Sapta Sagaradaache Ello Review: ಭಾವನೆಗಳ ಆಗರ.. ಈ ಸಪ್ತ ಸಾಗರ..
ಪ್ರೇಮಕಥೆಗಳು ಎವರ್‌ಗ್ರೀನ್.. ಎಲ್ಲಾ ಕಾಲಕ್ಕೂ.. ಎಲ್ಲ ಕಾಲದ ಪ್ರೇಮಗಳು ಸಲ್ಲುತ್ತವೆ. ಕಾಲಘಟ್ಟ ಬೇರೆಯಾದರೇನು..? ಭಾವನೆಗಳು ಒಂದೇ ಅಲ್ಲವೇ ಅನ್ನೋ ಭಾವ ಮೂಡುತ್ತದೆ. ವೇಷ ಭೂಷಣ ಬದಲಾದರೇನು? ಪ್ರೀತಿ ಪಾಠ ಬದಲಾಗುತ್ತವೆಯೇ..? ಅದಕ್ಕೆ ತೆರೆಮೇಲೆ ಮೂಡುವ ಲವ್‌ಸ್ಟೋರಿಗಳಿಗೆ ಕೊನೆಯೇ ಇಲ್ಲ.
'ಸಪ್ತ ಸಾಗರದಾಚೆ ಎಲ್ಲೋ' ಭಾವನೆಗಳ ಮೂಟೆಯನ್ನೇ ಹೊತ್ತು ಸಾಗುವ ಭಾವನಾತ್ಮಕ ಪ್ರೇಮಕಥೆ. ರಕ್ಷಿತ್ ಶೆಟ್ಟಿ, ರುಕ್ಷ್ಮಿಣಿ ವಸಂತ್ ಹೊಸ ಕಾಂಬಿನೇಷನ್. ಹೇಮಂತ್ ಎಂ ರಾವ್ ಟಿಪಿಕಲ್ ಟ್ರೀಟ್ಮೆಂಟ್. ಚರಣ್ ರಾಜ್ ಟ್ಯೂನ್, ಬ್ಯಾಕ್‌ಗ್ರೌಂಡ್ ಮ್ಯೂಸಿಕ್.

ಈಗಾಗಲೇ ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ಎಂ ರಾವ್ ಜೋಡಿ 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದೆ. ಅಲ್ಲೂ ಭಾವನೆಗಳನ್ನು ಈ ಜೋಡಿ ಕಟ್ಟಿಕೊಟ್ಟಿತ್ತು. ಹೀಗಾಗಿ 'ಸಪ್ತ ಸಾಗರದಾಚೆ ಎಲ್ಲೋ' ನಿರೀಕ್ಷೆಗಳ ಮೂಟೆಯನ್ನೇ ಹೊತ್ತು ತೆರೆಗಪ್ಪಳಿಸಿದೆ.
ಸಿಂಪಲ್ ಆಗಿ ಹೇಳಬೇಕಂದ್ರೆ 'ಸಪ್ತ ಸಾಗರದಾಚೆ ಎಲ್ಲೋ' ಹುಟ್ಟಿಕೊಂಡ ಎರಡು ಹೃದಯಗಳ ಈ ಪ್ರೇಮ ಕಥೆ. ಹಾಗಿದ್ದರೆ, ಸಿನಿಮಾದ ಒನ್ ಲೈನ್ ಸ್ಟೋರಿ ಏನು? ರಕ್ಷಿತ್, ರುಕ್ಷಿಣಿ ವಸಂತ್ ಜೋಡಿ ಹೇಗಿದೆ? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ತಿಳಿಯಲು ಮುಂದೆ ಓದಿ.
ಸಪ್ತ ಸಾಗರದ ಕಥೆ ಏನು?
ಬಡ ಮಧ್ಯಮ ವರ್ಗದ ಇಬ್ಬರು ಪ್ರೇಮಿಗಳು ಸುಂದರ ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಾರೆ. ಸುಮುದ್ರದ ತೀರದಲ್ಲಿ ಸುಂದರವಾದ ಮನೆ ಕಟ್ಟಿಕೊಳ್ಳಬೇಕು ಅನ್ನೋ ಆಸೆ. ಆ ಕನಸಿಗೆ ಅದರದ್ದೇ ಆದ ಬೆಲೆ ಇರುತ್ತೆ. ಅದನ್ನು ಸಂಪಾಧಿಸಲು ಹೋದ ಹೀರೊ ಸಂಕಷ್ಟಕ್ಕೆ ಸಿಲುಕುತ್ತಾನೆ. ಜೈಲು, ಪ್ರೀತಿ, ರೋಧನೆ, ವೇದನೆ, ಭಾವುಕತೆ ಪ್ರೇಮಿಗಳಿಬ್ಬ ಬಾಳಲ್ಲಿ ಹೆಣೆದುಕೊಳ್ಳುತ್ತಾ ಸಾಗುತ್ತೆ. ಮುಂದೇನಾಗುತ್ತೆ? ಪ್ರೇಮಿಗಳ ಪಾಡೇನು? ಈ ಕಥೆಯ ವಿಲನ್ ಯಾರು? ಇವೆಲ್ಲವೂ ಕನಸಿನ ಬೆಲೆ ಕಟ್ಟಲು ಹೊರ ಪ್ರೇಮಿಗಳಿಬ್ಬರ ಪ್ರೇಮಕಥೆಯ ಬಹುಮುಖ್ಯ ಅಂಗ.
ಹೇಗಿದೆ ಚಿತ್ರಕಥೆ?
ಹೀರೊ, ಹೀರೊಯಿನ್‌ಗೆ ಬಿಲ್ಡಪ್ ಇಲ್ಲ. ಐಶಾರಾಮಿ ಕಾರಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ಪ್ರಯಾಣ. ಕಾರು ಐಶಾರಾಮಿ ಆದರೂ, ಬದುಕು ಹಾಗಿಲ್ಲ ಅನ್ನೋದು ಆರಂಭದಲ್ಲೇ ನಿರ್ದೇಶಕರು ಕಟ್ಟಿ ಕೊಡುತ್ತಾರೆ. ಈ ಪ್ರೇಮಕಥೆಯಲ್ಲಿ ನಲಿವು, ನೋವು, ಕನಸು ಎಲ್ಲವೂ ಇದೆ. ಹೀಗಾಗಿ ಚಿತ್ರಕಥೆ ಪ್ರೇಮಿಗಳಿಗೆ ಹೇಳಿ ಮಾಡಿಸಿದ ಹಾಗಿದೆ. ಪ್ರೇಮಿಗಳನ್ನೇ ಇಟ್ಟುಕೊಂಡು ಮಾಡಿದ ಸಿನಿಮಾ ಅನ್ನೋದು ಖಡಾಖಂಡಿತವಾಗಿ ಹೇಳಬಹುದು. ಕೆಲವರಿಗೆ ಸ್ವಲ್ಪ ಜಾಸ್ತಿನೇ ಕಥೆ ಹೇಳಿದ್ದಾರೆ ಅಂತ ಅನಿಸಲೂ ಬಹುದು.

ರಕ್ಷಿತ್-ರುಕ್ಮಿಣಿ ಸಿಂಪಲ್ ಜೋಡಿ
'ಸಪ್ತ ಸಾಗರದಾಚೆ ಎಲ್ಲೋ' ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಇಬ್ಬರಿಗೂ ಹೇಳಿ ಮಾಡಿಸಿದ ಸಿನಿಮಾನೋ.. ಇಲ್ಲಾ ಈ ಸಿನಿಮಾಗೆ ಅವರೇ ಸೂಕ್ತವೋ ಅನ್ನುವಷ್ಟು ಹೋಲಿಕೆಯಾಗಿದೆ. ಭಾವನಾತ್ಮಕ ಸನ್ನಿವೇಶಗಳಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಆದರ್ಶ ಪ್ರೇಮಿಗಳನ್ನು ನೆನಪಿಸುತ್ತಾರೆ. ಹೆಚ್ಚು ಕಡಿಮೆ 10 ವರ್ಷಗಳ ಅಂತರದ ಕಥೆಯಲ್ಲಿ ರಿಯಲ್ ಲೈಫ್ ಪ್ರೇಮಿಗಳಿಗೆ ರೀಲ್ ಲೈಫ್ ಪ್ರೇಮಿಗಳು ಖಂಡಿತಾ ಇಷ್ಟ ಆಗುತ್ತಾರೆ.
ನಿರ್ದೇಶನ, ಕಾಮಿಡಿ, ಸಂಗೀತ, ಕ್ಯಾಮರಾ,
'ಸಪ್ತ ಸಾಗರದಾಚೆ ಎಲ್ಲೋ' ನಿರ್ದೇಶಕ ಹೇಮಂತ್ ಎಂ ರಾವ್ ಅವರ ಮತ್ತೊಂದು ಕಾಡುವಂತಹ ಸಿನಿಮಾ ಎನ್ನಬಹುದು. ಭಾವನಾತ್ಮಕ ಪ್ರೇಮಕಥೆಯಾಗಿದ್ದರಿಂದ ಕಾಮಿಡಿಗೆ ಅವಕಾಶವಿಲ್ಲ. ಹೃದಯ ಭಾರ ಮಾಡಿಕೊಂಡವರು, ಹಗೂರ ಇಟ್ಟುಕೊಂಡವರು ಇಬ್ಬರಿಗೂ ತಟ್ಟುವ ಸಿನಿಮಾ. ಹೀಗಾಗಿ ಕಾಮಿಡಿ ಇಲ್ಲ. ಚರಣ್ ರಾಜ್ ಸಂಗೀತ ನೆನಪಿನಲ್ಲಿ ಉಳಿಯೋದಿಲ್ಲ. ಅದ್ವೈತ ಗುರುಮೂರ್ತಿ ಕ್ಯಾಮರಾ ಕಣ್ಣಿಗೆ ಇಂಪು ಕೊಡುತ್ತೆ. ನಿಜಕ್ಕೂ ಕವಿತೆ ನೋಡುವಂತೆ ಭಾಸವಾಗುತ್ತೆ.
ಪ್ಲಸ್ ಏನು? ಮೈನಸ್ ಏನು?
ಈ ಸಿನಿಮಾದ ಪ್ಲಸ್ ಕಥೆ. ಬಹಳ ದಿನಗಳ ಬಳಿಕ ಒಂದೊಳ್ಳೆ ಪ್ರೇಮಕಥೆ ಬಂದಿದೆ. ರಕ್ಷಿತ್ ಶೆಟ್ಟಿ, ರಕ್ಮಿಣಿ ವಸಂತ್ ಹೊಸ ಕಾಂಬಿನೇಷನ್ ಸಿಕ್ಕಿದೆ. ಮೈನಸ್ ಅಂದರೆ, ಸಿನಿಮಾ ಕೆಲವು ಸನ್ನಿವೇಶದಲ್ಲಿ ಕೆಲವರಿಗೆ ಬೋರ್ ಹೊಡೆಸಬಹುದು. ಪ್ರೇಮಕಥೆಯಲ್ಲಿ ಕಾಮಿಡಿ ಸನ್ನಿವೇಶ ಇಲ್ಲದೆ ಇರೋದು. ಬರೀ ಪ್ರೇಮಿಗಳೇ ಟಾರ್ಗೆಟ್ ಆಡಿಯನ್ಸ್ ಅಂತ ಅನಿಸುತ್ತೆ. ಇವೆಲ್ಲವನ್ನೂ ಬಿಟ್ಟು ನೋಡಿದರೆ, ಪ್ರೇಮಿಗಳು ಹೊಗಳಿ ಕೊಂಡಾಡುವ ಸಿನಿಮಾವಿದು.


Click it and Unblock the Notifications











