twitter
    For Quick Alerts
    ALLOW NOTIFICATIONS  
    For Daily Alerts

    ಸಜ್ಜನಿಕೆಯ ಸೂತ್ರ ಹಿಡಿದು ಬಂದ ಅಂಜಿಕೆಯಿಲ್ಲದ "ಅಂಜನಿಪುತ್ರ"

    |

    Recommended Video

    Anjaniputra : Movie Review | ಅಂಜನೀಪುತ್ರ : ಸಿನಿಮಾ ವಿಮರ್ಶೆ | Filmibeat Kannada

    'ರಾಜಕುಮಾರ' ಸಿನಿಮಾದ ನಂತರ ಪಕ್ಕಾ ಕಮರ್ಷಿಯಲ್ ಸಿನಿಮಾದಲ್ಲಿ ಪವರ್ ಸ್ಟಾರ್ ಅವರನ್ನ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ 'ಅಂಜನಿಪುತ್ರ' ಹೇಳಿ ಮಾಡಿಸಿದ ಸಿನಿಮಾ. ತಾಯಿ ಮಗನ ವಾತ್ಸಲ್ಯ, ಮುದ್ದಾದ ಲವ್ ಸ್ಟೋರಿ ಜೊತೆಯಲ್ಲಿ ಕಂಪ್ಲೀಟ್ ಕಾಮಿಡಿ ಬಯಸುವ ಪ್ರೇಕ್ಷಕರಿಗೆ 'ಅಂಜನಿಪುತ್ರ' ಚಿತ್ರ ಮೋಸ ಮಾಡುವುದಿಲ್ಲ. ಅಭಿಮಾಗಳ ಸ್ಟೈಲ್ ನಲ್ಲಿ ಹೇಳುವುದಾದರೆ ಅಂಜನಿಪುತ್ರ ಪಕ್ಕಾ ಕಮರ್ಷಿಯಲ್ ಸಿನಿಮಾ.

    Rating:
    3.0/5
    Star Cast: ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ, ರಮ್ಯಾಕೃಷ್ಣ, ಚಿಕ್ಕಣ್ಣ
    Director: ಎ ಹರ್ಷ

    ಮನೆಗೆ ಮಗ-ಊರಿಗೆ ಸೇವಕ 'ಅಂಜನಿಪುತ್ರ'

    ಮನೆಗೆ ಮಗ-ಊರಿಗೆ ಸೇವಕ 'ಅಂಜನಿಪುತ್ರ'

    ಅಂಜನಿಪುತ್ರ....ತುಂಬು ಕುಟುಂಬದ ಕಥೆ. ನಾವು ಯಾರ ತಂಟೆಗೂ ಹೋಗುವುದಿಲ್ಲ ನಮ್ಮ ಕುಟುಂಬದ ತಂಟೆಗೆ ಬಂದರೆ ಸುಮ್ಮನೇ ಇರುವುದಿಲ್ಲ ಎಂಬ ಮಾತು ಈ ಚಿತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತೆ. ಸಮಾಜದ ಮುಂದೆ ಮುಖವಾಡ ಹಾಕಿಕೊಂಡು ಮೋಸ ಮಾಡುತ್ತಿದ್ದ ಖಳನಾಯಕನನ್ನ ಹೇಗೆ ನಾಶ ಮಾಡುತ್ತಾನೆ ಎನ್ನುವ ಸಿಂಪಲ್ ಕತೆಯೇ 'ಅಂಜನಿಪುತ್ರ'

    ಅಂಜನಾದೇವಿಯ ಪುತ್ರ ಅಂಜನಿಪುತ್ರ

    ಅಂಜನಾದೇವಿಯ ಪುತ್ರ ಅಂಜನಿಪುತ್ರ

    ಚಿತ್ರದ ನಾಯಕ ವಿರಾಜ್ ಯಾವುದೋ ಸಣ್ಣ ಕಾರಣಕ್ಕಾಗಿ ತಾಯಿಯಿಂದ ದೂರವಾಗಿ ಬೆಂಗಳೂರಿನ ಮಾರುಕಟ್ಟೆಯ ಸಣ್ಣ ಮನೆಯಲ್ಲಿ ವಾಸವಿರುತ್ತಾನೆ. ಅನಿರೀಕ್ಷಿತವಾಗಿ ನಾಯಕಿಯ ಭೇಟಿಯಾಗಿ ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತೆ. ತಾನೇ ಪ್ರೀತಿ ಹೇಳಿಕೊಳ್ಳಬೇಕು ಅನ್ನುವ ಮುಂಚೆಯೇ ನಾಯಕಿ ಮನದಲ್ಲೂ ನಾಯಕ ವಿರಾಜ್ ಮೇಲೆ ಪ್ರೀತಿ ಆಗುತ್ತೆ. ನಾಯಕ ಮನೆಯವರ ಜೊತೆಯಿಲ್ಲದೇ ಇರುವುದನ್ನೇ ಕಾದಿದ್ದ ಖಳನಾಯಕ ಬೈರವ, ಹೀರೋ ತಾಯಿ ಹಾಗೂ ಹಳ್ಳಿಯವರಿಗೆ ತೊಂದರೆ ಕೊಡಲು ಪ್ರಾರಂಭಿಸುತ್ತಾನೆ. ಕಷ್ಟದ ಸಮಯದಲ್ಲಿ ತಾಯಿ ಅಂಜನಾದೇವಿಯ ಸಹಾಯಕ್ಕೆ ಬರುವನೇ ಅಂಜನಿಪುತ್ರ.

    ನಟನೆಯಲ್ಲಿ ಖಳನಾಯಕರದ್ದೇ ಮೇಲುಗೈ

    ನಟನೆಯಲ್ಲಿ ಖಳನಾಯಕರದ್ದೇ ಮೇಲುಗೈ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ ಸೇರಿದಂತೆ ಸಿನಿಮಾದಲ್ಲಿ ಅದ್ಧೂರಿ ತಾರಾ ಬಳಗವಿದೆ. ರಮ್ಯಾಕೃಷ್ಣ, ಚಿಕ್ಕಣ್ಣ, ಮುಖೇಶ್ ತಿವಾರಿ, ಅಖಿಲೇಂದ್ರ ಮಿಶ್ರಾ, ಸಾಧುಕೋಕಿಲ, ಹರಿಪ್ರಿಯಾ, ವಿ ಮನೋಹರ್ ಇನ್ನೂ ಅನೇಕರು ಚಿತ್ರದಲ್ಲಿದ್ದಾರೆ. ಅಭಿನಯದ ವಿಚಾರದಲ್ಲಿ ಮುಖೇಶ್ ತಿವಾರಿ ನೋಡುಗರ ಗಮನ ಸೆಳೆಯುತ್ತರೆ.

    ನಗುವಿಗಷ್ಟೇ ಸೀಮಿತವಾದ 'ರಶ್ಮಿಕಾ ಮಂದಣ್ಣ'

    ನಗುವಿಗಷ್ಟೇ ಸೀಮಿತವಾದ 'ರಶ್ಮಿಕಾ ಮಂದಣ್ಣ'

    'ಕಿರಿಕ್ ಪಾರ್ಟಿ' ಸಿನಿಮಾದ ನಂತರ ರಶ್ಮಿಕಾ ಮಂದಣ್ಣ ಪೂರ್ಣಪ್ರಮಾಣದ ನಾಯಕಿಯಾಗಿ ಅಭಿನಯಿಸಿರುವ ಚಿತ್ರವಿದು. ಸಿನಿಮಾದಲ್ಲಿ ಸಾಕಷ್ಟು ಸೀನ್ ಗಳಿದ್ದರೂ ರಶ್ಮಿಕಾ ನಗುವಿಗಷ್ಟೇ ಸೀಮಿತ ಆಗಿದ್ದಾರೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

    ಅಭಿನಯದಲ್ಲಿ ಪವರ್ ಸ್ಟಾರ್ ಪರ್ಫೆಕ್ಟ್

    ಅಭಿನಯದಲ್ಲಿ ಪವರ್ ಸ್ಟಾರ್ ಪರ್ಫೆಕ್ಟ್

    ಚಿತ್ರಕ್ಕೆ ನಾಯಕನಾಗಿರುವ ಪುನೀತ್ ರಾಜ್ ಕುಮಾರ್ ಎಂದಿನಂತೆ ತೆರೆಮೇಲೆ ಸೂಪರ್ ಅನ್ನಿಸುತ್ತಾರೆ. ಡ್ಯಾನ್ಸ್ ಮತ್ತು ಡೈಲಾಗ್ ಗಳು ಅಭಿಮಾನಿಗಳಿಗೆ ಮಜಾ ನೀಡುತ್ತೆ. ರಮ್ಯಾಕೃಷ್ಣ ಹಾಗೂ ಪುನೀತ್ ಕಾಂಬಿನೇಶನ್ ಸೀನ್ ಗಳನ್ನ ನೋಡುಗರು ಎಂಜಾಯ್ ಮಾಡುತ್ತಾರೆ.

    ರೀ-ರೆಕಾರ್ಡಿಂಗ್ ನಲ್ಲಿ ಹೊಸತನವಿಲ್ಲ

    ರೀ-ರೆಕಾರ್ಡಿಂಗ್ ನಲ್ಲಿ ಹೊಸತನವಿಲ್ಲ

    ಕನ್ನಡ ಸಿನಿಮಾರಂಗದಲ್ಲಿ ಹಿನ್ನೆಲೆ ಸಂಗೀತದಿಂದಲೇ ಗುರುತಿಸಿಕೊಂಡಿರುವ ಸಂಗೀತ ನಿರ್ದೇಶಕ ರವಿ ಬಸ್ರೂರ್, ಅಂಜನಿಪುತ್ರ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿದ್ದಾರೆ. ಚಿತ್ರದ ಹಾಡುಗಳು ನೋಡುವುದಕ್ಕೆ ಖುಷಿ ಕೊಡುತ್ತೆ. ಆದರೆ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ನಲ್ಲಿ ಯಾವುದೇ ಹೊಸತನ ಕಾಣುವುದಿಲ್ಲ.

    ನಿರ್ದೇಶನ-ಸಂಭಾಷಣೆ

    ನಿರ್ದೇಶನ-ಸಂಭಾಷಣೆ

    'ಅಂಜನಿಪುತ್ರ' ರೀಮೆಕ್ ಸಿನಿಮಾ ಆಗಿರುವುದರಿಂದ ಕನ್ನಡದ ಪ್ರೇಕ್ಷಕರಿಗೆ ಬೇಕಾಗುವಂತೆ ಒಂದಿಷ್ಟು ಬದಲಾವಣೆಯನ್ನ ಮಾಡಲಾಗಿದೆ. ಎಂದಿನಿಂತೆ ಹರ್ಷ ಡೈರೆಕ್ಟ್ ಮಾಡುವ ಚಿತ್ರಗಳಂತೆ ಈ ಚಿತ್ರವೂ ಇದೆ. 'ಭರ್ಜರಿ' ಚೇತನ್ ಮತ್ತು ರಘು ನಿಡುವಳ್ಳಿ ಸಂಭಾಷಣೆ ಪ್ರೇಕ್ಷಕರಿಗೆ ಖುಷಿ ನೀಡುತ್ತೆ.

    ಕೊನೆಯದಾಗಿ ಮಾತು

    ಕೊನೆಯದಾಗಿ ಮಾತು

    ಪುನೀತ್ ಸಿನಿಮಾ ಎನ್ನುವುದನ್ನ ಬಿಟ್ಟರೇ, ಚಿತ್ರದಲ್ಲಿ ಹೊಸತನ ಇಲ್ಲ. ಮನರಂಜನೆ ದೃಷ್ಟಿಯಲ್ಲಿ ಅಂಜನಿಪುತ್ರ ಇಷ್ಟವಾಗ್ತಾನೆ. ಹರ್ಷ ಅವರ ರೆಗ್ಯೂಲರ್ ಸಿನಿಮಾ ಇದು ಎನಿಸುತ್ತೆ. ಒಮ್ಮೆ ಸಿನಿಮಾ ನೋಡಲು ಯಾವುದೇ ಅಡ್ಡಿಯಿಲ್ಲ.

    English summary
    Kannada Actor Puneeth Rajkumar starrer Anjaniputra has been released today (december 21st). A Harsha directed the film, Rashmika Mandanna female lead opposite puneeth rajkumar, film received a good response on the first day of release.
    Saturday, September 29, 2018, 13:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X