'ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!

ಕೊನೆ ಬೆಂಚಿನಲ್ಲಿ ಕೂತ್ಕೊಂಡು, ಕ್ಲಾಸ್ ಗಳಿಗೆ ಬಂಕ್ ಹಾಕ್ಕೊಂಡು, ಲೆಕ್ಚರರ್ಸ್ ಹತ್ರ ಬೈಸ್ಕೊಂಡು, ಹುಡುಗೀರ್ ಹಿಂದೆ ಓಡಾಡಕ್ಕೊಂಡು, ಫ್ರೆಂಡ್ಸ್ ಜತೆ ಕಿತ್ತಾಡ್ಕೊಂಡು, ಲವ್, ಫೈಟ್, ಕಾಲೇಜ್ ಎಲೆಕ್ಷನ್......ಹೀಗೆ ವಿದ್ಯಾರ್ಥಿ ಜೀವನವನ್ನ ಎಂಜಾಯ್ ಮಾಡಿದ ಪ್ರತಿಯೊಬ್ಬರನ್ನ ಕಾಡುವ ಸಿನಿಮಾ 'ಕಿರಿಕ್ ಪಾರ್ಟಿ'.

Rating:
3.5/5
Star Cast: ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ
Director: ರಿ‍ಷಭ್ ಶೆಟ್ಟಿ

ಕಥಾ ಹಂದರ

ಕಥಾ ಹಂದರ

ಕರ್ಣ (ರಕ್ಷಿತ್ ಶೆಟ್ಟಿ) ಕೊನೆಯ ಬೆಂಚಿನ ಎಂಜಿನಿಯರಿಂಗ್ ವಿದ್ಯಾರ್ಥಿ. ಕಾಲೇಜಿನಲ್ಲಿ ಕರ್ಣನ ತರ್ಲೆ ಆಟಗಳು ಒಂದೆರೆಡಲ್ಲ. ಇಡೀ ಕ್ಲಾಸ್ ನೇ ಮಾಸ್ ಬಂಕ್ ಮಾಡಿಸಿ ಸಿನಿಮಾ ತೋರಿಸುತ್ತಾನೆ. ಲೆಕ್ಚರರ್ ಗೆ ಯಾಮಾರಿಸಿ ಪರೀಕ್ಷೆ ಬರೆಯುತ್ತಾನೆ. ತನ್ನ 'ಕಿರಿಕ್' ಸ್ನೇಹಿತರ ಜೊತೆ ಸೇರಿ ಸಿಕ್ಕಾಪಟ್ಟೆ ಕಪಿಚೇಷ್ಟೆ ಮಾಡುತ್ತಾನೆ. ಈ ಮಧ್ಯೆ ತಮ್ಮ ಸೀನಿಯರ್ ಗೆಳತಿ ಸಾನ್ವಿ ಜೋಸೆಫ್ (ರಶ್ಮಿಕಾ ಮಂದಣ್ಣ) ಜತೆ ಪ್ರೀತಿಯ ಅಂಕುರ. ಇನ್ನೇನೂ ಕರ್ಣನ ಪ್ರೇಮ ಫಲಿಸಿತು ಎನ್ನುವಷ್ಟರಲ್ಲಿ ಸಾನ್ವಿಯ ಅಕಾಲಿಕ ಸಾವು. ಹುಡುಗಾಟವಾಗಿದ್ದ ಕರ್ಣನ ಜೀವನದಲ್ಲಿ ಗಂಭೀರತೆಯ ಗಾಳಿ...! ಮುಂದೇನಾಗುತ್ತೆ ಎಂಬುದು ಇಂಟ್ರಸ್ಟಿಂಗ್.['ಕಿರಿಕ್ ಪಾರ್ಟಿ' ನೋಡಿದ ವಿಮರ್ಶಕರು ಮಾಡಿದ ಕಾಮೆಂಟ್ಸ್ ಇವು.]

ಪಕ್ಕಾ ಕಾಲೇಜ್ ಡೇಸ್ ಕಥೆ!

ಪಕ್ಕಾ ಕಾಲೇಜ್ ಡೇಸ್ ಕಥೆ!

ಇಡೀ ಸಿನಿಮಾ ಸಾಗುವುದೇ ಕಾಲೇಜಿನ ಸುತ್ತ. ಕ್ಲಾಸ್, ಬಂಕ್, ರ್ಯಾಗಿಂಗ್, ಸೀನಿಯರ್ಸ್ ವರ್ಸಸ್ ಜೂನಿಯರ್ಸ್ ಕಿರಿಕ್, ಎಲೆಕ್ಷನ್, ಡಿಬಾರ್, ಲವ್, ಫ್ರೆಂಡ್ ಷಿಪ್, ಹಾಸ್ಟಲ್, ಹೀಗೆ ಕಾಲೇಜು ದಿನಗಳಲ್ಲಿ ಏನೆಲ್ಲಾ ಇರುತ್ತೋ ಆ ಎಲ್ಲ ಅಂಶಗಳು 'ಕಿರಿಕ್ ಪಾರ್ಟಿ'ಯಲ್ಲಿದೆ.

ಯುವಪ್ರೇಕ್ಷಕರು ಮೆಚ್ಚುಗೆ!

ಯುವಪ್ರೇಕ್ಷಕರು ಮೆಚ್ಚುಗೆ!

'ಕಿರಿಕ್ ಪಾರ್ಟಿ' ಚಿತ್ರದ ಮೊದಲಾರ್ಧ ಲವಲವಿಕೆಯಿಂದ ಕೂಡಿದೆ. ದ್ವಿತೀಯಾರ್ಧ ಗಂಭೀರವಾಗಿದೆ. ಆದ್ರೆ, ಹಳೆಯದನ್ನ ನೆನಪಿಸಿಕೊಳ್ಳುವ ಕೆಲವೊಂದು ಘಟನೆಗಳು ನಿರಾಸೆ ಮೂಡಿಸುತ್ತೆ. ಅದನ್ನ ಹೊರತುಪಡಿಸಿದ್ರೆ, ಈ ಚಿತ್ರ ಔಟ್ ಅಂಡ್ ಔಟ್ ಎಂಟರ್ ಟೇನರ್.

ರಕ್ಷಿತ್ ಶೆಟ್ಟಿಗೆ ಫುಲ್ ಮಾರ್ಕ್ಸ್!

ರಕ್ಷಿತ್ ಶೆಟ್ಟಿಗೆ ಫುಲ್ ಮಾರ್ಕ್ಸ್!

'ಕಿರಿಕ್ ಪಾರ್ಟಿ'ಯ ದೊಡ್ಡ ಬಲ ರಕ್ಷಿತ್ ಶೆಟ್ಟಿ. ವಿದ್ಯಾರ್ಥಿಯಾಗಿ, ವಿದ್ಯಾರ್ಥಿಗಳ ನಾಯಕನಾಗಿ, ಜೂನಿಯರ್ ಆಗಿ, ಸೀನಿಯರ್ ಆಗಿ, ಲವರ್ ಬಾಯ್ ಆಗಿ, ಜತೆಗೆ ಆಕ್ಷನ್ ಹೀರೋ ಆಗಿ, ಕಷ್ಟಕ್ಕೆ ಸಹಾಯ ಮಾಡುವ ಮಾನವೀಯತೆ ಮನುಷ್ಯನಾಗಿ...ಹೀಗೆ ಒಂದೇ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯ ಹಲವು ಗೆಟಪ್ ಗಳು ಮೋಡಿ ಮಾಡುತ್ತೆ.

ನಾಯಕಿಯರ ಅಭಿನಯ?

ನಾಯಕಿಯರ ಅಭಿನಯ?

ಚೊಚ್ಚಲ ಚಿತ್ರದಲ್ಲಿ ಇಬ್ಬರು ನಾಯಕಿಯರು ಗಮನ ಸೆಳೆದಿದ್ದಾರೆ. ಚಿತ್ರದ ಮೊದಲಾರ್ಧದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ರೆ, ಸೆಕೆಂಡ್ ಹಾಫ್ ನಲ್ಲಿ ಸಂಯುಕ್ತ ಹೆಗ್ಡೆ ಮೋಡಿ ಮಾಡುತ್ತಾರೆ. ತಮ್ಮ ತಮ್ಮ ಪಾತ್ರಗಳಿಗೆ ಇಬ್ಬರು ಉತ್ತಮವಾಗಿ ನ್ಯಾಯ ಒದಗಿಸಿದ್ದಾರೆ.

ಉಳಿದವರು ಹೇಗೆ.....?

ಉಳಿದವರು ಹೇಗೆ.....?

ರಕ್ಷಿತ್ ಶೆಟ್ಟಿಯ ಸ್ನೇಹಿತರಾಗಿ ಅರವಿಂದ್ ಅಯ್ಯರ್, ಧನಂಜಯ್ ರಂಜನ್, ಚಂದನ್, ಪ್ರಮೋದ್ ಶೆಟ್ಟಿ, ಅಶ್ವಿನ್ ರಾವ್ ಉತ್ತಮ ಸಾಥ್ ನೀಡಿದ್ದಾರೆ. ಮೆಕಾನಿಕ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ. ಉಳಿದವರು ಕೂಡ 'ಕಿರಿಕ್ ಪಾರ್ಟಿ'ಗೆ ಜೋಶ್ ಹೆಚ್ಚಿಸಿದ್ದಾರೆ.

ಅಜನೀಶ್ ಸಂಗೀತ ಹೇಗಿದೆ?

ಅಜನೀಶ್ ಸಂಗೀತ ಹೇಗಿದೆ?

ಚಿತ್ರ ಬಿಡುಗಡೆಗೂ ಮುಂಚೆನೆ 'ಕಿರಿಕ್ ಪಾರ್ಟಿ'ಯ ಹಾಡುಗಳು ಸೂಪರ್ ಹಿಟ್ ಆಗಿದ್ದವು. ತೆರೆಮೇಲೆ ಕೂಡ ಅದ್ಭುತವಾಗಿ ಮೂಡಿಬಂದಿವೆ. ಅಜನೀಶ್ ಅವರ ಹಿನ್ನೆಲೆ ಸಂಗೀತ ಕೂಡ ಅಷ್ಟೇ ಪೂರಕವಾಗಿದೆ. ಇನ್ನೂ ಲಹರಿ ವೇಲು ಅವರ ವಿರೋಧ ಹಿನ್ನೆಲೆ ಚಿತ್ರದ ಒಂದು ಹಾಡನ್ನ ಕಟ್ ಮಾಡಲಾಗಿದೆ.

ರಿಷಬ್ ನಿರ್ದೇಶನ ಹೇಗಿದೆ?

ರಿಷಬ್ ನಿರ್ದೇಶನ ಹೇಗಿದೆ?

ಎಂದಿನಂತೆ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. 'ಕಿರಿಕ್ ಪಾರ್ಟಿ' ಚಿತ್ರವನ್ನ ನೋಡಿದಾಗ, ಕೆಲವೊಂದು ದೃಶ್ಯಗಳು 'ಉಳಿದವರು ಕಂಡಂತೆ' ಚಿತ್ರದ ದೃಶ್ಯಗಳನ್ನ ನೆನಪು ಮಾಡುತ್ತದೆ. ಮೇಕಿಂಗ್ ನಲ್ಲಿ ಯಾವುದೇ ಕೊರತೆಯಿಲ್ಲದೆ ಸಿನಿಮಾ ಮಾಡುವಲ್ಲಿ ರಿಷಬ್ ಶೆಟ್ಟಿ ಯಶಸ್ಸು ಕಂಡಿದ್ದಾರೆ.

ನೆನಪಾಗುವ ಬೇರೆ ಚಿತ್ರಗಳು!

ನೆನಪಾಗುವ ಬೇರೆ ಚಿತ್ರಗಳು!

ಇನ್ನೂ ಪಕ್ಕಾ ಕಾಲೇಜ್ ಲೈಫ್ ನ ಸುತ್ತ ನಡೆಯುವ 'ಕಿರಿಕ್ ಪಾರ್ಟಿ'ಯನ್ನ ನೋಡುವಾಗ ಈ ಹಿಂದಿನ ಹಲವು ಕಾಲೇಜ್ ಡೇಸ್ ಆಧರಿತ ಚಿತ್ರಗಳು ಕಣ್ಮುಂದೆ ಬರುತ್ತೆ. ಕನ್ನಡ 'ಜಾಲಿಡೇಸ್', ಮಲಯಾಳಂನ 'ಪ್ರೇಮಂ', ಚಿತ್ರಗಳಲ್ಲಿ ನೋಡಿರುವ ಕೆಲ ಅಂಶಗಳು ಇಲ್ಲಿಯೂ ಕಾಣಬಹುದು.

ವರ್ಷಾಂತ್ಯಕ್ಕೆ 'ಉತ್ತಮ ಪಾರ್ಟಿ'!

ವರ್ಷಾಂತ್ಯಕ್ಕೆ 'ಉತ್ತಮ ಪಾರ್ಟಿ'!

2016ಕ್ಕೆ 'ಕಿರಿಕ್ ಪಾರ್ಟಿ' ಅದ್ದೂರಿಯಾಗಿ ತೆರೆ ಎಳೆಯುತ್ತಿದೆ. ಹೊಸ ವರ್ಷದ ಸ್ವಾಗತಕ್ಕಾಗಿ ಕಾಯುತ್ತಿರುವ ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ 'ಕಿರಿಕ್ ಪಾರ್ಟಿ' ಖುಷಿಯಿಂದ ಬೀಳ್ಕೊಡುಗೆ ನೀಡಿದೆ. ಕೊಟ್ಟ ಕಾಸಿಗೆ ತಕ್ಕ ಮನರಂಜನೆ. ಜೊತೆಗೆ ತಮ್ಮ ಕಾಲೇಜು ದಿನಗಳ ನೆನಪು ಉಚಿತ.

More from Filmibeat

English summary
Kannada Actor Rakshit Shetty starrer 'kirik Party' Movie has hit the screens Yesterday (December 30th). The Movie Received Good Response From Audience. Here is the complete Review of 'kirik Party'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X