ಆರ್ ಚಂದ್ರು ಆಕ್ಷನ್ ಕಟ್ ನಲ್ಲಿ ನಟ ನಾಗಾರ್ಜುನ

ಸದ್ಯಕ್ಕೆ ಚಂದ್ರು ಅವರು 'ಚಾರ್ ಮಿನಾರ್' ಚಿತ್ರದಲ್ಲಿ ಬಿಜಿಯಾಗಿದ್ದು ಇದೇ ಚಿತ್ರವನ್ನು ತೆಲುಗು ಭಾಷೆಗೂ ರೀಮೇಕ್ ಮಾಡುತ್ತಿದ್ದಾರೆ. ತೆಲುಗು ಚಾರ್ ಮಿನಾರ್ ಚಿತ್ರಕ್ಕೆ ಹೀರೋ ಆಗಿ ನಟ ನಾಗಾರ್ಜುನ ಹೀರೋ ಎಂದು ಅವರು ವಿವರ ನೀಡಿದ್ದಾರೆ.
ಚಂದ್ರು ಅವರ 'ಕೋ ಕೋ' ಹಾಗೂ 'ಮೈಲಾರಿ' ಚಿತ್ರಗಳನ್ನು ವೀಕ್ಷಿಸಿರುವ ತೆಲುಗು ನಿರ್ಮಾಪಕರೊಬ್ಬರು ಅವರ ಮುಂದಿನ 'ಚಾರ್ ಮಿನಾರ್' ಚಿತ್ರವನ್ನು ತೆಲುಗಿನಲ್ಲೂ ನಿರ್ದೇಶಿಸುವಂತೆ ಮುಂದೆ ಬಂದಿದ್ದಾರೆ.
ಇದೇ ನಿರ್ಮಾಪಕರ ಬಳಿ ನಾಗಾರ್ಜುನ ಡೇಟ್ಸ್ ಸಹ ಇದೆಯಂತೆ. ಇನ್ನೇನು ಆಕ್ಷನ್ ಕಟ್ ಹೇಳುವುದೊಂದು ಬಾಕಿ ಇದೆ. ಇನ್ನು ಕನ್ನಡ 'ಚಾರ್ ಮಿನಾರ್' ಚಿತ್ರದ ಡಿಟಿಎಸ್ ಕೆಲಸ ಭರದಿಂದ ಸಾಗುತ್ತಿದ್ದು 'ಸಂಕ್ರಾಂತಿ' ಹೊತ್ತಿಗೆ ಮೊದಲ ಪ್ರತಿ ಸಿದ್ಧವಾಗಲಿದೆ.
ಇದೊಂದು ರೋಮ್ಯಾಂಟಿಕ್ ಚಿತ್ರವಾಗಿದ್ದು ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಹಾಗೂ ಮೇಘನಾ ಗಾಂವಕರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಗುರು ಕಿರಣ್ ಅವರ ಹಿನ್ನೆಲೆ ಸಂಗೀತ ಹಾಗೂ ಹರಿ ಅವರ ಸಂಗೀತ ಚಿತ್ರಕ್ಕಿದೆ. ಕೆಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ ಚಿತ್ರದ ಇನ್ನೊಂದು ಆಕರ್ಷಣೆ. (ಏಜೆನ್ಸೀಸ್)


Click it and Unblock the Notifications











