ಕಾಂತಾರ ಹಿಟ್‌ ಆಗೋದ್ರಲ್ಲಿ ಡೌಟ್‌ ಇಲ್ಲ: ನಟ ರಕ್ಷಿತ್‌ ಶೆಟ್ಟಿ

ರಿಷಬ್‌ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಕಾಂತಾರ' ಇಂದು (ಸಪ್ಟೆಂಬರ್‌ 30) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ನಿನ್ನೆ (ಸಪ್ಟೆಂಬರ್‌ 29) ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಬಹುತೇಕರು ನಿನ್ನೆಯೇ ಚಿತ್ರವನ್ನು ವೀಕ್ಷಿಸಿದ್ದಾರೆ. ಕರಾವಳಿಯ ಸಂಸ್ಕೃತಿಯನ್ನು ವೈಭವೀಕರಿಸಿರುವ 'ಕಾಂತಾರ' ಚಿತ್ರಕ್ಕೆ ಸ್ಯಾಂಡಲ್‌ವುಡ್‌ನ ನಟ ನಟಿಯರು ಮನಸೋತಿದ್ದಾರೆ.

ನಿನ್ನೆ (ಸಪ್ಟೆಂಬರ್‌ 29) ಪ್ರೀಮಿಯರ್‌ ಶೋ ನೋಡಿರುವ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಕಾಂತಾರ ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಕಾಂತಾರ ಚಿತ್ರತಂಡದೊಂಗಿನ ಫೋಟೋ ಹಂಚಿಕೊಂಡಿದ್ದ ರಮ್ಯಾ, ಸಂಪೂರ್ಣ 'ಕಾಂತಾರ' ಚಿತ್ರತಂಡಕ್ಕೆ ಅಭಿನಂದನೆ ಸಲ್ಲಿಸಿದ್ದರು. ಅಲ್ಲದೇ ರಿಷಬ್‌ ಶೆಟ್ಟಿ ಹಾಗೂ ಸಪ್ತಮಿ ಗೌಡ ನಟನೆಯನ್ನು ರಮ್ಯಾ ಕೊಂಡಾಡಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ಕೂಡ 'ಕಾಂತಾರ' ಪ್ರೀಮಿಯರ್ ಶೋ ವೀಕ್ಷಿಸಿದ್ದು, ಚಿತ್ರದ ಬಗ್ಗೆ ಹಾಗೂ ರಿಷಬ್‌ ಶೆಟ್ಟಿ ನಿರ್ದೇಶನದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಖಂಡಿತವಾಗಿಯೂ ಸಿನಿಮಾ ಹಿಟ್‌ ಆಗುತ್ತದೆ ಅದರ ಬಗ್ಗೆ ನನಗೆ ಡೌಟಿಲ್ಲ. 'ಕಾಂತಾರ' ಯಾವಾಗಲೂ ನೆನಪಿನಲ್ಲಿರುವ ಸಿನಿಮಾವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ' ಅದ್ಭುತವಾಗಿ ಮೂಡಿ ಬಂದಿದೆ

'ಕಾಂತಾರ' ಅದ್ಭುತವಾಗಿ ಮೂಡಿ ಬಂದಿದೆ

'ಕಾಂತಾರ' ಶೂಟಿಂಗ್‌ ಆದಾಗಿನಿಂದ ಒಂದು ಸ್ಪಲ್ಪ, ಸ್ಪಲ್ಪ ತುಣುಕು ನೋಡಿದವರೆಲ್ಲ ಸಿನಿಮಾ ನೋಡಬೇಕು, ಅದ್ಭುತವಾಗಿ ಬಂದಿದೆ ನೀವು 'ಕಾಂತಾರ' ಸಿನಿಮಾ ನೋಡಿ ಎನ್ನುತ್ತಿದ್ದರು. ಆದರೆ ರಿಷಬ್‌ ನನಗೆ ನೀನು ಪ್ರಿಮಿಯರ್‌ ಶೋ ದಿನನೇ ಸಿನಿಮಾ ನೋಡಬೇಕು. ಅದಕ್ಕಿಂತ ಮುಂಚೆ ನೋಡಬಾರದು ಅಂತಾ ಕಂಡಿಷನ್‌ ಹಾಕಿದ್ದ. ಹಾಗಾಗಿ ನಾನು ಇದುವರೆಗೂ ಸಿನಿಮಾ ನೋಡಿರಲಿಲ್ಲ. ಎಲ್ಲೋ ಸ್ವಲ್ಪ ತುಣುಕು ನೋಡಿದ್ದೆ. ಇವತ್ತು ಸಿನಿಮಾ ನೋಡಿದೆ ಎಂದರು ರಕ್ಷಿತ್‌ ಶೆಟ್ಟಿ.

ಸಿನಿಮಾ ಹಿಟ್‌ ಆಗೋದ್ರಲ್ಲಿ ಡೌಟ್‌ ಇಲ್ಲ

ಸಿನಿಮಾ ಹಿಟ್‌ ಆಗೋದ್ರಲ್ಲಿ ಡೌಟ್‌ ಇಲ್ಲ

ಮಾತು ಮುಂದುವರಿಸಿದ ರಕ್ಷಿತ್‌ ಶೆಟ್ಟಿ 'ಕಾಂತಾರ' ಚಿತ್ರದ ಕೊನೆಯ ಅರ್ಧಗಂಟೆ ಬ್ರಿಲಿಯಂಟ್‌, ತುಂಬಾ ಒಳ್ಳೆ ಸಿನಿಮಾ. ಕೊನೆಯ ಅರ್ಧ ಗಂಟೆ ನನಗೆ ರೋಮಾಂಚನ ಆಯ್ತು. ಈ ಹಿಂದೆ ಯಾವ ಸಿನಿಮಾವೂ ನನಗೆ ಅಂತಹ ಅನುಭವ ಕೊಟ್ಟಿಲ್ಲ. ನನಗೆ ಗೊತ್ತು ಜನ ಈ ಚಿತ್ರವನ್ನು ಇಷ್ಟಪಡುತ್ತಾರೆ. ಖಂಡಿತವಾಗಿಯೂ ಸಿನಿಮಾ ಹಿಟ್‌ ಆಗುತ್ತದೆ ಅದರ ಬಗ್ಗೆ ನನಗೆ ಡೌಟಿಲ್ಲ. ಕಾಂತಾರ ಯಾವಾಗಲೂ ನೆನಪಿನಲ್ಲಿರುವ ಸಿನಿಮಾವಾಗುತ್ತದೆ. ಈ ಚಿತ್ರದ ಕ್ಲೈಮಾಕ್ಸ್‌ ಎಂದಿಗೂ ನೆನಪಿನಲ್ಲಿರುತ್ತದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ನೀವು ಖಂಡಿತವಾಗಿಯೂ ಚಿತ್ರವನ್ನು ಇಷ್ಟ ಪಡುತ್ತೀರಿ ಎಂದಿದ್ದಾರೆ.

ದೈವದ ಪ್ರೇರಣೆಯಿಂದ ಆ ದೃಶ್ಯವನ್ನು ಮಾಡಿದ್ದಾನೆ

ದೈವದ ಪ್ರೇರಣೆಯಿಂದ ಆ ದೃಶ್ಯವನ್ನು ಮಾಡಿದ್ದಾನೆ

ಇನ್ನು 'ಕಾಂತಾರ' ಪ್ರೀಮಿಯರ್‌ ಶೋ ವೀಕ್ಷಿಸಿದ ನಟ ಪ್ರಮೋದ್‌ ಶೆಟ್ಟಿ ಕೂಡ ಮಾತನಾಡಿದ್ದು, ನಮ್ಮ ಸಿನಿಮಾದ ಬಗ್ಗೆ ನಾನೇ ಹೊಗಳಿಕೊಳ್ಳುವುದು ಸರಿಯಲ್ಲ. ನಾನು ಸಿನಿಮಾ ನೋಡಿರಲಿಲ್ಲ. ನನ್ನ ಪಾತ್ರದ ಡಬ್ಬಿಂಗ್‌ ಮಾತ್ರ ಮಾಡಿ ಬಂದಿದ್ದೆ. ಆಗ ನನಗೆ ಕೆಲವು ಕಾಮಿಡಿ ಸೀನ್‌ಗಳ ಬಗ್ಗೆ ಗೊತ್ತಿತ್ತು. ಆದರೆ ನಾನು 'ಕಾಂತಾರ'ದಲ್ಲಿ ಈ ರೀತಿ ಕ್ಲೈಮಾಕ್ಸ್‌ ಊಹಿಸಿರಲಿಲ್ಲ. 'ಕಾಂತಾರ' ಚಿತ್ರದ ಕೊನೆಯ ಇಪ್ಪತ್ತು ನಿಮಿಷ ನನ್ನ ಗೆಳೆಯ ರಿಷಬ್‌ ಶೆಟ್ಟಿ ಅವನಲ್ಲ. ನಿಜವಾಗಿಯೂ ಅವನ ಮೇಲೆ ದೈವ ಬಂದಿತ್ತು. ಅವನು ದೈವದ ಪ್ರೇರಣೆಯಿಂದ ಆ ದೃಶ್ಯವನ್ನು ಮಾಡಿದ್ದಾನೆ ಎನಿಸುತ್ತದೆ. ಅದು ಕೇವಲ ನಟನೆಯಲ್ಲ ಎಂದಿದ್ದಾರೆ.

'ಕಾಂತಾರ' ಸಾಂಸ್ಕೃತಿಕವಾಗಿ ಅದ್ಭುತವಾಗಿದೆ.

'ಕಾಂತಾರ' ಸಾಂಸ್ಕೃತಿಕವಾಗಿ ಅದ್ಭುತವಾಗಿದೆ.

'ಕಾಂತಾರ' ಒಂದು ಅದ್ಭುತವಾಗಿ ಸಾಂಸ್ಕೃತಿಕವಾಗಿ ರಿಚ್ ಆಗಿರುವ ಸಿನಿಮಾ. ನಮ್ಮ ಭಾಗದ ಬಹಳಷ್ಟು ಆಚರಣೆಗಳನ್ನು ವಿಜೃಂಭಣೆಯಿಂದ, ತುಂಬಾ ನೈಜವಾಗಿ, ತುಂಬಾ ಅದ್ಭುತವಾಗಿ ತೋರಿಸಿದಂತಹ 'ಕಾಂತಾರ'ಕ್ಕೆ ಅಭಿನಂದನೆ. ನಾನು ಈ ಚಿತ್ರದಲ್ಲಿ ನಟಿಸಿರುವುದು ನನ್ನ ಪುಣ್ಯ. ಅದೇ ಪಂಜುರ್ಲಿ ದೈವ ನನಗೆ ಆಶೀರ್ವಾದ ಮಾಡಿದೆ ಅನಿಸುತ್ತದೆ. ಹಾಗಾಗಿ ನಾನು ಈ ಸಿನಿಮಾದಲ್ಲಿದ್ದೇನೆ. ನಮ್ಮ ಭಾಗದ ದೈವವನ್ನು ನಂಬುವವರಿಗೆ ಹಾಗೂ ದೈವದ ನರ್ತನವನ್ನು ನಂಬುವವರಿಗೆ ಇದು ಒಂದು ರೀತಿಯ ಆಚರಣೆಯಾದರೆ, ಈ ಬಗ್ಗೆ ಗೊತ್ತಿಲ್ಲದೆ ಇರುವವರು ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ನಮಗೆ ಅವರು ಕೊಡುತ್ತಿರುವ ಪ್ರತಿಕ್ರಿಯೆ, ಅವರು ನಮ್ಮ ಆಚರಣೆಗೆ ಕೊಡುತ್ತಿರುವ ಬೆಲೆ ಖುಷಿ ಕೊಟ್ಟಿದೆ. ಆ ಆಚರಣೆಯ ಬಗ್ಗೆ ಅರ್ಥ ಮಾಡಿಕೊಂಡು ಈ ರೀತಿಯ ಆಚರಣೆ ಇದೆ ಎಂದು ತಿಳಿಸಿಕೊಟ್ಟಿದಕ್ಕೆ ರಿಷಬ್‌ಗೆ ಧನ್ಯವಾದ. ಅದನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಪ್ರಮೋದ್‌ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Sandalwood actor Rakshith Shetty And Pramod Shetty Reviews Rishabh Shetty starrer Kantara movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X