twitter
    For Quick Alerts
    ALLOW NOTIFICATIONS  
    For Daily Alerts

    Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'

    |

    Recommended Video

    Popcorn Monkey Tiger ಒಂದೇ ಬಾರಿಗೆ ಅರ್ಥ ಆಗಲ್ವಾ ? | Review

    'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು.

    Rating:
    3.5/5

    ಕಥೆ ಹೇಳಕಾಗಲ್ಲ.. ನೋಡಬಹುದು ಅಷ್ಟೇ

    ಕಥೆ ಹೇಳಕಾಗಲ್ಲ.. ನೋಡಬಹುದು ಅಷ್ಟೇ

    ಸಿನಿಮಾ ನೋಡಿ ಹೊರ ಬಂದವರಿಗೆ ಕಥೆ ಏನು ಅಂತ ಕೇಳಿದ್ರೆ, ಖಂಡಿತ ಒಂದು ಕ್ಷಣ ಏನು ಹೇಳುವುದೋ ತಿಳಿಯುವುದಿಲ್ಲ. ಪ್ರಮುಖವಾಗಿ ಮಂಕಿ ಸೀನ ಅಲಿಯಾಸ್ ಟೈಗರ್ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಏರಿಳಿತ ಸಿನಿಮಾ ಕಥೆಯಾಗಿದೆ. ಮೆಕಾನಿಕ್ ಸೀನ ರೌಡಿಯಾಗಿ ಮುಂದೆ ಏನೆಲ್ಲ ಆಗುತ್ತಾನೆ ಎನ್ನುವುದ ಸಿನಿಮಾದ ಒನ್ ಲೈನ್ ಸ್ಟೋರಿ.

    Shivaji Surathkal Review: ಬೇಕಾದಷ್ಟು ಸಸ್ಪೆನ್ಸ್.. ಬೇಕಿದ್ದಷ್ಟು ಎಮೋಷನ್Shivaji Surathkal Review: ಬೇಕಾದಷ್ಟು ಸಸ್ಪೆನ್ಸ್.. ಬೇಕಿದ್ದಷ್ಟು ಎಮೋಷನ್

    ಹೀಗೂ ಸ್ಕ್ರೀನ್ ಪ್ಲೇ ಮಾಡಬಹುದು

    ಹೀಗೂ ಸ್ಕ್ರೀನ್ ಪ್ಲೇ ಮಾಡಬಹುದು

    ಸೂರಿ ತುಂಬ ಜನರಿಗೆ ಇಷ್ಟ ಆಗುವುದು ತಾವು ಕಥೆ ಹೇಳುವ ಶೈಲಿಯಿಂದ. ಇಲ್ಲಿಯೂ ಸೂರಿ ತಮ್ಮ ಸ್ಕ್ರೀನ್ ಪ್ಲೇ ಮೂಲಕ ನೋಡುಗರಿಗೆ ಥ್ರಿಲ್ ನೀಡುತ್ತಾರೆ. ಒಂದು ಸೀನ್ ಮಧ್ಯದಲ್ಲಿ ಮತ್ತೊಂದು ಸೀನ್, ಆ ಸೀನ್ ಮುಗಿಯುವ ಮುನ್ನವೇ ಇನ್ನೊಂದು ಸೀನ್ ಹೀಗೆ ಯಾವುದ್ಯಾವುದೋ ದೃಶ್ಯಗಳು ಎಲ್ಲಿ ಎಲ್ಲಿಯೋ ಬಂದು ಹೋಗುತ್ತದೆ. ಸ್ವಲ್ಪ ಗೊಂದಲ ಎನಿಸಿದರೂ, ಇದು ಸಿನಿಮಾಗೆ ಬೇರೆ ರೂಪವನ್ನೇ ನೀಡಿದೆ.

    ಡಾಲಿಯಿಂದ ಮಂಕಿ ಸೀನ

    ಡಾಲಿಯಿಂದ ಮಂಕಿ ಸೀನ

    'ಟಗರು' ಸಿನಿಮಾದ ಡಾಲಿ ಹಾಗೂ ಮಂಕಿ ಸೀನ ಪಾತ್ರಗಳು ಒಂದು ಹಿನ್ನಲೆಯಲ್ಲಿ ಇರುವ ಪಾತ್ರಗಳಾಗಿದೆ. ಪ್ರಾರಂಭದಲ್ಲಿ ಸೀನ ಡಾಲಿ ರೀತಿಯೇ ಕಂಡರೂ, ನಂತರ ಆ ಪಾತ್ರ ಬೇರೆ ಬೇರೆ ಬಣ್ಣಗಳನ್ನು ಪಡೆಯುತ್ತಾ ಹೋಗುತ್ತದೆ. ಧನಂಜಯ್ ಮತ್ತೆ ತಮ್ಮ ನಟನೆಯ ಪವರ್ ತೋರಿಸಿದ್ದಾರೆ. ಬಿಯರ್ ಬಾಯ್ ಗೆ ಅಭಿಮಾನಿಗಳು ಬಹುಪರಾಕ್ ಹೇಳುತ್ತಾರೆ.

    ಪಾಪ್ ಕಾರ್ನ್, ಶಿವಾಜಿ ಸೇರಿದಂತೆ ನಾಳೆ 7 ಸಿನಿಮಾಗಳ ಬಿಡುಗಡೆಪಾಪ್ ಕಾರ್ನ್, ಶಿವಾಜಿ ಸೇರಿದಂತೆ ನಾಳೆ 7 ಸಿನಿಮಾಗಳ ಬಿಡುಗಡೆ

    ನಾಲ್ಕು ನಾಯಕಿಯರು

    ನಾಲ್ಕು ನಾಯಕಿಯರು

    ಸಿನಿಮಾದಲ್ಲಿ ನಾಲ್ಕು ನಾಯಕಿಯರು ಇದ್ದಾರೆ. ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ ಹಾಗೂ ಸೀನನ ಗ್ಯಾಂಗ್ ನಲ್ಲಿರೋ ಹುಡುಗಿ ಪಾತ್ರಗಳು ತಮ್ಮದೆ ಆದ ಪ್ರಾಮುಖ್ಯತೆ ಹೊಂದಿವೆ. ನಿವೇದಿತಾ ಎರಡು ಶೇಡ್ ಗಳಲ್ಲಿ ತುಂಬ ಚೆನ್ನಾಗಿ ನಟಿಸಿದ್ದಾರೆ. ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ನಲ್ಲಿ ಅವರ ಬದಲಾವಣೆ ನೋಡಿದರೆ ಆಶ್ಚರ್ಯ ಆಗುತ್ತದೆ.

    ಸೂರಿ ಸೃಷ್ಟಿಸಿದ ಪಾತ್ರಗಳು

    ಸೂರಿ ಸೃಷ್ಟಿಸಿದ ಪಾತ್ರಗಳು

    ಸೂರಿ ಹೊಸ ಹೊಸ ಪಾತ್ರಗಳನ್ನು ಸೃಷ್ಟಿ ಮಾಡುವುದಲ್ಲಿ ಎತ್ತಿದ ಕೈ. ಅವರು ಪಾತ್ರಕ್ಕೆ ನೀಡುವ ಹೆಸರೇ ವಿಚಿತ್ರವಾಗಿರುತ್ತದೆ. ಇಲ್ಲಿಯೂ ಮಂಕಿ ಸೀನ, ಮೂಕ, ಗಲೀಜು, ಮೈಕಲ್, ಶುಗರ್, ಭದ್ರಾವತಿ ಕುಷ್ಕ ಹೀಗೆ ಅನೇಕ ಪಾತ್ರಗಳು ಸಿನಿಮಾದಲ್ಲಿದೆ ಎಲ್ಲ ಪಾತ್ರಗಳು ಮಜಾ ನೀಡುತ್ತದೆ. ಮೂಕ ಪಾತ್ರ ಇಷ್ಟ ಆಗುತ್ತದೆ.

    ಶೇಖರ್ ದೃಶ್ಯಗಳು ಹಾಗೂ ಚರಣ್ ಸಂಗೀತ

    ಶೇಖರ್ ದೃಶ್ಯಗಳು ಹಾಗೂ ಚರಣ್ ಸಂಗೀತ

    ಸೂರಿ ಸಿನಿಮಾಗಳಲ್ಲಿ ಮೇಕಿಂಗ್ ಹಾಗೂ ಹಿನ್ನೆಲೆ ಸಂಗೀತ ಬೇರೆಯದ್ದೆ ಶೈಲಿಯಲ್ಲಿ ಇರುತ್ತದೆ. ಇಲ್ಲಿಯೂ ತೆರೆ ಹಿಂದಿನ ಹೀರೋ ಆಗಿರುವುದು ಸಿನಿಮಾಟೋಗ್ರಾಫರ್ ಶೇಖರ್ ಹಾಗೂ ಸಂಗೀತ ನಿರ್ದೇಶಕ ಚರಣ್ ರಾಜ್. ಚರಣ್ ಮತ್ತು ಶೇಖರ್ ಕೆಲಸ ಸಿನಿಮಾದ ಗೆಲುವಿನಲ್ಲಿ ದೊಡ್ಡ ಪಾಲು ಹೊಂದಿದೆ. ಡೈಲಾಗ್ ಗಳು ತುಂಬ ಚೆನ್ನಾಗಿವೆ.

    'ಟಗರು' ಶೈಲಿಯಲ್ಲಿದೆ

    'ಟಗರು' ಶೈಲಿಯಲ್ಲಿದೆ

    'ಪಾಪ್ ಕಾರ್ನ್ ಮಂಕಿ' ಚಿತ್ರ 'ಟಗರು' ಶೈಲಿಯಲ್ಲಿಯೇ ಕಾಣುತ್ತದೆ. ಚಿತ್ರಕಥೆ, ಮೇಕಿಂಗ್, ಹಿನ್ನಲೆ ಸಂಗೀತ, ಧನಂಜಯ್ ಪಾತ್ರ ಎಲ್ಲವೂ 'ಟಗರು' ಸಿನಿಮಾದ ಹೋಲಿಕೆ ಇದೆ. ಇದನೆಲ್ಲ ಪ್ರೇಕ್ಷಕರು ಹೇಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ಕುತೂಹಲವಾಗಿದೆ. ಸ್ಕ್ರೀನ್ ಪ್ಲೇ ಕೆಲವು ಪ್ರೇಕ್ಷಕರಿಗೆ ಗೊಂದಲ ಉಂಟು ಮಾಡುತ್ತದೆ.

    'ಪಾಪ್ ಕಾರ್ನ್' ನಡುವೆ 'ಕಾಗೆ ಬಂಗಾರ'

    'ಪಾಪ್ ಕಾರ್ನ್' ನಡುವೆ 'ಕಾಗೆ ಬಂಗಾರ'

    ಸಿನಿಮಾ ನೋಡಲು ಹೋದವರಿಗೆ ಒಂದು ಸರ್ಪೈಸ್ ಅನ್ನು ಸೂರಿ ನೀಡಿದ್ದಾರೆ. 'ಕೆಂಡಸಂಪಿಗೆ' ಮೊದಲ ಭಾಗವಾದ ಕಾಗೆ ಬಂಗಾರವನ್ನು ಮತ್ತೆ ಇಲ್ಲಿ ಶುರು ಮಾಡಿದ್ದಾರೆ. 'ಪಾಪ್ ಕಾರ್ನ್ ಮಂಕಿ ಸೀನ'ನಿಗೂ 'ಕಾಗೆ ಬಂಗಾರ'ಕ್ಕೂ ಹೇಗೆ ಸಂಬಂಧ ಎನ್ನುವುದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

    ಸೂರಿ ಸ್ಟೈಲ್ ಇಷ್ಟ ಆದ್ರೆ, ಸಿನಿಮಾ ಹಿಡಿಸುತ್ತೆ

    ಸೂರಿ ಸ್ಟೈಲ್ ಇಷ್ಟ ಆದ್ರೆ, ಸಿನಿಮಾ ಹಿಡಿಸುತ್ತೆ

    ಒಂದು ಸರಿ ನೋಡಬಹುದು.. ಕೊಟ್ಟ ಕಾಸಿಗೆ ಮೋಸ ಇಲ್ಲ.. ಎಂಥ ಸೂಪರ್ ಸಿನಿಮಾ ಗುರು.. ಅಷ್ಟೊಂದು ಚೆನ್ನಾಗಿಲ್ಲ... ಟಗರು ತರನೇ ಇದೆಯಲ್ಲ.. ಹೀಗೆ 'ಪಾಪ್ ಕಾರ್ನ್ ಮಂಕಿ ಸೀನ' ಸಿನಿಮಾ ನೋಡಿ ಬಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ಭಾವನೆ ಬರುತ್ತದೆ. ಆದರೆ, ಸೂರಿ ಮೇಕಿಂಗ್ ಸ್ಟೈಲ್ ಇಷ್ಟ ಆದ್ರೆ, ಸಿನಿಮಾ ಖಂಡಿತ ಹಿಡಿಸುತ್ತೆ.

    English summary
    Actor Dhananjay starrer Popcorn Monkey Tiger Kannada film review. This movie is directed by Soori.
    Saturday, February 22, 2020, 11:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X