For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ಭೀಕರ ಭಯಂಕರ 'ಬಿಬಿ5'ನಲ್ಲಿ ನಿಗೂಢತೆ ಥರಥರ

  By Suneel
  |

  ಸಿನಿಮಾದಲ್ಲಿ ಹೀರೋಯಿನ್ ಆಗುವ ಆಸೆಯಿಂದ ಅವಕಾಶಕ್ಕಾಗಿ ಚಿತ್ರ ನಿರ್ದೇಶಕರ ಮತ್ತು ನಿರ್ಮಾಪಕರ ಬಳಿ ಹೋಗುವ ಹುಡುಗಿಯರು ದುರುಪಯೋಗಕ್ಕೆ ಒಳಗಾಗುತ್ತಾರೆ, ಕೆಲವರು ದುರುಪಯೋಗಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ನೋಡಿರುತ್ತೀರಿ, ಓದಿರುತ್ತೀರಿ. ಇಂತಹ ಒಂದು ಅಂಶವನ್ನು ಆಧಾರವಾಗಿಟ್ಟುಕೊಂಡು ಸೂಪರ್ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ತೆರೆಮೇಲೆ ತಂದಿದ್ದಾರೆ ನವ ನಿರ್ದೇಶಕ ಜನಾರ್ಧನ್ ಎನ್.

  ಪ್ರೇಕ್ಷಕರು ಚಿತ್ರದಲ್ಲಿರುವ ಸಸ್ಪೆನ್ಸ್ ಗೆ ಉತ್ತರಕ್ಕಾಗಿ ಚಿತ್ರ ಅಂತ್ಯವಾಗುವ ವರೆಗೂ ತದೇಕಚಿತ್ತದಿಂದ ಕಾದು ಕುಳಿತುಕೊಳ್ಳುವಂತೆ ಥ್ರಿಲ್ಲಿಂಗ್ ಗಾಗಿ ಕಥೆಯನ್ನು ನಿರೂಪಿಸಿ ಮೊದಲ ಚಿತ್ರದ ನಿರ್ದೇಶನದಲ್ಲಿಯೇ ಜನಾರ್ಧನ್ ಎನ್ ಯಶಸ್ವಿಯಾಗಿದ್ದಾರೆ.

  Rating:
  3.0/5

  ಚಿತ್ರ: 'ಬಿಬಿ5'

  ನಿರ್ಮಾಣ: ಸೌಮ್ಯಾ ಬಿ.ಜಿ

  ರಚನೆ-ನಿರ್ದೇಶನ: ಜನಾರ್ಧನ್ ಎನ್

  ಸಂಗೀತ: ಚೇತನ್ ಕುಮಾರ್ ಶಾಸ್ತ್ರಿ

  ಛಾಯಾಗ್ರಹಣ: ಚೇತನ್ ರಾಯ್

  ಸಂಕಲನ: ಶ್ರೀಕಾಂತ್

  ತಾರಾಗಣ: ಪೂರ್ಣಚಂದ್ರ ಮೈಸೂರು, ರಾಜೇಶ್ ನಟರಂಗ,ರಾಧಿಕಾ ಚೇತನ್, ರಶ್ಮಿ ಪ್ರಭಾಕರ್ ಮತ್ತು ಇತರರು

  ಬಿಡುಗಡೆ ದಿನಾಂಕ: ಮೇ 26, 2017

  ಕಥಾಹಂದರ

  ಕಥಾಹಂದರ

  ಆರಂಭದಿಂದಲೇ ಹಾರರ್ ಚಿತ್ರದ ಅನುಭವ ನೀಡುವ 'ಬಿಬಿ5' ಚಿತ್ರ ಒಂದು ಕೊಲೆ ಪ್ರಕರಣದ ಸುತ್ತ ಸುತ್ತುತ್ತದೆ. ಆದರೆ ಅಲ್ಲಿ ಕೊಲೆ ಆಗಿರುವವರು ಯಾರು, ಕೊಲೆ ಮಾಡಿದವರು ಯಾರು, ಏಕೆ ಎಂಬುದು ಚಿತ್ರದ ಅಂತ್ಯವರೆಗೂ ತಿಳಿದುವುದಿಲ್ಲ. ಈ ಸಸ್ಪೆನ್ಸ್ ಗೆಲ್ಲ ಉತ್ತರ ಸಿಗಬೇಕು ಎಂದರೇ ಕಡ್ಡಾಯವಾಗಿ ಪ್ರೇಕ್ಷಕರು ಚಿತ್ರ ಅಂತ್ಯವಾಗುವವರೆಗೆ ಚಿತ್ರಮಂದಿರದಲ್ಲಿ ಕುಳಿತುಕೊಳ್ಳಲೇಬೇಕು.ಅಷ್ಟು ಅಚ್ಚುಕಟ್ಟಾಗಿ ಒಂದು ಕಡೆಯೂ ಸುಳಿವು ಬಿಡದ ಹಾಗೆ ಚಿತ್ರ ನಿರೂಪಿಸಿದ್ದಾರೆ ನವ ನಿರ್ದೇಶಕ ಜನಾರ್ಧನ್ ಎನ್.

  ಒಬ್ಬ ನಿರ್ದೇಶಕನ ಸುತ್ತ ಸುತ್ತುವ 'ಬಿಬಿ5'

  ಒಬ್ಬ ನಿರ್ದೇಶಕನ ಸುತ್ತ ಸುತ್ತುವ 'ಬಿಬಿ5'

  ದಯಾನಂದ್ ದೇಸಾಯಿ(ರಾಜೇಶ್ ನಟರಂಗ) ಎಂಬ ಖ್ಯಾತ ನಿರ್ದೇಶಕನ ಬಳಿ ತಾನು ಒಬ್ಬ ಚಿತ್ರಕಥೆ ಬರಹಗಾರನಾಗಬೇಕು ಎಂಬ ಹಂಬಲದಿಂದ ಅಥರ್ವ(ಪೂರ್ಣಚಂದ್ರ) ಎಂಬ ಹುಡುಗ ಬರುತ್ತಾನೆ. ಮೊದಲಿಗೆ ಈತನ ಕಥೆಗಳನ್ನು ಒಪ್ಪದ ದೇಸಾಯಿ ರೈಟರ್ ಆಗಬೇಕೆನ್ನುವ ಹಂಬಲ ಹೊಂದಿರುವ ಅಥರ್ವನ ಬಗ್ಗೆಯೇ ಒಂದು ಸಿನಿಮಾ ಮಾಡಲು ಕಥೆ ಬರೆಯಲು ಆರಂಭಿಸುತ್ತಾರೆ. ನಂತರ ಪ್ರತಿ ಹಂತದಲ್ಲೂ ಒಂದೊಂದು ಸಸ್ಪೆನ್ಸ್ ಪ್ರೇಕ್ಷಕನಿಗೆ ಕಾಡುತ್ತ ಹೋಗುತ್ತದೆ. ಆ ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಸನ್ನಿವೇಶಗಳನ್ನು ನೋಡಲು ಚಿತ್ರಂದಿರಕ್ಕೆ ಭೇಟಿ ಕೊಡಿ.

  ಪೂರ್ಣಚಂದ್ರ ಅಭಿನಯ ಹೇಗಿದೆ?

  ಪೂರ್ಣಚಂದ್ರ ಅಭಿನಯ ಹೇಗಿದೆ?

  ಕಿರುಚಿತ್ರಗಳು ಮತ್ತು ಯೂಟ್ಯೂಬ್ ವಿಡಿಯೋಗಳಲ್ಲಿ ತಮ್ಮ ಅಭಿನಯದ ಮೂಲಕ ಪೂರ್ಣಚಂದ್ರ ಹಲವರಿಗೆ ಪರಿಚಿತರು. ಆದರೆ ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಪೂರ್ಣಚಂದ್ರ ರವರು ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ. ತಮ್ಮ ಪಾತ್ರವನ್ನು ನೀರು ಕುಡಿದಷ್ಟು ಸುಲಭವಾಗಿ ನಿಭಾಯಿಸಿದ್ದಾರೆ.

  ರಾಜೇಶ್ ನಟರಂಗ

  ರಾಜೇಶ್ ನಟರಂಗ

  ಚಿತ್ರದಲ್ಲಿ ಖ್ಯಾತ ನಿರ್ದೇಶಕನಾಗಿ ಬಣ್ಣಹಚ್ಚಿರುವ ರಾಜೇಶ್ ನಟರಂಗ ಅವರದ್ದು ಚಿತ್ರದಲ್ಲಿ ಗಂಭೀರ ಪಾತ್ರ. ಈ ಪಾತ್ರಕ್ಕೆ ತಕ್ಕಂತೆ ರಾಜೇಶ್ ನಟರಂಗ ಅಷ್ಟೇ ಸರಳವಾಗಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

  ರಾಧಿಕಾ ಚೇತನ್

  ರಾಧಿಕಾ ಚೇತನ್

  'ರಂಗಿತರಂಗ', 'ಯೂ ಟರ್ನ್' ಖ್ಯಾತಿಯ ರಾಧಿಕಾ ಚೇತನ್ ಅವರದ್ದು 'ಬಿಬಿ5' ನಲ್ಲಿ ಲವರ್ ಗರ್ಲ್ ಕ್ಯಾರೆಕ್ಟರ್. ಪೂರ್ಣಚಂದ್ರ ಅವರಿಗೆ ಜೋಡಿಯಾಗಿ ರಾಧಿಕಾ ಚೇತನ್ ಅಭಿನಯ ಸೊಗಸಾಗಿದೆ. ಆದರೆ ಚಿತ್ರದಲ್ಲಿ ಅವರ ಡೈಲಾಗ್ ಮತ್ತು ಅವರ ಅಭಿನಯದ ಸನ್ನಿವೇಶಗಳು ತೀರ ಹಳೆಯವು ಎಂಬ ಫೀಲ್ ಆಗುತ್ತದೆ.

  ಉಳಿದವರು

  ಉಳಿದವರು

  ಚಿತ್ರದಲ್ಲಿ ಉಳಿದಂಥೆ ರಶ್ಮಿ ಪ್ರಭಾಕರ್ ಮತ್ತು ಇತರೆ ಹಲವರ ಪಾತ್ರ ಪೂರಕವಾಗಿದ್ದು, ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

  ಜನಾರ್ಧನ್ ನಿರ್ದೇಶನ

  ಜನಾರ್ಧನ್ ನಿರ್ದೇಶನ

  ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ತಮ್ಮದೇ ಕಥೆಗೆ ಆಕ್ಷನ್ ಕಟ್ ಹೇಳಿರುವ ಜನಾರ್ಧನ್ ಎನ್ ರವರು ಚಿತ್ರದ ಆರಂಭದಿಂದಲೂ ಕೊನೆಯವರೆಗೂ ಸಸ್ಪೆನ್ಸ್ ಹಿಡಿದಿಡುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದು, ಅನುಭವಿ ನಿರ್ದೇಶಕರಿಗೇನು ಕಡಿಮೆ ಇಲ್ಲ ಎಂಬಂತೆ ಚಿತ್ರ ನಿರೂಪಣೆ ಮಾಡಿದ್ದಾರೆ. ಆದರೆ ಸಿನಿಮಾ ಸ್ಕ್ರೀನ್ ಪ್ಲೇ ತೀರ ನಿಧಾನವಾಗಿರುವುದು ಪ್ರೇಕ್ಷಕರಿಗೆ ಬೇಸರ ತರಿಸುತ್ತದೆ.

  ಸಂಗೀತ ಹೇಗಿದೆ?

  ಸಂಗೀತ ಹೇಗಿದೆ?

  ಚಿತ್ರದಲ್ಲಿ ಒಟ್ಟಾರೆ ನಾಲ್ಕು ಹಾಡುಗಳಿದ್ದು, ಒಂದು ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಎರಡು ಹಾಡುಗಳು ಕೇಳಲು ಸೊಗಸಾಗಿವೆ. ಚೇತನ್ ಕುಮಾರ್ ಶಾಸ್ತ್ರೀ ರವರ ಚಿತ್ರದಲ್ಲಿನ ಹಿನ್ನೆಲೆ ಸಂಗೀತ ಪೂರಕವಾಗಿದೆ.

  ತಾಂತ್ರಿಕವಾಗಿ ಚಿತ್ರ

  ತಾಂತ್ರಿಕವಾಗಿ ಚಿತ್ರ

  ಸಂಕಲನಕಾರ ಶ್ರೀಕಾಂತ್ ಚಿತ್ರದ ಸ್ಕ್ರೀನ್ ಪ್ಲೇ ವೇಗದ ಬಗ್ಗೆ ಇನ್ನಷ್ಟು ಗಮನಹರಿಸಬೇಕಿತ್ತು. ಯಾವುದೇ ಸೆಟ್ ಹಾಕದೇ ಚಿತ್ರ ನಿರ್ಮಿಸಲಾಗಿದೆ. ಆದರೆ ಅದೇ ನೈಜತೆಗೆ ತಕ್ಕಂತೆ ಛಾಯಾಗ್ರಾಹಕ ಸಹ ಇನ್ನಷ್ಟು ಎಫರ್ಟ್ ಹಾಕಿದ್ದರೇ ದೃಶ್ಯಗಳಲ್ಲಿ ಇನ್ನಷ್ಟು ಶ್ರೀಮಂತಿಕೆ ಕಾಣಬಹುದಿತ್ತು.

  ಸಸ್ಪೆನ್ಸ್ ಥ್ರಿಲ್ಲರ್ ಸಿನಿ ಪ್ರಿಯರಿಗೆ ಸೂಪರ್ ಸಿನಿಮಾ

  ಸಸ್ಪೆನ್ಸ್ ಥ್ರಿಲ್ಲರ್ ಸಿನಿ ಪ್ರಿಯರಿಗೆ ಸೂಪರ್ ಸಿನಿಮಾ

  ಮನರಂಜನೆ ಚಿತ್ರದಲ್ಲಿ ತೀರ ಕಡಿಮೆ. ಆದರೆ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಪ್ರಿಯರು ಮತ್ತು ಈ ವೀಕೆಂಡ್ ಗಾಗಿ ಚಿತ್ರಮಂದಿರಕ್ಕೆ ಭೇಟಿ ಕೊಡಬೇಕು ಎಂದುಕೊಂಡಿರುವವರು ಕುಟುಂಬ ಸಮೇತ 'ಬಿಬಿ5' ಚಿತ್ರವನ್ನು ನೋಡಬಹುದು.

  English summary
  Poornachandra Mysuru, Radhika Chetan Starrer Crime Thriller 'BB5' movie has hit the screens today(May 26th). The Movie is directed by Janardhan N. Here is the movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X