twitter
    For Quick Alerts
    ALLOW NOTIFICATIONS  
    For Daily Alerts

    Ek Love Ya Review: ಪ್ರೀತಿಯಲ್ಲಿ ಏಕಲವ್ಯನಷ್ಟೇ ಶ್ರದ್ಧೆಯುಳ್ಳ ಪ್ರೇಮಿಯ ಕಥೆ 'ಏಕ್ ಲವ್ ಯಾ'!

    |

    'ಏಕ್ ಲವ್ ಯಾ' ಇದು ಚಿತ್ರ ಟೈಟಲ್ ಸಿನಿಮಾ ನೋಡಿದ ಮೇಲೆ ಇದಕ್ಕೆ ಎರಡು ಅರ್ಥ ಕೊಡಬಹುದು. ಒಂದು 'ಒಂದೇ ಪ್ರೀತಿ' ಅಂತ ಮತ್ತೊಂದು, 'ಏಕವಲ್ಯನಷ್ಟೇ ನಾಯಕನಿಗೆ ಪ್ರೀತಿಯಲ್ಲಿ ಶ್ರದ್ಧೆ' ಎನ್ನುವುದು.

    'ಏಕ್ ಲವ್ ಯಾ' ಇದು ನಿರ್ದೇಶಕ 'ಪ್ರೇಮ್ಸ್' ಸಿನಿಮಾ. ಹಾಗಾಗಿ ಒಂದಷ್ಟು ಕುತೂಹಲ ಮತ್ತು ನೀರಿಕ್ಷೆಗಳು ಹೆಚ್ಚಾಗೇ ಹುಟ್ಟುಕೊಂಡಿದ್ದವು. ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಕೂಡ ಸಿನಿಮಾದಲ್ಲಿ ಏನೋ ಹೊಸತನ ಇದೆ. ನಿರ್ದೇಶಕ ಪ್ರೇಮ್ ಹೊಸದೇನೋ ಮಾಡಿದ್ದಾರೆ. ಲವ್ ಸ್ಟೋರಿಗಳನ್ನು ಅದ್ಭುತವಾಗಿ ಕಟ್ಟಿಕೊಡುವ ಪ್ರೇಮ್ ಅವರ 'ಏಕ್‌ ಲವ್ ಯಾ' ಮೇಲು ನಿರೀಕ್ಷೆಗಳು ಇದ್ದವು. ಹಾಗಿದ್ದರೆ ಸಿನಿಮಾ ಹೇಗಿದೆ. ಚಿತ್ರದ ನಿರೀಕ್ಷೆಗಳನ್ನು ಮುಟ್ಟುವಲ್ಲಿ ಜಯಗಳಿಸಿದೆಯಾ ಎನ್ನುವ ಬಗ್ಗೆ ವಿಮರ್ಶೆ ಇಲ್ಲಿದೆ. ಮುಂದೆ ಓದಿ....

    Rating:
    3.0/5

    'ಏಕ್ ಲವ್ ಯಾ' ಪ್ರೇಮ್ ದುಡ್ಡಲ್ಲಿ ಮಾಡಿದ್ದಲ್ಲ: ನಿರ್ಮಾಪಕಿ ರಕ್ಷಿತಾ Exclusive ಮಾತು
    'ಏಕ್ ಲವ್ ಯಾ' ಅಮರ್ ಮತ್ತು ಅನಿತಾ ಪ್ರೀತಿ, ಪ್ರೇಮ, ನೋವಿನ ಕಹಾನಿ. ಸಿನಿಮಾ ಓಪನ್ ಆಗೋದು ನಾಯಕ ಅಮರ್ ಇಂಟ್ರೋಡಕ್ಷನ್‌ನಿಂದ. ಅಮರ್ ಏಪ್ರಿಲ್ 28ರಂದು ಒಬ್ಬ ವಿಲನ್‌ಗೆ ಹೊಡೆಯೋದ್ರ ಮೂಲಕ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿದ್ದಾರೆ. ಶುರುವಿನಿಂದಲೇ ಟ್ವಿಸ್ಟ್ ಶುರುವಾಗುತ್ತವೆ. ಈ ಏಪ್ರಿಲ್ ‌28 ನಾಯಕನ ಜೀವನದ ತಿರುವು ಬದಲಿಸಿದ ದಿನವಾಗಿರುತ್ತೆ. ಅದು ಯಾಕೆ ಅನ್ನೋದು ತದನಂತರ ರಿವೀಲ್ ಆಗುತ್ತೆ.

     'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ 'ಏಕ್ ಲವ್ ಯಾ' ಸಿನಿಮಾ ವೀಕ್ಷಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ

    ಪ್ರೀತಿಗೆ ಮೋಸ ಮಾಡದ ನಾಯಕ!

    ಪ್ರೀತಿಗೆ ಮೋಸ ಮಾಡದ ನಾಯಕ!

    ನಾಯಕನ ಪರಿಚಯದ ಬಳಿಕ ನಟಿ ರಚಿತಾ ರಾಮ್ ಪರಿಚಯ ಆಗುತ್ತೆ. ಹೀರೋಗೆ ಬೋಲ್ಡ್ ಆದ ರಚಿತಾ ಪಾತ್ರ, ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ ಅಂತ ಅಮರ್ ಹಿಂದೆ ಬೀಳುತ್ತಾಳೆ. ಆದರೆ ಅದಕ್ಕೂ ಒಂದು ಕಾರಣ ಇರುತ್ತೆ. ಯಾರೇ ಹಿಂದೆ ಬಿದ್ದರು ನಾಯಕನ ಪ್ರೀತಿ ಮಾತ್ರ ತನ್ನ ಫಸ್ಟ್ ಲವ್‌ಗಾಗಿ ಮೀಸಲು ಇರುತ್ತೆ.

    ಅನಿತಾ, ಅಮರ್ ಪ್ರೇಮ್ ಕಹಾನಿ 'ಏಕ್ ಲವ್ ಯಾ'!

    ಅನಿತಾ, ಅಮರ್ ಪ್ರೇಮ್ ಕಹಾನಿ 'ಏಕ್ ಲವ್ ಯಾ'!

    ನಾಯಕನ ಫಸ್ಟ್ ಲವ್ ಕಹಾನಿ ರಿವೀಲ್ ಆಗುತ್ತೆ. ಸ್ಕೂಲ್ ನಲ್ಲಿ ಅನಿತಾಳನ್ನು ಕಂಡು ಲವ್ ಅಟ್ ಫಸ್ಟ್ ಸೈಟ್ ಆಗುತ್ತೆ. ಆದರೆ ಇವರ ಪ್ರೀತಿಗೆ ಅಮರ್ ತಂದೆಯೇ ವಿಲನ್ ಆಗಿರುತ್ತಾರೆ. ಅದು ತಿಳಿಯದೇ ನಾಯಕ ನಟ ತನ್ನ ಪ್ರೀತಿ ದಕ್ಕಿಸಿಕೊಳ್ಳ ತುಂಬಾ ಒದ್ದಾಡುತ್ತಾನೆ. ಪಡಬಾರದ ಪಾಡು ಪಡುತ್ತಾನೆ.

    ಓದೋದ್ರಲ್ಲಿ ಕಾಲೇಜಿಗೆ ಫಸ್ಟ್ ಇದ್ದರು, ಬಿಟ್ಟು ಹೊದ ಪ್ರೇಮಿಯ ನೆನಪಲ್ಲಿ ಕುಡಿಯುತ್ತಾ, ಸಮಯ ದೂಡುತ್ತಾ ಇರುತ್ತಾನೆ. ಆದರೆ ಅಪ್ಪನ ಕಷ್ಟಕ್ಕೆ ಕರಗಿದ ನಾಯಕನಿಗೆ ಮನವರಿಕೆ ಆಗಿ, ಜೀವನದಲ್ಲಿ ಉದ್ಧಾರ ಆಗ್ಬೇಕು ಅಂತ ಡಿಸೈಡ್ ಮಾಡಿದಾಗಲೇ ನಿಜವಾದ ಸಮಾಲು ಎದುರಾಗುತ್ತೆ.

    ಸೆಕೆಂಡ್ ಹಾಫ್‌ನಲ್ಲಿ ನಾಯಕನ ಬದುಕಲ್ಲಿ ಬಿರುಗಾಳಿ!

    ಸೆಕೆಂಡ್ ಹಾಫ್‌ನಲ್ಲಿ ನಾಯಕನ ಬದುಕಲ್ಲಿ ಬಿರುಗಾಳಿ!

    ಸೆಕೆಂಡ್ ಹಾಫ್‌ ಪೂರ್ತಿ ನಾಯಕ ಶಾಲಾದಿನದಿಂದ ತಾನು ಪ್ರೀತಿಸಿದ ಹುಡುಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ತನ್ನ ಮೇಲೆ ಬಂದಿರುವ ಕಳಂಕವನ್ನು ಹೇಗೆ ನಿಭಾಹಿಸುತ್ತಾನೆ ಎನ್ನುವುದನ್ನು ತೋರಿಸಲಾಗಿದೆ. ಪ್ರೀತಿಯಿಂದಲೇ ನಾಯಕನಿಗೆ ದೊಡ್ಡ ಕಂಟಕ ಎದುರಾಗುತ್ತದೆ. ಸಿನಿಮಾದಲ್ಲಿ ನಾಯಕಿಯ ಮೇಲೆ ಅತ್ಯಾಚಾರ ಎಸಗಲಾಗುತ್ತದೆ. ಆ ಕಳಂಕ ನಾಯಕನ ಮೇಲೆ ಬರುತ್ತೆ. ಅದು ಯಾಕೆ ನಾಯಕನ ಮೇಲೆ ಬರುತ್ತೆ. ಇದರಿಂದ ಅತ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು.

    ಪ್ರೀತಿ ಕಥೆಯಲ್ಲೇ ಸಾಮಾಜಿಕ ಸಂದೇಶ ಇಟ್ಟ ಪ್ರೇಮ್!

    ಪ್ರೀತಿ ಕಥೆಯಲ್ಲೇ ಸಾಮಾಜಿಕ ಸಂದೇಶ ಇಟ್ಟ ಪ್ರೇಮ್!

    ಇನ್ನು ಸಿನಿಮಾ ಪ್ರೀತಿ, ಪ್ರೇಮ್, ಬ್ರೇಕಪ್ ವಿರುದ್ಧ ಮಾತ್ರವೇ ಸುತ್ತುವುದಿಲ್ಲ. ಸಿನಿಮಾದಲ್ಲಿ ಸಾಮಾಜಿಕ ಸಂದೇಶ ಒಂದನ್ನು ಇಟ್ಟಿದ್ದಾರೆ ಪ್ರೇಮ್. ಅತ್ಯಾಚಾರ ಪ್ರಕರಣಗಳ ವಿರುದ್ಧ ನಾಯಕ ದನಿ ಎತ್ತುತ್ತಾನೆ. ಈ ಮೂಲಕ ತಪ್ಪು ಮಾಡಿದವನಿಗೆ ತಕ್ಕ ಶಿಕ್ಷೆ ಕೊಡುತ್ತಾನೆ. ಆದರೆ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಪ್ರೇಮ ಕಥೆಯನ್ನು ಪ್ರೇಮ್ ಅಚ್ಚುಕಟ್ಟಾಗಿ ಎಣೆದಿದ್ದಾರೆ.

    ಕೆಲವೆಡೆ ಲಾಜಿಕ್ ಮಿಸ್ ಆಗಿರುವುದನ್ನು ಒಪ್ಪಲೇ ಬೇಕು!

    ಕೆಲವೆಡೆ ಲಾಜಿಕ್ ಮಿಸ್ ಆಗಿರುವುದನ್ನು ಒಪ್ಪಲೇ ಬೇಕು!

    ಆದರೆ ಹಲವೆಡೆ ಲಾಜಿಕ್ ಮಿಸ್ ಆಗಿದೆ. ನೀಟಾಗಿ ಸಿನಿಮಾ ಸಾಗುತ್ತಾ ಇರುವಾಗ ಇದ್ಯಾಕೆ, ಹೀಗಾಯ್ತು ಎನ್ನುವ ಗೊಂದಲಕ್ಕೆ ಪ್ರೇಕ್ಷಕರನ್ನು ತಳ್ಳಿ ಬಿಡುತ್ತದೆ. ಕೆಲವು ಕಡೆ ಸಿನಿಮಾದಲ್ಲಿ ಲಾಜಿಕ್‌ಗಳು ಮಿಸ್ ಆಗಿವೆ. ಅನ್ನು ಹೊರತು ಪಡಿಸಿದರೆ ಸಿನಿಮಾದಲ್ಲಿ ಅಂಥದ್ದೇನು ಹೊಸತನ ಕಾಣುವುದಿಲ್ಲ. ಸಿನಿಮಾದ ಹಲವು ಸನ್ನಿವೇಶಗಳು ಬೇರೆ ಸಿನಿಮಾಗಳನ್ನು ನೆನಪು ಮಾಡುತ್ತೆ. ಫಸ್ಟ್ ಹಾಫ್ ಸಿನಿಮಾ ಕೇವಲ ಲವ್‌ ಸ್ಟೋರಿನಾ ಎನ್ನುವ ಭಾವ ಮೂಡಿಸಿದರೆ, ಸೆಕೆಂಡ್ ಹಾಫ್‌ನಲ್ಲಿ ಹೊಸ ಕಥೆ ಓಪನ್ ಆಗುತ್ತದೆ. ಆದರೆ ಸೆಕೆಂಡ್ ಹಾಫ್‌ ಇನ್ನಷ್ಟೂ ಎಂಗೇಜಿಂಗ್ ಆಗಿ ಇರಬೇಕಾಗಿತ್ತು ಎನಿಸುತ್ತೆ.

    ಹಾಡು ಮ್ಯೂಜಿಕ್ ಚಿತ್ರದ ಪ್ಲಸ್ ಪಾಯಿಂಟ್!

    ಹಾಡು ಮ್ಯೂಜಿಕ್ ಚಿತ್ರದ ಪ್ಲಸ್ ಪಾಯಿಂಟ್!

    ಪ್ರೇಮ್ ಅವರ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಈ ಚಿತ್ರದಲ್ಲೂ ಕೂಡ ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ. ಚಿತ್ರದಲ್ಲಿನ ಭಾವನಾತ್ಮಕ ಸನ್ನಿವೇಷಗಳಿಗೆ ಹೆಚ್ಚಿನ ತೂಕ ನೀಡಿರುವುದೇ ಸಂಗೀತಾ. ಅರ್ಜುನ್ ಜನ್ಯ ಮೂಸಿಕ್ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್. ಇದರೊಂದಿಗೆ ಸಿನಿಮಾದಲ್ಲಿ ನಟ ಡೈಲಾಗ್ಸ್‌ಗಳು ನೊಡುಗರಿಗೆ ಕನೆಕ್ಟ್ ಆಗುತ್ತವೆ. ಫಸ್ಟ್ ಹಾಫ್‌ನಲ್ಲಿ ಬರುವ ಕಾಮಿಡಿ ಸನ್ನಿವೇಶಗಳು ನಗಿಸುವಲ್ಲಿ ಯಶಸ್ವಿ ಆಗಿವೆ.

    ಮೊದಲ ಎಂಟ್ರಿಯಲ್ಲೇ ಗೆದ್ದ ರಾಣ!

    ಮೊದಲ ಎಂಟ್ರಿಯಲ್ಲೇ ಗೆದ್ದ ರಾಣ!

    ನಾಯಕ ನಟ ರಾಣ ಮೊದಲ ಸಿನಿಮಾ ಎನಿಸುವುದಿಲ್ಲ. ಅಂದರೆ ಅಭಿನಯದಲ್ಲಿ ರಾಣ ಗೆದ್ದಿದ್ದಾರೆ. ಲವ್ವರ್ ಬಾಯ್ ಆಗಿ, ಮಗನಾಗಿ, ಪ್ರೇಮಿಯಾಗಿ, ಸತ್ಯ ಹುಡುಕುವ ನಾಯಕನಾಗಿ ರಾಣ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅಂತೆಯೆ ನಟಿ ರೀಷ್ಮಾ ನಾಣಯ್ಯ ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮತ್ತೊಬ್ಬ ನಾಯಕಿ ರಚಿತಾ ರಾಮ್ ಅವರ ಪಾತ್ರ ಚಿಕ್ಕದಾದರೂ ಕೂಡ ಇಡಿ ಸಿನಿಮಾದಲ್ಲಿ ಅ ಪಾತ್ರದ ಪ್ರಾಮುಖ್ಯತೆ ಇದೆ. ಇನ್ನುಳಿದಂತೆ ಚಿತ್ರದಲ್ಲಿ ಚರಣ್ ರಾಜ್ ಅವರ ಪಾತ್ರ ತುಂಬಾನೇ ಸರ್ಪ್ರೈಸಿಂಗ್ ಆಗಿದೆ. ಶಶಿಕುಮಾರ್, ಸುಚೆಂದ್ರ ಪ್ರಸಾದ್ ಅಭಿನಯದ ಇದೆ.

    English summary
    Ek Love Ya Movie Review: Jogi Prem Directorial Rachita Ram Raana and Reeshma Nanaiah Starrer Ek Love Ya Movie review and rating
    Thursday, February 24, 2022, 17:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X