ವಿಮರ್ಶೆ: 'ಧ್ವಜ' ಹಾರಾಟ, ಪ್ರೇಮಿಗಳ ನಡುವೆ ರಾಜಕೀಯ ಹೋರಾಟ

ಈ ಹಿಂದಿನ ಚುನಾವಣೆಗಳಲ್ಲಿ ಅಪ್ಪ - ಮಗನ ನಡುವೆ ಸ್ಪರ್ಧೆ ನಡೆದಿದೆ. ಅಣ್ಣನ ಎದುರು ತಮ್ಮನೇ ಎದುರಾಳಿ ಆಗಿದ್ದಾನೆ. ಆದರೆ ಇಲ್ಲಿ ಇಬ್ಬರು ಪ್ರೇಮಿಗಳ ನಡುವೆ ಚುನಾವಣೆ ನಡೆಯುತ್ತದೆ. 'ಧ್ವಜ' ಪ್ರೇಮಿಗಳ ಪ್ರೇಮಕಥೆಯ ಸಿನಿಮಾ ಅಲ್ಲ. ಪ್ರೇಮಿಗಳ ರಾಜಕೀಯ ಕಥೆಯ ಸಿನಿಮಾ.

Rating:
3.0/5
Star Cast: ಪ್ರಿಯಾಮಣಿ, ರವಿ, ದಿವ್ಯ ಹುರುಡುಗ, ಟಿಎನ್ ಸೀತಾರಾಮ್
Director: ಅಶೋಕ್ ಕಶ್ಯಪ್

ಹೇಗಿದೆ ಸಿನಿಮಾ?

ಹೇಗಿದೆ ಸಿನಿಮಾ?

ಕೆಲವು ಕುತೂಹಲಕಾರಿ ಅಂಶಗಳನ್ನು ಸಿನಿಮಾ ಹೊಂದಿದೆ. ರಾಜಕೀಯ ಪಕ್ಷದ ಒಳಗೆ ನಡೆಯುವ ಮೈಂಡ್ ಗೇಮ್, ಅಧಿಕಾರ ದಾಹ ಯಾವ ಮಟ್ಟಿಗೆ ಇರುತ್ತದೆ, ಪ್ರೇಮಿಗಳ ನಡುವೆ ರಾಜಕೀಯ ಹೇಗೆ ಆಟ ಆಡುತ್ತದೆ ಎನ್ನುವುದನ್ನು ಈ ಸಿನಿಮಾ ನೋಡಿ ತಿಳಿಯಬಹುದು. ಅಲ್ಲಲ್ಲಿ ಕೊಂಚ ಬೋರ್ ಎನಿಸಿದರು, ಸಿನಿಮಾದ ಕಥೆ ಚೆನ್ನಾಗಿರುವ ಕಾರಣ 'ಧ್ವಜ' ಆಗಸದಲ್ಲಿ ಹಾರಾಡುತ್ತದೆ.

ಪ್ರೇಮಿಗಳ ರಾಜಕೀಯ ಕಥೆ

ಪ್ರೇಮಿಗಳ ರಾಜಕೀಯ ಕಥೆ

ಜನಶಕ್ತಿ ಮತ್ತು ಪ್ರಜಾಮತ ಎಂಬ ಎರಡು ಪಕ್ಷಗಳ ನಡುವೆ ಚುನಾವಣಾ ಹೋರಾಟ ನಡೆಯುತ್ತಿರುತ್ತದೆ. ಪ್ರಜಾಮತ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದ ನಾಯಕ ಧ್ವಜ (ರವಿ) ತಂದೆ ಪಕ್ಷಕ್ಕಾಗಿ ಪ್ರಾಣ ಬಿಟ್ಟಿರುತ್ತಾನೆ. ಸಣ್ಣ ವಯಸ್ಸಿನಿಂದ ರಾಜಕೀಯ ವಾತಾವರಣದಲ್ಲಿ ಬೆಳೆದ ಧ್ವಜ ಅಪ್ಪನ ಆಸೆ ಈಡೇರಿಸಲು ರಾಜಕಾರಣಿ ಆಗಲು ಹೊರಡುತ್ತಾನೆ. ಆದರೆ ಧ್ವಜನ ತಮ್ಮ ಓದಿ ಪ್ರಾಧ್ಯಾಪಕ ಆಗುತ್ತಾನೆ. ಇತ್ತ ಮಾತಿನ ಪಟಾಕಿ ರಮ್ಯಾ ಕೂಡ ಸಣ್ಣ ವಯಸ್ಸಿನಿಂದ ರಾಜಕಾರಣಿ ಆಗುವ ಕನಸು ಇಟ್ಟುಕೊಂಡಿರುತ್ತಾಳೆ. ಬೆಳೆದು ದೊಡ್ಡವರಾದ ಮೇಲೆ ಪ್ರೇಮಿಗಳಾಗುವ ಈ ಇಬ್ಬರು ಬೇರೆ ಬೇರೆ ಪಕ್ಷದಲ್ಲಿ ಇದ್ದರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ. ಪಕ್ಷ ಅಂತ ಬಂದರೆ ಒಬ್ಬರನೊಬ್ಬರು ದ್ವೇಷಿಸುವ ಇವರು ಪ್ರೀತಿ ಅಂತ ಬಂದರೆ ಅಷ್ಟೇ ಹತ್ತಿರ ಆಗುತ್ತಾರೆ.

ಧ್ವಜ V/S ರಮ್ಯಾ

ಧ್ವಜ V/S ರಮ್ಯಾ

ಹೀಗಿರುವಾಗ, ಪ್ರಜಾಮತ ಪಕ್ಷದಿಂದ ಧ್ವಜ (ರವಿ) ಮತ್ತು ಜನಶಕ್ತಿ ಪಕ್ಷದಿಂದ ರಮ್ಯಾ (ಪ್ರಿಯಾಮಣಿ) ಇಬ್ಬರು ಪ್ರೇಮಿಗಳು ಚುನಾವಣೆಯಲ್ಲಿ ನಿಲ್ಲುತ್ತಾರೆ. ಇಬ್ಬರು ಪ್ರೇಮಿಗಳ ಎಲೆಕ್ಷನ್ ಕದನ ನಡೆಯುತ್ತದೆ. ಯಾವಾಗ ಈ ಇಬ್ಬರೇ ಚುನಾವಣೆಗ ಸ್ಪರ್ಧಿಗಳಾಗಿ ಎದುರು ನಿಲ್ಲುತ್ತಾರೋ ಆಗ ಅವರ ಪ್ರೇಮದಲ್ಲಿ ಕೋಲಾಹಲ ಸೃಷ್ಟಿ ಆಗುತ್ತದೆ. ಅದು ಯಾವ ಮಟ್ಟಿಗೆ ಅಂದರೆ ರಮ್ಯಾ ಪಕ್ಷ ಮತ್ತು ಪದವಿಗಾಗಿ ತಾನು ಪ್ರೀತಿಸಿದ ಹುಡುಗನನ್ನೇ ಕೊಲ್ಲುತ್ತಾಳೆ. ಅಧಿಕಾರಕ್ಕಾಗಿ ಇಷ್ಟೆಲ್ಲ ಮಾಡಿದ ಆಕೆಯ ಕಥೆ ಕೊನೆಗೆ ಏನಾಗುತ್ತದೆ ಎನ್ನುವುದೇ ಸಿನಿಮಾದ ಕಥೆ. ಜೊತೆಗೆ ಅಣ್ಣನನ್ನು ಕೊಲೆ ಮಾಡಿದ ರಮ್ಯಾ ವಿರುದ್ಧ ತಮ್ಮ ಹೇಗೆ ಸೇಡು ತಿಳಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕುತೂಹಲಕಾರಿ ಅಂಶ.

ಪ್ರಿಯಾಮಣಿ ನಟನೆ ಎಲ್ಲರಿಗೂ ಪ್ರಿಯವಾಗುತ್ತೆ

ಪ್ರಿಯಾಮಣಿ ನಟನೆ ಎಲ್ಲರಿಗೂ ಪ್ರಿಯವಾಗುತ್ತೆ

ಸಿನಿಮಾದಲ್ಲಿ ಎಲ್ಲ ಕಲಾವಿದರು ಪಾತ್ರಕ್ಕೆ ತಕ್ಕಂತೆ ಸರಳ ಮತ್ತು ಸುಂದರವಾಗಿ ನಟನೆ ಮಾಡಿದ್ದಾರೆ. ಅದಲ್ಲಿಯೂ ಪ್ರಿಯಾಮಣಿ ಸೀರೆ ಉಟ್ಟು ಸ್ಕ್ರೀನ್ ಮೇಲೆ ಬಂದರೆ ಮತ್ತೆ ಮತ್ತೆ ನೋಡಬೇಕು ಎನಿಸುತ್ತದೆ. ತಾನೊಬ್ಬ ಪ್ರತಿಭಾವಂತ ನಟಿ ಎನ್ನುವುದನ್ನು ಈ ಸಿನಿಮಾದಲ್ಲಿಯೂ ಅವರು ಪ್ರೂ ಮಾಡಿದ್ದಾರೆ. ನಟ ರವಿ ಕೂಡ ಮೊದಲ ಸಿನಿಮಾದಲ್ಲಿಯೇ ದ್ವಿಪಾತ್ರವನ್ನು ಅಣ್ಣ ಮತ್ತು ತಮ್ಮ ಎರಡು ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅವರ ಮ್ಯಾನರಿಸಂ ಚೆನ್ನಾಗಿದೆ. ದಿವ್ಯ ಉರುಡುಗ ಮೊಟ್ಟೆ ಮಹಾಲಕ್ಷ್ಮಿಯಾಗಿ ಪಟಾಕಿಯ ಹಾಗೆ ಸೌಂಡ್ ಮಾಡುತ್ತಾರೆ. ಫಸ್ಟ್ ಆಫ್ ಮಹಾಲಕ್ಷ್ಮಿ ಪಾತ್ರ ಸಖತ್ ನಗಿಸುತ್ತದೆ. ಉಳಿದಂತೆ, ತಬಲ ನಾಣಿ (ಧ್ವಜ ತಂದೆ), ಟಿ.ಎನ್.ಸೀತಾರಾಮ್ (ಪ್ರಜಾಮತ ಪಕ್ಷದ ಅಧ್ಯಕ್ಷ), ವೀಣಾ ಸುಂದರ್‌ (ಧ್ವಜ ತಾಯಿ) ಅಚ್ಚುಕಟ್ಟಾಗಿ ನಟಿಸಿದ್ದಾರೆ.

ನೀಟಾದ ನಿರ್ದೇಶಕ

ನೀಟಾದ ನಿರ್ದೇಶಕ

ನಿರ್ದೇಶಕ ಅಶೋಕ್ ಕಶ್ಯಪ್ ಸಿನಿಮಾವನ್ನು ಅದಷ್ಟು ಚೆನ್ನಾಗಿ ಕಟ್ಟಿಕೊಡಲು ಪ್ರಯತ್ನ ಪಟ್ಟಿದ್ದಾರೆ. ತಾವೇ ದೊಡ್ಡ ಕ್ಯಾಮರಾ ಮ್ಯಾನ್ ಆಗಿರುವ ಕಾರಣ ಅವರ ಮೇಕಿಂಗ್ ಬಗ್ಗೆ ಮಾತನಾಡುವ ಆಗಿಲ್ಲ. ರಿಮೇಕ್ ಆದರೂ ತನ್ನ ಕೌಶಲ್ಯದ ಮೂಲಕ ಅಶೋಕ್ ಕಶ್ಯಪ್ ಕಥೆಯನ್ನು ಚೆನ್ನಾಗಿ ಪ್ರೆಸೆಂಟ್ ಮಾಡಿದ್ದಾರೆ. ಆದರೆ ಇನ್ನಷ್ಟು ಚುರುಕು ನಿರೂಪಣೆ ಮೂಲಕ ಸೆಕೆಂಡ್ ಆಫ್ ನಲ್ಲಿ ಚಿತ್ರದ ವೇಗ ಇನ್ನಷ್ಟು ಜಾಸ್ತಿ ಮಾಡಬಹುದಿತ್ತು.

ವಿರಳ ಕಥೆ, ಸರಳ ನಿರೂಪಣೆ

ವಿರಳ ಕಥೆ, ಸರಳ ನಿರೂಪಣೆ

ಸಾಕಷ್ಟು ರಾಜಕೀಯ ಪ್ರೇರಿತ ಕಥೆ ಈ ಹಿಂದೆ ಬಂದಿದ್ದರು 'ಧ್ವಜ' ಆ ಚಿತ್ರಕ್ಕಿಂತ ವಿಭಿನ್ನವಾಗಿದೆ. ಈ ರೀತಿಯ ಕಥೆ ಬಂದಿರುವುದು ವಿರಳ. ಇಂತಹ ಕಥೆಯನ್ನು ಸರಳ ನಿರೂಪಣೆಯೊಂದಿಗೆ ತೆರೆ ಮೇಲೆ ತಂದಿದ್ದಾರೆ. ಚಿತ್ರದ ಕಥೆಯಲ್ಲಿ ಮರ್ಕ್ಯೂರಿ ಫ್ಯಾಕ್ಟರಿಯಿಂದ ಆಗುವ ಅನಾಹೂತವನ್ನು ಸಹ ಸೂಕ್ಮವಾಗಿ ಹೇಳಿದ್ದಾರೆ. ಸಿನಿಮಾ ಚೆನ್ನಾಗಿದ್ದರೂ ಕೂಡ ಕೆಲವು ದೃಶ್ಯಗಳಲ್ಲಿ ಬೇಸರ ಮಾಡುತ್ತದೆ.

ಹಾಡುಗಳು ನೆನಪಿನಲ್ಲಿ ಉಳಿಯಲ್ಲ

ಹಾಡುಗಳು ನೆನಪಿನಲ್ಲಿ ಉಳಿಯಲ್ಲ

'ಧ್ವಜ' ಸಿನಿಮಾದಲ್ಲಿ ಕೊಂಚ ಬೇರೆ ರೀತಿಯ ಮ್ಯೂಸಿಕ್ ಅನ್ನು ಕೇಳ ಬಹುದಾಗಿದೆ. ಹಾಗಿದ್ದರೂ ಹಾಡುಗಳು ಆ ಮಟ್ಟಿಗೆ ಹತ್ತರ ಆಗುವುದಿಲ್ಲ. ಸಿನಿಮಾ ನೋಡುವಾಗ ಓಕೆ ಎನಿಸುವ ಹಾಡುಗಳ ಮತ್ತೆ ಮತ್ತೆ ನೆನಪಾಗುವುದಿಲ್ಲ. ಹಾಡುಗಳು ಇನ್ನಷ್ಟು ಚೆನ್ನಾಗಿದ್ದರೆ ಸಿನಿಮಾದ ತೂಕ ಹೆಚ್ಚಾಗುತ್ತಿತ್ತು.

ಚುನಾವಣೆ ವೇಳೆ ಚುನಾವಣಾ ಸಿನಿಮಾ

ಚುನಾವಣೆ ವೇಳೆ ಚುನಾವಣಾ ಸಿನಿಮಾ

ಕರ್ನಾಟಕದಲ್ಲಿ ಈಗ ಚುನಾವಣಾ ಹಬ್ಬ ಶುರುವಾಗಿದೆ. ಎಲ್ಲಿ ಕೇಳಿದರು ರೀತಿ ರಾಜಕೀಯದ ಬಗ್ಗೆ ಮಾತು ಕತೆ ಇದೆ. ಇಂತಹ ವೇಳೆ ಧ್ವಜ ಸಿನಿಮಾ ಕೂಡ ಬಂದಿದೆ. ಅಶೋಕ್ ಕಶ್ಯಪ್ ರವರ 'ಧ್ವಜ' ಸಿನಿಮಾ ಒಂದು ಪಕ್ಕಾ ಪೊಲಿಟಿಕಲ್ ಥ್ರಿಲ್ಲರ್ ಚಿತ್ರ. ಇಡೀ ಸಿನಿಮಾ ರಾಜಕೀಯದ ಸುತ್ತ ಸುತ್ತುತ್ತದೆ. ಈ ಚಿತ್ರವನ್ನ ಒಮ್ಮೆ ನೋಡಬಹುದು.

More from Filmibeat

English summary
Actress Priyamani's Dhwaja kannada movie review. The movie is a political thriller directed by cinematographer Ashok Cashyap.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X