De De Pyaar De 2 (Twitter) X Review ; ಅಜಯ್ ದೇವಗನ್-ಮಾಧವನ್, ಮಾವ-ಅಳಿಯ ; ಹೇಗಿದೆ ದೇ ದೇ ಪ್ಯಾರ್ ದೇ 2..?
ಆಗಷ್ಟೇ ಬಣ್ಣದ ಲೋಕದಲ್ಲಿ ವಿಶಿಷ್ಟವೆನಿಸೋ ಸಾಹಸ ದೃಶ್ಯಗಳನ್ನ ಸೆರೆ ಹಿಡಿಯುವ ಪ್ರಯತ್ನ ಬಾಲಿವುಡ್ ನಲ್ಲಿ ನಡೆಯುತ್ತಿತ್ತು. ಮಾಮೂಲಿಯಲ್ಲದ ಸ್ಟಂಟ್ ಗಳ ಸೀಕ್ವೆನ್ಸ್‌ಗಳು ಹಲವು ನಾಯಕರ ನಿದ್ದೆಯನ್ನೂ ಕೆಡಿಸಿದ್ದವು. ಇದೇ ಸಮಯದಲ್ಲಿ ಹಿಂದಿ ಚಿತ್ರರಂಗದಲ್ಲಿ ಒಬ್ಬ ಜಗತ್ ಕಿಲಾಡಿಯ ಉದಯವಾಯ್ತು. ಅವರೇ ಅಜಯ್ ದೇವಗನ್. ಹೌದು. ''ಫೂಲ್ ಔರ್ ಕಾಂಟೆ'' .. ಅಜಯ್ ದೇವಗನ್ ಅಭಿನಯದ ಚೊಚ್ಚಲ ಸಿನಿಮಾ.
ಮೊದಲ ಚಿತ್ರದಲ್ಲಿಯೇ ಮೈ ಜುಮ್ಮೆನ್ನಿಸೋ ಸಾಹಸಗಳನ್ನ ಸಿಲ್ವರ್ ಸ್ಕ್ರೀನ್ ಮೇಲೆ ಪರ್ಫಾಮ್ ಮಾಡಿದ ಅಜಯ್, ದಿನ ಕಳೆಯೋದ್ರೊಳಗೆ ಬಿಟೌನಿನ ಹೊಸ ಆಕ್ಷನ್ ಸ್ಟಾರ್ ಆದರು. ಇಂಥಾ ಅಜಯ್ ದೇವಗನ್ ''ಇಷ್ಕ್''.. ''ಮಸ್ತಿ''.. ''ಗೋಲ್‌ಮಾಲ್'' ಸರಣಿಗಳ ಮೂಲಕ ತಾವು ಕೇವಲ ಆಕ್ಷನ್ ಸ್ಟಾರ್ ಮಾತ್ರವಲ್ಲ. ತಮ್ಮಲ್ಲಿ ಒಬ್ಬ ಕಾಮಿಡಿಯನ್ ಕೂಡ ಇದ್ದಾನೆ ಎನ್ನುವುದನ್ನು ಸಾಬೀತು ಮಾಡಿದರು. ತಮ್ಮ ಹಾಸ್ಯ ಪ್ರಜ್ಞೆಯಿಂದ ಜನ ಮನ ಗೆದ್ದರು.

ಆ ಪೈಕಿ ''ದೇ ದೇ ಪ್ಯಾರ್ ದೇ'' ಚಿತ್ರ ಕೂಡ ಒಂದು. ಸದ್ಯ ಈ ಚಿತ್ರದ ಎರಡನೇ ಭಾಗ ಅಂದರೆ ಸಿಕ್ವೆಲ್ ತೆರೆಗೆ ಬಂದಿದೆ. ಹಾಗಿದ್ದರೆ ಹೇಗಿದೆ ಸಿನಿಮಾ..? ಆರ್.ಮಾಧವನ್, ರಕುಲ್ ಪ್ರೀತ್ ಸಿಂಗ್, ಗೌತಮಿ ಕಪೂರ್ ಜೊತೆ ಸೇರಿ ಮ್ಯಾಜಿಕ್ ಮಾಡ್ತಾರಾ..? ಮಾವ ಮತ್ತು ಅಳಿಯನಾಗಿ ಕಾಣಿಸಿಕೊಂಡಿರುವ ಅಜಯ್ ದೇವಗನ್ ಮತ್ತು ಮಾಧವನ್ ಅಭಿನಯ ಹೇಗಿದೆ..? ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಬ್ಲಾಕ್ ಬಸ್ಟರ್
ದೇ ದೇ ಪ್ಯಾರ್ ದೇ 2 ತುಂಬಾ ಚೆನ್ನಾಗಿದೆ. ಸಖತ್ ಇಷ್ಟ ಆಯ್ತು. ಇಂತಹ ಒಂದೊಳ್ಳೆಯ ಚಿತ್ರ ನೀಡಿದ್ದಕ್ಕೆ ಅಜಯ್ ದೇವಗನ್ ನಿಮಗೆ ಧನ್ಯವಾದಗಳು ಎಂದು ಹೇಳಿರುವ ಚಿತ್ರ ಪ್ರೇಮಿಯೊಬ್ಬರು ಚಿತ್ರಕ್ಕೆ ನಾಲ್ಕು ಸ್ಟಾರ್‌ಗಳನ್ನು ನೀಡಿದ್ದಾರೆ.
ಮನರಂಜನಾತ್ಮಕ ಚಿತ್ರ
ಮನರಂಜನಾತ್ಮಕ ಚಿತ್ರ. ಆಶಿಶ್ ಮತ್ತು ಆಯೇಷಾ ಪ್ರೀತಿಗೆ ವಯಸ್ಸಿನ ಅಂತರವೇ ಅಡ್ಡಿ. ಪ್ರೀತಿಗೆ ಅಪ್ಪನಿಂದ ಅಡೆತಡೆ. ಮಾಧವನ್ ಮತ್ತು ಗೌತಮಿ ಕಪೂರ್ ಅವರ ಅಭಿನಯ ಅದ್ಭುತ ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ ⭐️⭐️⭐️1/2 ಸ್ಟಾರ್‌ಗಳನ್ನು ನೀಡಿದ್ದಾರೆ. ಟೈಮ್ ಪಾಸ್‌ಗೆ ಒಳ್ಳೆಯ ಚಿತ್ರ. ಬಾಕ್ಸಾಫೀಸ್‌ನಲ್ಲಿ ಗೆಲ್ಲುವ ಎಲ್ಲ ಅಂಶಗಳು ಈ ಚಿತ್ರದಲ್ಲಿವೆ ಎಂದಿದ್ದಾರೆ.
ರೋಲರ್ ಕೋಸ್ಟರ್
ದೇ ದೇ ಪ್ಯಾರ್ ದೇ 2 ಒಂದು ಕಾಮಿಡಿ ರೋಲರ್ ಕೋಸ್ಟರ್ ಸವಾರಿ. ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಇಬ್ಬರು ಸಲೀಸಾಗಿ ಅಭಿನಯಿಸಿದ್ದಾರೆ. ಆದರೆ ಆರ್ ಮಾಧವನ್ ಈ ಚಿತ್ರದ ಶೋ ಸ್ಟಾಪರ್.
ನಿರ್ದೇಶಕ ಅನ್ಶುಲ್ ಶರ್ಮಾ ಎಲ್ಲಿಯೂ ಇದು ಬಲವಂತದಿಂದ ಮಾಡಲಾದ ಸಿಕ್ವೆಲ್ ಎಂಬ ಭಾವನೆ ಬರದಂತೆ ನೋಡಿಕೊಂಡಿದ್ದಾರೆ. ಲವ್ ರಂಜನ್ ಮತ್ತು ತರುಣ್ ಜೈನ್ ಅವರ ಬರವಣಿಗೆ ಸೊಗಸಾಗಿದೆ. ಹಾಸ್ಯದ ಜೊತೆ ಇಲ್ಲಿ ಭಾವನಾತ್ಮಕ ಅಂಶಗಳು ಕೂಡ ಇವೆ. ಅಜಯ್ ದೇವಗನ್ ಮತ್ತು ಮಾಧವನ್ ಮುಖಾಮುಖಿಯಾದಾಗ ಚಿತ್ರಮಂದಿರದಲ್ಲಿ ಉತ್ಸಾಹದ ಅಲೆ ಎದ್ದೇಳುತ್ತೆ. ಬೆಳ್ಳಿಪರದೆಯ ಇನ್ನೂ ಬೆಳಗುತ್ತೆ. ಜಾವೇದ್ ಜಾಫ್ರಿಯವರ ಓನ್ ಲೈನ್ ಸಂಭಾಷಣೆಗಳು ಚೆನ್ನಾಗಿವೆ. ಮಿಜಾನ್ ಜಾಫ್ರಿ ತಮ್ಮ ಅಭಿನಯದಿಂದ ಎಲ್ಲರನ್ನು ಅಚ್ಚರಿಗೆ ದೂಡುತ್ತಾರೆ ಎಂದು ಹೇಳಿರುವ ಮತ್ತೊಬ್ಬರು ಚಿತ್ರಕ್ಕೆ ⭐⭐⭐⭐ ಸ್ಟಾರ್‌ಗಳನ್ನು ನೀಡಿದ್ದಾರೆ.
ಚೆನ್ನಾಗಿದೆ
ಆಶ್ಚರ್ಯಕರವಾಗಿ ದೇ ದೇ ಪ್ಯಾರ್ ದೇ 2 ಮನರಂಜನಾತ್ಮಕವಾಗಿದೆ. ಅಜಯ್ ದೇವಗನ್ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾರೆ. ಆರ್ ಮಾಧವನ್ ಅವರಿಗೆ 200 ವರ್ಷವಾದರೂ ಖೂಡ ಅವರ ಚಾರ್ಮ್ ಕಡಿಮೆಯಾಗಲ್ಲ. ರಕುಲ್ ಪ್ರೀತ್ ಉತ್ತಮವಾಗಿ ಅಭಿನಯಿಸಿದ್ದಾರೆ.
ಇನ್ನು ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ವಿಮರ್ಷಕರಿಗೆ ಕೂಡ ಈ ಚಿತ್ರ ಇಷ್ಟವಾಗಿದೆ. ದಕ್ಷಿಣದ ಪ್ರಸಿದ್ದ ವಿಮರ್ಷಕ ರಮೇಶ್ ಬಾಲಾ.. ಉತ್ತರದಲ್ಲಿರುವ ರೋಹಿತ್ ಜೈಸ್ವಾಲ್.. ಸೇರಿ ಹಲವರು ದೇ ದೇ ಪ್ಯಾರ್ ದೇ 2 ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.


Click it and Unblock the Notifications











