Peddi ‍‍X Review: ಫಸ್ಟ್ ಹಾಫ್ ಸೂಪರ್, ಆದ್ರೆ ಸೆಕೆಂಡ್ ಹಾಫ್? ರಾಮ್‌ಚರಣ್- ಶಿವಣ್ಣ ಜುಗಲ್ಬಂದಿ ಚಿಂದಿ

ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿದೆ. ಒಂದು ದಿನ ಮುನ್ನ ನಡೆದ ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಅಭಿಮಾನಿಗಳು ಎಲ್ಲರಿಗಿಂತ ಮೊದಲು 'ಪೆದ್ದಿ'ರಾಜು ಆರ್ಭಟ ಕಣ್ತುಂಬಿಕೊಂಡು ಖುಷಿಯಾಗಿದ್ದಾರೆ. ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂ ಪೋಸ್ಟ್ ಮಾಡುತ್ತಿದ್ದಾರೆ.

ಬುಚ್ಚಿಬಾಬು ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ 'ಪೆದ್ದಿ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಲ್ಲೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಈ ವರ್ಷದ ತೆಲುಗಿನ ಅತಿದೊಡ್ಡ ಸಿನಿಮಾ ಇದು. ಕನ್ನಡಕ್ಕೂ ಡಬ್ ಆಗಿ ತೆರೆಗೆ ಬಂದಿದೆ. ಸಿನಿಮಾ ನೋಡಿದವರೆಲ್ಲಾ ರಾಮ್‌ಚರಣ್ ಪರ್ಫಾರ್ಮನ್ಸ್ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಅತಿಥಿ ಪಾತ್ರದಲ್ಲಿ ಶಿವಣ್ಣನ ನಟನೆಗೂ ಬಹುಪರಾಕ್ ಎನ್ನುತ್ತಿದ್ದಾರೆ.

Peddi X Review in kannada  Ramcharan s sports drama Earns Love And Praise

ಒಂದೊಳ್ಳೆ ಎಂಟರ್‌ಟೈನರ್

'ಪೆದ್ದಿ' ನೋಡಬಹುದಾದ ಕಮರ್ಷಿಯಲ್ ಎಂಟರ್‌ಟೈನರ್. ಒಳ್ಳೆ ಕಥೆ, ಸೀದಾಸಾದಾ ಟೆಂಪ್ಲೇಟ್ ಅನಿಸಿದರೂ ವರ್ಕ್ ಆಗಿದೆ. ಮೊದಲಾರ್ಧ ಆವರೇಜ್, ಜಾನ್ವಿ ಲವ್ ಟ್ರ್ಯಾಕ್ ವರ್ಕ್ ಆಗಲ್ಲ. ಪ್ರೀ ಇಂಟರ್‌ವಲ್ ಬ್ಲಾಕ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಸೊಗಸಾಗಿದೆ. ರಾಮ್‌ಚರಣ್‌ ನಟನೆ ಅದ್ಭುತ, ಅವರು ಪಾತ್ರಕ್ಕಾಗಿ ರೂಪಾಂತರಗೊಂಡಿರುವುದು ಗೊತ್ತಾಗುತ್ತದೆ. ರಹಮಾನ್ ಸಂಗೀತ ಚೆನ್ನಾಗಿದೆ. ಬುಚ್ಚಿಬಾಬು ಪ್ರಾಮಾಣಿಕ ಕಥೆ ಪ್ರಸ್ತುತಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕ್ರೀನ್‌ಪ್ಲೇ, ಎಡಿಟಿಂಗ್ ಇನ್ನು ಚೆನ್ನಾಗಿ ಮಾಡಬಹುದಿತ್ತು. ಸಣ್ಣ ಪುಟ್ಟ ತಪ್ಪುಗಳ ಹೊರತಾಗಿ ರಾಮ್‌ಚರಣ್ ನಟನೆ, ಸಂಗೀತಕ್ಕಾಗಿ ಸಿನಿಮಾ ವೀಕ್ಷಿಸಬಹುದು ಎಂದು Venky Reviews ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಒಳ್ಳೆ ಅನುಭವ ನೀಡುವ ಸಿನಿಮಾ

ಫಸ್ಟ್ ಹಾಫ್ ಚೆನ್ನಾಗಿದೆ. ಪ್ರೀ ಇಂಟರ್‌ವಲ್ ಹಾಗೂ ಇಂಟರ್‌ವಲ್ ಬ್ಲಾಕ್ ಚಿಂದಿ. ಸೆಕೆಂಡ್ ಹಾಫ್ ಕೊಂಚ ಡ್ರಾಮೆಟಿಕ್ ಆಗಿದ್ದರೂ ಎಮೋಷನ್ ಕನೆಕ್ಟ್ ಆಗುತ್ತೆ. ಪೆದ್ದಿ ಪಾತ್ರದಲ್ಲಿ ರಾಮ್‌ಚರಣ್ ಸೂಪರ್. ಒಟ್ಟಾರೆ ಅಭಿಮಾನಿಗಳು ಹಾಗೂ ಸಾಮಾನ್ಯ ಪ್ರೇಕ್ಷಕರಿಗೆ ಒಳ್ಳೆ ಅನುಭವ ನೀಡುವ ಸಿನಿಮಾ ಎಂದು AG Tiger ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಮ್‌ಚರಣ್ ನಟನೆ ನೋಡುವುದೇ ಚೆಂದ

Gulte.com ವೆಬ್‌ಸೈಟ್ ಟ್ವಿಟ್ಟರ್ ಪೇಜ್‌ನಲ್ಲೂ ರಿವ್ಯೂ ಹಾಕಿದ್ದಾರೆ. 'ಪೆದ್ದಿ' ಪ್ರಾಮಾಣಿಕ, ಭಾವನಾತ್ಮಕ ಮತ್ತು ನಮ್ಮತನ ಇರುವ ಡ್ರಾಮಾ. ಫಸ್ಟ್‌ ಹಾಫ್ ಚೆನ್ನಾಗಿದೆ. ಸೆಕೆಂಡ್ ಹಾಫ್‌ನಲ್ಲಿ ಸಾಕಷ್ಟು ವಿಷಯವಿದೆ. ಭಾವನಾತ್ಮಕವಾಗಿ ಸೊಗಸಾಗಿದೆ. ಇಂಟರ್‌ವಲ್ ಬಳಿಕ ಜಬರ್ದಸ್ತ್ ಕುಸ್ತಿ ಎಪಿಸೋಡ್, ಮಸ್ಸಾ ಮಸ್ಸಾ ಸಾಂಗ್ ಮೂಲಕ ಶುರುವಾಗುತ್ತದೆ. ಬಳಿಕ ಕೊಂಚ ತಗ್ಗಿದ್ರು, ರಾಷ್ಟ್ರೀಯ ಕುಸ್ತಿ ಪಂದ್ಯಗಳ ಸನ್ನಿವೇಶ ಚಿತ್ರವನ್ನು ಮೇಲೆತ್ತುತ್ತದೆ. ಸ್ಪೆಷಲ್ ಸಾಂಗ್ ಅಡಚಣೆ ಅನ್ನಿಸುತ್ತೆ. ರಾಮ್‌ಚರಣ್ ನಟನೆ ನೋಡುವುದೇ ಚೆಂದ. ಪ್ರೀ ಕ್ಲೈಮ್ಯಾಕ್ಸ್ ಮಜಾವಾಗಿದೆ. ಕ್ಲೈಮ್ಯಾಕ್ಸ್ ಕೂಡ ಕಿಕ್ ಕೊಡುವಂತಿದೆ. ಒಳ್ಳೆ ಕಾನ್ಸೆಪ್ಟ್ ಅನ್ನು ತೆರೆಗೆ ತಂದಿದ್ದಕ್ಕೆ ಬುಚ್ಚಿಬಾಬು, ರಾಮ್‌ಚರಣ್‌ಗೆ ಗೌರವ ಸಲ್ಲಬೇಕು.

ಕೊನೆ 45 ನಿಮಿಷ ಸೂಪರ್

ಫಸ್ಟ್‌ ಹಾಫ್ ಸೂಪರ್‌.. ಸೆಕೆಂಡ್ ಹಾಫ್ ಅಮೋಘ. ಕ್ರೀಡಾ ಫ್ರೇಮ್ ಅದ್ಭುತವಾಗಿದೆ. ರಾಮ್‌ಚರಣ್ ಇಡೀ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಎ. ಆರ್ ರಹಮಾನ್ ಸಂಗೀತ ಚಿತ್ರದ ಆತ್ಮ. ಜಾನ್ವಿಕಪೂರ್ ಈ ಪಾತ್ರಕ್ಕೆ ಸೂಕ್ತವಲ್ಲ. ನಿರ್ದೇಶಕರು ಕೊನೆಯ 45 ನಿಮಿಷ ಸಿನಿಮಾ ಕಟ್ಟಿಕೊಟ್ಟಿರುವ ರೀತಿ ಅಂತೂ ಸಂಪೂರ್ಣ ಅದ್ಭುತ ಎಂದು Top Cinema ಟ್ವಿಟ್ಟರ್ ಖಾತೆಯಲ್ಲಿ ಬರೆಯಲಾಗಿದೆ.

ಶಿವಣ್ಣನ ಪಾತ್ರಕ್ಕೆ ಮಹತ್ವ

ಎಲ್ಲಾ ಕಮರ್ಷಿಯಲ್ ಅಂಶಗಳು ಇರುವ ಕಂಪ್ಲಿಟ್ ಪ್ಯಾಕೇಜ್ 'ಪೆದ್ದಿ'. ಇಡೀ ಸಿನಿಮಾ ಅದ್ಭುತವಾಗಿದ್ದು ಭಾವನಾತ್ಮಕ ಸನ್ನಿವೇಶಗಳು ಇಷ್ಟವಾಗುತ್ತದೆ. ಪರ್ಫಾರ್ಮರ್ ಆಗಿ ರಾಮ್‌ಚರಣ್ ಗೆದ್ದಿದ್ದಾರೆ. ರಹಮಾನ್ ಸಂಗೀತ ಸೂಕ್ತವಾಗಿದೆ. ರಾಮ್‌ಚರಣ್ ಬಿಟ್ಟರೆ ಕಡಿಮೆ ಸನ್ನಿವೇಶಗಳಿದ್ದರೂ ಶಿವಣ್ಣನ ಪಾತ್ರಕ್ಕೆ ಮಹತ್ವ ಇದೆ. ಸಣ್ಣಪುಟ್ಟ ತಪ್ಪುಗಳಿಗೆ. ಒಂದಷ್ಟು ಸನ್ನಿವೇಶಗಳಿಗೆ ಕತ್ತರಿ ಹಾಕಬಹುದು. ಕೊನೆ 30 ನಿಮಿಷ ಸಿನಿಮಾ ಕನೆಕ್ಟ್ ಆಗುತ್ತದೆ. ಒಟ್ಟಾರೆ ಒಳ್ಳೆ ಕಮರ್ಷಿಯಲ್ ಸಿನಿಮಾ. ಕಂಡಿತ ನೋಡಬಹುದು ಎಂದು ಅಮುತಾ ಭಾರತಿ ಎಂಬುವವರು ಟ್ವೀಟ್ ಮಾಡಿದ್ದಾರೆ.

Read more about: ramcharan shivarajkumar tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X