twitter
    For Quick Alerts
    ALLOW NOTIFICATIONS  
    For Daily Alerts

    'ಅಂಜನಿಪುತ್ರ' ನೋಡಿದ ವಿಮರ್ಶಕರಿಗೆ ಇಷ್ಟವಾಗಿದ್ದೇನು? ಕಷ್ಟವಾಗಿದ್ದೇನು?

    By Bharath Kumar
    |

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ನೋಡಿದ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಅಪ್ಪು ಆಕ್ಟಿಂಗ್, ಅಪ್ಪು ಡ್ಯಾನ್ಸ್, ಅಪ್ಪು ಫೈಟ್ ನೋಡಿ ಫಿದಾ ಆಗಿದ್ದಾರೆ.

    ಆದ್ರೆ, ಚಿತ್ರ ವಿರ್ಮಕರು ಅದ್ಯಾಕೋ ಕೊಂಚ ನಿರಾಸೆಗೊಂಡಂತೆ ಕಾಣುತ್ತಿದೆ. ಪುನೀತ್ ಪರ್ಫಾಮೆನ್ಸ್ ಬಗ್ಗೆ ಖುಷಿಯಾಗಿರುವ ಸಿನಿಮಾ ವಿಮರ್ಶಕರು, ನಿರ್ದೇಶಕ ಹರ್ಷ ಅವರ ಪ್ರೆಸೆಂಟೆಶನ್ ಗೆ ಬೇಸರಗೊಂಡಿದ್ದಾರೆ. ಅದನ್ನ ತಮ್ಮ ಬರವಣಿಗೆ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.

    ಹಾಗಿದ್ರೆ, ಅಂಜನಿಪುತ್ರ ಚಿತ್ರವನ್ನ ನೋಡಿದ ವಿಮರ್ಶಕರು ಚಿತ್ರದ ಬಗ್ಗೆ ಏನಂದ್ರು? ಚಿತ್ರದಲ್ಲಿ ಏನಿಷ್ಟ ಆಯ್ತು? ಏನಿಷ್ಟ ಆಗಿಲ್ಲ? ಕರ್ನಾಟಕ ಜನಪ್ರಿಯ ದಿನ ಪತ್ರಿಕೆಗಳು ಪ್ರಕಟಿಸಿರುವ ವಿಮರ್ಶೆಯ ಕೆಲಕ್ಷನ್ ಇಲ್ಲಿದೆ ನೋಡಿ..

    ಕಥೆಯಲ್ಲಿ ಧಮ್ಮಿಲ್ಲ, ಅಭಿಮಾನಿಗಳಿಗೆ ನಿರಾಸೆ ಇಲ್ಲ

    ಕಥೆಯಲ್ಲಿ ಧಮ್ಮಿಲ್ಲ, ಅಭಿಮಾನಿಗಳಿಗೆ ನಿರಾಸೆ ಇಲ್ಲ

    ''ತಮಿಳು ಕಥೆಯನ್ನು ಕನ್ನಡಕ್ಕೆ ತರುವಾಗ ಅವರು ಪುನೀತ್‌ ಇಮೇಜ್‌ ಅನ್ನು ಗಮನದಲ್ಲಿಟ್ಟುಕೊಂಡು ಕೆಲವು ಬದಲಾವಣೆ ಮಾಡಿಕೊಂಡಿದ್ದಾರೆಯೇ ವಿನಾ ಅದನ್ನು ಕನ್ನಡದ ಕಥೆಯಾಗಿಸುವ ಯಾವ ಸಾಧ್ಯತೆಯ ಕಡೆಗೂ ಗಮನಹರಿಸಿಲ್ಲ. ತಮ್ಮ ಹಿಂದಿನ ಸಿನಿಮಾಗೆ ಹೋಲಿಸಿದರೆ ರಶ್ಮಿಕಾ ಮಂದಣ್ಣ, ಇನ್ನೊಂದಿಷ್ಟು ಬಗೆಯ ಮುಖಭಾವಗಳನ್ನು ಕಲಿತುಕೊಂಡಿದ್ದಾರೆ. ರವಿಶಂಕರ್‌ ಅವರಿಗೆ ಅಬ್ಬರಿಸಲು ಹೆಚ್ಚು ಅವಕಾಶವಿಲ್ಲ. ಖಳನಾಗಿ ಮುಖೇಶ್ ತಿವಾರಿ ಗಮನಸೆಳೆಯುತ್ತಾರೆ. ರಮ್ಯಕೃಷ್ಣ ತಮ್ಮ ಪಾತ್ರದ ಅಗತ್ಯವನ್ನು ತುಂಬಿದ್ದಾರೆ. ದೊಡ್ಡಪರದೆಯ ಮೇಲೆ ಪುನೀತ್‌ ಅವರನ್ನು ಒಂದಿಷ್ಟು ಹೊತ್ತು ಆರಾಧನಾಭಾವದಿಂದ ನೋಡಲು ಬಯಸುವವರಿಗೆ ಈ ಚಿತ್ರ ಇಷ್ಟವಾಗಬಹುದು'' - ಪ್ರಜಾವಾಣಿ

    ಸಾಮಾನ್ಯ ಸ್ಟೋರಿಗೆ ಪುನೀತ್‌ ನಟನೆಯೇ ಟಾನಿಕ್

    ಸಾಮಾನ್ಯ ಸ್ಟೋರಿಗೆ ಪುನೀತ್‌ ನಟನೆಯೇ ಟಾನಿಕ್

    ''ಒಂದು ಕುಟುಂಬ ಹಿನ್ನೆಲೆಯಲ್ಲಿ ಚಿತ್ರ ಮೂಡಿ ಬಂದಿದ್ದು, ಕಥಾನಾಯಕ ಆ ಕುಟುಂಬದ ಗೌರವ ಉಳಿಸಲು ಖಳನನ್ನು ಸದೆಬಡಿವ ಸಾಮಾನ್ಯ ಕತೆ ಇಲ್ಲಿದೆ. ಆದರೆ, ಈ ಚಿತ್ರ ಇಷ್ಟವಾಗುವುದು ಪುನೀತ್‌ರ ಲವಲವಿಕೆಯ ನಟನೆ ಮತ್ತು ವೇಗವಾಗಿ ಓಡುವ ಚಿತ್ರಕತೆಯಿಂದ. ಮೂಲ ಕತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಪುನೀತ್‌ ಅಭಿಮಾನಿಗಳಿಗಾಗಿ ಚಿತ್ರಕತೆಯಲ್ಲಿ ಕೊಂಚ ಬದಲಿಸಿಕೊಂಡಿದ್ದಾರೆ ನಿರ್ದೇಶಕರು. ಎಂದಿನಂತೆ ಪುನೀತ್‌ ತಮ್ಮ ಪಾತ್ರದಲ್ಲಿ ಮಿಂದೆದ್ದಿದ್ದಾರೆ. ಕಥಾ ನಾಯಕಿ ರಶ್ಮಿಕಾ ಮಂದಣ್ಣ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಕಮರ್ಷಿಯಲ್ ಆಗಿ ಮೂಡಿ ಬಂದಿರುವ ಈ ಅಂಜನಿಪುತ್ರನನ್ನು ಒಮ್ಮೆ ಕುಟುಂಬ ಸಮೇತರಾಗಿ ದರ್ಶನ ಮಾಡಿಕೊಂಡು ಬರಬಹುದು'' - ವಿಜಯ ಕರ್ನಾಟಕ

    'ಅಬ್ಬರ'ದ ಅಂಜನಿಪುತ್ರ

    'ಅಬ್ಬರ'ದ ಅಂಜನಿಪುತ್ರ

    ''ಮೊದಲಾರ್ಧದಲ್ಲಿ ಪಕ್ಕಾ ಕಮರ್ಷಿಯಲ್ ಸೂತ್ರಗಳೇ ತುಂಬಿ ತುಳುಕಿವೆ. ದ್ವಿತೀಯಾರ್ಧದಲ್ಲಿ ಸೆಂಟಿಮೆಂಟ್ ರಾರಾಜಿಸಿದೆ. ಆದರೆ ಯಾವುದಕ್ಕೂ ಸೂಕ್ತ ನ್ಯಾಯ ಸಲ್ಲಿಸಲಾಗಿಲ್ಲ ಎನಿಸುತ್ತದೆ. ನಗಿಸುವ ವಿಚಾರದಲ್ಲಿ ಚಿತ್ರದ ಹಾಸ್ಯ ಕಲಾವಿದರು ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಚೇತನ್​ಕುಮಾರ್ ಮತ್ತು ರಘು ನಿಡುವಳ್ಳಿ ಬರೆದ ಸಂಭಾಷಣೆ ಕೂಡ ಇಲ್ಲಿನ ಹೈಲೈಟ್. ಸಾಹಸ ದೃಶ್ಯಗಳಲ್ಲಿ ಹೊಸತನ ಕಮ್ಮಿ, ಅಬ್ಬರ ಜಾಸ್ತಿ. ಚಿತ್ರದುದ್ದಕ್ಕೂ ಪುನೀತ್ ಆವರಿಸಿಕೊಂಡಿರುವುದರಿಂದ ನಾಯಕಿ ರಶ್ಮಿಕಾ ಪಾತ್ರ ಸಾಧಾರಣ'' - ವಿಜಯವಾಣಿ

    Anjaniputhraa Movie Review

    Anjaniputhraa Movie Review

    ''Raja is a money lender, who is staying away from his family due to unforeseen circumstances. When his path crosses with Bhairava, a mafia kingpin involved in contract killing, he has more than one score to settle. How does their fight end. This film is a mass entertainer at heart, what with over two dozen dialogues praising the hero through the course of the film. Anjaniputhraa may not be one of the most compelling commercial films of the year, but it does have its moments that are more than worth it for die-hard Appu fanatics to make a beeline at the cinema halls'' - Times of India

    ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಕಟವಾಗಿದ್ದ ಅಂಜನಿಪುತ್ರ ಚಿತ್ರದ ರಿವ್ಯೂ ಇಲ್ಲಿದೆ ಓದಿ.....

    ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ " ಅಂಜನಿಪುತ್ರ "

    English summary
    Kannada Actor Puneeth Rajkumar starrer Anjaniputra has been released yesterday (december 21st). A Harsha directed the film, Rashmika Mandanna female lead opposite puneeth rajkumar, film received a mixed response by critics.
    Friday, December 22, 2017, 12:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X