Rajamartanda Review: ಅಣ್ಣನ ನಟನೆ.. ತಮ್ಮ ಧ್ವನಿ.. ಚಿರು ಫ್ಯಾನ್ಸ್‌ಗೆ 'ರಾಜಮಾರ್ತಾಂಡ' ಹಬ್ಬ!
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ 'ರಾಜಮಾರ್ತಾಂಡ' ಇಂದು(ಅಕ್ಟೋಬರ್ 6) ರಿಲೀಸ್ ಆಗಿದೆ. ಒಂದ್ಕಡೆ ಇದು ಚಿರು ಅಭಿನಯದ ಕೊನೆಯ ಸಿನಿಮಾ ಅನ್ನೋ ಸೆಂಟಿಮೆಂಟ್. ಇನ್ನೊಂದು ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ ಅನ್ನೋ ಎಗ್ಸೈಟ್‌ಮೆಂಟ್.
ಸರ್ಜಾ ಕುಟುಂಬದ ಅಭಿಮಾನಿಗಳು ಈ ಎರಡೂ ಅಂಶಗಳನ್ನು ಅದ್ಹೇಗೆ ಅರಗಿಸಿಕೊಳ್ಳುತ್ತಾರೋ ಅನ್ನುವ ಪ್ರಶ್ನೆಗ 'ರಾಜಮಾರ್ತಾಂಡ' ಕೊನೆಗೂ ಉತ್ತರ ಕೊಟ್ಟಿದೆ. ಅಣ್ಣನ ಸಿನಿಮಾಗೆ ತಮ್ಮ ಧ್ವನಿ ನೀಡಿದ್ದು ಈ ಸಿನಿಮಾದ ಹೈಲೈಟ್. ಈ ಕಾರಣಕ್ಕೆ 'ರಾಜಮಾರ್ತಾಂಡ' ಈ ವಾರದ ವಿಶೇಷ ಅಂತ ಪರಿಗಣಿಸಬಹುದು.
ಚಿರು ಸಿನಿಮಾಗಳನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಈ ಸಿನಿಮಾ ಸ್ಪೆಷಲ್ ಟ್ರೀಟ್. ಚಿರು ನಟನೆಗೆ ಧ್ರುವ ಸರ್ಜಾ ಧ್ವನಿ ಕೊಟ್ಟಿದ್ದು ಅದನ್ನು ನೋಡುವೇ ಕಣ್ಣಿಗೆ ಹಬ್ಬ. ಹಾಗಿದ್ದರೆ, 'ರಾಜಮಾರ್ತಾಂಡ' ಸಿನಿಮಾದ ಕತೆಯೇನು? ಸಿನಿಮಾದ ಫ್ಲಸ್ ಏನು? ಮೈನಸ್ ಏನು? ಇವೆಲ್ಲವನ್ನೂ ತಿಳಿಯುವುದಕ್ಕೆ ಮುಂದೆ ಓದಿ.

'ರಾಜಮಾರ್ತಾಂಡ'ನ ಹಿನ್ನೆಲೆ ಏನು?
ಸಿನಿಮಾದ ನಾಯಕ ಬಡ ಕುಟುಂಬದಿಂದ ಬಂದ ವ್ಯಕ್ತಿ. ಅಜ್ಜಿಯೇ ಈ ಹೀರೊನನ್ನು ಸಾಕುತ್ತಾಳೆ. ಆದರೆ, ರಾಜನ ಕಥೆಯನ್ನು ಹೇಳುತ್ತಲೇ ಬೆಳೆಸುತ್ತಾಳೆ. ಅದೇ ನಾಯಕನ ಮನಸ್ಸಿನಲ್ಲಿ ನಾನು ರಾಜನಾಗಬೇಕು ಅನ್ನೋ ಆಸೆ ಬೆಳೆದುಕೊಂಡೇ ಬರುತ್ತೆ. ರಾಜನಂತೆಯೇ ಆಗಾಗ ವರ್ತನೇ ಮಾಡುವುದಕ್ಕೆ ಶುರು ಮಾಡುತ್ತಾನೆ. ಹೀಗೊಮ್ಮೆ ಫೈಟಿಂಗ್ ಸನ್ನಿವೇಶ ಬಂದಾಗ, ತಾನು ಬಡ ಕುಟುಂಬದವನು ಅಲ್ಲ. ರಾಜಮನೆತನದ ವ್ಯಕ್ತಿ ಅನ್ನೋದು ಹೀರೊಗೆ ಗೊತ್ತಾಗುತ್ತೆ. ಅದಲ್ಲಿಂದ 'ರಾಜಮಾರ್ತಾಂಡ'ನ ಅಸಲಿ ಕಥೆ ಆರಂಭ.
ಫಸ್ಟ್ ಹಾಫ್ ಓಕೆ.. ಸೆಕೆಂಡ್ ಹಾಫ್ ಸೂಪರ್
'ರಾಜಮಾರ್ತಾಂಡ' ಕಥೆ ವಿಶೇಷವಾಗೇನೂ ಇಲ್ಲ. ಆದರೆ, ನಿರ್ದೇಶಕ ರಾಮ್ ನಾರಾಯಣ್ ಸಿಂಪಲ್ ಸ್ಟೋರಿಯನ್ನು ಇಂಟ್ರೆಸ್ಟಿಂಗ್ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಫಸ್ಟ್ ಹಾಫ್ ಸಿಂಪಲ್ ಅಂತ ಅನಿಸಿದರೂ, ಸೆಕೆಂಡ್ ಹಾಫ್ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ. ಫ್ಲ್ಯಾಶ್ ಬ್ಯಾಕ್ ಕಥೆಯಲ್ಲಿ ಚಿರು ತಂದೆಯ ಪಾತ್ರದಲ್ಲಿ ದೇವರಾಜ್ ಕಾಣಿಸಿಕೊಳ್ಳುತ್ತಾರೆ. ಇದು ಸಿನಿಮಾ ಹೈಲೈಟ್ ಪೋಷನ್.
ಸಿನಿಮಾದ ಯಾವ್ಯಾವ ಪಾತ್ರ ಹೈಲೈಟ್?
ಚಿರಂಜೀವಿ ಸರ್ಜಾ ಬಿಟ್ಟರೆ, ತಂದೆಯ ಪಾತ್ರದಲ್ಲಿ ದೇವರಾಜ್ ನಟಿಸಿದ್ದಾರೆ. ರಾಜಮಾತೆಯ ಪಾತ್ರದಲ್ಲಿ ಹಿರಿಯ ನಟಿ ಸುಮಿತ್ರಾ, ದೇವರಾಜ್ ಪತ್ನಿಯ ಪಾತ್ರದಲ್ಲಿ ಸಂಗೀತ ನಟಿಸಿದ್ದಾರೆ. ಈ ಸಿನಿಮಾದ ಖಳನಾಯಕನಾಗಿ ಭಜರಂಗಿ ಲೋಕಿ ನಟಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಚಿಕ್ಕಿಣ್ಣ ಕಾಣಿಸಿಕೊಂಡಿದ್ದು, ಸಿನಿಮಾಗೆ ದೊಡ್ಡದೊಂದು ರಿಲೀಫ್ ಸಿಗುತ್ತೆ.

ಧ್ರುವ ಸರ್ಜಾ ಧ್ವನಿ ಕಿಕ್ ಕೊಡುತ್ತೆ
ಚಿರಂಜೀವಿ ಸರ್ಜಾ ನಟನೆಗೆ ಧ್ರುವ ಸರ್ಜಾ ಧ್ವನಿ ಇದ್ದರೆ ಹೇಗೆ? ಇದನ್ನು ಊಹಿಸಿಕೊಳ್ಳುವುದಕ್ಕೆ ಒಂಥರಾ ಮಜಾ. ಚಿರು ಅಗಲಿದ ಬಳಿಕ ಈ ಪಾತ್ರಕ್ಕೆ ಧ್ವನಿ ನೀಡಿದ್ದು ಧ್ರುವ ಸರ್ಜಾ. ಹೀಗಾಗಿ ಒಂದೊಂದು ಸೀನ್‌ಗೂ ಜೋಷ್ ಬಂದಂತಾಗಿದೆ. ಚಿರಂಜೀವಿ ಸರ್ಜಾ ಹಾಗೂ ಧ್ರುವ ಅಭಿಮಾನಿಗಳಿಗೆ ಕಿಕ್ ಕೊಟ್ಟಂತಾಗಿದೆ. ಎಲ್ಲಾ ದೃಶ್ಯಗಲ್ಲಿ ಧ್ರುವ ಧ್ವನಿ ಸರಿಯಾಗಿ ಹೊಂದಿಕೊಂಡಿದ್ದು ವಿಶೇಷ.
ಪ್ಲಸ್ ಏನು?
'ರಾಜಮಾರ್ತಾಂಡ' ಸಿನಿಮಾದ ಆರಂಭದಲ್ಲಿ ಚಿರುಗೆ ಶ್ರದ್ಧಾಂಜಲಿ ಅರ್ಪಿಸುವ ದೃಶ್ಯ ಎಮೋಷನಲ್ ಆಗಿದೆ. ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ಆಗಿದ್ದರಿಂದ ಫ್ಯಾನ್ಸ್‌ಗೆ ಭಾವುಕ ಕ್ಷಣಗಳಿವು. ಹಾಗೇ ಧ್ರುವ ಸರ್ಜಾ ಧ್ವನಿ ಸಿನಿಮಾದ ಹೈಲೈಟ್ ಎನ್ನಬಹುದು.
ಮೈನಸ್ ಏನು?
'ರಾಜಮಾರ್ತಾಂಡ' ಕಥೆ ಸಿಂಪಲ್ ಅಂತ ಕೆಲವೊಮ್ಮೆ ಅನಿಸುತ್ತೆ. ಆದರೆ, ಚಿತ್ರಕಥೆ ಇದನ್ನು ಮರೆಸುತ್ತೆ. ಕೊನೆಯ ಸಿನಿಮಾ ಆಗಿದ್ದರಿಂದ ಜನರು ಭಾವುಕರಾಗಿಯೇ ಸಿನಿಮಾ ನೋಡುವುದು. ಮೈನಸ್ ಪಾಯಿಂಟ್‌ಗಳು ಕಣ್ಣಿಗೆ ಕಾಣಿಸುವುದಿಲ್ಲ.


Click it and Unblock the Notifications











