Pepe Twitter Review ; ಏನ್ ಸೈಕ್ ಮೂವಿ ಗುರು, ಇಂಟರ್‌ ವಲ್ ಸೀನ್ ಮಾತ್ರ ಬೆಂಕಿ..!

ಮೊದಲಿಂದ ತಾವೊಬ್ಬ ಕ್ಲಾಸ್ ಆಕ್ಟರ್ ಎನ್ನುವುದನ್ನು ರುಜುವಾತು ಮಾಡುತ್ತಾ ಬಂದವರು ವಿನಯ್ ರಾಜ್ ಕುಮಾರ್. ನಿಜಾ, ವಿನಯ್ ಅಭಿನಯದ ಮೊದಲ ಸಿನಿಮಾ ಸಿದ್ಧಾರ್ಥ ಆ ನಂತರ ಬಂದ ರನ್ ಆಂಟನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಟೆನ್ ವಿನಯ್‌ಗೆ ಬೇಕಿದ್ದ ಗೆಲುವುನ್ನು ತಂದು ಕೊಡಲಿಲ್ಲ. ಆದರೆ, ಈ ಚಿತ್ರಗಳ ಮೂಲಕ ವಿನಯ್ ರಾಜ್ ಕುಮಾರ್ ಅವರಲ್ಲೊಬ್ಬ ಕಲಾವಿದ ಇದ್ಧಾನೆ ಎನ್ನುವುದು ಬೆಳಕಿಗೆ ಬಂದಿತ್ತು. ಎಲ್ಲರಂತೆ ವಿನಯ್ ರಾಜ್ ಕುಮಾರ್ ಕಮರ್ಷಿಯಲ್ ಸಿದ್ಧ ಸೂತ್ರಕ್ಕೆ ಜೋತು ಬೀಳುವವರಲ್ಲ ಎಂಬ ವಿಚಾರ ಕೂಡ ಗೊತ್ತಾಗಿತ್ತು.

ಮುಂದುವರೆದು ಅನಂತು ವರ್ಸಸ್ ನುಸ್ರತ್, ಒಂದು ಸರಳ ಪ್ರೇಮ ಕಥೆ ಅಂತಹ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳಿಯುವುದಲ್ಲದೇ ತಮ್ಮ ಅಭಿನಯದಿಂದ ಅನೇಕರ ಹೃದಯವನ್ನು ಗೆದ್ದ ವಿನಯ್ ರಾಜ್ ಕುಮಾರ್ ಇವತ್ತು ಪೆಪೆ ಮೂಲಕ ಮತ್ತೊಮ್ಮೆ ಎಲ್ಲರನ್ನು ಬೆಕ್ಕಸ ಬೆರಗಾಗಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳೇ ಸಾಕ್ಷಿ.

Pepe Twitter Review  Here   s what netizens are saying about Vinay Rajkumar s much-anticipated film

ಹೌದು, ಟೈಟಲ್, ಪೋಸ್ಟರ್ ಮತ್ತು ಟೀಸರ್‌ ಮೂಲಕವೇ ಸದ್ದು ಮಾಡಿದ್ದ 'ಪೆಪೆ'ಯನ್ನು ಬೆಳ್ಳಿ ಪರದೆಯ ಮೇಲೆ ಇಂದು ಕಣ್ತುಂಬಿಕೊಂಡ ಅನೇಕರು, ವಿನಯ್ ರಾಜ್ ಕುಮಾರ್ ಅವರ ಶ್ರದ್ಧೆ- ಭಕ್ತಿಯನ್ನು ಮೆಚ್ಚಿಕೊಂಡಿದ್ದಾರೆ. ವಿನಯ್ ರಾಜ್ ಕುಮಾರ್ ಆಯ್ಕೆ ಮಾಡಿಕೊಳ್ಳುವ ಕಥೆಗಳು ನಿಜಕ್ಕೂ ಚೆಂದ ಎಂದು ಮೆಚ್ಚಿಕೊಂಡಿದ್ದಾರೆ. ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಅವರನ್ನು ಕೂಡ ಅನೇಕರು ಕೊಂಡಾಡಿದ್ದಾರೆ.

ಫಸ್ಟ್ ಹಾಫ್ ಬೆಂಕಿ

ಪೆಪೆ ಚಿತ್ರವನ್ನು ಮೊದಲ ದಿನದ ಮೊದಲ ಶೋನಲ್ಲಿ ನೋಡಿದ ಅಭಿಮಾನಿಯೊಬ್ಬರು, ಚಿತ್ರದ ಮೊದಲಾರ್ಧ ಮಾತ್ರ ಬೆಂಕಿ ಎಂದಿದ್ದಾರೆ. ಪೂರ್ಣ ಚಂದ್ರ ತೇಜಸ್ವೀ ಅವರ ಹಿನ್ನೆಲೆ ಸಂಗೀತ ಮತ್ತು ವಿನಯ್ ರಾಜ್ ಕುಮಾರ್ ಅವರ ಮಾಸ್ ಅವತಾರವನ್ನು ಮೆಚ್ಚಿಕೊಂಡಿದ್ಧಾರೆ. ನಿರ್ದೇಶಕ ಶ್ರೀಲೇಶ್ ಎಸ್ ನಾಯರ್ ಅವರ ಚಿತ್ರಕಥೆ ಯಾವ ಇಂಗ್ಲೀಷ್ ಚಿತ್ರಕ್ಕಿಂತ ಕಡಿಮೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿನಯ್ ಅಭಿನಯಕ್ಕೆ ಮನ ಸೋತ ಪ್ರೇಕ್ಷಕರು

ಇನ್ನೂ ವಿನಯ್ ರಾಜ್ ಕುಮಾರ್ ಅವರ ಸೂಕ್ಷ್ಮವಾದ ನಟನೆ ಎಲ್ಲರ ಚಿತ್ತ ಕದಿಯುತ್ತೆ ಎಂದಿರುವ ಇನ್ನೊಬ್ಬರು, ಪ್ರತಿ ಪಾತ್ರಧಾರಿಗಳಿಗೆ ನೀಡಿರುವ ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ ಎಂದಿದ್ದಾರೆ. ಅಭಿಷೇಕ್ ಜಿ ಕಾಸರ್‌ಗೋಡ್ ಅವರ ಛಾಯಾಗ್ರಹಣ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

ಪೆಪೆ ಚಿತ್ರದ ಪ್ಲಸ್ ಪಾಯಂಟ್ಸ್

ಚಿತ್ರದ ಎಳೆ, ಚಿತ್ರದಲ್ಲಿನ ಪಾತ್ರಗಳನ್ನು ಹೆಣೆದ ರೀತಿ, ಚಿತ್ರದ ಕೆಲ ಸಾಹಸ ದೃಶ್ಯಗಳು, ಚಿತ್ರದ ಮಧ್ಯಂತರ, ಚಿತ್ರದ ಹಿನ್ನೆಲೆ ಸಂಗೀತ ಪೆಪೆಯ ಪ್ಲಸ್ ಪಾಯಿಂಟ್‌ಗಳು ಎಂದಿರುವ ಇನ್ನೊಬ್ಬರು ಚಿತ್ರಕಥೆ ವಿಚಾರದಲ್ಲಿ ಎಡವಿದ್ದಾರೆ ಎಂದಿದ್ದಾರೆ. ಚಿತ್ರದಲ್ಲಿ ಹಾಡುಗಳು ಇರಬೇಕಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕಲ್ಟ್ ಕ್ಲಾಸಿಕ್ ಸಿನಿಮಾ

ಮತ್ತೂ ಒಬ್ಬರು ಪೆಪೆ ಚಿತ್ರ ಕಲ್ಟ್ ಕ್ಲಾಸಿಕ್ ಸಿನಿಮಾ ಎಂದು ಹೊಗಳಿದ್ದಾರೆ. ಪ್ರಮುಖ ನಾಯಕರಿಗಿಂತ ವಿನಯ್ ರಾಜ್ ಕುಮಾರ್ ಮಾಡಿಕೊಳ್ಳುವ ಕಥೆಯ ಆಯ್ಕೆ ತುಂಬಾ ಚೆನ್ನಾಗಿದೆ ಎಂದಿರುವ ಇವರು ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರ ನಟನೆ ಮತ್ತು ಕಥೆಗೆ ಫುಲ್ ಮಾರ್ಕ್ಸ್ ಕೊಟ್ಟಿದ್ಧಾರೆ. ಸೈಕ್ ಮೂವಿ ಅಂದಿದ್ದಾರೆ

ಹೀಗೆ ವಿನಯ್ ರಾಜ್ ಕುಮಾರ್ ಅವರ ಈ ಹೊಸ ಪ್ರಯತ್ನವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ವಿನಯ್ ರಾಜ್ ಕುಮಾರ್ ಸೇರಿ ಇಡೀ ತಂಡಕ್ಕೆ ಜೈಕಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದಾರೆ. ಇದೆಲ್ಲದರ ಪ್ರತಿಫಲವೆಂಬಂತೆ #PepeTheFilm ಹ್ಯಾಶ್ ಟ್ಯಾಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X