twitter
    For Quick Alerts
    ALLOW NOTIFICATIONS  
    For Daily Alerts

    ರಾಂಧವ ಪ್ರೇಯಸಿ 'ವೀರ ರಣಚಂಡಿ' ಆರ್ಭಟಕ್ಕೆ ವಿಮರ್ಶಕರ ಅಭಿಪ್ರಾಯ..

    By Suneel
    |

    ಬೆಳ್ಳಿತೆರೆಯ ಹಾಟ್ ಬ್ಯೂಟಿ, ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅಭಿನಯದ 'ವೀರ ರಣಚಂಡಿ' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹಾಗೆ ಚಿತ್ರ ನೋಡಿದ ಪ್ರೇಕ್ಷಕರು ರಾಗಿಣಿಯ ಚಂಡಿ ಚಾಮುಂಡಿ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.

    'ರಾಗಿಣಿ ಐಪಿಎಸ್' ನಂತರ ಮತ್ತೊಮ್ಮೆ ಆಕ್ಷನ್ ಚಿತ್ರದಲ್ಲಿ ನಟಿಸಿರುವ ರಾಗಿಣಿ 'ವೀರ ರಣಚಂಡಿ'ಯಲ್ಲಿ ಬಹುತೇಕ ರೌಡಿಸಂ ಶೇಡ್ ನಲ್ಲಿ ಕಂಡಿದ್ದರೂ, ಚಿತ್ರ ಸೆಂಟಿಮೆಂಟ್, ಹಾಸ್ಯಗಳಿಂದ ಕೂಡಿದೆ. ರಾಗಿಣಿ ಜನಪ್ರಿಯತೆಗೆ ತಕ್ಕಂತೆ ಮೂಡಿಬಂದಿರುವ ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿದಂತೆ ವಿಮರ್ಶಕರು ಮೆಚ್ಚಿಕೊಂಡ್ರಾ? ರಾಗಿಣಿಯ ಆರ್ಭಟಕ್ಕೆ ವಿಮರ್ಶಕರ ಅಭಿಪ್ರಾಯ ಏನು?..

    ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿರುವ 'ವೀರ ರಣಚಂಡಿ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ. ಓದಿರಿ..

    ರಾಗಿಣಿಯವರ ಜನಪ್ರಿಯತೆ ಬೆನ್ನು ಹತ್ತಿ, ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ : ಪ್ರಜಾವಾಣಿ

    ರಾಗಿಣಿಯವರ ಜನಪ್ರಿಯತೆ ಬೆನ್ನು ಹತ್ತಿ, ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ : ಪ್ರಜಾವಾಣಿ

    ಬಹುತೇಕ ರೌಡಿಸಂ ಸಿನಿಮಾಗಳಲ್ಲಿರುವ ಸಾಮ್ಯತೆ, ರೌಡಿಗಳನ್ನು ವೈಭವೀಕರಿಸುವುದು, ಕ್ರೌರ್ಯವನ್ನು ಹಸಿಹಸಿಯಾಗಿ ತೋರಿಸುವುದು ಹಾಗೂ ಸಿನಿಮಾದ ಕೊನೆಯಲ್ಲಿ ಸಮಾಜ ಘಾತುಕರನ್ನು ನಾಶ ಮಾಡಿ ನಾಯಕ ವಿಜೃಂಭಿಸುವುದು. ಈ ಹೊಡೆದಾಟದ ನಡುವೆ ತಾಯಿಯ ಸೆಂಟಿಮೆಂಟ್‌ಗಳಲ್ಲಿ ಪ್ರೇಕ್ಷಕ ಸಿಲುಕಿಯೂ ಸಿಲುಕದಂತೆ ಇರಬೇಕು ಎನ್ನುವ ಕಾರಣಕ್ಕೆ ಒಂದಿಷ್ಟು ಹಾಸ್ಯ ದೃಶ್ಯಗಳನ್ನು ಸೇರಿಸಿ ನಿರ್ದೇಶಕ ಆನಂದ ಪಿ. ರಾಜು ‘ವೀರ ರಣಚಂಡಿ' ಚಿತ್ರವನ್ನು ರೂಪಿಸಿದ್ದಾರೆ. ಕೆಲವು ಕಡೆ ಚಿತ್ರದಲ್ಲಿ ಅನವಶ್ಯಕ ದೃಶ್ಯಗಳ ಮೂಲಕ ಪ್ರೇಕ್ಷಕನ ತಾಳ್ಮೆ ಪರೀಕ್ಷಿಸಿದ್ದಾರೆ ನಿರ್ದೇಶಕ. ಕಥೆಗೆ ಪೂರಕವಲ್ಲದ ಸಂಭಾಷಣೆ ದೃಶ್ಯಗಳ ಕಾರಣ ಸಿನಿಮಾ ಎಲ್ಲೋ ನಿಂತಂತೆ ಭಾಸವಾಗುತ್ತದೆ. ರಾಗಿಣಿಯವರ ಜನಪ್ರಿಯತೆಯ ಬೆನ್ನು ಹತ್ತಿ, ಅವರ ಅಭಿಮಾನಿಗಳಿಗೆಂದೇ ಮಾಡಿದ ಸಿನಿಮಾ ‘ವೀರ ರಣಚಂಡಿ'. ಸಾಹಸ ದೃಶ್ಯಗಳಲ್ಲಿ ರಾಗಿಣಿ ಅವರನ್ನು ಇನ್ನಷ್ಟು ಸ್ಟೈಲಿಶ್ ಆಗಿ ತೋರಿಸುವ ಅವಕಾಶವನ್ನು ನಿರ್ದೇಶಕರು ಕೈಚೆಲ್ಲಿದ್ದಾರೆ. ರಾಗಿಣಿ ಅವರ ಹೊಡೆದಾಟ ರಂಜಕವಾಗುವಂತೆ ತೋರಿಸಲು ಛಾಯಾಗ್ರಾಹಕ (ಆರ್. ಗಿರಿ) ಮತ್ತು ಸಂಕಲನಕಾರ (ಲಕ್ಷ್ಮಣ ಎನ್. ರೆಡ್ಡಿ) ಸಾಕಷ್ಟು ಕಸರತ್ತು ಮಾಡಿದ್ದಾರೆ. ಅತಿಯಾದ ಮೆಲೋಡ್ರಾಮ ಚಿತ್ರಕ್ಕೆ ಪೂರಕವಾಗಿಲ್ಲ. ಸಂಗೀತ ನಿರ್ದೇಶಕ ಎಸ್.ಪಿ. ವೆಂಕಟೇಶ್ ಚಿತ್ರಕ್ಕೆ ತಮ್ಮ ಕೊಡುಗೆ ನೀಡಲು ಇನ್ನಷ್ಟು ಶ್ರಮ ವಹಿಸಬೇಕಿತ್ತು. ನಂಜೇಗೌಡನ ಪಾತ್ರದಲ್ಲಿ ಶರತ್ ಲೋಹಿತಾಶ್ವ ನಿಜವಾದ ನಾಯಕನಾಗಿ ಮೆರೆಯುತ್ತಾರೆ.

    ವೀರಾವೇಶವಿಲ್ಲದ ರಣಚಂಡಿ ಆರ್ಭಟ- ವಿಜಯವಾಣಿ

    ವೀರಾವೇಶವಿಲ್ಲದ ರಣಚಂಡಿ ಆರ್ಭಟ- ವಿಜಯವಾಣಿ

    ಬೆಂಗಳೂರಿನಲ್ಲಿ ಲೇಡಿ ಡಾನ್ ಆಗಿ ಮೆರೆಯುವ ರಾಗಿಣಿ ಹಳ್ಳಿಗೆ ಬಂದು ದುಷ್ಟರ ಜೊತೆ ದ್ವೇಷ ಕಟ್ಟಿಕೊಳ್ಳುತ್ತಾಳೆ. ಹಳ್ಳಿಯಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳಬೇಕಿದ್ದ ರಾಗಿಣಿ ಮತ್ತೆ ವೀರ ರಣಚಂಡಿ ಅವತಾರ ತಾಳುತ್ತಾಳೆ. ಹೀಗೆ ವಿಭಿನ್ನವಾಗಿ ಕಾಣಿಸಿಕೊಂಡಿರುವ ರಾಗಿಣಿ ನಟನೆ ಸಾಧಾರಣ ಎನಿಸಿದರೂ, ಆಕ್ಷನ್ ದೃಶ್ಯಗಳಲ್ಲಿ ರಾಗಿಣಿ ಪರಿಶ್ರಮ ಎದ್ದು ಕಾಣುತ್ತದೆ. ಫೋಷಕ ಪಾತ್ರಗಳಲ್ಲಿ ರಮೇಶ್ ಭಟ್, ಶೋಭರಾಜ್, ಶರತ್, ಪದ್ಮಜಾ ಗಮನ ಸೆಳೆಯುತ್ತಾರೆ. ಕಥೆಯಲ್ಲಿ ಗಟ್ಟಿತನವಿಲ್ಲದ ಕಾರಣ, ಆನಂದ್ ಪಿ. ರಾಜು ನಿರ್ದೇಶನವೂ ಸೊರಗಿದಂತಿದೆ. ಎಸ್.ಪಿ.ವೆಂಕಟೆಶ್ ಸಂಗೀತ ನಿರ್ದೇಶನದ ಹಾಡುಗಳು ಆ ಕ್ಷಣಕ್ಕೆ ಮಾತ್ರ ರಂಜಿಸುತ್ತವೆ. ಆರ್.ಗಿರಿ ಛಾಯಾಗ್ರಹಣ ಕಥೆಗೆ ಪೂರಕ. ಕಾಮಿಡಿ ದೃಶ್ಯಗಳು ಕೆಲವೊಮ್ಮೆ ನಗು ತರಿಸಿದರೂ ಮತ್ತೆ ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತವೆ. ಚಿತ್ರದ ಅವಧಿ ಇನ್ನಷ್ಟು ಕಡಿಮೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು.

    ರೂಪಸಿ ರಕ್ಕಸಿ ರಾಂಧವ ಪ್ರೇಯಸಿ: ಕನ್ನಡಪ್ರಭ

    ರೂಪಸಿ ರಕ್ಕಸಿ ರಾಂಧವ ಪ್ರೇಯಸಿ: ಕನ್ನಡಪ್ರಭ

    ಚಂಡಿ ಚಾಮುಂಡಿಯಾಗಿ 'ವೀರ ರಣಚಂಡಿ' ಚಿತ್ರದಲ್ಲಿ ರಾಗಿಣಿ ವಿಲನ್ ಗೆ ಹೆಂಗೆ ತಟ್ಟುತ್ತಾರೆ ಅಂದ್ರೆ, ವಿಲನ್ ಎಲ್ಲಿ ಹೋಗಿ ಬಿದ್ದ ಅಂತ ಕ್ಯಾಮೆರಾಮನ್ ಗೇ ಕನ್ಫ್ಯೂಸ್ ಆಗೋ ಮಟ್ಟಕ್ಕೆ ಹೊಡೆಯುತ್ತಾರೆ. ಹಾಗಾಗಿ ಛಾಯಾಗ್ರಹಕ ಆರಡಿ ರಾಗಿಣಿನ ತೋರಿಸುವುದಕ್ಕೆ ಹತ್ತಡಿ ಮೇಲೆ ಹೋಗುತ್ತಾರೆ. ರಾಗಿಣಿಯ ಕ್ಯಾರೆಕ್ಟರ್ ಗೆ ತಕ್ಕನಾಗಿ ಯೋಗರಾಜ್ ಭಟ್ಟರು ಹಾಡು ಬರೆದಿದ್ದು, ಅವರಿಗೆ ಅಭಿನಂದನೆ ಸಲ್ಲಿಸಬಹುದು. ನಿರ್ದೇಶಕ ಆನಂದ್ ಪಿ ರಾಜು ಆಕ್ಷನ್ ಸಿನಿಮಾ ಕೊಡಲು ಅದಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ರುಚಿಗೆ ತಕ್ಕಂತೆ ಎಷ್ಟು ಉಪ್ಪು ಬೇಕೋ ಅಷ್ಟು ಉಪ್ಪು ಖಾರ ಹಾಕಲು ಹೋಗಿ ಸ್ವಲ್ಪ ಯಾಮಾರಿದ್ದಾರೆ ಅನ್ನುವುದು ಬಿಟ್ಟರೆ ರಾಗಿಣಿ ಎಂಬ ಮೃಷ್ಟಾನ್ನ ಭೋಜನವನ್ನು ಲೆಕ್ಕಕ್ಕಿಂತ ಜಾಸ್ತಿಯೇ ಬಡಿಸಿದ್ದಾರೆ. ಉಳಿದಂತೆ ಹಿರಿಯ ಕಲಾವಿದರೆಲ್ಲಾ ರಾಗಿಣಿಗೆ ಬೆಂಬಲವಾಗಿ ನಿಂತಿದ್ದರು, ರಾಗಿಣಿಯ ಮುಂದೆ ಮಂಕಾಗುತ್ತಾರೆ. ನಟನೆಯಲ್ಲಿ ಗೆಲ್ಲುತ್ತಾರೆ. ಎಲ್ಲವನ್ನೂ ಪಕ್ಕಕ್ಕಿಟ್ಟರೂ ರಾಗಿಣಿಯ ಉತ್ಸಾಹ ಮತ್ತು ಎನರ್ಜಿ ಅದ್ಭುತವಾಗಿದೆ. ಆದ್ದರಿಂದ ರಾಗಿಣಿಗಾಗಿಯೇ ಸಿನಿಮಾ ನೋಡುವವರಿಗೆ ಮೋಸವಿಲ್ಲ.

    'Veera Ranachandi' Movie Review: The Times Of India

    'Veera Ranachandi' Movie Review: The Times Of India

    After her previous solo outing Ragini IPS, a lot was expected out of Veera Ranachandi from Ragini Dwivedi fans. Sadly, while the actress seems sassy and has done some daring stunts, the script and shoddy filmmaking lets the actress, who is introduced by the title Mass Queen, down.

    The script is that of a run-of-the-mill commercial potboiler, with more unnecessary side plots, distasteful humour and too many characters that don't seem to make sense. One feels for the leading lady who has invested a lot in the role but has to be content with a half-baked idea for a script. The film has a rather predictable second half and the rather stretched climax takes away the seriousness from the plot. Also, the main punch dialogue - Nanna hesaru Nandini. Guddidare gooli - makes one laugh rather than applaud the bravura. If you want to see some old school commercial fare, then maybe this could interest you.

    English summary
    Kannada Actress Ragaini Dwivedi Starrer Kannada Movie 'Veera Ranachandi' has hit the screens yesterday (march 10th). Here is the Critics review of 'Veera Ranachandi'.
    Saturday, March 11, 2017, 16:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X