Raghavendra Stores Twitter Review: ಹಯವದನನ ಮದುವೆ ಪಜೀತಿ ನೋಡಿದ ನೆಟ್ಟಿಗರು ಏನಂದ್ರು?

ನವರಸ ನಾಯಕ ಜಗ್ಗೇಶ್ ನಟನೆಯ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಪಕ್ಕಾ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

ಬಹಳ ಹಿಂದೆ ರಿಲೀಸ್ ಆಗಬೇಕಿದ್ದ'ರಾಘವೇಂದ್ರ ಸ್ಟೋರ್ಸ್' ಕಾರಣಾಂತರಗಳಿಂದ ತಡವಾಗಿತ್ತು. ಚಿತ್ರದಲ್ಲಿ ಜಗ್ಗೇಶ್ ಜೋಡಿಯಾಗಿ ಶ್ವೇತಾ ಶ್ರೀವಾಸ್ತವ್ ನಟಿಸಿದ್ದಾರೆ. ದತ್ತಣ್ಣ, ರವಿಶಂಕರ್ ಗೌಡ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅಜನೀಶ್ ಲೋಕನಾಥ್ ಸಂಗೀತ, ಶ್ರೀಶ ಕುದುವಳ್ಳಿ ಛಾಯಾಗ್ರಹಣ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಮೊದಲ ಪ್ರದರ್ಶನ ಮುಕ್ತಾಯವಾಗಿದ್ದು ನೆಟ್ಟಿಗರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ.

Raghavendra Stores Twitter Review : What Netizens Have To Say About Jaggesh Starrer comedy entertainer

ರಘು ಎಂಬುವವರು ಟ್ವೀಟ್ ಮಾಡಿ "ಪ್ರಾಮಾಣಿಕವಾಗಿ ಹೇಳ್ತೀನಿ, ಕ್ಲೈಮ್ಯಾಕ್ಸ್‌ವರೆಗೆ ಇದು ಆವರೇಜ್ ಸಿನಿಮಾ ಅಷ್ಟೇ. ಆದರೆ ಭಾವನಾತ್ಮಕ ಕ್ಲೈಮ್ಯಾಕ್ಸ್‌ನಿಂದ ಚಿತ್ರದ ತೂಕ ಹೆಚ್ಚಾಗಿದೆ. ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಸಂತೋಷ್ ಆನಂದ್‌ರಾಮ್ ಅವರಿಂದ ಮತ್ತಷ್ಟು ನಿರೀಕ್ಷಿಸಿದ್ದೆ. ಆದರೂ ಒಟ್ಟಾರೆಯಾಗಿ ಸಿನಿಮಾ ಉತ್ತಮವಾಗಿದೆ. 5ಕ್ಕೆ 3 ನನ್ನ ರೇಟಿಂಗ್ ಎಂದಿದ್ದಾರೆ.

ಮತ್ತೊಬ್ಬರು "ರಾಘವೇಂದ್ರ ಸ್ಟೋರ್ಸ್ ಸೊಗಸಾದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಇದರ ಜೊತೆಗೆ ಪರಿಣಾಮಕಾರಿಯಾದ ಸಂದೇಶ ಚಿತ್ರದ ಕೊನೆಯಲ್ಲಿದೆ. ಸಂತೋಷ್ ಆನಂದ್‌ರಾಮ್ ಮತ್ತೊಂದು ಗುಣಮಟ್ಟದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕೊಟ್ಟಿದ್ಧಾರೆ. ಬಹಳ ದಿನಗಳ ನಾಯಕ ನಟರಾಗಿ ಜಗ್ಗೇಶ್ ಅವರನ್ನು ತೆರೆಮೇಲೆ ನೋಡುವುದು ಚೆನ್ನಾಗಿದೆ. ಮಿಸ್ ಮಾಡಿಕೊಳ್ಳದೇ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡಿ ಎಂದು ಟ್ವೀಟ್ ಮಾಡಿದ್ಧಾರೆ.

Raghavendra Stores Twitter Review : What Netizens Have To Say About Jaggesh Starrer comedy entertainer

ಗಂಗರಾಜು ಎಂಬುವವರು 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾ ನೋಡಿ "ಅದ್ಭುತ ಸಿನಿಮಾ. 'ಮಿಷನ್ ಇಂಪಾಸಿಬಲ್' ಇಂಟರ್‌ವರ್ ಅಂತೂ ನಗು ತರಿಸುತ್ತದೆ. ಸಂತೋಷ್ ಆನಂದ್‌ರಾಮ್ ಹಾಸ್ಯಪ್ರಜ್ಞೆ ಸೊಗಸಾಗಿದೆ. ಜಗ್ಗೇಶ್ ಅಣ್ಣ ನೀವಂತೂ ಸೂಪರ್ ಎಂದು ಟ್ವೀಟ್ ಮಾಡಿದ್ದಾರೆ.

ಸಿನಿಮಾ ನೋಡಿರುವ ಮತ್ತೊಬ್ಬ ಪ್ರೇಕ್ಷಕ ರವಿರಾಜ್ ಪಾಟೀಲ್ ಟ್ವೀಟ್ ಮಾಡಿ "'ರಾಘವೇಂದ್ರ ಸ್ಟೋರ್ಸ್‌' ಸಿನಿಮಾ ನೋಡಿದೆ. ಒಳ್ಳೆ ಕಾಮಿಡಿ ಜೊತೆಗೆ ಸಹಾಯ ಮತ್ತು ಕಾಳಜಿ ವಹಿಸುವ ಕುರಿತು ಒಂದೊಳ್ಳೆ ಸಂದೇಶ ಈ ಚಿತ್ರದಲ್ಲಿದೆ. ಚಿತ್ರವನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗಿದೆ. ನನ್ನ ರೇಟಿಂಗ್ 5ಕ್ಕೆ 4. ಸಂತೋಷ್ ಆನಂದ್‌ರಾಮ್ ಚಿತ್ರಕತೆ ಹಾಗೂ ಜಗ್ಗೇಶ್, ಶ್ವೇತಾ ಶ್ರೀವಾತ್ಸವ್ ಅಭಿನಯ ಸೊಗಸಾಗಿದೆ ಎಂದು ಬರೆದುಕೊಂಡಿದ್ದಾರೆ.

ಚಂದು ಗೌಡ ಎಂಬುವವರು ಟ್ವೀಟ್ ಮಾಡಿ "ತುಂಬಾ ದಿನ ಆದ್ಮೇಲೆ ಸಖತ್ ಮಜಾ ಮಾಡ್ದೆ. ನಕ್ಕು ನಕ್ಕು ಸುಸ್ತಾಯ್ತು. ಜಗ್ಗೇಶ್ ಹಾಗೂ ದತ್ತಣ್ಣ ಕಾಂಬಿಣೇಷನ್ ಕ್ರೇಜಿ. ಕೊನೆ 15 ನಿಮಿಷ ಬಹಳ ಎಮೋಷನಲ್ ಆಗಿತ್ತು. ಒಳ್ಳೆ ಮೆಸೇಜ್ ಕೂಡ ಇದೆ. ಥಿಯೇಟರ್‌ನಲ್ಲಿ ನೋಡಲು ಮಿಸ್ ಮಾಡಬೇಡಿ. 5ಕ್ಕೆ 3.5 ರೇಟಿಂಗ್ ಎಂದು 'ರಾಘವೇಂದ್ರ ಸ್ಟೋರ್ಸ್' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಹಾಸ್ ಎಂಬುವವರು "ಹಾಸ್ಯಭರಿತ ಸಂದೇಶಾತ್ಮಕ ಸಿನಿಮಾ. ತುಂಬಾ ದಿನ ಆದ್ಮೇಲೆ ಮಸನಾರೆ ನಕ್ಕಿದ್ದೀನಿ. ಜಗ್ಗೇಶ್‌ ಸರ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಸಂತೋಷ್ ಆನಂದ್ ರಾಮ್ ಕಥೆ, ಚಿತ್ರಕಥೆ, ನಿರೂಪಣೆ, ಸಂಭಾಷಣೆಗೆ 100 ಅಂಕ. ಸೆಕೆಂಡ್ ಹಾಫ್‌ನಲ್ಲಿ ಕೊಂಚ ಬೇಡದ ದೃಶ್ಯಗಳಿವೆ. ಅದು ಬಿಟ್ಟರೆ, ವೀಕೆಂಡ್‌ಗೆ ಪರ್ಫೆಕ್ಟ್ ಸಿನಿಮಾ. ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಿದ್ದಾರೆ. ಸಾಂಗ್ಸ್, ಹಿನ್ನೆಲೆ ಸಂಗೀತ, ಮುಖ್ಯವಾಗಿ ಕ್ಲೈಮ್ಯಾಕ್ಸ್‌ ಸಂಗೀತ, ಬಜೆಟ್‌ನಲ್ಲಿ ಎಲ್ಲೂ ರಾಜಿ ಆಗಿಲ್ಲ. ಸ್ನೇಹಿತರ ಜೊತೆ ನೋಡುವುದು ಉತ್ತಮ" ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Raghavendra Stores Twitter Review in Kannada : What Netizens Have To Say About Jaggesh, Shwetha Srivatsav, Ravishankar Gowda Starrer Raghavendra Stores Movie directed by Santhosh Anandram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X