»   » ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!

ವಿಮರ್ಶೆ; 'ಚಕ್ರವ್ಯೂಹ'ದೊಳ್ ಜನನಾಯಕ ಪುನೀತ್ ಗೆ ಜೈ.!

Posted By:
Subscribe to Filmibeat Kannada

''ಒಬ್ಬ ಡ್ರೈವರ್ ಗೆ ತೊಂದರೆ ಆದರೆ ಎಲ್ಲಾ ಡ್ರೈವರ್ಸ್ ಒಂದಾಗುತ್ತಾರೆ. ಒಬ್ಬ ರಾಜಕಾರಣಿಗೆ ತೊಂದರೆ ಆದರೆ, ಆ ಪಕ್ಷದ ಸದಸ್ಯರೆಲ್ಲಾ ಒಂದಾಗುತ್ತಾರೆ. ಅದೇ ಒಬ್ಬ ಪಬ್ಲಿಕ್ ಗೆ ತೊಂದರೆ ಆದ್ರೆ ಯಾಕೆ ಎಲ್ಲಾ ಪಬ್ಲಿಕ್ ಒಂದಾಗೋಲ್ಲ...?'' - ರಾಜ್ಯದ ಕಾನೂನು ಮಂತ್ರಿಯ ಕುತಂತ್ರಕ್ಕೆ ಬಲಿಯಾಗುವ ಅಮಾಯಕ ಹುಡುಗನ ತಾಯಿಯ ಈ ಹತಾಶೆ ಪ್ರಶ್ನೆ ಕೇಳಿ ಲೋಹಿತ್ (ಪುನೀತ್ ರಾಜ್ ಕುಮಾರ್) ಒಳಗೆ ಅಡಗಿದ್ದ 'ಜನನಾಯಕ' ಪುಟಿದೇಳುತ್ತಾನೆ. ಅಲ್ಲಿಂದ 'ಮುಖವಾಡ' ಧರಿಸುವ ಲೋಹಿತ್, ತಾನು ರಚಿಸುವ 'ಚಕ್ರವ್ಯೂಹ'ದಲ್ಲಿ ದುಷ್ಟರ ಮುಖವಾಡ ಕಳಚಲು ಪ್ರಾರಂಭಿಸುತ್ತಾನೆ.


ಬರೋಬ್ಬರಿ ಒಂದು ವರ್ಷದ ನಂತರ ತೆರೆ ಮೇಲೆ ಮಿಂಚಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಅಕ್ಷರಶಃ 'ಚಕ್ರವ್ಯೂಹ' ಭೇದಿಸುವಲ್ಲಿ ಯಶಸ್ವಿ ಆಗಿದ್ದಾರೆ. [ಪುನೀತ್ ರ 'ಚಕ್ರವ್ಯೂಹ' ಚಿತ್ರದ ಮೊದಲ ವಿಮರ್ಶೆ ಇಲ್ಲಿದೆ ಓದಿ...]

'ಚಕ್ರವ್ಯೂಹ' ಚಿತ್ರದ ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....


Rating:
4.0/5

ಚಿತ್ರ - ಚಕ್ರವ್ಯೂಹ
ಕಥೆ - ಚಿತ್ರಕಥೆ - ನಿರ್ದೇಶನ - ಎಂ.ಸರವಣನ್
ನಿರ್ಮಾಣ - ಎನ್.ಕೆ.ಲೋಹಿತ್
ಸಂಗೀತ ನಿರ್ದೇಶನ - ಎಸ್.ಥಮನ್
ಛಾಯಾಗ್ರಹಣ - ಷಣ್ಮುಗ ಸುಂದರಂ
ಸಂಕಲನ - ಎಂ.ಸುಬಾರಕ್
ತಾರಾಗಣ - ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಭವ್ಯ, ರಂಗಾಯಣ ರಘು ಮತ್ತು ಇತರರು
ಬಿಡುಗಡೆ - ಏಪ್ರಿಲ್ 29, 2016


ಕಥಾಹಂದರ

ದುಷ್ಟರನ್ನ ಮಟ್ಟ ಹಾಕಿ ಸಮಾಜಕ್ಕೆ ಒಳಿತು ಮಾಡುವ ಓರ್ವ 'ಜನನಾಯಕ'ನ ಕಥೆ 'ಚಕ್ರವ್ಯೂಹ'. ಭ್ರಷ್ಟ ರಾಜಕಾರಣಿಗಳಿಂದ ನಲುಗುವ ಅಸಹಾಯಕ ಹಾಗೂ ಅಮಾಯಕರ ಪರ ಬೀದಿಗಿಳಿದು ಹೋರಾಟ ಮಾಡದೆ, 'ಚಕ್ರವ್ಯೂಹ' ರಚಿಸಿ, ಮುಖವಾಡ ಧರಿಸಿ ಹೋರಾಡುವ 'ಬಲಿಷ್ಠ' unknown ಯುವಕನ ಸಾಹಸಗಾಥೆ 'ಚಕ್ರವ್ಯೂಹ'. [ಚಕ್ರವ್ಯೂಹ ಚಿತ್ರ ಬಿಡುಗಡೆ: ಸಿಡ್ನಿಯಿಂದ ಪುನೀತ್ ಮಾಡಿದ ಮನವಿ]


ಕಪಟ ಕಾನೂನು ಮಂತ್ರಿ

ಮಿನಿಸ್ಟರ್ ಖೋಟಾ ಹೆಸರಲ್ಲಿ ಲಾ ಕಾಲೇಜಿನಲ್ಲಿ 20 ಸೀಟ್ ಬೇಕೇಬೇಕು ಅಂತ ಡಿಮ್ಯಾಂಡ್ ಮಾಡುವ ಕಾನೂನು ಮಂತ್ರಿ (ಅಭಿಮನ್ಯು ಸಿಂಗ್). ಆತನ ಕುತಂತ್ರಕ್ಕೆ ಕುಮ್ಮಕ್ಕು ನೀಡುವ ರೌಡಿ ತಮ್ಮ (ಅರುಣ್ ವಿಜಯ್). ಇಬ್ಬರ ದುರ್ಬುದ್ಧಿಗೆ ಲಾ ಕಾಲೇಜ್ ನಲ್ಲಿ ಗಲಭೆ ಉಂಟಾಗುತ್ತೆ. ಅಮಾಯಕ ವಿದ್ಯಾರ್ಥಿಗಳು ಪ್ರಾಣಬಿಡುತ್ತಾರೆ. ['ಚಕ್ರವ್ಯೂಹ' ಜಾತ್ರೆ: ಟ್ವಿಟ್ಟರ್ ನಲ್ಲಿ ಪ್ರೇಕ್ಷಕರ ಮತ್ತು ಅಭಿಮಾನಿಗಳ ವಿಮರ್ಶೆ]


ಒನ್ ಮ್ಯಾನ್ ಆರ್ಮಿ.!

ಅಸಹಾಯಕ ವಿದ್ಯಾರ್ಥಿಗಳ ರೋಧನ, ಮಾರಣ ಹೋಮ ಕಣ್ಣಾರೆ ಕಂಡರೂ, ಕೈ ಕಟ್ಟಿ ಕೂರುವ ಪೊಲೀಸರು, ರಾಜಕಾರಣಿಗಳ ನಡುವೆ ಒನ್ ಮ್ಯಾನ್ ಆರ್ಮಿ ಆಗಿ ಕಾನೂನು ಮಂತ್ರಿ ಹಾಗೂ ಆತನ ರೌಡಿ ಸಹೋದರನನ್ನ ಲೋಹಿತ್ (ಪುನೀತ್ ರಾಜ್ ಕುಮಾರ್) ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಬಾಕಿ ಸ್ಟೋರಿ.


ಅಪ್ಪಟ ಆಕ್ಷನ್ ಸಿನಿಮಾ!

'ಚಕ್ರವ್ಯೂಹ' ಪವರ್ ಫುಲ್ ಸಿನಿಮಾ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಮೇಜ್ ಗೆ ತಕ್ಕುದಾದ ಸಿನಿಮಾ. ಭರ್ಜರಿ ಫೈಟ್ಸ್, ಅದ್ಭುತ ಸ್ಟಂಟ್ಸ್ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದಾರೆ ಅಪ್ಪು.


ಅಪ್ಪು ಪರ್ಫಾಮೆನ್ಸ್ ಹೇಗಿದೆ?

ಪಬ್ಲಿಕ್ ಪರ ನಿಲ್ಲುವ ಎಂಟೆದೆ ಗುಂಡಿಗೆ ಇರುವ 'ಜನನಾಯಕ'ನಾಗಿ ಅಪ್ಪು ಪರ್ಫಾಮೆನ್ಸ್ ಸಿಂಪ್ಲಿ ಸೂಪರ್. ಅಪ್ಪು ಆಕ್ಷನ್ ಮತ್ತು ಡ್ಯಾನ್ಸ್ ಬಗ್ಗೆ ನೋ ಕಾಮೆಂಟ್ಸ್.


ರಚಿತಾ ರಾಮ್ ಆಕ್ಟಿಂಗ್ ಓಕೆನಾ?

ನಟಿ ರಚಿತಾ ರಾಮ್ ಅಭಿನಯದಲ್ಲಿ ನೈಜತೆಗಿಂತ ನಾಟಕೀಯತೆ ಜಾಸ್ತಿ. ಡೈಲಾಗ್ ಡೆಲಿವರಿ ಹಾಗೂ ಮುಖಭಾವದಲ್ಲಿ ರಚಿತಾ ಇನ್ನೂ ಪಳಗಬೇಕು. ಆದರೂ, ಕ್ಲೈಮ್ಯಾಕ್ಸ್ ಸೀನ್ ಗಾಗಿ ರಚಿತಾ ತೋರಿರುವ ಧೈರ್ಯ ಮೆಚ್ಚುವಂತದ್ದು.


ಖಡಕ್ ವಿಲನ್ ಗಳು...

ಕಾನೂನು ಮಂತ್ರಿ ಪಾತ್ರದಲ್ಲಿ ಅಭಿಮನ್ಯು ಸಿಂಗ್ ನಟನೆ ಚೆನ್ನಾಗಿದೆ. ಇನ್ನೂ ಇಡೀ ಚಿತ್ರದಲ್ಲಿ ಅಬ್ಬರಿಸುವ ಅರುಣ್ ವಿಜಯ್ ಮೇಲೆ ಪ್ರೇಕ್ಷಕರಿಗೆ ಸಿಟ್ಟು ಬಂತು ಅಂದ್ರೆ, ಅದಕ್ಕೆ ಅವರು ನೀಡುವ ಉತ್ತಮ ನಟನೆ ಕಾರಣ.


ಉಳಿದವರು...

ಪೊಲೀಸ್ ಅಧಿಕಾರಿ ಆಗಿ ರಂಗಾಯಣ ರಘು ಮನಸ್ಸಲ್ಲಿ ಉಳಿಯುತ್ತಾರೆ. ಪುನೀತ್ ರಾಜ್ ಕುಮಾರ್ ತಾಯಿ ಪಾತ್ರದಲ್ಲಿ ಭವ್ಯ ಇಷ್ಟವಾಗುತ್ತಾರೆ.


ಕಾಮಿಡಿ ಅಷ್ಟಿಲ್ಲ!

ಅಲ್ಲಲ್ಲಿ ಸಾಧು ಕೋಕಿಲ ಕಾಣಿಸಿಕೊಂಡರೂ, 'ಚಕ್ರವ್ಯೂಹ' ಚಿತ್ರದಲ್ಲಿ ಕಾಮಿಡಿ ಅಷ್ಟಿಲ್ಲ.


ಲವ್ ಇಲ್ಲ.! ಸೆಂಟಿಮೆಂಟ್ ಇಲ್ಲವೇ ಇಲ್ಲ.!

ಆಗಲೇ ಹೇಳಿದಂತೆ 'ಚಕ್ರವ್ಯೂಹ' ಅಪ್ಪಟ ಆಕ್ಷನ್ ಸಿನಿಮಾ. ಲವ್ ಸ್ಟೋರಿ ಎಳೆ ಇದ್ದರೂ, ಚಿತ್ರದಲ್ಲಿ 'ಪ್ರೀತಿ-ಪ್ರೇಮ'ಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿಲ್ಲ. ತಾಯಿ ಸೆಂಟಿಮೆಂಟ್ ಕೂಡ ಇಲ್ಲ. ಎಲ್ಲಾ 'ಇಲ್ಲ'ಗಳ ನಡುವೆ ಎಲ್ಲೂ ಅತಿ ಎನಿಸದೆ 'ಚಕ್ರವ್ಯೂಹ' ಅಚ್ಚುಕಟ್ಟಾಗಿ ಇದೆ.


ಥಮನ್ ಸಂಗೀತ ಸುಧೆ.!

ಚಿತ್ರಕಥೆಗೆ 'ಚಕ್ರವ್ಯೂಹ' ಹಾಡುಗಳು ಪೂರಕವಾಗಿದೆ. ಅನಾವಶ್ಯಕವಾಗಿ ಹಾಡುಗಳು ತುರುಕಿಲ್ಲ. ಜೂನಿಯರ್ ಎನ್.ಟಿ.ಆರ್ ಹಾಡಿರುವ ''ಗೆಳೆಯ ಗೆಳೆಯ..'' ಹಾಡಲ್ಲಿ ಕನ್ನಡ ಪದಗಳ ಉಚ್ಛಾರಣೆ ಸ್ಪಷ್ಟವಾಗಿಲ್ಲ ಅನ್ನೋದು ಬಿಟ್ರೆ, ಇರುವ ಮೂರು ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತೆ. 'ಚಕ್ರವ್ಯೂಹ' ಥೀಮ್ ಸಾಂಗ್ ಹಾಗೂ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ.


ಪ್ಲಸ್ ಪಾಯಿಂಟ್ ಏನು?

'ಚಕ್ರವ್ಯೂಹ' ಚಿತ್ರಕಥೆ ತುಂಬಾ ಸಿಂಪಲ್. ಅದನ್ನ ಅಷ್ಟೇ ಜಾಣ್ಮೆ ಇಂದ ತೆರೆ ಮೇಲೆ ತಂದಿರುವ ನಿರ್ದೇಶಕ ಸರವಣನ್, ಸಿನಿಮಾ ಆರಂಭದಿಂದ ಅಂತ್ಯವಾಗುವವರೆಗೂ ಪ್ರೇಕ್ಷಕರ ಗಮನವನ್ನ ಅತ್ತ-ಇತ್ತ ಕದಲದಂತೆ ನೋಡಿಕೊಂಡಿದ್ದಾರೆ.


ರೀಮೇಕ್ ಸಿನಿಮಾ?

'ಚಕ್ರವ್ಯೂಹ' ಚಿತ್ರದ ಕಥಾಹಂದರಕ್ಕೂ, ತಮಿಳಿನ 'ಇವನ್ ವೇರೆಮಾದಿರಿ' ಚಿತ್ರಕಥೆಗೂ ಅಷ್ಟು ವ್ಯತ್ಯಾಸ ಇಲ್ಲ. ಕನ್ನಡ ನೆಲದ ಮಣ್ಣಿನ ಸೊಗಡಿಗೆ ತಕ್ಕಂತೆ 'ಚಕ್ರವ್ಯೂಹ' ಚಿತ್ರದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಲಾಗಿದೆ. ಅಷ್ಟುಬಿಟ್ಟರೆ, 'ಚಕ್ರವ್ಯೂಹ' ಚಿತ್ರದ ಕೆಲವು ಸೀನ್ ಗಳು 'ಇವನ್ ವೇರೆಮಾದಿರಿ' ಚಿತ್ರದಂತೆಯೇ ಇದೆ.


ಫೈನಲ್ ಸ್ಟೇಟ್ ಮೆಂಟ್

ಸಾಮಾಜಿಕ ಕಳಕಳಿ ಇರುವ ಒಂದೊಳ್ಳೆ ಸಿನಿಮಾ 'ಚಕ್ರವ್ಯೂಹ'. ಮನೆ ಮಂದಿಯೆಲ್ಲಾ ಆರಾಮಾಗಿ ಕೂತು ಚಿತ್ರ ನೋಡಬಹುದು. 'ಇವನ್ ವೀರಮಾದಿರಿ' ಚಿತ್ರವನ್ನ ನೀವು ನೋಡಿಲ್ಲ ಅಂದ್ರೆ, ನೀವು ಅಪ್ಪು ಅಭಿಮಾನಿಯಾಗಿದ್ರೆ, ಕೊಡುವ ದುಡ್ಡಿಗೆ 'ಚಕ್ರವ್ಯೂಹ' ಮೋಸ ಅಲ್ಲವೇ ಅಲ್ಲ.


ವಿಡಿಯೋ ನೋಡಿ...

'ಚಕ್ರವ್ಯೂಹ' ಚಿತ್ರದ ಮೊದಲ ಶೋ ರೆಸ್ಪಾನ್ಸ್ ಹೇಗಿತ್ತು ಅಂತ ತಿಳಿಯಲು ಈ ವಿಡಿಯೋ ನೋಡಿ...


English summary
Kannada Actor Puneeth Rajkumar and Kannada Actress Rachita Ram starrer M.Saravanan directorial 'Chakravyuha' movie has hit the screens today (April 29th). Review of the movie is here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada