twitter
    For Quick Alerts
    ALLOW NOTIFICATIONS  
    For Daily Alerts

    ಪರದೇಶಿ: ನಾವು ನೀವು ನೋಡಬೇಕಾದ ಚಿತ್ರ

    By Mahesh
    |

    Rating:
    3.5/5
    ನಿರ್ದೇಶಕ ಬಾಲ ಚಿತ್ರಗಳೆಂದರೆ ಹಾಗೆ. ಯಾರು ತುಳಿಯದೆ ಹಾದಿಯಲ್ಲಿ ನಡೆಯುವುದೇ ಬಾಲ ಸ್ಟೈಲ್. ಹೆಚ್ಚು ಕಮರ್ಷಿಯಲ್ ಅಂಶಗಳಿಲ್ಲದಿದ್ದರೂ ಚಿತ್ರರಂಗಕ್ಕೆ ಪ್ರಬುದ್ಧ ಚಿತ್ರಗಳನ್ನು ನೀಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಬಾಲ ಅವರ ಲೇಟೆಸ್ಟ್ ಚಿತ್ರ ಪರದೇಶಿ ಕೂಡಾ ಇದರಿಂದ ಹೊರತಾಗಿಲ್ಲ.

    ಬಾಲ ನಿರ್ದೇಶನದ ಪರದೇಶಿ ಚಿತ್ರದ ನಾಯಕನ ಪಾತ್ರದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಅಥರ್ವ ನಟಿಸಿದ್ದಾರೆ. ಅಪ್ಪ ಮುರಳಿ ಅವರಂತೆ ತಮಿಳು ಚಿತ್ರರಂಗದಲ್ಲಿ ತನ್ನ ವೃತ್ತಿ ಜೀವನ ರೂಪಿಸಿಕೊಳ್ಳಲು ಅಥರ್ವ ಅವರಿಗೆ ಉತ್ತಮ ವೇದಿಕೆ ಸಿಕ್ಕಿದೆ. ಧನ್ಸಿಕಾ ನಾಯಕಿಯಾಗಿದ್ದರೆ, ಜನಪ್ರಿಯ ನಟಿ ವೇದಿಕಾ ಕೂಡಾ ತಾರಾ ಬಳಗದಲ್ಲಿದ್ದಾರೆ. ಹೊಸ ನಾಯಕ, ನಾಯಕಿಯರನ್ನು ಬಳಸಿಕೊಂಡು ಚಾರಿತ್ರಿಕ ಚಿತ್ರ ನಿರ್ದೇಶಿಸಿರುವ ಬಾಲ ಧೈರ್ಯವನ್ನು ಮೆಚ್ಚಲೇಬೇಕು.

    ಬಾಲ ಈ ಬಾರಿ ಆರಿಸಿಕೊಂಡಿರುವ ವಿಷಯ ದಾಸ್ಯ. ಸ್ವಾತಂತ್ರ್ಯ ಪೂರ್ವದ ಭಾರತದಲ್ಲಿನ ದಾಸ್ಯ, ಜೀತ ಪದ್ಧತಿಗಳ ಮೇಲೆ ಬೆಳಕು ಚೆಲ್ಲಲಾಗಿದೆ. 1930 ರ ಸುಮಾರಿಗೆ ನಡೆದಿದೆ ಎನ್ನಲಾದ ನೈಜ ಘಟನೆಗಳನ್ನು ಆಧರಿಸಿದ ಕಥೆಯನ್ನು ಚಿತ್ರಕ್ಕೆ ಅಳವಡಿಸಲಾಗಿದೆ.ಪಾಲ್ ಹ್ಯಾರೀಸ್ ಡೇನಿಯಲ್ ಬರೆದ 'ರೆಡ್ ಟೀ' ಕಥನ ಮುಂದೆ ಇರಿಯುಂ ಪನಿಕಾಡು ಎಂಬ ಹೆಸರಿನಲ್ಲಿ ತಮಿಳಿನಲ್ಲಿ ಪ್ರಕಟವಾಗಿ ಈಗ ಬೆಳ್ಳಿತೆರೆ ಪ್ರವೇಶಿಸಿದೆ.

    ಬ್ರಿಟಿಷ್ ರಾಜ್ ಗೆ ಸೇರಿದ ಮದ್ರಾಸ್ ಪ್ರೆಸಿಡೆನ್ಸಿಯ ಟೀ ಪ್ಲಾಂಟೇಷನ್ ಕೂಲಿ ಕಾರ್ಮಿಕರ ಕಥೆ, ವ್ಯಥೆಯನ್ನು ಚಲನಚಿತ್ರವನ್ನಾಗಿ ಬಾಲ ನೀಡಿದ್ದಾರೆ. ಹೊಸಬರನ್ನು ಹಾಕಿಕೊಂಡು ಮಣಿರತ್ನಂರಂತೆ ಯಾರು ತುಳಿಯದ ಹಾದಿ ಅಥವಾ ಶೈಲಿಯಲ್ಲಿ ಚಿತ್ರ ನೀಡುವ ಬಾಲ ಗೆದ್ದಿದ್ದಾರೆಯೇ? ಅಥರ್ವ ನಟನೆ ಹೇಗಿದೆ? ಎ.ಆರ್ ರೆಹಮಾನ್ ಅಳಿಯ ಜಿವಿ ಪ್ರಕಾಶ್ ಸಂಗೀತ ಚಿತ್ರಕ್ಕೆ ಎಷ್ಟರಮಟ್ಟಿಗೆ ಉಪಯೋಗವಾಗಿದೆ ಮುಂದೆ ಓದಿ..

    ಪರದೇಶಿ

    ಪರದೇಶಿ

    ಬ್ರಿಟಿಷರ ದಬ್ಬಾಳಿಕೆ, ಮಧ್ಯವರ್ತಿಗಳ ನೀಚತನ, ದಿನ ನಿತ್ಯದ ಕೂಲಿಯಿಂದಲೇ ಹೊಟ್ಟೆಹೊರೆಯುವ ಬಡವರ ಮೇಲಿನ ನಿರಂತರ ಶೋಷಣೆ, ಬಂದೇ ಬರುತಾವಾ ಕಾಲ ಎಂದು ಪ್ರತಿಕ್ಷಣ ಅಶಾ ಭಾವನೆಯಿಂದ ಬದುಕುವ ಜನರ ಬಗ್ಗೆ ತಿಳಿದು ಇಂದಿನ ಜನಾಂಗಕ್ಕೆ ಏನಾಗಬೇಕಿದೆ? ಎಂಬ ಪ್ರಶ್ನೆ ಉದ್ದಟತನವಾದರೂ ಇಂಥ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಬಾಲ ಉತ್ತರಿಸಿದ್ದಾರೆ.

    ಭಾರಿ ನಿರೀಕ್ಷೆ ಬೇಡ

    ಭಾರಿ ನಿರೀಕ್ಷೆ ಬೇಡ

    ಸೇತು, ಪಿತಾಮಗನ್, ನಾನ್ ಕಡವುಳ್ ಚಿತ್ರದ ನಿರ್ದೇಶಕನ ಚಿತ್ರ ಎಂಬ ನಿರೀಕ್ಷೆ ಇರುವುದು ಸಹಜ. ಬಾಲ ಅಭಿಮಾನಿ ನೀವಾದರೆ ಇದು ಖಂಡಿತ ಅದ್ಭುತ ಚಿತ್ರದ ಅನುಭವ ಸಿಗುತ್ತದೆ. ಆಡಳಿತಗಾರರು, ಕ್ರೈಸ್ತ ಮಿಷನರಿಗಳ ದಬ್ಬಾಳಿಕೆ, ಬ್ರಿಟಿಷರು, ದಲ್ಲಾಳಿಗಳ ಲಾಲಸೆ ಜೊತೆಗೆ ದಾಸ್ಯದ ಕಹಿ ಅನುಭವವನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಚಿತ್ರಿಸಲಾಗಿದೆ. ಯಾರನ್ನು ಮೆಚ್ಚಿಸುವ ಅಂಶಗಳಿಲ್ಲ. ನೈಜ ಕಥೆ ಚಿತ್ರಣ ಹೇಗೆ ಸಾಧ್ಯ ಎಂಬುದಕ್ಕೆ ಚಿತ್ರ ಮಾದರಿಯಾಗಿದೆ.

    ಕಥೆಯ ವೇಗ ಕಾಡುತ್ತದೆ

    ಕಥೆಯ ವೇಗ ಕಾಡುತ್ತದೆ

    ಹೊಸಬರ ಚಿತ್ರವಾದರೂ ಕಮರ್ಷಿಯಲ್ ಅಂಶಗಳನ್ನು ತುಂಬಲು ಯತ್ನಿಸಿರುವುದು ಕಾಣಿಸುತ್ತದೆ. ಕೆಲವೊಮ್ಮೆ ಚಿತ್ರದಲ್ಲಿನ ಮೌನ ಪ್ರೇಕ್ಷಕರನ್ನು ಕಾಡುತ್ತದೆ, ಸೀಟಿನಿಂದ ಏಳುವಂತೆ ಮಾಡುತ್ತದೆ. ಆದರೆ, ಪಾತ್ರಗಳನ್ನು ಕಟ್ಟಿರುವ ರೀತಿ ಕಥೆಯ ವೇಗಕ್ಕೆ ಅಡ್ಡಿಯಾಗಿಲ್ಲ. ಮೊದಲೇ ಹೇಳಿದಂತೆ ಹೀರೋಯಿಸಂ ಬಾಲ ಚಿತ್ರದಲ್ಲಿ ಶೂನ್ಯವಾಗಿರುವ ಅಂಶ. ಪ್ರೇಕ್ಷಕರ ಮನತಟ್ಟುವ ದೃಶ್ಯಗಳು ಬೋರಿಂಗ್ ಸೀನ್ ಗಳನ್ನು ಮರೆಮಾಚಿಬಿಡುತ್ತೆ

    ನಟನೆಗೆ ಫುಲ್ ಮಾರ್ಕ್ಸ್

    ನಟನೆಗೆ ಫುಲ್ ಮಾರ್ಕ್ಸ್

    ಪ್ರತಿ ನಟನಿಗೆ ಚಾಲೆಂಜ್ ಆಗಬಲ್ಲ, ಡ್ರೀಮ್ ರೋಲ್ ಗಳನ್ನು ಸೃಷ್ಟಿಸುವ ಬಾಲ ಮತ್ತೊಮ್ಮೆ ತಮ್ಮ ಪಾತ್ರಧಾರಿಗಳಿಂದ ಉತ್ತಮ ಕೆಲಸ ತೆಗೆದಿದ್ದಾರೆ. ಅಥರ್ವ, ಧನ್ಸಿಕಾ ಹಾಗೂ ವೇದಿಕಾ ವೃತ್ತಿ ಜೀವನಕ್ಕೆ ತಿರುವು ನೀಡಬಲ್ಲ ಪಾತ್ರಗಳು ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬಿರುವ ಈ ಮೂವರು ಕಥೆಯೊಳಗೆ ಸೇರಿಬಿಟ್ಟಿದ್ದಾರೆ. ಉಮಾ, ಉದಯ್ ಕಾರ್ತಿಕ್ ಸೇರಿದಂತೆ ಯಾವ ಪಾತ್ರವೂ ವೇಸ್ಟ್ ಆಗಿಲ್ಲ

    ಸಂಗೀತ, ಕೆಮರಾ, ಕಲೆ

    ಸಂಗೀತ, ಕೆಮರಾ, ಕಲೆ

    ಜಿವಿ ಪ್ರಕಾಶ್ ಚಿತ್ರಕ್ಕೆ ತಕ್ಕಂತೆ ಸಂಗೀತ ಧಾರೆ ಹರಿಸಿದ್ದಾರೆ. ಐತಿಹಾಸಿಕ ಚಿತ್ರಕ್ಕೆ ಬೇಕಾದ ಹಿನ್ನೆಲೆ ಸಂಗೀತ ಸಿಕ್ಕಿದೆ. 'Seneerthana', ನಟ ಕಮ್ ಗಾಯಕ ಗಂಗೈ ಅಮರನ್ ದನಿಯಲ್ಲಿ ಬಂದ ಉತ್ತಮ ಸಾಹಿತ್ಯವುಳ್ಳ ಗೀತೆ ಮನದಲ್ಲಿ ಉಳಿಯುತ್ತದೆ. ಟೀ ತೋಟದ ಚಿತ್ರಣ, ಕೂಲಿ ಕಾರ್ಮಿಕರ ನಿತ್ಯ ಜೀವನ, ದೊರೆಗಳ ದೊಡ್ಡಾಟ, ಕುತಂತ್ರಿ ದಲ್ಲಾಳಿಗಳ ಆಟ ಎಲ್ಲವೂ ಚೇಳಿಯನ್ ಕೆಮರಾದಲ್ಲಿ ಸಮರ್ಥವಾಗಿ ಮೂಡಿ ಬಂದಿದೆ. ಇದಕ್ಕೆ ಪೂರಕವಾಗಿ ಕಲೆ ವಿಭಾಗ ಕೂಡಾ ಸಹಕಾರ ನೀಡಿದೆ. ಆ ಕಾಲಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ.

    ಕೊನೆ ಮಾತು

    ಕೊನೆ ಮಾತು

    ಬಾಲ ಬತ್ತಳಿಕೆಯಿಂದ ಪ್ರಯೋಗವಾಗಿರುವ ಅತ್ಯುತ್ತಮ ಅಸ್ತ್ರ ಇದಾಗಿದೆ. ಕಮರ್ಷಿಯಲ್ ಅಂಶಗಳಿಲ್ಲ ಎಂಬುದನ್ನು ಮರೆತರೆ ಚಿತ್ರ ನೋಡದೆ ಇರಲು ಕಾರಣಗಳಿಲ್ಲ. ಚಿತ್ರದ ಬಗ್ಗೆ ಅಭ್ಯಸಿಸುವವರಿಗೆ ಸೂಕ್ತವಾದ ಚಿತ್ರ. ಕಮರ್ಷಿಯಲ್ ಆಗಿ ಚಿತ್ರ ಸೋತರೂ ಶ್ರೇಷ್ಠ ಚಿತ್ರವಾಗಿ ಗಟ್ಟಿಯಾಗಿ ನಿಲ್ಲುತ್ತದೆ

    English summary
    Maverick filmmaker and National Award winning director Bala has delivered hit after hit in his 13 years career in Tamil film industry. His ability to churn out good scripts has always ensured him success. Though his movies have off-beat content, it has never failed to keep the cash registers ringing. Now, the filmmaker is back with his latest movie Paradesi.
    Friday, April 26, 2013, 17:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X