twitter
    For Quick Alerts
    ALLOW NOTIFICATIONS  
    For Daily Alerts

    'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?

    |

    'ಪೈಲ್ವಾನ್' ಅಖಾಡಕ್ಕೆ ಇಳಿದಿದ್ದಾನೆ. ಕ್ರೀಡಾ ಹಿನ್ನಲೆಯ ಭಾವನಾತ್ಮಕ ಸಿನಿಮಾ ಬಹುಪಾಲು ಜನರಿಗೆ ಇಷ್ಟ ಆಗಿದೆ.

    ನಿನ್ನೆ (ಗುರುವಾರ) ಸಿನಿಮಾ ಬಿಡುಗಡೆ ಆಗಿದ್ದು, ಎಲ್ಲೆಡೆ ಹೌಸ್ ಫುಲ್ ಆಗಿದೆ. ಸುದೀಪ್ ಅಭಿಮಾನಿಗಳ ಮೆಚ್ಚಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಸುದೀಪ್ ಪಾತ್ರ ನಿರ್ವಹಣೆ, ಸಿನಿಮಾದ ಸಂದೇಶ, ಕುಸ್ತಿ ಮತ್ತು ಬಾಕ್ಸಿಂಗ್ ಆಟವನ್ನು ಪರದೆ ಮೇಲೆ ಕಟ್ಟಿಕೊಟ್ಟಿರುವ ರೀತಿ ತುಂಬ ಚೆನ್ನಾಗಿದೆ.

    Pailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾPailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾ

    ಪ್ರೇಕ್ಷಕರನ್ನು ಮಾತ್ರವಲ್ಲದೆ ವಿಮರ್ಶಕರನ್ನು ಕೂಡ ಸಿನಿಮಾ ಗೆದ್ದಿದೆ. ಬಹುಪಾಲು ಎಲ್ಲ ವಿಮರ್ಶಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಅಂದಹಾಗೆ, ಕನ್ನಡ ದಿನ ಪತ್ರಿಕೆಗಳಲ್ಲಿ ಬಂದ ''ಪೈಲ್ವಾನ್' ಸಿನಿಮಾದ ವಿಮರ್ಶೆ ಇಲ್ಲಿದೆ.

    ಕುಸ್ತಿಯ ಅಬ್ಬರ ರಂಜನೆ ಭರಪೂರ : ವಿಜಯವಾಣಿ, 4 ಸ್ಟಾರ್

    ಕುಸ್ತಿಯ ಅಬ್ಬರ ರಂಜನೆ ಭರಪೂರ : ವಿಜಯವಾಣಿ, 4 ಸ್ಟಾರ್

    ''ನವಿರಾದ ಪ್ರೇಮಕಥೆ, ಫ್ಯಾಮಿಲಿ ಸೆಂಟಿಮೆಂಟ್, ಖಳನಾಯಕರ ಕಿರಿಕ್, ಸಮಾಜಕ್ಕೊಂದು ಮೆಸೇಜ್.. ಇವೇ ನಾಲ್ಕು ಅಂಶಗಳನ್ನು ಇಟ್ಟುಕೊಂಡು ಅವುಗಳನ್ನು ಕುಸ್ತಿ ಮತ್ತು ಬಾಕ್ಸಿಂಗ್ ಹಿನ್ನೆಲೆಯಲ್ಲಿ ನಿರೂಪಿಸಿದ್ದಾರೆ ನಿರ್ದೇಶಕ ಕೃಷ್ಣ. ಸುದೀಪ್ ಮೊದಲ ಬಾರಿಗೆ ಕ್ರೀಡಾಧಾರಿತ ಕಥೆ ಆಯ್ದುಕೊಂಡಿದ್ದರಿಂದ ‘ಪೈಲ್ವಾನ್' ಮೇಲೆ ಸಿನಿಪ್ರಿಯರು ನಿರೀಕ್ಷೆ ಇಟ್ಟುಕೊಂಡಿದ್ದರು. ಆ ನಿರೀಕ್ಷೆಯ ಮಟ್ಟ ತಲುಪಲು ಅವರು ಎಷ್ಟು ಶ್ರಮ ಪಟ್ಟಿದ್ದಾರೆ ಎಂಬುದು ಕುಸ್ತಿ ಅಖಾಡ ಮತ್ತು ಬಾಕ್ಸಿಂಗ್ ರಿಂಗ್ ದೃಶ್ಯಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಆಕ್ಷನ್ ಬಯಸುವ ಎಲ್ಲರಿಗೂ ‘ಪೈಲ್ವಾನ್' ಭರಪೂರ ರಂಜಿಸುತ್ತಾನೆ. ಕ್ಲೈಮ್ಯಾಕ್ಸ್​ನಲ್ಲಿ ಬರುವ ಬಾಕ್ಸಿಂಗ್ ಪಂದ್ಯವಂತೂ ನೋಡುಗರಿಗೆ ಸಮರ ಸಂಭ್ರಮ. ರಿಂಗ್​ನಲ್ಲಿ ಸುದೀಪ್ ಮತ್ತು ಕಬೀರ್ ದುಹಾನ್ ಸಿಂಗ್ ಕಾದಾಡುತ್ತಿದ್ದರೆ, ಅದನ್ನು ಪ್ರೇಕ್ಷಕರು ಉಗುರು ಕಚ್ಚುತ್ತ ನೋಡುವಷ್ಟು ರೋಚಕವಾಗಿ ಮೂಡಿಬಂದಿದೆ ಆ ದೃಶ್ಯ.'' - ಮದನ್ ಬೆಂಗಳೂರು

    ದೇಸಿತನ ಮೆರೆದು, ಮೆರೆಸುವ ಅಪ್ಪಟ ಸಿನಿಮಾ: ವಿಜಯ ಕರ್ನಾಟಕ, 4 ಸ್ಟಾರ್

    ದೇಸಿತನ ಮೆರೆದು, ಮೆರೆಸುವ ಅಪ್ಪಟ ಸಿನಿಮಾ: ವಿಜಯ ಕರ್ನಾಟಕ, 4 ಸ್ಟಾರ್

    ''ಕುಸ್ತಿ ದೇಸಿ ಆಟ. ಬಾಕ್ಸಿಂಗ್ ವಿದೇಶಿ ಕ್ರೀಡೆ. ದೇಸಿ ವಿದೇಶಿ ನಡುವಿನ ಬದಲಾವಣೆಯ ಸೂಕ್ಷ್ಮತೆಯನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಸಿನಿಮಾದಲ್ಲಿದೆ. ಸಿನಿಮಾದ ಮೊದಲರ್ಧ ನಾಯಕನ ವೈಭವವನ್ನೇ ಸಾರಿದರೆ ,ಅಸಲಿ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲೊಂದು ಪ್ರೇಮ, ಪುಟ್ಟ ಸಂಸಾರ, ಸರಕಾರ್ ಮತ್ತು ಕಿಚ್ಚನ ನೋವು, ಸರಸ, ವಿರಸ, ಚಾಂಪಿಯನ್ ಆಗುವ ಕನವರಿಕೆ, ಕಷ್ಟ- ಸಂಕಷ್ಟಗಳ ಸರಮಾಲೆಗಳೇ ತುಂಬಿವೆ. ಪೈಲ್ವಾನ್ ಗೆ ಇರಬೇಕಾದ ಗತ್ತು, ಗಾಂಭೀರ್ಯವನ್ನು ಕಿಚ್ಚ ಸುದೀಪ್ ನೋಟದಲ್ಲೇ ಸೆರೆ ಹಿಡಿದಿದ್ದಾರೆ. ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಹಾಡುಗಳ ಹಬ್ಬ ಸಿನಿಮಾದ ಮೆರಗನ್ನು ಮತ್ತಷ್ಟು ಹೆಚ್ಚಿಸಿವೆ. ಸೆಟ್, ಕಾಸ್ಟ್ಯೂಮ್, ಕಲರ್ ಕಾಂಬಿನೇಷನ್ ಇಡೀ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತವೆ.'' - ಶರಣು ಹುಲ್ಲೂರು

    ಆ 'ಸುಲ್ತಾನ್', 'ದಂಗಲ್' ಬೇರೆ, ಈ ಪೈಲ್ವಾನೇ ಬೇರೆಆ 'ಸುಲ್ತಾನ್', 'ದಂಗಲ್' ಬೇರೆ, ಈ ಪೈಲ್ವಾನೇ ಬೇರೆ

    ಅಖಾಡದಲ್ಲಿ ಮಾರಕ, ಸಂಸಾರದಲ್ಲಿ ಭಾವುಕ - ಕನ್ನಡ ಪ್ರಭ, 4 ಸ್ಟಾರ್

    ಅಖಾಡದಲ್ಲಿ ಮಾರಕ, ಸಂಸಾರದಲ್ಲಿ ಭಾವುಕ - ಕನ್ನಡ ಪ್ರಭ, 4 ಸ್ಟಾರ್

    ''ಎರಡು ಆಯಾಮಗಳಲ್ಲಿ ನಿರ್ದೇಶಕ ಕೃಷ್ಣ ಕಥೆ ಹೇಳುವ ಸಾಹಸ ಮಾಡಿದ್ದಾರೆ. ನಿರ್ದೇಶಕರ ಈ ಕನಸಿನ ಕಥೆಗೆ ಸಾಥ್ ಕೊಡಬೇಕಿದ್ದ ಡಿ ಎಸ್ ಕಣ್ಣನ್ ಹಾಗೂ ಜಿವಿ ಮಧುಕಿರಣ್ ಚಿತ್ರಕತೆ ಅಖಾಡದಲ್ಲಿ ಆಗಾಗ್ಗೆ ಸುಸ್ತಾದಂತೆ ಕಾಣುತ್ತದೆ. ಮೊದಲಾರ್ಧ ಉತ್ತರ ಕರ್ನಾಟಕ ಭಾಗದವನ ಕುಸ್ತಿಯದ್ದೇ ಹವಾ. ಹೀಗಾಗಿ ನಾಯಕ ಕೃಷ್ಣ ಅಖಾಡದಲ್ಲಿ ಆಡಿದ್ದೇ ಆಟ. ಹಾಕಿದ್ದೇ ಕುಸ್ತಿ ಪಟ್ಟುಗಳು. ಆರಡಿ ಕಟೌಟು ಸುದೀಪ್ ಜಗ್ಗಿ ಕುಸ್ತಿಗೂ ಇಳಿದರೆ ಹೇಗಿರುತ್ತದೆ ಎಂಬುದನ್ನು ಅದ್ಭುತವಾಗಿ ನಟಿಸಿದ್ದಾರೆ. ಆಕಾಂಕ್ಷ ಸಿಂಗ್ ನಾಯಕನಿಗೆ ತಕ್ಕ ಜೋಡಿ ಎನಿಸುತ್ತದೆ.''- ಆರ್ ಕೇಶವ ಮೂರ್ತಿ

    ಕುಸ್ತಿ ಮತ್ತು ಬಾಕ್ಸಿಂಗ್ ನ ಯಶಸ್ವಿ 'ಲವ್ ಮ್ಯಾರೇಜ್' - ಪ್ರಜಾವಾಣಿ

    ಕುಸ್ತಿ ಮತ್ತು ಬಾಕ್ಸಿಂಗ್ ನ ಯಶಸ್ವಿ 'ಲವ್ ಮ್ಯಾರೇಜ್' - ಪ್ರಜಾವಾಣಿ

    ''ಪೈಲ್ವಾನ್' ಚಿತ್ರ ನೋಡುಗರಿಗೆ ಇಷ್ಟವಾಗುತ್ತದೆ. ಆದರೆ, ಸಿನಿಮಾದ ವ್ಯಾಕರಣಗಳನ್ನು ಹುಡುಕುತ್ತಾ ಹೋದವರಿಗೆ ಎಲ್ಲ ಬಗೆಯ ಸ್ವೀಟ್ ಗಳನ್ನು ಬಳಸಿ ಮಾಡಿದ ಕ್ರಿಸ್ಮಸ್ ಕೇಕ್ ನಂತೆ ಚಿತ್ರ ಗೋಚರಿಸುತ್ತದೆ. ಚಿತ್ರದ ನಿಜವಾದ ಕಥೆ ಪ್ರಾರಂಭ ಆಗುವುದು ಮಧ್ಯಂತರದ ಬಳಿಕ. ಆದರೆ, ಫ್ಲಾಶ್ ಬ್ಯಾಕ್ ಗಳ ಜಾಣತನದ ಹೊಂದಾಣಿಕೆ ಮತ್ತು ಎಡಿಟಿಂಗ್ ಕೌಶಲ್ಯ ಈ ಸಮಾಧಾನವನ್ನು ಮರೆಸುತ್ತದೆ. ಕೊನೆಯ 20 ನಿಮಿಷ ಬಾಕ್ಸಿಂಗ್ ದೃಶ್ಯಗಳ ಸಂಯೋಜನೆ ಇಡೀ ಚಿತ್ರವನ್ನು ಒಂದು ಕೊಲಾಜ್ ಕಲಾಕೃತಿಯಂತೆ ಕಾಣಿಸುತ್ತದೆ.'' - ಬಿ ಎಂ ಹನೀಫ್

    'ಫಿಲ್ಮಿಬೀಟ್ ಕನ್ನಡ'ದ ಲೇಖನಕ್ಕೆ ಸುದೀಪ್ ಅಭಿನಂದನೆ'ಫಿಲ್ಮಿಬೀಟ್ ಕನ್ನಡ'ದ ಲೇಖನಕ್ಕೆ ಸುದೀಪ್ ಅಭಿನಂದನೆ

    Sudeep delivers a knockout punch in this sports drama - The New Indian Eexpress

    Sudeep delivers a knockout punch in this sports drama - The New Indian Eexpress

    ''Powered by quality performances, there is an inspiring message in 'Pailwaan' that nurturing is important for the innumerable talents in India. This message ensures the audience is invested in the subject. The struggle of a wrestler and boxer, inside and outside the ring, forms the base of 'Pailwaan'. Sudeep knocks us clean over with his performance. An incredible amount of dedication by Sudeep is evident as he slips into the 'pailwaan' character.

    Aakanksha Singh, who has two shades in the movie, sparkles as Kichcha's girlfriend, and later a supporting wife. Suniel Shetty, as the adopted father, the mentor who wants Kichcha to become the champion, is a perfect fit and looks composed.'' - A Sharadhaa

    English summary
    Pailwaan Movie Critics Review in Kannada.
    Friday, September 13, 2019, 12:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X