twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ದುಷ್ಟರ ಶಿಕ್ಷಕ ಸಮಾಜದ ರಕ್ಷಕ ಈ 'ಅಥರ್ವ'

    By Pavithra
    |

    ಅಥರ್ವ.. ಟೀಸರ್ ನಿಂದಲೇ ಭರವಸೆ ಮೂಡಿಸಿದ್ದ ಸಿನಿಮಾ. ಸರ್ಜಾ ಕುಟುಂದ ಮತ್ತೊಂದು ಕುಡಿ ಈ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ವಿಚಾರ ತಿಳಿದ ನಂತರ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆಗಳು ಹುಟ್ಟುಕೊಂಡಿತ್ತು. ಹಾಗಾದರೆ ಹೇಗಿದೆ 'ಅಥರ್ವ' ಸಿನಿಮಾ ಇಲ್ಲಿದೆ ಸಂಪೂರ್ಣ ವಿಮರ್ಶೆ. ಮುಂದೆ ಓದಿ

    Rating:
    3.0/5

    ಚಿತ್ರ: ಅಥರ್ವ

    ನಿರ್ದೇಶನ: ಅರುಣ್

    ಸಂಗೀತ: ರಾಘವೇಂದ್ರ ವಿ

    ಛಾಯಾಗ್ರಹಣ: ಶಿವಸೀನ

    ತಾರಾಗಣ: ಪವನ್ ತೇಜ, ಸನಂ ಶೆಟ್ಟಿ, ಯಶ್ ಶೆಟ್ಟಿ, ರಂಗಾಯಣ ರಘು, ತಾರ ಇನ್ನು ಮುಂತಾದವರು

    'ಅಥರ್ವ' ಕಥಾಹಂದರ

    'ಅಥರ್ವ' ಕಥಾಹಂದರ

    'ಅಥರ್ವ' ಕಾಲೇಜಿನಲ್ಲಿ ಓದುವ ಒಬ್ಬ ಸಾಮಾನ್ಯ ವಿಧ್ಯಾರ್ಥಿ. ತನಗೆ ಪರಿಚಯವಿರುವವರು ಮಾತ್ರವಲ್ಲದೆ ಸುತ್ತಾ ಮುತ್ತಲಿರುವವರಿಗೆ ತೊಂದರೆ ಆಗುವುದನ್ನು ಸಹಿಸದಂತಹ ಹುಡುಗ. ಹೀಗಿದ್ದ ಹುಡುಗನಿಗೆ ಮೊದಲ ನೋಟದಲ್ಲಿ ನಾಯಕಿ ಮೇಲೆ ಪ್ರೀತಿ ಹುಟ್ಟುತ್ತೆ. ಇಬ್ಬರು ಪ್ರೀತಿಯಲ್ಲಿ ಬೀಳಬೇಕು ಎನ್ನುವಷ್ಟರಲ್ಲಿ ಕಥೆಯಲ್ಲಿ ಟ್ವಿಸ್ಟ್. ಒಳ್ಳೆಯವನಂತೆ ಇರುವ ನಾಯಕನೇ ಖಳನಾಯಕ ಎನ್ನುವ ಅನುಮಾನಗಳು ನಾಯಕಿಯಲ್ಲಿ ಮೂಡುತ್ತೆ. ಅದರ ಜೊತೆಯಲ್ಲಿ ನಾಯಕಿಯ ತಂದೆ ಕೊಲೆ. ಇವೆಲ್ಲವುದಕ್ಕೂ ಉತ್ತರ ಸೆಕೆಂಡ್ ಆಫ್ ನಲ್ಲಿ ಕೊಡುತ್ತಾ ಸಾಗುವ ಕಥೆಯೇ 'ಅಥರ್ವ'.

    'ಅಥರ್ವ' ಸಿನಿಮಾದಲ್ಲಿ ಚೆನ್ನಾಗಿರುವ ಅಂಶ

    'ಅಥರ್ವ' ಸಿನಿಮಾದಲ್ಲಿ ಚೆನ್ನಾಗಿರುವ ಅಂಶ

    ನಿರ್ದೇಶಕ ಅರುಣ್ ಮೊದಲ ಬಾರಿಗೆ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದು ಪ್ರೇಕ್ಷಕರಿಗೆ ತಿಳಿಯುತ್ತೆ. ಸಿನಿಮಾದಲ್ಲಿ ಶಿವಸೀನ ಕ್ಯಾಮೆರಾ ವರ್ಕ್. ವಿಜೇತ್ ಕೃಷ್ಣ ಅವರ ಹಿನ್ನಲೆ ಸಂಗೀತ ನೋಡುಗರಿಗೆ ಮೆಚ್ಚುಗೆ ಆಗುತ್ತೆ.

    ಪವನ್ ತೇಜ ಅಭಿನಯ

    ಪವನ್ ತೇಜ ಅಭಿನಯ

    'ಅಥರ್ವ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ನಾಯಕ ನಟ ಪವನ್ ತೇಜ ಅಭಿನಯ ಚೆನ್ನಾಗಿದೆ. ಅಭಿನಯದ ಬಗ್ಗೆ ಮತ್ತಷ್ಟು ಗಮನ ಹರಿಸಿದರೆ ಚಿತ್ರರಂಗದಲ್ಲಿ ಉತ್ತಮ ನಟನಾಗಿ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಸಾಹಸ ದೃಶ್ಯ ಹಾಗೂ ಹಾಡುಗಳಲ್ಲಿ ಪವನ್ ನೋಡುಗರಿಗೆ ಇಷ್ಟವಾಗುತ್ತಾರೆ.

    ಗಮನ ಸೆಳೆಯವ ಖಳನಾಯಕ

    ಗಮನ ಸೆಳೆಯವ ಖಳನಾಯಕ

    ನಾಯಕನ ಎದುರಿಗೆ ಖಳನಟನಾಗಿ ಅಭಿನಯಿಸಿರುವ ಯಶ್ ಶೆಟ್ಟಿ ತಮ್ಮ ಅಭಿನಯ ಮತ್ತು ಮ್ಯಾನರಿಸಂ ನಿಂದ ಗಮನ ಸೆಳೆಯುತ್ತಾರೆ. ಕ್ಲೈಮ್ಯಾಕ್ಸ್ ಹಂತದ ಸೀನ್ ಗಳಲ್ಲಿ ಯಶ್ ಶೆಟ್ಟಿ ಅಭಿನಯಕ್ಕೆ ಪ್ರೇಕ್ಷಕರಿಂದ ಶಿಳ್ಳೆ ಮೂಲಕ ಫುಲ್ ಮಾರ್ಕ್ ಸಿಗುತ್ತೆ.

    ತಾರಾ ಹಾಗೂ ಸನಂ ಶೆಟ್ಟಿ ಅಭಿನಯ

    ತಾರಾ ಹಾಗೂ ಸನಂ ಶೆಟ್ಟಿ ಅಭಿನಯ

    ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾರಾ ಅಭಿನಯ ಎಂದಿನಂತೆ ಮನ ಮುಟ್ಟುತ್ತದೆ. ಇನ್ನು ನಾಯಕಿ ಪಾತ್ರದಲ್ಲಿ ಮಿಂಚಿರುವ ನಟಿ ಸನಂ ಶೆಟ್ಟಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.

    ಪಕ್ಕಾ ಕಮರ್ಷಿಯಲ್ ಸಿನಿಮಾ

    ಪಕ್ಕಾ ಕಮರ್ಷಿಯಲ್ ಸಿನಿಮಾ

    'ಅಥರ್ವ' ಪಕ್ಕ ಕಮರ್ಷಿಯಲ್ ಚಿತ್ರ. ಮನೋರಂಜನೆಗೆ ಬೇಕಿರುವಂತಹ ಎಲ್ಲಾ ಅಂಶಗಳು ಸಿನಿಮಾದಲ್ಲಿದ್ದು ಮನೋರಂಜನೆ ಬಯಸುವವರು ವಾರಾಂತ್ಯದಲ್ಲಿ ಕುಟುಂಬ ಸಮೇತವಾಗಿ ಹೋಗಿ 'ಅಥರ್ವ' ಚಿತ್ರ ನೋಡಬಹುದು.

    English summary
    Read kannada actor Pavan teja and sanam shetty starrer kannada movie Atharva review
    Tuesday, July 17, 2018, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X