ಫ್ಯಾಂಟಮ್ ವಿಮರ್ಶೆ: ಥ್ರಿಲ್ ಇದ್ದರೂ ಬೋರ್ ಬೋರ್

By Mahesh

ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ 'ಭಜರಂಗಿ ಭಾಯ್ ಜಾನ್' ನಂತರ ನಿರ್ದೇಶಕ ಕಬೀರ್ ಖಾನ್ ಅವರ ನಿರ್ದೇಶನದಲ್ಲಿ ಬಂದಿರುವ ಫ್ಯಾಂಟಮ್ ಚಿತ್ರ ಆಗಸ್ಟ್ 28ರಂದು ಚಿತ್ರ ದೇಶದಾದ್ಯಂತ ತೆರೆ ಕಂಡಿದ್ದು ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸೈಫ್ ಆಲಿ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಗೂ ಮುನ್ನವೇ ವಿವಾದಕ್ಕೆ ಕಾರಣವಾಗಿತ್ತು. ಹುಸೈನ್ ಜೈದಿ ಅವರ ಕಾದಂಬರಿ ಆಧಾರಿತ ಈ ಚಿತ್ರ ಮುಂಬೈ 26, 2011ರ ಉಗ್ರರ ದಾಳಿಯ ಕಥಾ ಹಂದರವನ್ನು ಹೊಂದಿದೆ.

ಈ ಹಿಂದೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟಿಸಿದ್ದ 'ಏಕ್ತಾ ಟೈಗರ್' ಚಿತ್ರವು ಪಾಕಿಸ್ತಾನಕ್ಕೆ ಸಂಬಂಧಿಸಿದ್ದು, ಆ ಸಂದರ್ಭದಲ್ಲೂ ಪಾಕಿಸ್ತಾನದಲ್ಲಿ ಚಿತ್ರ ನಿಷೇಧಕ್ಕೊಳಪಟ್ಟಿತ್ತು.

ಡ್ಯಾನಿಯಲ್ ಸಿಂಗ್ (ಸೈಫ್ ಅಲಿ ಖಾನ್), ಮಾಜಿ ಯೋಧನನ್ನು ಸುಳ್ಳು ಆರೋಪದ ಮೇಲೆ ಜೈಲಿನಲ್ಲಿರುತ್ತಾನೆ. ನಂತರ RAW ಏಜೆನ್ಸಿ ಕರೆ ಮೇರೆಗೆ 'ಫ್ಯಾಂಟಮ್' ಮಿಷನ್ ಮೇಲೆ ಪಕ್ಕದ ದೇಶಕ್ಕೆ ಹೋಗುತ್ತಾನೆ. ಅಲ್ಲಿ ಮಾಜಿ RAW ಏಜೆಂಟ್ ನವಾಜ್ (ಕತ್ರೀನಾ ಕೈಫ್) ಸಹಾಯದಿಂದ 26/11 ಸ್ಫೋಟಕ್ಕೆ ಕಾರಣರಾದ ಪಾತಕಿಗಳನ್ನು ಹೇಗೆ ಬೇಟೆಯಾಡುತ್ತಾರೆ ಎಂಬುದನ್ನು ತೆರೆಯ ಮೇಲೆ ನೋಡಿ ಆನಂದಿಸಿ..

ನೋಡಲೇಬೇಕಾದ ಸಿನಿಮಾವೇನಲ್ಲ: koimoi

ನೋಡಲೇಬೇಕಾದ ಸಿನಿಮಾವೇನಲ್ಲ: koimoi

2/5 ಸ್ಟಾರ್ ನೀಡಿರುವ ಕೊಯಿಮೊಯಿ.ಕಾಂನ ಸುರಭಿ ಅವರ ವಿಮರ್ಶೆ ಪ್ರಕಾರ ಚಿತ್ರದ ಪ್ರಮುಖ ಪಾತ್ರಧಾರಿಗಳೇ ಚಿತ್ರದ ಕಥೆಯನ್ನು ಹಾಳುಗೆಡವಿದ್ದಾರೆ. ಬೇಬಿ ಚಿತ್ರದ ಮತ್ತೊಂದು ಆವೃತ್ತಿಯನ್ನು ನೋಡಿದಂತೆ ಆಗುತ್ತದೆ. ಮುಂಬೈ ಅವೆಂಜರ್ಸ್ ಕೃತಿ ಓದಲು ಆಗದ ಸೋಮಾರಿಗಳು ಚಿತ್ರವನ್ನು ನೋಡಬಹುದು.

ಬಾಲಿವುಡ್ ಲೈಫ್ 3.5/5

ಬಾಲಿವುಡ್ ಲೈಫ್ 3.5/5

ಒಮ್ಮೆ ನೋಡಲೇಬೇಕಾದ ಸಿನಿಮಾ, ಕ್ಲೈಮ್ಯಾಕ್ಸ್ ಸ್ವಲ್ಪ ನಾಟಕೀಯತೆಯಿಂದ ಕೂಡಿದ್ದರೂ ಕಬೀರ್ ಖಾನ್ ಅವೃತ್ತಿಯಲ್ಲಿ ಉಗ್ರರ ಬೇಟೆಯಾಡುವ ಚಿತ್ರವನ್ನು ನೋಡಿ ಆನಂದಿಸಿ. ಸೈಫ್ ಹಾಗೂ ಕತ್ರೀನಾ ಅವರು ನಿರ್ದೇಶಕ ಹೇಳಿದಂತೆ ನಡೆದುಕೊಂಡಿದ್ದಾರೆ. ಸಾಹಸ ದೃಶ್ಯ, ಹಿನ್ನಲೆ ಸಂಗೀತ ಹಾಗೂ ಎಡಿಟಿಂಗ್ ಚಿತ್ರದ ಓಟಕ್ಕೆ ಪೂರಕವಾಗಿದೆ.-ರುಕ್ಮಿಣಿ ಛೋಪ್ರಾ

ಹಳೆ ಕಾಲದ ಕಥೆಯಂತೆ ಓಟ ಕುಂಠಿತ : ಸ್ಕ್ರಾಲ್.ಇನ್

ಹಳೆ ಕಾಲದ ಕಥೆಯಂತೆ ಓಟ ಕುಂಠಿತ : ಸ್ಕ್ರಾಲ್.ಇನ್

ಹಳೆ ಕಾಲದ ಕಥೆಯಂತೆ ಓಟ ಕುಂಠಿತವಾಗಿದ್ದು, ಏಜೆಂಟ್ ವಿನೋದ್ ನಂತರ ಸೈಫ್ ಅಲಿ ಖಾನ್ ಫುಲ್ ಕನ್ ಫ್ಯೂಸ್ ನಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಕಥೆ ಹೀಗೆ ಆಗಬಾರದಿತ್ತೇ ಎಂದು ಪ್ರೇಕ್ಷಕ ಅಂದು ಕೊಳ್ಳುವಂತೆ ದೃಶ್ಯಗಳಿವೆ. ಕಬೀರ್ ಖಾನ್ ತಮ್ಮ ಬಿಗಿ ನಿರೂಪಣೆಯಲ್ಲಿ ಸೋತಿದ್ದಾರೆ. ಉಗ್ರಗಾಮಿಗಳನ್ನು ಬೇಟೆಯಾಡುವ ಕಥೆಗಳಿಗೇನು ಕಮ್ಮಿಯಿಲ್ಲ. ಅದರೆ, ಹೊಸತನ ಇಲ್ಲಿಲ್ಲ

ಲೈವ್ ಮಿಂಟ್: ಸರಳ ಹಗೆತನದ ಕಥೆ

ಲೈವ್ ಮಿಂಟ್: ಸರಳ ಹಗೆತನದ ಕಥೆ

ಒಸಾಮಾ ಬಿನ್ ಲಾಡೆನ್ ವಿರುದ್ಧ ಯುಎಸ್ ಸರ್ಕಾರದ ಹಗೆತನ ಸಾಧಿಸಿದ್ದನ್ನು ನೋಡಿದವರಿಗೆ ಜೀರೋ ಡಾರ್ಟ್ ಥರ್ಟಿ, ಬೇಬಿ ಚಿತ್ರ ನೋಡಿದವರಿಗೆ ಫ್ಯಾಂಟಮ್ ಅಷ್ಟಾಗಿ ರುಚಿಸುವುದಿಲ್ಲ. ಹೊಸತನವಿಲ್ಲದ ನಿರೂಪಣೆ, ನಿರೀಕ್ಷಿತ ಕಥೆಯೊಂದಿಗೆ ಫ್ಯಾಂಟಮ್ ಕಬೀರ್ ಖಾನ್ ಅವರ ಸ್ಟೈಲ್ ಕಳೆದುಕೊಂಡಿದೆ.

ನೈಜಕಥೆಯಂತೆ ನೋಡಬೇಡಿ: ಎನ್ ಡಿಟಿವಿ

ನೈಜಕಥೆಯಂತೆ ನೋಡಬೇಡಿ: ಎನ್ ಡಿಟಿವಿ

26/11 ಮುಂಬೈ ಸ್ಫೋಟದ ಬಗ್ಗೆ ಬಂದ ಮುಂಬೈ ಅವೆಂಜರ್ಸ್ ಕಾದಂಬರಿ ಆಧಾರಿತ ಚಿತ್ರ ನೈಜತೆಗೆ ವಿರುದ್ಧವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಬೋರ್ ಹೊಡೆಸುತ್ತದೆ. ಸಾಹಸ ದೃಶ್ಯ ನಿರೀಕ್ಷೆಯಲ್ಲಿ ಚಿತ್ರಕ್ಕೆ ಹೋದರೆ ಒಂದಷ್ಟು ಹೆಣಗಳ ಲೆಕ್ಕ ಹಾಕಬಹುದು ಅಷ್ಟೇ. ನಿರೀಕ್ಷೆ ಇಟ್ಟುಕೊಳ್ಳದೆ ಹೋಗಿ ಒಮ್ಮೆ ನೋಡಬಹುದು ಅಷ್ಟೇ 2.5/5

More from Filmibeat

English summary
Phantom movie directed by Kabir Khan, starring Saif Ali Khan and Katrina Kaif has opened to mixed responses from the viewers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X