For Quick Alerts
  ALLOW NOTIFICATIONS  
  For Daily Alerts

  'ಮಮ್ಮಿ' ದೆವ್ವ ನೋಡಿ ಭಯ ಭೀತಗೊಂಡ ವಿಮರ್ಶಕರು.!

  By Harshitha
  |

  ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಮತ್ತು ಪುಟಾಣಿ ಯುವಿನಾ ಪಾರ್ಥವಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಮ್ಮಿ save me' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

  'ಮಮ್ಮಿ save me' ಸಿನಿಮಾ ನೋಡಿದ ಪ್ರೇಕ್ಷಕರಂತೂ ಬೆಚ್ಚಿಬಿದ್ದಿದ್ದಾರೆ. ಪ್ರೇಕ್ಷಕರಂತೆ ವಿಮರ್ಶಕರೂ ಕೂಡ 'ಮಮ್ಮಿ' ದೆವ್ವ ನೋಡಿ ಭಯ ಭೀತಗೊಂಡ್ರಾ? [ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]

  ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ಮಮ್ಮಿ save me' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ...

  ದೆವ್ವದ ಮನೆಯಲ್ಲಿ ತಾಯಿಯ ತಳಮಳ: ವಿಜಯ ಕರ್ನಾಟಕ

  ದೆವ್ವದ ಮನೆಯಲ್ಲಿ ತಾಯಿಯ ತಳಮಳ: ವಿಜಯ ಕರ್ನಾಟಕ

  ಪ್ರಿಯಾಂಕಾ ಉಪೇಂದ್ರ ಅಭಿನಯದ ಮಮ್ಮಿ ಚಿತ್ರ ಟ್ರೇಲರ್ ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. 21ರ ಹರೆಯದ ಲೋಹಿತ್ ತಮ್ಮ ಮೊದಲ ನಿರ್ದೇಶನದಲ್ಲೇ ಗೆದ್ದಿದ್ದಾರೆ. ಕನ್ನಡದಲ್ಲಿ ಇದುವರೆಗೆ ಬಂದ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿರುವ ಮಮ್ಮಿ, ಮೇಕಿಂಗ್ ನಿಂದ ಕನ್ನಡ ಚಿತ್ರರಂಗವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ ಎನ್ನಬಹುದು. ಸ್ಯಾಂಡಲ್ ವುಡ್‌ಗೆ ಒಬ್ಬ ಪ್ರತಿಭಾವಂತ ಮತ್ತು ಸೂಕ್ಷ್ಮ ಮನಸ್ಸಿನ ನಿರ್ದೇಶಕ ಸಿಕ್ಕಿದ್ದಾರೆ. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಕಾಮಿಡಿ, ವಿಕಾರ, ಅಬ್ಬರ, ವೈಭವೀಕರಣ ಇರೋದನ್ನೇ ನೋಡುತ್ತೇವೆ. ಅರ್ಥಹೀನ, ಹಾಸ್ಯಾಸ್ಪದ ಅನ್ನಿಸುವ ಸಾಧ್ಯತೆಯೂ ಹೆಚ್ಚುಘಿ. ಆದರೆ, ಮಮ್ಮಿ ಇದೆಲ್ಲದರಿಂದ ಬೇರೆಯಾಗಿ ನಿಲ್ಲುತ್ತದೆ. ಪ್ರಪಂಚದಾದ್ಯಂತ ಜನರು ಪ್ರೇತದ ಬಗ್ಗೆ ಹೇಳಿಕೊಂಡ ಅನುಭವಗಳನ್ನು ಆಧರಿಸಿ ಕತೆ ಬರೆದಿರುವುದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ - ಪದ್ಮಾ ಶಿವಮೊಗ್ಗ

  ಹೆದರಿಕೆಯೇ ಆತ್ಮ: ಹೆದರಿಸ್ತಾಳೆ ಅಮ್ಮ! : ಉದಯವಾಣಿ

  ಹೆದರಿಕೆಯೇ ಆತ್ಮ: ಹೆದರಿಸ್ತಾಳೆ ಅಮ್ಮ! : ಉದಯವಾಣಿ

  ಒಂದು ಹಾರರ್ ಸಿನಿಮಾ ಅಂದಮೇಲೆ ಭಯ ಇರಲೇಬೇಕು. ಆ ವಿಷಯದಲ್ಲಿ 'ಮಮ್ಮಿ' ಪರ್ಫೆಕ್ಟ್. ಇದುವರೆಗೆ ನೋಡಿರುವ ವೆರೈಟಿ ದೆವ್ವಗಳ ಪೈಕಿ 'ಮಮ್ಮಿ'ಯೊಳಗಿನ ದೆವ್ವ ಬೆಚ್ಚಿ ಬೀಳಿಸುವುದರ ಜೊತೆಯಲ್ಲಿ ಒಂದಷ್ಟು ಮಮತೆ, ಪ್ರೀತಿಯನ್ನೂ ತೋರಿಸುತ್ತೆ. ಆ ಕಾರಣಕ್ಕೆ 'ಮಮ್ಮಿ' ಖುಷಿಕೊಡುತ್ತೆ. ಆರಂಭದಿಂದ ಅಂತ್ಯದವರೆಗೂ ಕುವರಿಯೊಬ್ಬಳ ಹಿಂದೆ ಬೀಳುವ 'ಕುಮಾರಿ' ಪ್ರೇತಾತ್ಮ ಅಕ್ಷರಶಃ ಬೆಚ್ಚಿಬೀಳಿಸುತ್ತೆ. ಅಂಥದ್ದೊಂದು ಭಯಾನಕ ವಾತಾವರಣವನ್ನು ಕಟ್ಟಿಕೊಡುವಲ್ಲಿ ಯುವ ನಿರ್ದೇಶಕ ಲೋಹಿತ್ ಯಶಸ್ವಿ. ಅವರ ಯೋಚನಾಲಹರಿಯನ್ನು ಮೆಚ್ಚಬೇಕಾದ್ದೆ. - ವಿಜಯ್ ಭರಮಸಾಗರ

  ಮುದ್ದು ಬಾಲಕಿಯೂ ಸದ್ದು ಮಾಡುವ ಭೂತವೂ: ಪ್ರಜಾವಾಣಿ

  ಮುದ್ದು ಬಾಲಕಿಯೂ ಸದ್ದು ಮಾಡುವ ಭೂತವೂ: ಪ್ರಜಾವಾಣಿ

  ಮೌಢ್ಯವನ್ನು ಮೀರಿದ ಮಾಂತ್ರಿಕ ವಾಸ್ತವ ಸಿನಿಮಾಗಳಿಗೆ ವಸ್ತುವಾಗಿ ಲಾಗಾಯ್ತಿನಿಂದ ಒದಗಿಬಂದಿದೆ. ‘ಫ್ಯಾಂಟಸಿ' ಹಾಗೂ ‘ಹಾರರ್' ಪಂಥಕ್ಕೆ ಸೇರಿದ ಸಿನಿಮಾಗಳೂ ಹಲವು ಪ್ರಯೋಗಗಳಿಗೆ ಪಕ್ಕಾಗಿರುವುದೂ ಉಂಟು. ‘ಮಮ್ಮಿ' ಸಿನಿಮಾವನ್ನು ಪ್ರಯೋಗಮುಖಿ ಎನ್ನಲಾಗದೇ ಇದ್ದರೂ ತಂತ್ರ, ತಾಂತ್ರಿಕ ಕುಶಲತೆಯ ಕಾರಣಕ್ಕೆ ಮೆಚ್ಚುಗೆಗೆ ಅರ್ಹ ಎನ್ನಬೇಕು. - ವಿಶಾಖ.ಎನ್

  Blending fear with emotion and succeeding: The New Indian Express

  Blending fear with emotion and succeeding: The New Indian Express

  Weaving a story around horror and adorning it with emotionalism, Mummy - Save Me could fall into the spectrum of a ‘work of art'. After all, inducing fear in a cinematic effort is not an easy achievement and debutant director H Lohith seems to have succeeded to an extent. Technically brilliant, the film has several instances of gray drizzle of horror, which is noteworthy for impeccable execution. Taking the audience to an emotional high and placing them somewhere between a daymare and deja vu. Supposed to be based on true incidents, its premise make viewers feel sad for a moment and feel fear the next. In one line, what happens when your own shadow becomes a stranger is the crux of Mummy- Save me. - A Sharadhaa

  Mummy Review: Times of India

  Mummy Review: Times of India

  Young director Lohith H's debut film Mummy made promises of good, old-fashioned horror. And what he has delivered with the film is just that. There is no unnecessary comedy, no extra frills, just frights and chills that keep the viewers glued with continuous twists in the plot. The script relies heavily on two main characters, the pregnant mother and daughter. Fortunately, there is a special chemistry onscreen between Priyanka Upendra and Yuvina Parthavi, which aides ensuring that the film is a good watch. One of the biggest plus points of the the film is cinematographer HC Venu's work. The varied angles and interesting approach ensures one stays engrossed. Adding more value to the narrative is B Ajaneesh Loknath's background music. The film does have many scary moments, which ensures that there is a good horror thriller in Kannada after a while. - Sunayana Suresh

  Mummy Review: Bangalore Mirror

  Mummy Review: Bangalore Mirror

  Mummy does what a horror movie is supposed to do: scare. With that single-minded intention it does the job perfectly. The film carries no unnecessary baggage, like songs and melodramatic flashbacks. The film goes straight to business from the first scene. It does not miss a single trick of the horror trade. You may end up feeling the whole film was a bag of horror tricks, but why do we go to a horror movie after all? The film gets its inspiration from the vast repository of Hollywood horror films. There is not a single film that can be pointed out as the source but the setting and incidents are no doubt borrowed. But to the debutant director's credit, he does a far more commendable job than what the Sandalwood horror film factory has churned out in the last year. - Shyam Prasad S

  English summary
  Kannada Actress Priyanka Upendra starrer Kannada Movie 'Mummy Save Me' has received positive response from the critics. Here is the collection of 'Mummy Save Me' reviews by Top News Papers of Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X