twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : 'ಪ್ಲೇ ಬಾಯ್ ಪಾದರಸ' ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ!

    By Naveen
    |

    'ಪಾದರಸ' ಒಂದು ಮನರಂಜನೆಯ ಸಿನಿಮಾ. ಇಷ್ಟು ದಿನ ಸಂಚಾರಿ ವಿಜಯ್ ಅವರನ್ನು ಗಂಭೀರ ಪಾತ್ರದಲ್ಲಿ ನೋಡಿದ್ದ ಅಭಿಮಾನಿಗಳು ಇಲ್ಲಿ ಅವರ ಇನ್ನೊಂದು ಮುಖ ನೋಡಬಹುದು. ಹೆಣ್ಣು ಹಾಗೂ ಹಣದ ಹಿಂದೆ ಬೀಳುವ ಯುವಕನ ಗತಿ ಕೊನೆಗೆ ಏನಾಗುತ್ತದೆ ಎನ್ನುವುದು ಇಡೀ ಸಿನಿಮಾದ ಕಥೆಯಾಗಿದೆ.

    Rating:
    3.0/5

    ಚಿತ್ರ: ಪಾದರಸ
    ನಿರ್ದೇಶನ: ಹೃಷಿಕೇಶ್ ಜಂಬಗಿ
    ನಿರ್ಮಾಣ: ಆರ್ಟ್ ಎನ್ ಸೋಲ್ ಮೀಡಿಯಾ ಸರ್ವಿಸಸ್
    ಛಾಯಾಗ್ರಹಣ: ಎಂ.ಬಿ.ಅಳ್ಳಿಕಟ್ಟಿ
    ಸಂಕಲನ : ಕೆ.ಎಂ.ಪ್ರಕಾಶ್
    ಕಲಾವಿದರು: ಸಂಚಾರಿ ವಿಜಯ್, ವೈಷ್ಣವಿ ಗೌಡ, ನಿರಂಜನ್, ಶೋಭ್ ರಾಜ್, ಮತ್ತು ಇತರರು
    ಬಿಡುಗಡೆ: ಆಗಸ್ಟ್ 10, 2018

    ಸಂತೋಷ್ ಥಿಯೇಟರ್ ನಲ್ಲಿ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್ಸಂತೋಷ್ ಥಿಯೇಟರ್ ನಲ್ಲಿ ತಲೆ ತಿರುಗಿ ಬಿದ್ದ ನಟ ಸಂಚಾರಿ ವಿಜಯ್

    ಒಂದಲ್ಲ ಎರಡಲ್ಲ.. ಪಾದರಸನ ಕೆಟ್ಟ ಕೆಲಸಗಳು

    ಒಂದಲ್ಲ ಎರಡಲ್ಲ.. ಪಾದರಸನ ಕೆಟ್ಟ ಕೆಲಸಗಳು

    ಕಥಾ ನಾಯಕ 'ಪಾದರಸ' (ಸಂಚಾರಿ ವಿಜಯ್) ಹೆಸರಿಗೆ ತಕ್ಕಂತೆ ಪಾದರಸದ ರೀತಿ ಚಿರುಕಾಗಿರುತ್ತಾನೆ. ಕುರಿಯನ್ನು ಹುಲಿ ಎಂದು, ಹುಲಿಯನ್ನು ಕುರಿ ಎಂದು ನಂಬಿಸಿ ಬಿಡುವಷ್ಟು ಚಾಣಾಕ್ಷತನ ಆತನಿಗೆ ಇರುತ್ತದೆ. ಪಾದರಸ ತನ್ನ ಗೆಳೆಯ ಭಾವ (ನಿರಂಜನ್ ದೇಶಪಾಂಡೆ) ಜೊತೆ ಸೇರಿ ಮಾಡಬಾರದ ಕೆಲಸಗಳನ್ನೆಲ್ಲ ಮಾಡುತ್ತಾನೆ. ಸುಳ್ಳು ಹೇಳಿ ದುಡ್ಡು ಸಂಪಾದಿಸುವುದು, ಹುಡುಗಿರ ಜೊತೆಗೆ ಫ್ಲಾರ್ಟ್ ಮಾಡುವುದು ಇದೆ ಈತನ ದಿನಚರಿಯಾಗಿರುತ್ತದೆ. ಹೀಗೆ ಇದ್ದ ಹುಡುಗನ ಜೀವನದಲ್ಲಿ ಒಂದು ಹುಡುಗಿಯ ಆಗಮನ ಆಗುತ್ತದೆ. ಕೊನೆಗೆ ಆ ಹುಡುಗಿಯಿಂದ ಆತನ ತಪ್ಪುಗಳು ಅರಿವಾಗುತ್ತದೆ. ಕೊನೆಗೆ ಪಾದರಸ ಬದಲಾಗುತ್ತಾನಾ... ಇಲ್ವಾ.. ಅವನ ಹೆಣ್ಣು ಹಾಗೂ ಹಣದ ಹಿಂದೆ ಹೋದ ಅವರ ಗತಿ ಏನಾಗುತ್ತದೆ ಎನ್ನುವುದು ಚಿತ್ರದ ನಿರೂಪಣೆಯಾಗಿದೆ.

    ಮೊದಲು ಪಾಪಿ, ಬಳಿಕ ಪಾಪಾ

    ಮೊದಲು ಪಾಪಿ, ಬಳಿಕ ಪಾಪಾ

    ಸಿನಿಮಾದ ಫಸ್ಟ್ ಹಾಫ್ ಪಾದರಸನ ತರ್ಲೆ ಹಾಗೂ ಅವನ ಕೆಟ್ಟ ಕೆಲಸಗಳಲ್ಲಿ ಮುಗಿದು ಹೋಗುತ್ತದೆ. ಅದನೆಲ್ಲ ನೋಡಿ ಪಾದರಸ ಕೆಟ್ಟವನು ಎಂದುಕೊಳ್ಳುವ ಹೊತ್ತಿಗೆ ಸೆಕೆಂಡ್ ಹಾಫ್ ನಲ್ಲಿ ಪಾದರಸದ ಪ್ರತಿ ಕೆಲಸದ ಹಿಂದೆ ಇರುವ ಒಳ್ಳೆಯ ಅರ್ಥ ತಿಳಿಯುತ್ತದೆ. ಹೀಗಾಗಿ ಸಿನಿಮಾದಲ್ಲಿ ಪಾದರಸ ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ. ಮೊದಲು ಅವನನ್ನು ನೋಡಿ ಪಾಪಿ ಅನಿಸಿದರೆ, ಬಳಿಕ ಪಾಪಾ ಅನಿಸುತ್ತದೆ.

    ಮೊದಲ ಬಾರಿಗೆ ಈ ರೀತಿಯ ಪಾತ್ರ

    ಮೊದಲ ಬಾರಿಗೆ ಈ ರೀತಿಯ ಪಾತ್ರ

    ಮೊದಲ ಬಾರಿಗೆ ನಟ ಸಂಚಾರಿ ವಿಜಯ್ ಈ ರೀತಿಯ ಪಾತ್ರವನ್ನು ಮಾಡಿದ್ದಾರೆ. ಹೆಚ್ಚು ಗಂಭೀರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಈ ಚಿತ್ರದಲ್ಲಿ ಬೇರೆ ರೀತಿ ನೋಡಬಹುದಾಗಿದೆ. ಚಿತ್ರದ ತಮ್ಮ ಬೇರೆ ಬೇರೆ ಅವತಾರಗಳ ಮೂಲಕ ಅವರು ನಗಿಸುತ್ತಾರೆ. ಚಿತ್ರದಲ್ಲಿ ಅವರು ಡ್ಯಾನ್ಸ್ ಕೂಡ ಮಾಡಿದ್ದಾರೆ.

    ಗಮನ ಸೆಳೆಯುವ ನಿರಂಜನ್

    ಗಮನ ಸೆಳೆಯುವ ನಿರಂಜನ್

    ಸಂಚಾರಿ ವಿಜಯ್ ಅವರ ಗೆಳೆಯನಾಗಿ ಕಾಣಿಸಿಕೊಂಡಿರುವ ನಿರಂಜನ್ ದೇಶಪಾಂಡೆ ಇಷ್ಟ ಆಗುತ್ತಾರೆ. ಚಿತ್ರದ ತಮ್ಮ ಪಾತ್ರವನ್ನು ತುಂಬ ಚೆನ್ನಾಗಿ ಅವರು ನಿರ್ವಹಿಸಿದ್ದಾರೆ. ನಾಯಕ ನಟಿ ವೈಷ್ಣವಿ ಗೌಡ ಕೂಡ ಅಭಿನಯದಲ್ಲಿ ಹಿಂದೆ ಬಿದಿಲ್ಲ. ಸಿನಿಮಾದಲ್ಲಿ ಕ್ಯೂಟ್ ಆಗಿ, ಹಾಡುಗಳಲ್ಲಿ ಹಾಟ್ ಅವರು ಗಮನ ಸೆಳೆಯುತ್ತಾರೆ.

    ಮೊದಲು ಕಾಮಿಡಿ, ಕೊನೆಗೆ ಟ್ರಾಜಿಡಿ

    ಮೊದಲು ಕಾಮಿಡಿ, ಕೊನೆಗೆ ಟ್ರಾಜಿಡಿ

    ಕೆಲವು ಡಬ್ಬಲ್ ಮಿನಿಂಗ್ ಡೈಲಾಗ್ ಗಳು ಸಿನಿಮಾದಲ್ಲಿ ಇದೆ. ಆದರೆ, ಸಿನಿಮಾದ ಪೂರ್ಣ ಡಬ್ಬಲ್ ಮಿನಿಂಗ್ ಡೈಲಾಗ್ ಗಳು ತುಂಬಿಕೊಂಡಿಲ್ಲ. ಸಿನಿಮಾದ ಅನೇಕ ಪಾತ್ರಗಳು ನಗಿಸುತ್ತದೆ. ಮೊದ ಮೊದಲು ಕಾಮಿಡಿ ಎನಿಸುವ ಕಥೆ, ಕೊನೆಗೆ ಸೀರಿಯಸ್ ಆಗುತ್ತದೆ.

    ಹಾಡುಗಳು ಇನ್ನು ಚೆನ್ನಾಗಿ ಇರಬೇಕಿತ್ತು

    ಹಾಡುಗಳು ಇನ್ನು ಚೆನ್ನಾಗಿ ಇರಬೇಕಿತ್ತು

    ಸಿನಿಮಾದ ಹಾಡುಗಳು ಅಷ್ಟಕಷ್ಟೆ ಎನ್ನುವಂತೆ ಇವೆ. ಹಾಡುಗಳು ಇನ್ನಷ್ಟು ಚೆನ್ನಾಗಿ ಇದ್ದಿದ್ದರೆ ಸಿನಿಮಾದ ಶಕ್ತಿ ಹೆಚ್ಚಾಗುತ್ತಿತ್ತು. ಇಲ್ಲಿ ಎಣ್ಣೆ ಹಾಡು, ಲವ್ ಸಾಂಗ್ ಎಲ್ಲ ಇವೆ. ಆದರೆ, ಅವು ಪ್ರೇಕ್ಷಕರಿಗೆ ಅಷ್ಟೊಂದು ಹತ್ತಿರ ಆಗುವುದಿಲ್ಲ.

    ಒಮ್ಮೆ ನೋಡಬಹುದು

    ಒಮ್ಮೆ ನೋಡಬಹುದು

    'ಪಾದರಸ' ಸಿನಿಮಾವನ್ನು ಒಮ್ಮೆ ನೋಡಬಹುದು. ಮನರಂಜನೆಗಾಗಿ ಮಾತ್ರ ಸಿನಿಮಾವನ್ನು ನೋಡುವ ಮಂದಿ 'ಪಾದರಸ'ನ ಪರಿಚಯ ಮಾಡಿಕೊಳ್ಳಬಹುದು. ಹಣದ ಹಿಂದೆ ಮನುಷ್ಯ ಓಡಿದರೆ ಆತನಿಗೆ ಏನಾಗುತ್ತದೆ ಎಂಬ ಸಂದೇಶ ಇಲ್ಲಿದೆ.

    English summary
    Actor Sanchari Vijay's Padarasa kannada movie review.
    Friday, August 10, 2018, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X