twitter
    For Quick Alerts
    ALLOW NOTIFICATIONS  
    For Daily Alerts

    'ಧ್ವಜ' ಸಿನಿಮಾದ ಬಗ್ಗೆ ವಿಮರ್ಶಕರು ಏನಂತಾರೆ ?

    |

    ನಟಿ ಪ್ರಿಯಾ ಮಣಿ ಮತ್ತು ನಟ ರವಿ ಅಭಿನಯದ 'ಧ್ವಜ' ಸಿನಿಮಾ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ. ಈ ಸಿನಿಮಾ ತಮಿಳಿನ 'ಕೋಡಿ' ಚಿತ್ರದ ರಿಮೇಕ್ ಆಗಿದೆ. ಧ್ವಜ' ಸಿನಿಮಾ ಒಂದು ಪಕ್ಕಾ ಪೋಲಿಟಿಕಲ್ ಥ್ರಿಲ್ಲರ್ ಚಿತ್ರ. ಇಡೀ ಸಿನಿಮಾ ಶುರುನಿಂದ ಮುಗಿಯುವವರೆಗೆ ರಾಜಕೀಯದ ಸುತ್ತ ಸುತ್ತುತ್ತದೆ. ಕೆಲವು ಕುತೂಹಲಕಾರಿ ಅಂಶಗಳನ್ನು ಸಿನಿಮಾ ಹೊಂದಿದೆ.

    ರಾಜಕೀಯ ಪಕ್ಷದ ಒಳಗೆ ನಡೆಯುವ ಮೈಂಡ್ ಗೇಮ್, ಅಧಿಕಾರ ದಾಹ ಯಾವ ಮಟ್ಟಿಗೆ ಇರುತ್ತದೆ, ಪ್ರೇಮಿಗಳ ನಡುವೆ ರಾಜಕೀಯ ಹೇಗೆ ಆಟ ಆಡುತ್ತದೆ ಎನ್ನುವುದನ್ನು ಈ ಸಿನಿಮಾ ನೋಡಿ ತಿಳಿಯಬಹುದಾಗಿದೆ. 'ಧ್ವಜ' ಪ್ರೇಮಿಗಳ ಪ್ರೇಮಕಥೆಯ ಸಿನಿಮಾ ಅಲ್ಲ. ಪ್ರೇಮಿಗಳ ರಾಜಕೀಯ ಕಥೆಯ ಸಿನಿಮಾ. ಇಂತಹ 'ಧ್ವಜ' ಸಿನಿಮಾದ ಬಗ್ಗೆ ವಿಮರ್ಶಕರು ನೀಡಿದ ವಿಮರ್ಶೆ ಮುಂದಿದೆ ಓದಿ..

    ವಾಸ್ತವ ರಾಜಕಾರಣಕ್ಕೆ ಹಿಡಿದ ಕನ್ನಡಿ - ವಿಜಯ ಕರ್ನಾಟಕ

    ವಾಸ್ತವ ರಾಜಕಾರಣಕ್ಕೆ ಹಿಡಿದ ಕನ್ನಡಿ - ವಿಜಯ ಕರ್ನಾಟಕ

    ''ರಾಜಕೀಯ ಹಿನ್ನೆಲೆಯ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದರೂ, ಹೊಸ ನಿರೂಪಣೆಯ ಕಾರಣದಿಂದಾಗಿ ‘ಧ್ವಜ' ಸಿನಿಮಾ ಗಮನ ಸೆಳೆಯುತ್ತದೆ. ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ರಾಜಕೀಯ ಮೇಲಾಟದಿಂದ ಶುರುವಾಗುವ ಸಿನಿಮಾ ‘ಶುಭಂ'ವರೆಗೂ ಪೊಲಿಟಿಕಲ್ ಗೇಮ್‌ ಆಡುತ್ತಲೇ ಸಾಗುತ್ತದೆ. ಮನುಷ್ಯನೊಳಗಿನ ಅಧಿಕಾರ ದಾಹವು ಸಂಬಂಧ, ಪ್ರೀತಿ, ನಂಬಿಕೆ ಯಾವುದಕ್ಕೂ ಬೆಲೆ ನೀಡುವುದಿಲ್ಲ ಎನ್ನುವುದನ್ನು ನಿರೂಪಿಸುತ್ತದೆ. ನಾಯಕ ರವಿ ಈ ಸಿನಿಮಾದಲ್ಲಿ ದ್ವಿಪಾತ್ರ ಮಾಡಿದ್ದಾರೆ. ಅಣ್ಣ ಮತ್ತು ತಮ್ಮ ಎರಡು ಪಾತ್ರವನ್ನೂ ಚೆನ್ನಾಗಿ ನಿಭಾಯಿಸಿದ್ದಾರೆ. ರಮ್ಯಾ ಪಾತ್ರದಲ್ಲಿ ಪ್ರಿಯಾಮಣಿ ಸಖತ್‌ ಸ್ಕೋರ್ ಮಾಡುತ್ತಾರೆ. ಕಥೆಯಲ್ಲಿ ಅವರ ಪಟಾಕಿ ಮಾತಿನ ರಾಜಕಾರಣಿ ಅಂತಿದ್ದರೂ, ನಿಜವಾದ ಪಟಾಕಿ ದಿವ್ಯ ಉರುಡುಗ. ಸದ್ಯ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ರೀಲ್ ನಲ್ಲಿ ರಿಯಲ್‌ ಕಥೆಯನ್ನು ನೋಡಲು ಒಂದು ಬಾರಿ ಧ್ವಜಕ್ಕೆ ಹೋಗಬಹುದು.'' - ಶರಣು ಹುಲ್ಲೂರು

    ಪ್ರೀತಿಯಡಿ ರಾಜಕೀಯ ಆಟ - ಉದಯವಾಣಿ

    ಪ್ರೀತಿಯಡಿ ರಾಜಕೀಯ ಆಟ - ಉದಯವಾಣಿ

    ''ಧ್ವಜ' ಒಂದು ಪೊಲಿಟಿಕಲ್ ಥ್ರಿಲ್ಲರ್‌ ಸಿನಿಮಾ. ಬಾಲ್ಯದಿಂದಲೇ ತಾನು ರಾಜಕಾರಣಿಯಾಗಬೇಕು, ಅಧಿಕಾರ ಹಿಡಿಯಬೇಕೆಂದು ಕನಸು ಕಂಡು ಮುಂದೆ ಬೆಳೆಯುತ್ತಾ ರಾಜಕೀಯ ದ್ವೇಷ, ಜಿದ್ದಾಜಿದ್ದಿಗೆ ನಾಂದಿಯಾಡುವ ಜೋಡಿಗಳ ನಡುವಿನ ಕಥೆ. "ಧ್ವಜ' ಚಿತ್ರ ಒಬ್ಬ ಪಕ್ಕಾ ಲೋಕಲ್‌ ಹುಡುಗನ ಎಂಟ್ರಿಯೊಂದಿಗೆ ಆರಂಭವಾದರೆ, ಮುಂದೆ ವಿವಿಧ ತಿರುವುಗಳನ್ನು ಪಡೆಯುತ್ತಾ, ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತಾ ಸಾಗುತ್ತದೆ. ಥ್ರಿಲ್ಲರ್‌ ಸಿನಿಮಾವನ್ನು ಇಷ್ಟಪಡುವವರಿಗೆ "ಧ್ವಜ' ಮಜಾ ಕೊಡುತ್ತದೆ. ಇಡೀ ಸಿನಿಮಾದ ಬ್ಯೂಟಿ ಅಡಗಿರೋದೇ ಕಥೆಯಲ್ಲಿ. ಒಂದು ಸರಳ ಕಥೆಯನ್ನು ರೋಚಕವಾಗಿ, ಪಕ್ಕಾ ಕಮರ್ಷಿಯಲ್ ಸಿನಿಮಾಕ್ಕೆ ಏನು ಬೇಕೋ ಆ ಎಲ್ಲಾ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆ. ಇಲ್ಲಿ ಯಾವ ದೃಶ್ಯವೂ ಅನಾವಶ್ಯಕ ಎನ್ನುವಂತಿಲ್ಲ. ಪ್ರತಿ ದೃಶ್ಯವೂ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತವೆ. ರಾಜಕೀಯ, ಅದರ ಒಳಸುಳಿ, ಒಬ್ಬರನ್ನು ಮುಗಿಸಲು ಮತ್ತೂಬ್ಬರು ಹಾಕುವ ಸ್ಕೆಚ್, ಅದರ ನಡುವೆ ಬಂದು ಹೋಗುವ ಪ್ರೇಮಕಥೆ. ಈ ಅಂಶಗಳ ಮೂಲಕ "ಧ್ವಜ' ಸಾಗಿಬರುತ್ತದೆ.'' - ರವಿಪ್ರಕಾಶ್ ರೈ.

    ತಮಿಳು ಬಾವುಟದ ಕನ್ನಡ ಧ್ವಜ - ಕನ್ನಡ ಪ್ರಭ

    ತಮಿಳು ಬಾವುಟದ ಕನ್ನಡ ಧ್ವಜ - ಕನ್ನಡ ಪ್ರಭ

    ''ರಾಜಕೀಯ ಪಕ್ಷಗಳಲ್ಲಿ ವ್ಯಕ್ತಗಳ ಸ್ವಾರ್ಥ, ಪಕ್ಷಕ್ಕಾಗಿ ವ್ಯಕ್ತಿಗಳ ಬಲಿ, ಎರಡೂ ಪಕ್ಷಗಳ ತಿಕ್ಕಾಟ, ಚುನಾವಣೆ ಕಾಲದ ಒಳಸಂಚುಗಳು ಹೀಗೆ ರಾಜಕೀಯದ ಎಲ್ಲಾ ಚದುರಂಗದಾಟವೂ ಇಲ್ಲಿದೆ. ಅವಳಿಗಳಲ್ಲಷ್ಟೇ ಇರುವ ವಿಶೇಷ ವೈಜ್ಞಾನಿಕ ಬದಲಾವಣೆಯನ್ನೇ ಮೂಲವಾಗಿಟ್ಟುಕೊಂಡು ಕತೆಯನ್ನು ಹೆಣೆಯಲಾಗಿದೆ. ರವಿ ಎಂಬ ಹೊಸ ಹುಡುಗ ಮೊದಲ ಸಿನಿಮಾದಲೇ ಮಿಂಚಿದ್ದಾರೆ. ಅವರ ಡಬಲ್ ರೋಲ್, ಡ್ಯಾನ್ಸ್ ಹಾಗೂ ಬಾಡಿ ಲಾಂಗ್ವೇಜ್ ಗಳಲ್ಲಿ ಲವಲವಿಕೆಯಿದೆ. ರಮ್ಯಾ ಪಾತ್ರದ ಪ್ರಿಯಾಮಣಿ ಚಿತ್ರದ ನಾಯಕಿ ಹಾಗೂ ವಿಲನ್ ಕೂಡ ಆಗಿದ್ದು, ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಸೆಂಟಿಮೆಂಟ್, ಫೈಟ್, ರಾಗ- ದ್ವೇಷ, ಅನುರಾಗಗಳೂ ಇಲ್ಲಿದೆ. ಒಳ್ಳೆಯ ಟೈಮ್ ಪಾಸ್ ಚಿತ್ರ ಎಂಬುದೇ ಪ್ಲಸ್ ಪಾಯಿಂಟ್'' - ಸಂಕೇತ್ ಗುರುದತ್ತ

    Dhwaja movie review - Times Of India

    Dhwaja movie review - Times Of India

    This is the official remake of the Tamil hit Kodi, so much so that they have retained the title, the background score and most of the narrative. Of course, there are a few improvisations, like ensuring one of the female lead's onscreen character is named Ramya, because of her political dreams, and also a climax that is different from the original. The film has a decent mix of commercial elements and is mounted on a large scale. Although one cannot help compare it to the original at most times. The film is colourful and is technically strong, but one misses the magnetic charisma that an actor like Dhanush brings to the big screen.

    This film has good visuals, an interesting tale of love and betrayal against a political backdrop, and a lot of commercial elements. If you're someone looking for that, this might just interest you.

    English summary
    Actress Priyamani's Dhwaja kannada movie critics review. The movie is a political thriller directed by cinematographer Ashok Cashyap.
    Saturday, April 28, 2018, 19:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X