ಕುರಿತ ಡೈಲಾಗ್ ಅನ್ನೂ ಸಹ ಹೇಳಿದ್ದಾರೆ.
ಚಿತ್ರದ ಪ್ಲಸ್ ಪಾಯಿಂಟ್ ಏನು?
ಭಾರತೀಯ ಸಿನಿ ಪ್ರೇಕ್ಷಕರಿಗೆ ಈ ವಿಷ್ಣು ಹಾಗೂ ಭಗವದ್ಗೀತೆಯ ಅಂಶಗಳ ಉಲ್ಲೇಖವಿರುವುದು ಒಂದು ರೀತಿಯ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದಾಗಿದ್ದು, ಚಿತ್ರದಲ್ಲಿ ವಿಷುಯಲ್ಸ್‌ಗಿಂತ ಹೆಚ್ಚಿನ ಒತ್ತನ್ನು ಸಂಭಾಷಣೆಗೆ ನೀಡಿರುವುದು ಕಂಟೆಂಟ್ ಅನ್ನು ವೀಕ್ಷಕರು ಅರ್ಥೈಸಿಕೊಳ್ಳಲು ಸಹಕಾರಿಯಾಗಿದೆ ಹಾಗೂ ಇದೂ ಸಹ ಚಿತ್ರ ಇಷ್ಟವಾಗಲು ದೊಡ್ಡ ಕಾರಣವಾಗಿದೆ. ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಕುರಿತ ವಿವರಣೆ ಇಷ್ಟವಾಗಲಿದೆ.
ದ್ವಿತೀಯಾರ್ಧ ಹೆಚ್ಚು ಹಿಡಿತ ಮತ್ತು ಭಾವನಾತ್ಮಕವಾಗಿದ್ದು, ಆಟೊಮಿಕ್ ಬಾಂಬ್ ಸ್ಫೋಟದ ಸಂಚಿಕೆ ಅದ್ಭುತವಾಗಿದೆ. ಜಾನ್ ಎಫ್ ಕ್ಯಾನಡಿ ಉಲ್ಲೇಖ ದೊಡ್ಡ ಪಾಯಿಂಟ್ ಆಗಿದ್ದು, ಕ್ಲೈಮ್ಯಾಕ್ಸ್‌ನಲ್ಲಿ ಆಪೆನ್‌ಹೈಮರ್ ಪಡುವ ಪಶ್ಚಾತಾಪ ಹೃದಯವನ್ನು ಕರಗಿಸುವಂತಿದೆ. ಒಟ್ಟಾರೆ ಆಪೆನ್‌ಹೈಮರ್ ನೋಲನ್ ಅವರ ಮಾಸ್ಟರ್ ಪೀಸ್ ಆಗಿದೆ.


Click it and Unblock the Notifications











