twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಫಸ್ಟ್ ಹಾಫ್ ಸಪ್ಪೆ, 2nd ಹಾಫ್ ಪರ್ವಾಗಿಲ್ಲ

    By Naveen
    |

    Recommended Video

    ಹೇಗಿದೆ ಪ್ರಿಯಾಂಕಾ 2nd ಹಾಫ್ | Filmibeat Kannada

    ಸಿನಿಮಾದ ಹೆಸರಿಗೆ ತಕ್ಕಂತೆ '2nd ಹಾಫ್' ಚಿತ್ರದ ನಿಜವಾದ ಅಂಶ ಇರುವುದು ಸೆಕೆಂಡ್ ಹಾಫ್ ನಲ್ಲಿಯೇ. ಇಡೀ ಸಿನಿಮಾ ಒಬ್ಬ ಮಹಿಳಾ ಪೊಲೀಸ್ ಪೇದೆಯ ಸುತ್ತ ಸುತ್ತುತ್ತದೆ. ಕಾಣಿಯಾಗಿರುವ ಒಬ್ಬ ಹುಡುಗಿಯನ್ನು ನಾಯಕಿ ಹೇಗೆ ಹುಡುಕುತ್ತಾಳೆ ಎನ್ನುವುದು ಇಡೀ ಸಿನಿಮಾದ ಕಥೆ ಆಗಿದೆ.

    Rating:
    3.0/5

    ಚಿತ್ರ : 2nd ಹಾಫ್
    ಕಥೆ, ನಿರ್ದೇಶನ: ಯೋಗಿ ದೇವಗಂಗೆ
    ನಿರ್ಮಾಣ: ನಾಗೇಶ್
    ಸಂಕಲನ: ಸುರೇಶ್ ಆರುಮುಘಂ
    ಸಂಗೀತ: ಚೇತನ್ ಸೊಸ್ಕ
    ಕ್ಯಾಮರಾ: ಆರ್ ಕೆ ಶಿವಕುಮಾರ್
    ಅಭಿನಯ: ಪ್ರಿಯಾಂಕ ಉಪೇಂದ್ರ, ನಿರಂಜನ್, ಸುರಭಿ ಸಂತೋಷ್, ಶರತ್ ಲೋಹಿತಾಶ್ವ, ಶಾಲಿನಿ, ಸತ್ಯಜಿತ್ ಮತ್ತು ಇತರರು
    ಬಿಡುಗಡೆಯ ದಿನಾಂಕ : ಜೂನ್ 1

    ಪೊಲೀಸ್ ಪೇದೆ ಅನುರಾಧ

    ಪೊಲೀಸ್ ಪೇದೆ ಅನುರಾಧ

    ಅನುರಾಧ (ಪ್ರಿಯಾಂಕ ಉಪೇಂದ್ರ) ಚಿತ್ರದ ಕಥಾ ನಾಯಕಿ. ಪೊಲೀಸ್ ಇಲಾಖೆಯಲ್ಲಿ ಇರುವ ಈಕೆಯ ಕೆಲಸ ನಗರದ ಎಲ್ಲ ಸಿಸಿ ಟಿವಿಗಳನ್ನು ವೀಕ್ಷಿಸುವುದು, ಜೊತೆಗೆ ಎಲ್ಲಿಯಾದರೂ ಅಪರಾಧ ನಡೆದರೆ ಅದನ್ನು ತನ್ನ ಮೇಲಿನ ಅಧಿಕಾರಿಗೆ ತಿಳಿಸುವುದು ಆಗಿರುತ್ತದೆ. ಆದರೆ ಈಕೆ ತನ್ನ ಮಾತನ್ನು ಆ ಅಧಿಕಾರಿ ನಿರ್ಲಕ್ಷ ಮಾಡಿದರೆ ತಾನೇ ಹೋಗಿ ನಡೆಯುತ್ತಿರುವ ಅನ್ಯಾಯವನ್ನು ತಡೆಯುತ್ತಾಳೆ. ಪ್ರತಿ ದಿನ ಸಿಸಿ ಟಿವಿಯಲ್ಲಿ ಅನುರಾಧ ಗಮನಿಸುತ್ತಿದ್ದ ಶರಣ್ಯ (ಸುರಭಿ) ಒಬ್ಬ ಹುಡುಗಿ ಇದ್ದಕ್ಕಿದ್ದ ಹಾಗೆ ಕಾಣೆಯಾಗುತ್ತಾಳೆ. ಅವಳ ಹುಡುಕಾಟಕ್ಕೆ ಅನುರಾಧನೇ ಫಿಲ್ಡ್ ಗೆ ಇಳಿಯುತ್ತಾಳೆ. ಹೇಗೆ ಅನುರಾಧ ಆ ಹುಡುಗಿಯನ್ನು ಪತ್ತೆ ಮಾಡುತ್ತಾಳೆ ಎಂಬುದೇ ಇಡೀ ಸಿನಿಮಾದ ಸಾರ.

    ಫಸ್ಟ್ ಹಾಫ್ ಬೋರು, ಸೆಕೆಂಡ್ ಹಾಫ್ ಓಕೆ ಓಕೆ

    ಫಸ್ಟ್ ಹಾಫ್ ಬೋರು, ಸೆಕೆಂಡ್ ಹಾಫ್ ಓಕೆ ಓಕೆ

    ಹಾಗೆ ನೋಡಿದರೆ '2nd ಹಾಫ್' ಸಿನಿಮಾದ ರಿಯಲ್ ಕಥೆ ಶುರುವಾಗುವುದು ಫಸ್ಟ್ ಹಾಫ್ ಆದ ಮೇಲೆಯೇ. ಸಿನಿಮಾದ ಮೊದಲಾರ್ಧ ಸಿಸಿ ಟಿವಿ ವೀಕ್ಷಣೆಯಲ್ಲಿಯೇ ಮುಗಿದು ಹೋಗುತ್ತದೆ. ಫಸ್ಟ್ ಹಾಫ್ ನಲ್ಲಿ ನೋಡುಗರಿಗೆ ಖುಷಿ, ಮಜಾ, ಥ್ರಿಲ್ ಯಾವ ಭಾವವೂ ಮೂಡುವುದಿಲ್ಲ. ಫಸ್ಟ್ ಹಾಫ್ ನಲ್ಲಿ ತಿರುವುಗಳೆ ಇಲ್ಲ, ಸೆಕೆಂಡ್ ಹಾಫ್ ನಲ್ಲಿ ತಿರುವುಗಳಿಗೆನೂ ಬರ ಇಲ್ಲ.

    ಇಷ್ಟ ಆಗುವ ಅಂಶಗಳು

    ಇಷ್ಟ ಆಗುವ ಅಂಶಗಳು

    ಪ್ರಿಯಾಂಕ ನಟನೆ

    ಸೆಕೆಂಡ್ ಹಾಫ್ ತಿರುವುಗಳು

    ನಿರಂಜನ್ ಹಾಗೂ ಸುರಭಿ ಕಾಂಬಿನೇಶನ್

    ಹೊಸ ಶೈಲಿಯ ಮ್ಯೂಸಿಕ್

    ಲವಲವಿಕೆಯ ನಿರಂಜನ್ ಸುರಭಿ ನಟನೆ

    ಲವಲವಿಕೆಯ ನಿರಂಜನ್ ಸುರಭಿ ನಟನೆ

    ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ನಿರಂಜನ್ ನಟನೆಯಲ್ಲಿ ಲವಲವಿಕೆ ತುಂಬಿಕೊಂಡಿದೆ. ಮೊದಲ ಸಿನಿಮಾ ಆದರೂ ಅನುಭವ ಹೊಂದಿದವರಂತೆ ಲೀಲಾಜಾಲವಾಗಿ ಅವರು ತೆರೆ ಮೇಲೆ ನಟಿಸಿದ್ದಾರೆ. ನಿರಂಜನ್ ಪ್ರೇಯಸಿಯಾಗಿ ಕಾಣಿಸಿಕೊಂಡಿರುವ ಸುರಭಿ ಸಂತೋಷ್ ಕೂಡ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಹಾಗೆ ನೋಡಿದರೆ ಇಡೀ ಸಿನಿಮಾದ ಕಥೆಗೆ ಅವರೇ ಕೇಂದ್ರಬಿಂದು.

    ನೀರಸ ನಿರೂಪಣೆ

    ನೀರಸ ನಿರೂಪಣೆ

    '2nd ಹಾಫ್' ಸಿನಿಮಾದ ಒನ್ ಲೈನ್ ಸ್ಟೋರಿ ಸಿಂಪಲ್ ಆಗಿದ್ದರು ಚೆನ್ನಾಗಿದೆ. ಆದರೆ ಅದನ್ನು ತೆರೆ ಮೇಲೆ ಇನ್ನೂ ಚೆನ್ನಾಗಿ ಹೇಳಬಹುದಿತ್ತು. ನಿರ್ದೇಶಕ ಯೋಗಿ ದೇವಗಂಗೆ ಅವರ ಕಥೆಯ ಆಯ್ಕೆ, ಪ್ರಯತ್ನ ಮೆಚ್ಚಬೇಕು. ಆದರೆ ನೋಡುಗರಿಗೆ ಇಷ್ಟ ಆಗುವ ರೀತಿ ನಿರೂಪಣೆ ಮಾಡಬೇಕಿತ್ತು. ಚಿತ್ರದಲ್ಲಿ ನಟಿಸಿರುವ ಶರತ್ ಲೋಹಿತಾಶ್ವ, ಶಾಲಿನಿ, ಸತ್ಯಜಿತ್ ಪಾತ್ರಗಳು ಅಚ್ಚುಕಟ್ಟಾಗಿದೆ. ತೆರೆ ಮೇಲೆ ಚಿಕ್ಕಮ್ಮ ಮತ್ತು ಮಗನ ಜೋಡಿ ತುಂಬ ಮುದ್ದಾಗಿ ಕಾಣುತ್ತದೆ.

    ಫ್ಯಾಮಿಲಿ ಸಿನಿಮಾ

    ಫ್ಯಾಮಿಲಿ ಸಿನಿಮಾ

    ವಿಭಿನ್ನ ಶೈಲಿಯ ಸಿನಿಮಾ, ಮಹಿಳಾ ಪ್ರಧಾನ ಸಿನಿಮಾ ಎನ್ನುವ ಕಾರಣಕ್ಕೆ '2nd ಹಾಫ್' ಚಿತ್ರವನ್ನು ಒಮ್ಮೆ ನೋಡಬಹುದು. ಎಲ್ಲಿಯೂ ಕೆಟ್ಟ ಡೈಲಾಗ್, ಬೇಡದ ಫೈಟ್, ರಕ್ತಪಾತದ ದೃಶ್ಯ ಯಾವುದು ಇಲ್ಲದ ಶುದ್ಧ ಫ್ಯಾಮಿಲಿ ಸಿನಿಮಾ ಇದು.

    English summary
    Actress Priyanka Upendra's 'Second Half' kannada movie review.
    Friday, June 1, 2018, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X