For Quick Alerts
  ALLOW NOTIFICATIONS  
  For Daily Alerts

  'ಕಾಲಾ' ಚಿತ್ರವನ್ನ ನೋಡಿ ನಿರಾಸೆ ಪಟ್ಟವರೂ ಇದ್ದಾರೆ ಸ್ವಾಮಿ.!

  By Harshitha
  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ನಿನ್ನೆ ವಿಶ್ವದಾದ್ಯಂತ ಬಿಡುಗಡೆ ಆಗಿದೆ. 'ಕಬಾಲಿ' ಬಳಿಕ ನಿರ್ದೇಶಕ ಪಾ.ರಂಜಿತ್ ಹಾಗೂ ರಜನಿಕಾಂತ್ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಎರಡನೇ ಚಿತ್ರ ಇದು.

  'ಕಾಲಾ' ಚಿತ್ರವನ್ನ ನೋಡಿ ರಜನಿಕಾಂತ್ ಅಭಿಮಾನಿಗಳಂತೂ ಶಿಳ್ಳೆ ಹೊಡೆದಿದ್ದಾರೆ. ಚಪ್ಪಾಳೆ ಕೂಡ ತಟ್ಟಿದ್ದಾರೆ. 'ಕಬಾಲಿ' ಚಿತ್ರಕ್ಕೆ ಹೋಲಿಸಿದರೆ, 'ಕಾಲಾ' ಬೊಂಬಾಟ್ ಆಗಿದೆ ಅಂತ ಹೇಳುವವರಿದ್ದಾರೆ. ಇವರೆಲ್ಲರ ನಡುವೆ 'ಕಾಲಾ' ಚಿತ್ರವನ್ನ ನೋಡಿ ನಿರಾಸೆ ಪಟ್ಟವರೂ ಇದ್ದಾರೆ.

  ''ಅಭಿಮಾನಿಗಳ ನಿರೀಕ್ಷೆಯನ್ನು 'ಕಾಲಾ' ಹುಸಿ ಮಾಡಿದೆ'' ಎನ್ನುವುದು ಕೆಲ ಸಿನಿಪ್ರಿಯರ ಅಭಿಪ್ರಾಯ. 'ಕಾಲಾ' ಬಗ್ಗೆ ಎಲ್ಲೆಡೆ ಒಳ್ಳೆಯ ಮಾತುಗಳು ಕೇಳಿಬರುತ್ತಿರುವಾಗಲೇ, ಟ್ವಿಟ್ಟರ್ ನಲ್ಲಿ ಕೆಲವರು 'ಕಾಲಾ' ಬಗ್ಗೆ ಬೇಸರ ಪಟ್ಟುಕೊಂಡು ಟ್ವೀಟ್ ಮಾಡಿದ್ದಾರೆ. ಅಂತಹ ಕೆಲ ಟ್ವೀಟ್ ಗಳು ಇಲ್ಲಿದೆ ನೋಡಿರಿ...

  ಸ್ಟೋರಿ ಸಿಕ್ಕಾಪಟ್ಟೆ ಸಿಂಪಲ್ ಆಗಿದೆ

  ಸ್ಟೋರಿ ಸಿಕ್ಕಾಪಟ್ಟೆ ಸಿಂಪಲ್ ಆಗಿದೆ

  ''ಸಿಂಪಲ್ ಸ್ಟೋರಿ ಹೊಂದಿರುವ 'ಕಾಲಾ' ರಜನಿಕಾಂತ್ ಹಾಗೂ ನಾನಾ ಪಾಟೇಕರ್ ರವರ ಮಾಸ್ ಪ್ರೆಸೆನ್ಸ್ ಮೇಲೆ ಅವಲಂಬಿತವಾಗಿದೆ. 'ಕಾಲಾ' ಚಿತ್ರ ಖಂಡಿತ ತೃಪ್ತಿ ನೀಡಿಲ್ಲ. ರಜನಿ ಅಭಿಮಾನಿ ಆಗಿ 'ಕಾಲಾ' ನಿರಾಸೆ ಮೂಡಿಸಿದೆ'' ಎಂದು ಸಿನಿಪ್ರಿಯರೊಬ್ಬರು ಟ್ವೀಟ್ ಮಾಡಿದ್ದಾರೆ.

  ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ 'ಕಾಲಾ' ವಿಮರ್ಶಕರಿಗೆ ಹಿಡಿಸಿತೇ.?ಕನ್ನಡಿಗರ ಆಕ್ರೋಶಕ್ಕೆ ಗುರಿಯಾದ 'ಕಾಲಾ' ವಿಮರ್ಶಕರಿಗೆ ಹಿಡಿಸಿತೇ.?

  ಹೆಚ್ಚು ನಿರೀಕ್ಷೆ ಮಾಡುತ್ತಿದ್ದೆ.!

  ಹೆಚ್ಚು ನಿರೀಕ್ಷೆ ಮಾಡುತ್ತಿದ್ದೆ.!

  ''ಕಾಲಾ' ನಿರಾಸೆ ಮೂಡಿಸಿದೆ. 'ಕಾಲಾ' ಬಗ್ಗೆ ಹೆಚ್ಚು ನಿರೀಕ್ಷೆ ಮಾಡಿದ್ದೆ. ಆದ್ರೆ, ಕಥೆಯಲ್ಲಿ ಗಟ್ಟಿತನ ಇಲ್ಲ'' ಎಂಬುದು ಪ್ರೇಕ್ಷಕರೊಬ್ಬರ ಅಭಿಪ್ರಾಯ.

  'ಕಾಲಾ' ವಿಮರ್ಶೆ: 'ರಾಜಕಾರಣಿ' ರಜನಿಗಾಗಿ 'ಕ್ರಾಂತಿಕಾರಿ' ಸಿನಿಮಾ.!'ಕಾಲಾ' ವಿಮರ್ಶೆ: 'ರಾಜಕಾರಣಿ' ರಜನಿಗಾಗಿ 'ಕ್ರಾಂತಿಕಾರಿ' ಸಿನಿಮಾ.!

  ನಿಧಾನಗತಿ ಚಿತ್ರ.!

  ನಿಧಾನಗತಿ ಚಿತ್ರ.!

  ''ನಿಧಾನಗತಿಯಲ್ಲಿ ಶುರುವಾಗುವ 'ಕಾಲಾ' ಸಿನಿಮಾದ ಇಂಟರ್ವಲ್ ಚೆನ್ನಾಗಿದೆ. ಸೆಕೆಂಡ್ ಹಾಫ್ ನಲ್ಲಿ ಮಾಸ್ ಅಂಶಗಳಿವೆ. ಒಟ್ಟಾರೆ 'ಕಾಲಾ' ಚಿತ್ರ 'ಕಬಾಲಿ'ಗಿಂತ ಪರ್ವಾಗಿಲ್ಲ'' ಎನ್ನುವುದು ಸಿನಿಪ್ರಿಯರೊಬ್ಬರ ಮನದಾಳ.

  ಆನ್ ಲೈನ್ ನಲ್ಲೂ ನೋಡಲು ಯೋಗವಲ್ಲ.!

  ಆನ್ ಲೈನ್ ನಲ್ಲೂ ನೋಡಲು ಯೋಗವಲ್ಲ.!

  ''ಈಗಷ್ಟೇ 'ಕಾಲಾ' ನೋಡಿದೆ. ಆನ್ ಲೈನ್ ನಲ್ಲೂ ನೋಡಲು ಯೋಗ್ಯವಲ್ಲದ ಚಿತ್ರ ಅದು'' ಎಂದು ಪ್ರಭು ರಾಜ್ ಎಂಬುವರು ಟ್ವೀಟ್ ಮಾಡಿದ್ದಾರೆ.

  ವರ್ಸ್ಟ್ ಸಿನಿಮಾ

  ವರ್ಸ್ಟ್ ಸಿನಿಮಾ

  ''ಕಾಲಾ' ವರ್ಸ್ಟ್ ಸಿನಿಮಾ. ಈ ಸಿನಿಮಾದ ಮೂಲಕ ತಮ್ಮ ರಾಜಕೀಯ ನಿಲುವುಗಳನ್ನು ರಜನಿ ಮೂಲಕ ಹೇಳಿಸಿದ್ದಾರೆ ನಿರ್ದೇಶಕ ಪಾ.ರಂಜಿತ್'' ಅಂತ ಹೇಳುವವರೂ ಇದ್ದಾರೆ.

  ರಜನಿ ವಿರೋಧಿಗಳಿಗೆ ಇಷ್ಟ ಆಗಲ್ಲ.!

  ರಜನಿ ವಿರೋಧಿಗಳಿಗೆ ಇಷ್ಟ ಆಗಲ್ಲ.!

  ''ರಜನಿಕಾಂತ್ ವಿರೋಧಿಗಳಿಗೆ 'ಕಾಲಾ' ಸಿನಿಮಾ ಖಂಡಿತ ನಿರಾಸೆ ಮೂಡಿಸಿದೆ'' ಎಂದು ರಜನಿ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

  ಹೊಗಳುತ್ತಿರುವ ರಜನಿ ಅಭಿಮಾನಿಗಳು.!

  ಹೊಗಳುತ್ತಿರುವ ರಜನಿ ಅಭಿಮಾನಿಗಳು.!

  'ಕಾಲಾ' ಚಿತ್ರವನ್ನ ನೋಡಿ ರಜನಿಕಾಂತ್ ಅಭಿಮಾನಿಗಳು ಹೊಗಳುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ 'ಕಾಲಾ' ಕುರಿತು ಪಾಸಿಟೀವ್ ಮಾತುಗಳು ತುಂಬಿ ತುಳುಕುತ್ತಿವೆ.

  English summary
  Super Star Rajinikanth starrer Pa Ranjith directorial 'Kaala' is getting negative response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X