'ಪೈಲ್ವಾನ್' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದೇನು?
Recommended Video
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಂದು ದೇಶ-ವಿದೇಶದಲ್ಲಿ ತೆರೆಗೆ ಬಂದಿದೆ. ಬೆಂಗಳೂರು ಸೇರಿದಂತೆ ಕೆಲವು ಕಡೆ ಬೆಳಗ್ಗೆ 5.30ಕ್ಕೆ ಮೊದಲ ಶೋ ಪ್ರಾರಂಭವಾಗಿದೆ. ಬಾರಿ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಪೈಲ್ವಾನ್ ಕೆಲವು ಪ್ರೇಕ್ಷಕರ ಮನ ಗೆದ್ದರೆ ಇನ್ನು ಕೆಲವರಿಗೆ ನಿರಾಸೆ ಮೂಡಿಸಿದೆ.
ಮೊದಲ ಶೋ ನೋಡಿದ ಚಿತ್ರಾಭಿಮಾನಿಗಳು ಟ್ವಿಟ್ಟರ್ ನಲ್ಲಿಯೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಕ್ಯೂ ನಿಂತು ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು? ಮುಂದೆ ಓದಿ..
ಮೊದಲ ಭಾಗ ಉತ್ತಮವಾಗಿದೆ
"ಚಿತ್ರದ ಮೊದಲ ಭಾಗ ಉತ್ತಮವಾಗಿದೆ. ಸುದೀಪ್ ಮತ್ತು ಆಕಾಂಕ್ಷ ರೋಮ್ಯಾಮ್ಸ್ ದೃಶ್ಯಗಳು ಸುಂದರವಾಗಿವೆ. ಹೀರೋಯಿಸಂ ಅನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸಲಾಗಿದೆ. ಕುಸ್ತಿಯ ಭಾಗಗಳು ಅದ್ಭುತವಾಗಿವೆ"
ನಿರೀಕ್ಷೆ ನಿಜ ಮಾಡಿದೆ
"ಪೈಲ್ವಾನ್ ಮೊದಲ ಭಾಗ ನಿರೀಕ್ಷೆಗಳನ್ನು ನಿಜಮಾಡಿದೆ. ಸುದೀಪ್ ಸರ್ ಅವ್ರ ಲವಲವಿಕೆಯ ಅಭಿನಯ ಚಿತ್ರಮಂದಿರದಲ್ಲಿ ಹುಚ್ಚೆಬ್ಬಿಸಿದೆ"
ಕಿಚ್ಚನ ಮಾಸ್ ಎಂಟ್ರಿ ಸೂಪರ್
"ಚಿತ್ರ ನೋಡುತ್ತಿದ್ರೆ ರೋಮಾಂಚನ ಆಗುತ್ತೆ. ಎರಡನೇ ಭಾಗದಲ್ಲಿ ಕಿಚ್ಚನ ಮಾಸ್ ಎಂಟ್ರಿ ಮತ್ತು ಸುನೀಲ್ ಶೆಟ್ಟಿ ಅದ್ಭುತ. ಬ್ಲಾಕ್ ಬಸ್ಟರ್ ಹಿಟ್ ಖಂಡಿತ"
ನಿರೀಕ್ಷೆ ಇಲ್ಲದೆ ನೋಡಿ
"ಹೆಬ್ಬುಲಿ ಸಿನಿಮಾದ ನಂತರ ನಿರ್ದೇಶಕ ಕೃಷ್ಣ ಮೇಲೆ ಝೀರೋ ನಿರೀಕ್ಷೆ ಇತ್ತು. ಆದ್ರೆ ನನ್ನ ನಿರೀಕ್ಷೆ ಮೀರಿ ಸಿನಿಮಾ ಬಂದಿದೆ. ಯಾವುದೆ ನಿರೀಕ್ಷೆ ಇಲ್ಲದೆ ಸಿನಿಮಾ ನೋಡಿ ಇಷ್ಟವಾಗುತ್ತೆ. ದ್ವಿತಿಯಾರ್ಧ ತುಂಬ ಮಂದಗತಿಯಾಗಿದೆ. ಆದ್ರೆ ಸುದೀಪ್ ವಿನ್ನರ್"


Click it and Unblock the Notifications










