'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ದರ್ಬಾರ್ ಸಿನಿಮಾ ಇಂದು ದೇಶ ವಿದೇಶದಲ್ಲಿ ತೆರೆಗೆ ಬಂದಿದೆ. ಕನ್ನಡ ವರ್ಷನ್ ಬಿಟ್ಟು ದಕ್ಷಿಣ ಭಾರತೀಯ ಎಲ್ಲಾ ಭಾಷೆಗಳಲ್ಲಿಯೂ ಸೇರಿದಂತೆ ಹಿಂದಿಯಲ್ಲೂ ತೆರೆಗೆ ಬಂದಿದೆ. ರಿಲೀಸ್ ಗೂ ಮೊದಲೆ ಬಾರಿ ಕ್ರೇಜ್ ಹುಟ್ಟುಹಾಕಿದ್ದ ದರ್ಬಾರ್ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಈಗಾಗಲೆ ಅಭಿಮಾನಿಗಳು ಬೆಳ್ಳಂಬೆಳಗ್ಗೆಯೆ ಸಿನಿಮಾ ವೀಕ್ಷಿಸಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
Recommended Video
ಸೂಪರ್ ಸ್ಟಾರ್ ಅನ್ನು ಚಿತ್ರಮಂದಿರದಲ್ಲಿ ನೋಡಿ ಥ್ರಿಲ್ ಆದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ದರ್ಬಾರ್ ಸಿನಿಮಾ ಹೇಗಿದೆ, ಯಂಗ್ ಅಂಡ್ ಎನರ್ಜಿಟಿಕ್ ತಲೈವಾ ಬಗ್ಗೆ ಚಿಕ್ಕದಾಗಿ ವಿಮರ್ಶೆ ಮಾಡುತ್ತಿದ್ದಾರೆ. ಎ.ಆರ್ ಮುರುಗದಾಸ್ ನಿರ್ದೇಶನ, ಸೂಪರ್ ಸ್ಟಾರ್ ಮತ್ತು ನಯನತಾರಾ ಕಾಂಬಿನೇಷನ್, ತಲೈವಾ ಪೊಲೀಸ್ ಪಾತ್ರದ ಬಗ್ಗೆ ಚಿತ್ರಪ್ರಿಯರು ಟ್ವಿಟ್ಟರ್ ನಲ್ಲಿ ಹೇಳಿದ್ದೇನು? ಮುಂದೆ ಓದಿ..
ಸೂಪರ್ ಸ್ಟಾರ್ ಎನರ್ಜಿ ಸೂಪರ್
"ನಮ್ಮ ತಲೈವಾ ಎಲ್ಲಾ ಅಂಶಗಳಿಯೂ ಅದ್ಭುತ. ಡ್ಯಾನ್ಸ್ ಮತ್ತು ಎನರ್ಜಿಕ್ ಅಭಿನಯ, ಫೈಟ್ ಎಲ್ಲವು ಉತ್ತಮವಾಗಿ ಮೂಡಿಬಂದಿದೆ. ನಿವೀತಾ ಮತ್ತು ಯೋಗಿ ಬಾಬು ಭಾಗ ತುಂಬ ಇಷ್ಟ ಆಯ್ತು. ಇಂಟರ್ ವೆಲ್ ಸಮಯದ ದೃಶ್ಯ ಮತ್ತು ಕನ್ನುಲಾ ಹಾಡು ತುಂಬ ಇಷ್ಟವಾಯಿತು"
2020ರ ಬ್ಲಾಕ್ ಬಸ್ಟರ್ ಸಿನಿಮಾ
"ಎಂಥಹಾ ಸಿನಿಮಾವಿದೂ. 2020ರ ಬ್ಲಾಕ್ ಬಸ್ಟರ್ ಸಿನಿಮಾ ಇದಾಗುತ್ತೆ. ಸೂಪರ್ ಸ್ಟಾರ್ ಬಗ್ಗೆ ಹೇಳಲು ಸಾಧ್ಯವೆ ಇಲ್ಲ. ಯಾವಾಗಲು ಮಾಸ್. ವಯಸ್ಸಿನ ಮಿತಿ ಇಲ್ಲ. ಬದುಕಿರುವವರೆಗೂ 100 ವರ್ಸೆಂಟ್ ಅಭಿನಯ ಮಾಡುತ್ತಾರೆ, ರಂಜಿಸುತ್ತಿರುತ್ತಾರೆ ನಮ್ಮ ಸೂಪರ್ ಸ್ಟಾರ್"
ಲಾಜಿಕ್ ಇಲ್ಲ ಕೇವಲ ಮ್ಯಾಜಿಕ್
"ಮೊದಲ ಭಾಗ ಸಂಪೂರ್ಣವಾಗಿ ರಜನಿಮಯ. ಲಾಜಿಕ್ ಇಲ್ಲ ಕೇವಲ ಮ್ಯಾಜಿಕ್ ಮಾತ್ರ. ತುಂಬ ವೇಗವಾಗಿ ಸಿನಿಮಾ ಸಾಗುತ್ತೆ. ಸ್ಕ್ರೇನ್ ಪ್ಲೇ ಪ್ರೇಕ್ಷಕರನ್ನು ಹಿಡಿದಿಡುತ್ತೆ. ಇದು ಪರಿಪೂರ್ಣ ರಜಿನಿಕಾಂತ್ ಸಿನಿಮಾ"
ಮೊದಲ ಭಾಗ ಭಯಂಕರ
"ಚಿತ್ರದ ಮೊದಲ ಭಾಗ ಭಯಂಕರವಾಗಿದೆ. ತಲೈವಾ ಸಖತ್ ಯಂಗ್ ಆಗಿ ಕಾಣಿಸುತ್ತಾರೆ. ಡ್ಯಾನ್ಸ್ ಇನ್ನು ಉತ್ತಮವಾಗಿರಬಹುದಿತ್ತು. ಸಿನಿಮಾ ವೇಗವಾಗಿ ಸಾಗುತ್ತೆ"
ಉತ್ತಮ ಆಕ್ಷನ್ ಕಮರ್ಷಿಯಲ್ ಸಿನಿಮಾ
"ಶಿವಾಜಿ ನಂತರ ರಜನಿಕಾಂತ್ ಅವರ ಉತ್ತಮ ಆಕ್ಷನ್ ಕಮರ್ಷಿಯಲ್ ಸಿನಿಮಾ ಇದಾಗಿದೆ. ಮೊದಲ ಭಾಗ ಸಂಪೂರ್ಣವಾಗಿ ತಲೈವಾ ಸ್ಟೈಲ್ ನಲ್ಲಿ ಇದೆ. ಅದರಲ್ಲೂ ಕನ್ನುಲಾ ತಿಮಿರು ಹಾಡು ಅದ್ಭುತವಾಗಿದೆ. ಇಂಟರ್ ವಲ್ ಮೊದಲ ದೃಶ್ಯ ನಿಕ್ಕು ರೋಮಾಂಚನವಾಗುತ್ತೆ. ಎರಡನೇ ಭಾಗ ಮೈಂಡ್ ಗೇಮ್ ಮತ್ತು ಭಾವನಾತ್ಮಕ ದೃಶ್ಯಗಳಿವೆ. ಕ್ಲೈಮ್ಯಾಕ್ಸ್ ಉತ್ತಮವಾಗಿದೆ"


Click it and Unblock the Notifications











