For Quick Alerts
  ALLOW NOTIFICATIONS  
  For Daily Alerts

  Rambo 2 ವಿಮರ್ಶೆ : ಕಾಮಿಡಿ 'ವೆರೈಟಿ', ಮನರಂಜನೆ ಗ್ಯಾರೆಂಟಿ

  By Naveen
  |
  ಕಾಮಿಡಿ ಸಿನಿಮಾ ನೋಡಿ ಕಣ್ಣೀರು ಹಾಕಿದ್ರು ವೀಕ್ಷಕರು | Filmibeat Kannada

  ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ನಗಬೇಕು ಅಂತ ಇಷ್ಟ ಇದ್ದರೆ Rambo 2 ಸಿನಿಮಾ ನೋಡಬೇಕು. ಸದ್ಯ ಎಲ್ಲಿ ಕೇಳಿದರು, ಎಲ್ಲಿ ನೋಡಿದರು ಬರೀ ಕರ್ನಾಟಕ ಚುನಾವಣೆ ಬಗ್ಗೆಯೇ ಸುದ್ದಿ ಇದೆ. ಹೀಗಿರುವಾಗ, ಅದೆಲ್ಲವನ್ನು ಮರೆತು ಎರಡೂವರೆ ಗಂಟೆ ಹಾಯಾಗಿ ಮನಸು ಬಿಚ್ಚಿ ನಗಬೇಕು ಅಂದರೆ ಈ ಸಿನಿಮಾವನ್ನು ನೋಡಬಹುದು.

  Rating:
  4.0/5

  ಚಿತ್ರ : Rambo 2

  ನಿರ್ಮಾಣ: Ladoo cinema house/ De arte studios

  ನಿರ್ದೇಶನ: ಅನಿಲ್ ಕುಮಾರ್

  ಸಂಕಲನ: ಕೆ.ಎಂ.ಪ್ರಕಾಶ್

  ಸಂಗೀತ: ಅರ್ಜುನ್ ಜನ್ಯ

  ಅಭಿನಯ: ಶರಣ್, ಆಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್, ಸಾಧು ಕೋಕಿಲ, ತಬಲ ನಾಣಿ ಮತ್ತು ಇತರರು

  ಬಿಡುಗಡೆಯ ದಿನಾಂಕ : ಮೇ 18

  ಒಂದು ದಿನದ ಡೇಟಿಂಗ್ ಕಥೆ

  ಒಂದು ದಿನದ ಡೇಟಿಂಗ್ ಕಥೆ

  ಕೃಷ್ಣ (ಶರಣ್) ಮತ್ತು ಮಯೂರಿ (ಆಶಿಕಾ ರಂಗನಾಥ್) ಇಬ್ಬರು ಮಾಡ್ರನ್ ಪ್ರೇಮಿಗಳು. ಈ ಇಬ್ಬರು ಒಂದು ದಿನದ ಮಟ್ಟಿಗೆ ಡೇಟಿಂಗ್ ಎಂದು ಲಾಂಗ್ ಡ್ರೈವ್ ಹೋಗುತ್ತಾರೆ. ಆ ಜರ್ನಿಯೇ ಇಡೀ ಸಿನಿಮಾದ ಕಥೆ. ಇಬ್ಬರು ಲವರ್ಸ್ ಗಳ ಕಾರು ಪ್ರಯಾಣದಲ್ಲಿ ನಡೆಯುವ ಘಟನೆಗಳ ಸುತ್ತ ಸಿನಿಮಾ ನಿಂತಿದೆ. ಆ ಪ್ರಯಾಣದಲ್ಲಿ ನಗು, ಅಳು, ರೋಚಕತೆ, ಕುತೂಹಲ ಹೀಗೆ ಎಲ್ಲ ಅಂಶಗಳು ಇವೆ.

  ಪ್ಲೇ ಬಾಯ್ ಕೃಷ್ಣ, ಪ್ಲೇ ಗರ್ಲ್ ಮಯೂರಿ

  ಪ್ಲೇ ಬಾಯ್ ಕೃಷ್ಣ, ಪ್ಲೇ ಗರ್ಲ್ ಮಯೂರಿ

  ಚಿಕ್ಕ ವಯಸ್ಸಿನಿಂದ ಕೃಷ್ಣ (ಶರಣ್) ಗಣೇಶನ ಭಕ್ತ. ಗಣೇಶನ ಭಕ್ತನಾದರೂ ಈತ ಈ ಯುಗದ ಕೃಷ್ಣ. ಜೀವನದಲ್ಲಿ 'ವೆರೈಟಿ' ಬೇಕು ಅಂತ ಎಲ್ಲ ವಿಷಯದಲ್ಲಿಯೂ ಹುಡುಕುತಿರುತ್ತಾನೆ. ಅದೇ ರೀತಿ 'ವೆರೈಟಿ' ಗಾಗಿ ಲವ್ ಮಾಡುವ ಹುಡುಗಿಯರನ್ನು ಬದಲಿಸುತ್ತಿರುತ್ತಾನೆ. ಇತ್ತ ಮಯೂರಿ ಕೂಡ ಫ್ರೆಂಡ್ ಶಿಪ್ ಹೆಸರಿನಲ್ಲಿ ಹುಡುಗರ ಎಟಿಎಂ ಅನ್ನು ಅವರಿಗಿಂತ ಹೆಚ್ಚು ಬಳಸುವ ಚಾಲಾಕಿ ಆಗಿರುತ್ತಾಳೆ. ಇಂತಹ ಜೋಡಿ ಒಟ್ಟಿಗೆ ಸೇರಿದರೆ ಎನ್ನೆಲ್ಲಾ ಆಗುತ್ತದೆ ಎನ್ನುವುದು ಚಿತ್ರದ ಕಥೆ.

  ತುಂಬ ಇಷ್ಟ ಆಗುವ ಅಂಶಗಳು

  ತುಂಬ ಇಷ್ಟ ಆಗುವ ಅಂಶಗಳು

  ಕಾಮಿಡಿ

  ಶರಣ್, ಚಿಕ್ಕಣ್ಣ, ಆಶಿಕಾ ರಂಗನಾಥ್ ನಟನೆ

  ರವಿಶಂಕರ್ ಪಾತ್ರ

  ಹಾಡುಗಳು

  ಒಂದೊಳ್ಳೆ ಕಾಮಿಡಿ, ಒಂದೊಳ್ಳೆ ಸಂದೇಶ

  ಒಂದೊಳ್ಳೆ ಕಾಮಿಡಿ, ಒಂದೊಳ್ಳೆ ಸಂದೇಶ

  ಸಿನಿಮಾದಲ್ಲಿ ಒಂದೊಳ್ಳೆ ಕಾಮಿಡಿ ಇದೆ. ಆದರೆ ಬರೀ ಕಾಮಿಡಿಯಷ್ಟೇ ಈ ಸಿನಿಮಾ ಆಗದಿದ್ದರೆ ಅದರ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯ ಇರಲಿಲ್ಲ. ಮನರಂಜನೆ ಜೊತೆಗೆ ಒಂದು ಒಳ್ಳೆಯ ಮೆಸೇಜ್ ಚಿತ್ರದಲ್ಲಿದೆ. 'ಸಂಬಂಧಗಳಲ್ಲಿ ವೆರೈಟಿ ಹುಡುಕಬೇಡಿ,' 'ಡ್ರಿಂಕ್ ಅಂಡ್ ಡ್ರೈವ್ ಮಾಡಬೇಡಿ' ಹೀಗೆ ಒಳ್ಳೆಯ ವಿಷಯಗಳು ಸಿನಿಮಾದ ಘನತೆಯನ್ನು ಹೆಚ್ಚಿಸಿವೆ.

  ಕಡಿಮೆ ಪಾತ್ರ, ಹೆಚ್ಚು ಮನರಂಜನೆ

  ಕಡಿಮೆ ಪಾತ್ರ, ಹೆಚ್ಚು ಮನರಂಜನೆ

  ಶರಣ್, ಚಿಕ್ಕಣ್ಣ, ಆಶಿಕಾ, ರವಿಶಂಕರ್, ಕುರಿ ಪ್ರತಾಪ್, ತಬಲನಾಣಿ ಈ ಪಾತ್ರಗಳು ಸಿನಿಮಾದಲ್ಲಿ ಪ್ರಮುಖವಾಗಿವೆ. ಇವುಗಳನ್ನು ಬಿಟ್ಟರೆ ಉಳಿದ ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತದೆ. ಕಡಿಮೆ ಪಾತ್ರಗಳು ಸಿನಿಮಾದಲ್ಲಿ ಇದ್ದರೂ ಅವುಗಳ ಪರಿಣಾಮ ಮಾತ್ರ ಹೆಚ್ಚು. ಈ ಪಾತ್ರಗಳ ಪೈಕಿ ತೆರೆ ಮೇಲೆ ಯಾವ ಪಾತ್ರವೂ ಸೋಲುವುದಿಲ್ಲ. ಎಲ್ಲ ಪಾತ್ರಗಳಿಗೂ ಪ್ರೇಕ್ಷಕ ತನ್ನ ಮನದಲ್ಲಿ ಜಾಗ ನೀಡುತ್ತಾನೆ.

  ರವಿಶಂಕರ್ ಪಾತ್ರ

  ರವಿಶಂಕರ್ ಪಾತ್ರ

  ಚಿತ್ರದ ಫಸ್ಟ್ ಹಾಫ್ ತುಂಬ ಕಾಮಿಡಿ ಸನ್ನಿವೇಶಗಳಿಂದ ಕೂಡಿದೆ. ಆದರೆ ಸೆಕೆಂಡ್ ಹಾಫ್ ನಲ್ಲಿ ರಿಯಲ್ ಗೇಮ್ ಶುರು ಆಗುತ್ತದೆ. ಅದರಲ್ಲಿಯೂ ರವಿಶಂಕರ್ ಪಾತ್ರ ಈ ಸಿನಿಮಾದ ಆಸ್ತಿ. ಇಡೀ ಸಿನಿಮಾದಲ್ಲಿ ನಕ್ಕು ನಕ್ಕು ಸಾಕಾದ ಜನರಿಗೆ ರವಿಶಂಕರ್ ಅಳಿಸಿ ಬಿಡುತ್ತಾರೆ. 'ಚೌಕ' ಚಿತ್ರ ನೋಡಿದಾಗ ಕಾಶೀನಾಥ್ ಇಷ್ಟ ಆಗುವ ರೀತಿ ಇಲ್ಲಿ ರವಿಶಂಕರ್ ಇಷ್ಟ ಆಗಿ ಬಿಡುತ್ತಾರೆ. ಅಂದಹಾಗೆ, ರವಿಶಂಕರ್ ಪಾತ್ರವನ್ನು ನೀವು ಚಿತ್ರಮಂದಿರದಲ್ಲಿಯೇ ನೋಡಿ.

  ಹಾಡುಗಳು ಮತ್ತು ಮೇಕಿಂಗ್

  ಹಾಡುಗಳು ಮತ್ತು ಮೇಕಿಂಗ್

  ಸಿನಿಮಾದಲ್ಲಿ ಹುಡುಕುತ್ತ ಹೋದರೆ ಪ್ಲಸ್ ಪಾಯಿಂಟ್ ಗಳೆ ಹೆಚ್ಚು ಕಾಣುತ್ತದೆ. ಅದರಲ್ಲಿ ಒಂದು ಸಂಗೀತ. ಅರ್ಜುನ್ ಜನ್ಯ ಮತ್ತೆ ಹಾಡುಗಳ ಮೂಲಕ ಮ್ಯಾಜಿಕ್ ಮಾಡಿದ್ದಾರೆ. ಆ ಹಾಡುಗಳನ್ನು ಅಷ್ಟೆ ಶ್ರೀಮಂತವಾಗಿ ತೋರಿಸಿಲಾಗಿದೆ. ಶರಣ್ ಮತ್ತು ಆಶಿಕಾ ಡ್ಯಾನ್ಸ್ ಸೂಪರ್ ಆಗಿದೆ. ಅಪ್ಪ ಮಗಳ 'ಬಿಟ್ಟ್ ಹೋಗ್ಬೇಡ..' ಹಾಡು ಅದ್ಬುತ. ಆದರೆ ಐಂದ್ರಿತಾ ರೇ ಅವರ ಹಾಡು ಚಿತ್ರದ ಕಥೆಯ ವೇಗಕ್ಕೆ ಬ್ರೇಕ್ ಹಾಕುತ್ತದೆ. ಕ್ಲೈಮ್ಯಾಕ್ಸ್ ಹಂತದಲ್ಲಿ ಬರುವ ಈ ಹಾಡು ಕಥೆಗೆ ಅಷ್ಟೊಂದು ಅಗತ್ಯ ಇತ್ತೆ ಎನ್ನಿಸುತ್ತದೆ.

  ಅನಿಲ್ ಪ್ರತಿಭೆ ಅರಳಿತು

  ಅನಿಲ್ ಪ್ರತಿಭೆ ಅರಳಿತು

  ನಿರ್ದೇಶಕ ಅನಿಲ್ ಶ್ರಮ ತೆರೆ ಮೇಲೆ ಕಾಣಿಸುತ್ತದೆ. ಪ್ರತಿ ಶಾಟ್ ಅನ್ನು ಅವರು ಅದಷ್ಟೂ ಚೆನ್ನಾಗಿ ತೋರಿಸಿದ್ದಾರೆ. ಸಿಂಪಲ್ ಕಥೆ ಇದ್ದರೂ ಅದನ್ನು ಸೊಗಸಾದ ನಿರೂಪಣೆ ಮೂಲಕ ಎಲ್ಲೂ ಬೋರ್ ಆಗದಂತೆ ಹೇಳುವಲ್ಲಿ ಅನಿಲ್ ಗೆದ್ದಿದ್ದಾರೆ.

  ಕ್ವಾಲಿಟಿ ಸಿನಿಮಾ

  ಕ್ವಾಲಿಟಿ ಸಿನಿಮಾ

  Rambo 2 ಸಿನಿಮಾ ನೋಡಿ ಬಂದ ಮೇಲೆ ಖುಷಿ ಆಗುವುದು ಅದರ ಕ್ವಾಲಿಟಿ ಕಾರಣಕ್ಕೆ. ಯಾವ ದೊಡ್ಡ ಸ್ಟಾರ್ ನಟರ ಸಿನಿಮಾಗೆ ಸಹ ಈ ಚಿತ್ರ ಕಡಿಮೆ ಇಲ್ಲ ಎನಿಸುವಂತೆ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಕೊಟ್ಟ ಕಾಸಿಗೆ ಸಿನಿಮಾ ಮೋಸ ಮಾಡಲ್ಲ. ಒಂದು ಕಡೆ ಐಪಿಎಲ್ ಆಟ, ಇನ್ನೊಂದು ಕಡೆ ರಾಜಕೀಯ ದೊಂಬರಾಟ ನೋಡಿ ಸುಸ್ತಾಗಿರುವ ಮಂದಿ ಆರಾಮಾಗಿ ಬಂದು ಸಿನಿಮಾ ನೋಡಬಹುದು.

  English summary
  Actor Sharan's 'Rambo 2' kannada movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X