ಅಂದು ಅತಿಲೋಕ ಸುಂದರಿಯಾಗಿ ಗೆದ್ದಿದ್ದರು ಶ್ರೀದೇವಿ, ಇಂದು ಪರಮ ಸುಂದರಿಯಾಗಿ ಗೆಲ್ತಾರಾ ಜಾಹ್ನವಿ? ಹೇಗಿದೆ ಸಿನಿಮಾ?

ಒಂದು ಕಾಲದಲ್ಲಿ ಭಾರತೀಯ ಚಿತ್ರರಂಗವನ್ನು ಆವರಿಸಿಕೊಂಡಿದ್ದವರು ಶ್ರೀದೇವಿ. 80-90ರ ದಶಕದಲ್ಲಿ ದಕ್ಷಿಣದಿಂದ ಉತ್ತರದವರೆಗೆ ಮಿಂಚಿದ ಶ್ರೀದೇವಿ ಅಗಲಿ 7 ವರ್ಷಗಳಾಗಿವೆ. ಆದರೂ ಕೂಡ ಇವರ ಅಕಾಲಿನ ನಿಧನಕ್ಕೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಇನ್ನು ಎಲ್ಲ ತಾರೆಯರು ಬಯಸುವಂತೆ ಶ್ರೀದೇವಿ ಕೂಡ ತಮ್ಮ ಮಕ್ಕಳನ್ನು ಬೆಳ್ಳಿ ತೆರೆಯ ಮೇಲೆ ನೋಡುವ ಕನಸನ್ನು ಕಂಡಿದ್ದರು.

ಆದರೆ, ಶ್ರೀದೇವಿಗೆ ಚಿತ್ರರಂಗದಲ್ಲಿ ಮಕ್ಕಳ ಹೆಜ್ಜೆಯನ್ನು ಹತ್ತಿರದಿಂದ ನೋಡುವ ಯೋಗ ಇರಲಿಲ್ಲ. ತನ್ನ ತಾಯಿಯ ಆಸೆಯಂತೆಯೇ ಚಿತ್ರರಂಗಕ್ಕೆ ಬಂದಿರುವ ಜಾಹ್ನವಿ ಕಪೂರ್ ಸದ್ಯ ಒಂದೊಂದೆ ಮೆಟ್ಟಿಲನ್ನೇರುತ್ತಿದ್ದಾರೆ. ಆದರೆ.. ಇವರ ತಾಯಿಗೆ ಸಿಕ್ಕ ಯಶಸ್ಸು.. ಜನಮನ್ನಣೆ ಇವರಿಗೆ ಇನ್ನೂ ಸಿಕ್ಕಿಲ್ಲ.

Param Sundari X Review  Sidharth Malhotra-Janhvi Kapoor s Chemistry Wins Hearts  But Is That Enough

ಆದರೂ ಕೂಡ ಅಮ್ಮ ಹೆಜ್ಜೆಯೂರಿದ ಹಾದಿಯಲ್ಲಿಯೇ ನಡೆಯುತ್ತಾ, ಒಂದು ಕಾಲದಲ್ಲಿ ತನ್ನ ತಾಯಿ ಪ್ರಸಿದ್ಧಿ ಪಡೆದಿದ್ದ ಚಿತ್ರರಂಗದಲ್ಲೇ ತಾನೂ ಮಿಂಚಲು ಪ್ರಯತ್ನವನ್ನು ಮಾಡುತ್ತಿರುವ ಜಾಹ್ನವಿ ಕಪೂರ್ ಈ ವಾರ ''ಪರಮ ಸುಂದರಿ''ಯಾಗಿ ಎಲ್ಲರ ಮುಂದೆ ಬಂದಿದ್ದಾರೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಶ್ರೀದೇವಿಯವರಿಗೆ ''ಜಗದೇಕ ವೀರುಡು ಅತಿಲೋಕ ಸುಂದರಿ'' ಚಿತ್ರ ಅಪಾರ ಯಶಸ್ಸನ್ನು ನೀಡಿತ್ತು. ಅದೇ ಯಶಸ್ಸು ಈ ''ಪರಮ ಸುಂದರಿ''ಗೆ ಸಿಗುತ್ತಾ ? ಚಿತ್ರ ನೋಡಿದವರು ಚಿತ್ರದ ಬಗ್ಗೆ ಹೇಳಿದ್ದೇನು ? ಎಂದು ತಿಳಿಯಲು ಮುಂದೆ ಓದಿ.

ನೋಡಬಹುದಾದ ಸುಂದರಿ

ಮುಂದೇನಾಗುತ್ತೆ ಎಂದು ಊಹಿಸಬಹುದಾದ ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅವರ ಕೆಮೆಸ್ಟ್ರೀ ತುಂಬಾ ಚೆನ್ನಾಗಿದೆ. ಹಾಡುಗಳು ಗುನುಗುವಂತಿವೆ. ಕೇರಳದ ದೃಶ್ಯಗಳನ್ನು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಆದರೆ ಚಿತ್ರದ ಸೆಕೆಂಡ್ ಹಾಫ್ ನ ಅವಧಿ ದೊಡ್ಡದಾಯ್ತು. ಭಾವನಾತ್ಮಕವಾದ ಅಂಶಗಳಿಲ್ಲ.

ಅದ್ಭುತ ಸುಂದರಿ

ಎರಡು ವಿಭಿನ್ನವಾದ ಸಂಸ್ಕ್ರತಿಗಳು ಮತ್ತು ಕೌಟುಂಬಿಕ ಭಾವನೆಗಳು.. ಇವೆರಡನ್ನು ಸುಂದರವಾಗಿ ಬೆರೆಸಲಾದ ಅತ್ಯುತ್ತಮ ರೊಮ್ಯಾಂಟಿಕ್ ಚಿತ್ರ ''ಪರಮ ಸುಂದರಿ''. ಚಿತ್ರದ ಹಾಡುಗಳು ಅದರಲ್ಲಿಯೂ ಸೋನು ನಿಗಮ್ ಕಂಠಸಿರಿಯಲ್ಲಿ ಮೂಡಿ ಬಂದ ಪರ್ದೇಸಿಯಾ ಹಾಡು ಮನಸ್ಸಿಗೆ ಮುದ ನೀಡುತ್ತದೆ. ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅಭಿನಯದ ಸೊಗಸಾಗಿದ್ದು ಇಬ್ಬರ ಕೆಮೆಸ್ಟ್ರೀ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

ಪೈಸಾ ವಸೂಲ್ ಸುಂದರಿ

ಗ್ಲ್ಯಾಮರ್.. ಭಾವನೆ ಮತ್ತು ಮನರಂಜನೆಯ ಪರಿಪೂರ್ಣ ಮಿಶ್ರಣದ ಚಿತ್ರ ''ಪರಮ ಸುಂದರಿ''. ಮೊದಲಾರ್ಧ ಆಕರ್ಷಕವಾಗಿದ್ದಾರೆ ದ್ವೀತಿಯಾರ್ಧ ಕುತೂಹಲಭರಿತವಾಗಿದೆ. ಪ್ರಮುಖ ಪಾತ್ರಧಾರಿಗಳಿಗೆ ತಮ್ಮ ಅಭಿನಯ ಸಾಮರ್ಥ್ಯ ತೋರಿಸುವ ಅವಕಾಶ ಇದೆ. ಪಕ್ಕಾ ಪೈಸಾ ವಸೂಲ್ ಸಿನಿಮಾ.

ಕೇವಲ ಪ್ರೇಕ್ಷಕರು ಮಾತ್ರವಲ್ಲ ವಿಮರ್ಷಕರು ಕೂಡ ಈ ''ಪರಮ ಸುಂದರಿ''ಯನ್ನು ಇಷ್ಟ ಪಟ್ಟಿದ್ದಾರೆ. ಬಾಯ್ತುಂಬ ಹೊಗಳಿದ್ದಾರೆ. ಆ ಪೈಕಿ ಹಿಂದಿಯ ಪ್ರಖ್ಯಾತ ವಿಮರ್ಷಕ ಮತ್ತು ಟ್ರೇಡ್ ವಿಶ್ಲೇಷಕ ತರಣ್ ಆದರ್ಶ ಅವರ ಚಿಕ್ಕದಾದ ವಿಮರ್ಶೆ ಇಲ್ಲಿದೆ.

ಮನರಂಜನೆಯ ರಸದೌತಣ-ತರಣ್ ಆದರ್ಶ್

''ಪರಮ ಸುಂದರಿ'' ಉತ್ತಮ ಮನರಂಜನಾತ್ಮಕವಾದ ಚಿತ್ರ. ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಜಾಹ್ನವಿ ಕಪೂರ್ ಅವರ ಕೆಮೆಸ್ಟ್ರೀ ಮತ್ತು ಸಂಗೀತ ಈ ಚಿತ್ರದ ನಿಜವಾದ ಬೆನ್ನೆಲುಬು. 2 ಸ್ಟೇಟ್ಸ್.. ಚೆನ್ನೈ ಎಕ್ಸ್‌ಫ್ರೆಸ್.. ಅಥವಾ ''ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ'' ಅಂತಹ ಚಿತ್ರಗಳಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅವೆಲ್ಲಾ ಕೇವಲ ಊಹಾಪೋಹಗಳಷ್ಟೇ. ತನ್ನದೇ ಆದ ವಿಶಿಷ್ಟ ಫ್ಲೇವರ್ ಇರುವ ಚಿತ್ರ ಇದು. ರೊಮ್ಯಾನ್ಸ್ ಮತ್ತು ಡ್ರಾಮಾ ಕಥೆಯನ್ನು ನಿರ್ದೇಶಕ ತುಷಾರ್ ಜಲೋಟಾ ಸಮರ್ಥವಾಘಿ ಕಟ್ಟಿಕೊಟ್ಟಿದ್ದಾರೆ. ಆದರೂ ಕೂಡ ಮಧ್ಯಂತರದ ನಂತರ ಭಾಗ ಇನ್ನೂ ಪರಿಣಾಮಕಾರಿಯಾಗಿ ತೆರೆಗೆ ತರಬಹುದಿತ್ತು. ಸಚಿನ್ ಜಿಗರ್ ಅವರ ಸಂಗೀತ ನಿರ್ದೇಶನದಲ್ಲಿ ಪರದೇಸಿಯಾ ಹಾಡು ಈಗಾಗಲೇ ಚಾರ್ಟ್ ಬಸ್ಟರ್ ಆಗಿದೆ. ಈ ಹಾಡನ್ನು ಅಷ್ಟೇ ಸುಂದರವಾಗಿ ತೆರೆಯ ಮೇಲೆ ತರಲಾಗಿದೆ. ಕೇರಳದ ಅದ್ಭುತ ಸ್ಥಳಗಳನ್ನು ಸುಂದರವಾಗಿ ತೋರಿಸಲಾಗಿದ್ದು ಲಪನೆಯಲ್ಲಿ ದೋಣಿ ರೇಸ್ (ವಲ್ಲಮಕಲಿ) ದೃಶ್ಯಗಳು ಕೂಡ ಚೆನ್ನಾಗಿವೆ.

ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ ಪ್ರಭಾವ ಬೀರುತ್ತೆ. ಜಾಹ್ನವಿ ಕಪೂರ್ ತಮ್ಮ ವೃತ್ತಿ ಬದುಕಿನ ಅತ್ಯಂತ ಒಳ್ಳೆಯ ಪಾತ್ರವನ್ನು ಅಷ್ಟೇ ಸೊಗಸಾಗಿ ನಿರ್ವಹಿಸಿದ್ಧಾರೆ. ರೆಂಜಿ ಪಣಿಕರ್, ಸಿದ್ದಾರ್ಥ್ ಶಂಕರ್, ಮಂಜೋತ್ ಸಿಂಗ್, ಸಂಜಯ್ ಕಪೂರ್, ಪೋಷಕ ಪಾತ್ರಗಳಲ್ಲಿ ಅಚ್ಚು ಕಟ್ಟಾಗಿ ಅಭಿನಯಿಸಿದ್ದಾರೆ.
ಬಾಕ್ಸಾಫೀಸ್‌ನಲ್ಲಿ ಉತ್ತಮವಾದ ಪ್ರದರ್ಶನವನ್ನು ಈ ಚಿತ್ರದಿಂದ ನಿರೀಕ್ಷೆ ಮಾಡಬಹುದು.

More from Filmibeat

English summary
Fans are calling Param Sundari a "feel-good entertainer." Discover why audiences love Sidharth Malhotra and Janhvi Kapoor's "stupidly cute" chemistry in the viral Twitter reviews.
Read more about: jhanvi kapoor bollywood sridevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X