For Quick Alerts
  ALLOW NOTIFICATIONS  
  For Daily Alerts

  Lucky Man Review: ತೆರೆಮೇಲೆ ಅಪ್ಪು ನೋಡೋರೇ 'ಲಕ್ಕಿ' ಮ್ಯಾನ್!

  By ಫಿಲ್ಮಿ ಬೀಟ್ ಡೆಸ್ಕ್
  |

  ಅಣ್ಣಾವ್ರ ಮುದ್ದಿನ ಮಗ.. ದೊಡ್ಮನೆಯ ರಾಜಕುಮಾರ.. ಪುನೀತ್ ರಾಜ್ಕುಮಾರ್ ಇನ್ನಿಲ್ಲ ಅನ್ನೋ ಮಾತನ್ನು ಇಂದಿಗೂ ಅರಗಿಸಿಕೊಳ್ಳುದು ಕಷ್ಟ. ಆದರೆ ಅವರಿಲ್ಲ ಅನ್ನೋ ಕೊರಗನ್ನು ಅಭಿಮಾನಿ ದೇವರುಗಳು ಎಂದಿಗೂ ತೋರಿಸಿಕೊಂಡಿಲ್ಲ. ಸಾಕ್ಷಾತ್ ಪರಮಾತ್ಮನಂತೆ ಅವರನ್ನು ಇಂದಿಗೂ ಆರಾಧಿಸುತ್ತಲೇ ಬಂದಿದ್ದಾರೆ. ಇದೀಗ ಅದೇ ಪರಮಾತ್ಮನ ದರ್ಶನವಾಗಿದೆ. ಅದೂ 'ಲಕ್ಕಿ ಮ್ಯಾನ್' ಸಿನಿಮಾ ಮೂಲಕ ಅಪ್ಪು ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ ಈ ಸಿನಿಮಾ ಇದ್ದಾರೆ ಅನ್ನೋ ಕಾರಣಕ್ಕೆ ಈ ಮಟ್ಟಿಗೆ ಕ್ರೇಜ್ ಸೃಷ್ಟಿಸಿದೆ. ಯಾಕಂದ್ರೆ, ಇದು ದೇವರ ಪುತ್ರ, ಅಭಿಮಾನಿಗಳ ಪರಮಾತ್ಮ ಅಪ್ಪು ಕೊನೆಯಾಗಿ ಕಾಣಿಸಿಕೊಂಡಿರೊ ಕಮರ್ಷಿಯಲ್ ಸಿನಿಮಾ.

  Rating:
  3.0/5

  ಇದು ಕಾಕತಾಳೀಯವೋ ಏನೋ ಸಿನಿಮಾದಲ್ಲಿ ಅಪ್ಪು ದೇವರಾಗಿಯೇ ದರ್ಶನ ಕೊಟ್ಟಿದ್ದಾರೆ. ಇದು ತಮಿಳಿನ ಸೂಪರ್‌ ಹಿಟ್ ಸಿನಿಮಾ 'ಓ ಮೈ ಕಡವುಲೆ' ರಿಮೇಕ್ ಅನ್ನೋದು ಈಗಾಗಲೇ ಗೊತ್ತಿದೆ. ಇಂತಹ ಸೂಪರ್ ಹಿಟ್ ಸಿನಿಮಾ ಕನ್ನಡಕ್ಕೆ ಬಂದಾಗ ನಿರೀಕ್ಷೆಗಳು ಸಹಜ. ಅದರಲ್ಲೂ ಅಪ್ಪು ಕೊನೆಯ ಕಮರ್ಷಿಯಲ್ ಸಿನಿಮಾ ಅಂದಾಗ ಆ ನಿರೀಕ್ಷೆ ದುಪ್ಪಟ್ಟಾಗೋದು ಸಹಜ.

  Lucky Man Twitter Review : ಲಕ್ಕಿಮ್ಯಾನ್ ಪ್ರೀಮಿಯರ್ ಶೋ ನೋಡಿದ ಅಪ್ಪು ಫ್ಯಾನ್ಸ್ ಏನಂದ್ರು?; ಇಲ್ಲಿದೆ ಟ್ವಿಟರ್ ರೆಸ್ಪಾನ್ಸ್Lucky Man Twitter Review : ಲಕ್ಕಿಮ್ಯಾನ್ ಪ್ರೀಮಿಯರ್ ಶೋ ನೋಡಿದ ಅಪ್ಪು ಫ್ಯಾನ್ಸ್ ಏನಂದ್ರು?; ಇಲ್ಲಿದೆ ಟ್ವಿಟರ್ ರೆಸ್ಪಾನ್ಸ್

  'ಲಕ್ಕಿ ಮ್ಯಾನ್' ಸ್ಟೋರಿ ಏನು?

  'ಲಕ್ಕಿ ಮ್ಯಾನ್' ಸ್ಟೋರಿ ಏನು?

  ಕಥೆ ವೇರಿ ಸಿಂಪಲ್. ನಾವು ಏನೇ ತಪ್ಪು ಮಾಡಿದ್ರೂ ಕೊನೆಗೆ ದೂರೋದು ದೇವರನ್ನೇ.. ನೀನೇ ಇದಕ್ಕೆಲ್ಲಾ ಕಾರಣ ಅಂತಾ ಹೇಳಿ ಬಿಡುತ್ತೇವೆ. ಆದರೆ, ಅದೇ ದೇವರು ನಿಮ್ಮ ಲೈಫ್‌ನಲ್ಲಿ ಮತ್ತೆ ಸೆಕೆಂಡ್ ಚಾನ್ಸ್ ಕೊಟ್ರೆ ಏನ್ ಮಾಡ್ತೀರಾ..? ಅನ್ನೋದೆ ಈ ಸಿನಿಮಾದ ಒನ್‌ ಲೈನ್ ಸ್ಟೋರಿ. ನಾಯಕ ಅರ್ಜುನ್, ಕೊಂಚ ಉಡಾಫೆ ಹುಡುಗ. ತನ್ನ ಬಾಲ್ಯದ ಗೆಳತಿ ಅನು ಮದುವೆಯಾಗ್ತೀಯಾ ಅಂತಾ ಕೇಳಿದಕ್ಕೆ ಹಿಂದೆ ಮುಂದೆ ನೋಡದೆ ಮದುವೆಗೆ ಒಪ್ಪಿ ಮದುವೆ ಆಗ್ತಾನೆ. ಗೆಳತಿಯನ್ನು ಹೆಂಡತಿಯಾಗಿ ಸ್ವೀಕರಿಸದೇ ಇದ್ದರೂ, ಒಂದಷ್ಟು ದಿನ ಚೆನ್ನಾಗಿಯೇ ಇರುತ್ತೆ. ಮೂರು ವಾರ ಕಳೆದ ಮೇಲೆ ಮಾವನ ಆಫೀಸ್‌ನಲ್ಲಿಯೇ ಕೆಲಸಕ್ಕೆ ಸೇರುವ ಅರ್ಜುನ್‌ಗೆ ಆ ಕೆಲಸ ಮೇಲೆ ಜಿಗುಪ್ಸೆ ಶುರುವಾಗುತ್ತೆ. ಅದೇ ವೇಳೆ ಅರ್ಜುನ್‌ಗೆ ತನ್ನ ಸೀನಿಯರ್ ಮೀರಾ ಭೇಟಿ ಆಗುತ್ತೆ. ಆಕೆ ಸಿನಿಮಾದಲ್ಲಿ ಕೆಲಸ ಮಾಡೋ ಹುಡುಗಿ. ಸಿನಿಮಾ ಮೇಲಿನ ಆಸಕ್ತಿ, ಮೀರಾ ಮೇಲಿನ ಕ್ರಷ್, ಆಕೆಯ ಜೊತೆ ಹೆಚ್ಚು ಆಪ್ತರಾಗುವಂತೆ ಮಾಡುತ್ತೆ. ಅದೇ ಕೊನೆಗೆ ಅರ್ಜುನ್ ಹಾಗೂ ಅನು ನಡುವೆ ದೊಡ್ಡ ಬಿರುಕು ತಂದು ಡಿವೋರ್ಸ್‌ವರೆಗೂ ತಂದು ನಿಲ್ಲಿಸುತ್ತೆ. ಮುಂದೇನಾಗುತ್ತೆ ಅನ್ನೋದು ಕಥೆ.

  ಫಸ್ಟ್ ಹಾಫ್, ಸೆಕೆಂಡ್ ಹಾಫ್ ಹೇಗಿದೆ?

  ಫಸ್ಟ್ ಹಾಫ್, ಸೆಕೆಂಡ್ ಹಾಫ್ ಹೇಗಿದೆ?

  ಪರಮಾತ್ಮನಿಂದ ನಾಯಕ ತನ್ನ ಲೈಫ್ ಅನ್ನ ಸರಿ ಪಡಿಸಿಕೊಳ್ಳಲು ಎರಡನೇ ಚಾಲ್ಸ್ ಸಿಗುತ್ತೆ. ಆ ಎರಡನೇ ಛಾನ್ಸ್‌ನಲ್ಲಿ ನಾಯಕ ತನ್ನ ಬದುಕನ್ನು ಸರಿ ಪಡಿಸಿಕೊಳ್ತಾನಾ..? ಅರ್ಜುನ್ ಹಾಗೂ ಅನು ಒಂದಾಗ್ತಾರಾ ? ಇಲ್ಲಾ ಅರ್ಜುನ್ ಮೀರಾ ಜೊತೆ ಹೋಗ್ತಾನಾ ? ಅನ್ನೋದು ಥಿಯೇಟರ್‌ನಲ್ಲಿಯೇ ನೋಡಬೇಕು. ಸಿನಿಮಾ ಮೊದಲಾರ್ಧ ಭರಪೂರ ಕಾಮಿಡಿ ಇದೆ. ಅಪ್ಪು ಹಾಗೂ ಸಾಧುಕೋಕಿಲಾ ಝುಗಲ್ ಬಂಧಿ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡುತ್ತೆ. ಇನ್ನು ಸೆಕೆಂಡ್ ಹಾಫ್ ಕಾಮಿಡಿ ಜೊತೆ ಭಾವನಾತ್ಮಕ ಸನ್ನಿವೇಶಗಳ ಎದುರಾಗುತ್ತೆ.

  ಎರಡನೇ ಚಾನ್ಸ್ ಸಿಗಬಾರದಿತ್ತೇ?

  ಎರಡನೇ ಚಾನ್ಸ್ ಸಿಗಬಾರದಿತ್ತೇ?

  'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಅಪ್ಪುನ ನೋಡ್ತಾ ನೋಡ್ತಾನೆ ಕಣ್ಣ ಹನಿಗಳು ಕೆನ್ನೆಯೊಂದಿಗೆ ಮಾತಿಗಿಳಿದು ಬಿಡ್ತಾವೆ. ಆ ಕ್ರೂರ ವಿಧಿ ಮೇಲೆ ಹಿಡಿ ಶಾಪ ಹಾಕದೆ ಇರಲು ಸಾಧ್ಯವೇ ಇಲ್ಲ. ಆ ದೇವರೇ ಸಿನಿಮಾದಲ್ಲಿ ನಾಯಕನಿಗೆ ಎರಡನೇ ಚಾನ್ಸ್ ಕೊಟ್ಟಂತೆ, ಅಪ್ಪುಗೂ ಎರಡನೇ ಚಾನ್ಸ್ ಕೊಡಬಾರದಿತ್ತಾ ಅನ್ನೋ ನೋವು ಕಾಡುತ್ತೆ. ಇಡೀ ಸಿನಿಮಾದ ಹೈಲೈಟ್ ಪುನೀತ್ ರಾಜ್‌ಕುಮಾರ್. ನಿಜಕ್ಕೂ ದೇವರು ಅಂತ ಅನಿಸಿಬಿಡುತ್ತಾರೆ.

  ಉಳಿದ ಪಾತ್ರಗಳು ಹೇಗಿವೆ?

  ಉಳಿದ ಪಾತ್ರಗಳು ಹೇಗಿವೆ?

  ಅರ್ಜುನ್ ನಾಗಪ್ಪ ಆಗಿ ಕೃಷ್ಣ ಅದ್ಭುತವಾಗಿ ನಟಿಸಿದ್ದಾರೆ. ತುಂಟ, ಉಡಾಫೆ ಹುಡುಗನಾಗಿ, ಪ್ರೀತಿಗಾಗಿ ಒದ್ದಾಡುವ ಪ್ರೇಮಿಯಾಗಿ ಕೃಷ್ಣ ಅಭಿಮಾನಿಗಳ ಮನಸ್ಸು ಕದಿಯುತ್ತಾರೆ. ಅನು ಆಗಿ ಸಂಗೀತಾ ಶೃಂಗೇರಿ ಸೆಟಲ್ ಆಕ್ಟ್ ಮಾಡಿದರೆ, ಮೀರಾ ಪಡ್ಡೆ ಹುಡುಗರ ಮನಸ್ಸಿನಲ್ಲಿ ಮನೆ ಮಾಡಿ ಬಿಡುತ್ತಾರೆ. ರಂಗಾಯಣ ರಘು ಕಾಮಿಡಿಯನ್ ನಗಿಸೋವುದಷ್ಟೇ ಅಲ್ಲಾ, ಭಾವುಕತೆಯಿಂದ ಎಲ್ಲರನ್ನು ಅಳಿಸುತ್ತಾರೆ. ನಾಗಭೂಷನ್ ಕಾಮಿಡಿಗೆ ಫುಲ್ ಮಾರ್ಕ್ಸ್ ಕೊಡಲೇ ಬೇಕು. ಅರ್ಜುನ್ ತಂದೆ ತಾಯಿಯಾಗಿ ಕಾಣಿಸಿಕೊಂಡಿರೋ ಹಿರಿಯ ನಟ ಸುಂದರ್ ರಾಜ್ ಹಾಗೂ ಸುಧಾ ಬೆಳವಾಡಿ ಪಾತ್ರಗಳು ಕಾಡುವಂತಿವೆ.

  ನಾಗೇಂದ್ರ ಪ್ರಸಾದ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್!

  ನಾಗೇಂದ್ರ ಪ್ರಸಾದ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್!

  ಪ್ರೀತಿ, ಪ್ರೇಮ, ಸ್ನೇಹ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳದ ಇಂದಿನ ಯುವಕರ ಒದ್ದಾಟ, ಪೀಕಲಾಟ, ತೊಳಲಾಟ, ಎಲ್ಲವನ್ನೂ ನಿರ್ದೇಶಕ ನಾಗೇಂದ್ರ ಪ್ರಸಾದ್ ಬ್ಯೂಟಿಫುಲ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ. ಇದು ತಮಿಳಿನ ರಿಮೇಕ್ ಸಿನಿಮಾ ಆದರೂ, ಕನ್ನಡದ ನೇಟಿವಿಟಿಗೆ ಹೇಗೆ ಬೇಕೋ ಹಾಗೆ ಚಿತ್ರಿಸಿದ್ದಾರೆ. ಮೂಲ ಸಿನಿಮಾದಂತೆ ನಮ್ಮ 'ಲಕ್ಕಿ ಮ್ಯಾನ್‌'ಗೂ ಹೆಚ್ಚು ಮಾರ್ಕ್ಸ್ ಕೊಡಬಹುದು.

  ಮೈನಸ್ ಕೂಡ ಇದೆ

  ಮೈನಸ್ ಕೂಡ ಇದೆ

  ಇಷ್ಟೆಲ್ಲಾ ಪ್ಲಸ್ ಪಾಯಿಂಟ್ ಇದ್ದರೂ, ಚಿತ್ರದಲ್ಲಿ ನ್ಯೂನತೆಗಳು ಇಲ್ವಾ ಅನ್ನೋ ಹಾಗಿಲ್ಲಾ. ಈ ಚಿತ್ರದಲ್ಲಿ ಒಂದಷ್ಟು ಪಾತ್ರಗಳ ಆಯ್ಕೆಯಲ್ಲಿ ನಿರ್ದೇಶಕರು ಇನ್ನೂ ಜಾಣ್ಮೆಯನ್ನು ತೊರಬಹುದಿತ್ತು. ಅನು ಮದುವೆ ಆಗಲು ಬರುವ ಮ್ಯಾಥೀವ್ ಪಾತ್ರಕ್ಕೆ ಒಳ್ಳೆಯ ನಟನನ್ನು ಆಯ್ಕೆ ಮಾಡಿಕೊಳ್ಬಹುದಿತ್ತು. ಹಾಗೆಯೇ ಮೀರಾ ಲವರ್ ಪಾತ್ರ ಕೂಡ. ಇದರ ಜೊತೆಗೆ ಸೆಕೆಂಡ್ ಆಫ್‌ನಲ್ಲಿ ಅಲ್ಲಲ್ಲಿ ಅಪ್ಪು ಬಂದೋಗಿದಿದ್ರೆ, ಸಿನಿಮಾ ಮತ್ತಷ್ಟು ಪವರ್‌ಫುಲ್ ಆಗಿರುತ್ತಿತ್ತು. ಅದೇನೇ ಇದ್ದರೂ, ಇದು ಪರಮಾತ್ಮನ ಸಿನಿಮಾ. ಅಪ್ಪುನ ನೋಡೋದೆ ಇಲ್ಲಿ ಸಂಭ್ರಮ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಕೊನೆಯಲ್ಲಿ ಅಪ್ಪು ಹಾಗೂ ಪ್ರಭುದೇವಾ ಡ್ಯಾನ್ಸ್ ನೋಡ್ತಿದ್ರೆ ಮೈ ಝಮ್ ಎನ್ನುತ್ತೆ. ಇಡೀ ಕುಟುಂಬ ಕೂತು ಯಾವುದೇ ಮುಜಗರ ಇಲ್ಲದೆ ಆರಾಮಾಗಿ 'ಲಕ್ಕಿ ಮ್ಯಾನ್' ಸಿನಿಮಾವನ್ನು ಕಣ್ತುಂಬಿಕೊಳ್ಬಹುದು.

  English summary
  Puneeth Rajkumar Darling Krishna Starrer Lucky Man Movie Kannada Review, Know More.
  Friday, September 9, 2022, 16:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X